ಪುರುಷರು ಮತ್ತು ಮಾನಸಿಕ ಆರೋಗ್ಯ – ವಾಸ್ತವ ಮತ್ತು ಕಲ್ಪನೆ

ಪುರುಷರು ಮತ್ತು ಮಾನಸಿಕ ಆರೋಗ್ಯ – ವಾಸ್ತವ ಮತ್ತು ಕಲ್ಪನೆ

ಕಲ್ಪನೆ : ಗಂಡಸರು ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಅವರು ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ

ವಾಸ್ತವ: ಎಲ್ಲ ಗಂಡಸರೂ ಮಾನಸಿಕವಾಗಿ ಗಟ್ಟಿಯಾಗಿರುತ್ತಾರೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಏಕೆಂದರೆ ಪಿತೃ ಪ್ರಧಾನ ಸಂಸ್ಕøತಿಯಲ್ಲಿ ಗಂಡಸರಿಗೆ ಅವರ ಭಾವಾವೇಶಗಳನ್ನು, ಉದ್ವೇಗವನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಅವರು ಹಾಗೆ ಮಾಡಿದಾಗ ಅವರನ್ನು ದುರ್ಬಲರೆಂದೋ, ಹೆಣ್ಣಿಂಗ ಎಂದೋ ಹಂಗಿಸಿ ಲೇವಡಿ ಮಾಡಲಾಗುತ್ತದೆ. ಕಾಲ ಕಳೆದಂತೆಲ್ಲಾ ಈ ರೀತಿಯ ಧೋರಣೆ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕಲ್ಪನೆ : ಹೆಂಗಸರಿಗೆ ಹೋಲಿಸಿದರೆ ಗಂಡಸರು ತಮ್ಮ ಉದ್ವೇಗವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾರೆ.

ವಾಸ್ತವ: ಒಂದು ಜನಪ್ರಿಯ ಸಾಂಸ್ಕೃತಿಕ ಕಲ್ಪನೆ ಹೇಗಿದೆ ಎಂದರೆ, ನಿಜವಾದ ಗಂಡಸರು ಸಾಮಾನ್ಯವಾಗಿ ಅಳುವುದಿಲ್ಲ ಎಂದು ಹೇಳಲಾಗುತ್ತದೆ. ಅತಿರೇಕದ ಸಂದರ್ಭಗಳಲ್ಲಿ ಮಾತ್ರ , ನಿಕಟ ವರ್ತಿಗಳು ಮೃತಪಟ್ಟಾಗ,  ಇದಕ್ಕೆ ಅಪವಾದ ಎನ್ನುವಂತಹ ಸನ್ನಿವೇಶಗಳನ್ನು ಗುರುತಿಸಲಾಗುತ್ತದೆ. ಈ ಅಭಿಪ್ರಾಯ ದಟ್ಟವಾಗಿರುವುದಿಂದಲೇ ಗಂಡಸರು ಗಂಭೀರ ಸನ್ನಿವೇಶಗಳನ್ನು ಹೊರತುಪಡಿಸಿ ಇತರ ವೇಳೆಯಲ್ಲಿ ತಮ್ಮ ಉದ್ವೇಗವನ್ನು ಹೊರಗೆಡಹಲು ಅವಕಾಶ ಕೊಡುವುದಿಲ್ಲ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಬಹುಪಾಲು ಗಂಡಸರು ಹೆಂಡ, ಸಾರಾಯಿ, ಮಾದಕ ದ್ರವ್ಯಗಳು, ಆಕ್ರಮಣಕಾರಿ ಮನೋಭಾವ ಇಂತಹ ಪ್ರವೃತ್ತಿಗೆ ಬಲಿಯಾಗುತ್ತಾರೆ. ಇದರಿಂದ ಉದ್ವೇಗವನ್ನು ನಿರಾಕರಿಸುವ ಮತ್ತು ಸ್ವಾವಲಂಬನೆ ಸಾಧಿಸುವ ಪುರುಷತ್ವದ ಚಿಂತನೆಗಳು ಮೂಡುತ್ತವೆ.

ಕಲ್ಪನೆ: ಗಂಡಸರು ಯಾವುದಕ್ಕೂ ಇತರರ ನೆರವು ಕೋರಬೇಕಿಲ್ಲ, ತಾವೇ ನಿಭಾಯಿಸಬಹುದು.

ವಾಸ್ತವ: ಸಾಂಸ್ಕøತಿಕವಾಗಿ ಹಿಂದಿನಿಂದಲೂ ಮೂಡಿಬಂದಿರುವ ಒಂದು ನಂಬಿಕೆ ಎಂದರೆ, ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗಂಡಸರು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲೂ ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆ ಹೊತ್ತಿರುತ್ತಾರೆ ಎನ್ನುವುದು. ಇದರಿಂದ ಹೊರಡುವ ಸಂದೇಶ ಎಂದರೆ, ಗಂಡಸರು ಯಾವುದೇ ಬಿಕ್ಕಟ್ಟು ಎದುರಾದರೂ, ಯಾವುದೇ ಮಾನಸಿಕ ಸಮಸ್ಯೆಯನ್ನು ಎದುರಿಸಿದರೂ ಕುಟುಂಬದ ಇತರರನ್ನು ಸಂಪರ್ಕಿಸುವ ಅಥವಾ ಸಲಹೆ ಪಡೆಯುವ ಅವಶ್ಯಕತೆ ಇರುವುದಿಲ್ಲ ಎನ್ನುವುದು.  ಹಾಗೊಮ್ಮೆ ಸಲಹೆ, ನೆರವು ಪಡೆದರೆ ಅದು ಗಂಡಸದ ದೌರ್ಬಲ್ಯವನ್ನು ತೋರುತ್ತದೆ ಎನ್ನುವ ನಂಬಿಕೆಯೂ ಉಂಟು.

ಕಲ್ಪನೆ: ಮದುವೆಯಾಗುವುದರಿಂದ ಗಂಡಿನ ಮಾನಸಿಕ ಬೇನೆ ಸರಿಹೋಗುತ್ತದೆ.

ವಾಸ್ತವ: ಮಾನಸಿಕ ಆರೋಗ್ಯ ಸಮಸ್ಯೆಗೆ ಹಲವು ಚಿಕಿತ್ಸೆಗಳಿವೆ. ಔಷಧಿಗಳ ಮೂಲಕ,  ಚಿಕಿತ್ಸಕ ಮಾದರಿಗಳು ಇತ್ಯಾದಿ. ಈ ಮಾರ್ಗಗಳನ್ನು ಅನುಸರಿಸಿದಾಗ ರೋಗದ ಲಕ್ಷಣಗಳನ್ನು ಗ್ರಹಿಸಿ ಸೂಕ್ತ ಕ್ರಮ ಅನುಸರಿಸಬೇಕಾಗುತ್ತದೆ. ಮದುವೆಯಾಗುವುದರಿಂದ ಇದು ಪರಿಹಾರವಾಗುವುದಿಲ್ಲ. ಮದುವೆ ಎನ್ನುವುದು ಮಾನಸಿಕ ಖಾಯಿಲೆಗೆ ಪರಿಹಾರ ಮಾರ್ಗವಾಗುವುದಿಲ್ಲ. ಹಾಗೆ ಮಾಡಿದರೂ ಸಹ ಇಂತಹ ವ್ಯಕ್ತಿಗಳನ್ನು ವಿವಾಹವಾದವರು ಮುಂದಿನ ದಿನಗಳಲ್ಲಿ ತೀವ್ರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಉಲ್ಲೇಖ :

ಪುರುಷತ್ವ ಮತ್ತು ಗಂಡಸರ ಮಾನಸಿಕ ಆರೋಗ್ಯ – ಗ್ಯಾರಿ ಆರ್ ಬ್ರೂಕ್ಸ್ ಜರ್ನಲ್ ಆಫ್ ಹೆಲ್ತ್

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org