ಹೆಂಗಸರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆಯೇ ?

ಹೆಂಗಸರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆಯೇ ?

ಹೆಂಗಸರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆಯೇ?

ಹಲವು ಅಧ್ಯಯನಗಳ ಪ್ರಕಾರ  ಗಂಡಸರಿಗಿಂತಲೂ ಹೆಂಗಸರು ಎರಡು ಪಟ್ಟು ಹೆಚ್ಚು ಖಿನ್ನತೆ, ಆತಂಕ ಮುಂತಾದ ಮಾನಸಿಕ ಖಾಯಿಲೆಗಳಿಗೆ ಒಳಗಾಗುತ್ತಾರೆ.

ಈ ಲಿಂಗಾಧಾರಿತ ವ್ಯತ್ಯಾಸಕ್ಕೆ ಈ ಕೆಳಕಂಡ ಕೆಲವು ಕಾರಣಗಳನ್ನು ಗುರುತಿಸಲಾಗಿದೆ.

ಹಾರ್ಮೋನ್ ಗಳು: ಗಂಡಸರಿಗಿಂತಲೂ ಹೆಂಗಸರಲ್ಲಿ ಹಾರ್ಮೋನ್ ಗಳು ಶೀಘ್ರವಾಗಿ ಬದಲಾಗುತ್ತಿರುತ್ತವೆ. ಈ ಬದಲಾವಣೆಗಳು ಖಿನ್ನತೆಯ ಲಕ್ಷಣಗಳಾಗಿರುತ್ತವೆ.

ಸಾಮಾನ್ಯವಾಗಿ ಈ ಬದಲಾವಣೆಗಳು ಹೆಣ್ಣುಮಕ್ಕಳು ಪ್ರೌಢ ವಯಸ್ಸಿಗೆ ಬರುವ ಸಮಯದಲ್ಲಿ ಮತ್ತು ಋತುಚಕ್ರದ ಸಂದರ್ಭದಲ್ಲಿ ಕಂಡುಬರುತ್ತವೆ. ಋತುಸ್ರಾವದ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಕೆಲವೊಮ್ಮೆ ಹೆಣ್ಣುಮಕ್ಕಳ ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತವೆ. ಈ ಸಂದರ್ಭದ ಮನಸ್ಥಿತಿ ಖಿನ್ನತೆಯನ್ನೇ ಹೋಲುವಂತಿರುತ್ತದೆ.

ವಂಶವಾಹಿಗಳು: ಒಂದೇ ತೆರನಾದ, ಸೋದರ ಸಂಬಂಧಗಳ ಮಕ್ಕಳ ಅಧ್ಯಯನದ ಆಧಾರದ ಮೇಲೆ ಹೇಳುವುದಾದರೆ ಮಹಿಳೆಯರು ವಂಶವಾಹಿಯಾಗಿ ಬರುವ ಖಿನ್ನತೆಯ ಖಾಯಿಲೆಗೆ ಬೇಗನೆ ತುತ್ತಾಗುವ ಸಾಧ್ಯತೆಗಳಿರುತ್ತವೆ.  ಕೆಲವು ವಂಶವಾಹಿ ಬದಲಾವಣೆಗಳು ಹೆಣ್ಣು ಮಕ್ಕಳಲ್ಲಿ ಮಾತ್ರವೇ ಕಂಡುಬರುತ್ತವೆ.  ಇದೂ ಸಹ ಖಿನ್ನತೆ ಉಂಟಾಗಲು ಪ್ರಮುಖ ಕಾರಣವಾಗುತ್ತದೆ. 

ಸುತ್ತಲಿನ ಪರಿಸರದ ಪ್ರಭಾವ: ಸಾಮಾಜಿಕ ಮತ್ತು ಸುತ್ತಲಿನ ಪರಿಸರದ  ಅಂಶಗಳೂ ಲಿಂಗ ತಾರತಮ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ವಯಸ್ಸಿಗೆ ಬಂದ ನಂತರದಲ್ಲಿ ಎದುರಾಗುವ ಲೈಂಗಿಕ ದೌರ್ಜನ್ಯ ಇವೇ ಮುಂತಾದ ಘಟನೆಗಳು ಉಂಟುಮಾಡುವ ಒತ್ತಡಗಳು ಹೆಣ್ಣುಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.  ಕೆಲವು ಅಧ್ಯಯನಗಳ ಪ್ರಕಾರ ಯಾವುದೇ ಒಂದು ಒತ್ತಡದ ಘಟನೆ ಸಂಭವಿಸಿದಾಗ ಹೆಂಗಸರು ಬೇಗ ಖಿನ್ನತೆಗೊಳಗಾಗುತ್ತಾರೆ. ಎಳೆಯ ಮಕ್ಕಳಿಗೆ ಅಥವಾ ವಯಸ್ಸಾದ ಪೋಷಕರಿಗೆ ಹೆಚ್ಚಿನ ಕಾಳಜಿ ತೋರಿಸಿ ಸಲಹಬೇಕಾದ ಜವಾಬ್ದಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗುವ ಹೆಂಗಸರು ಪೂರ್ಣ ಪ್ರಮಾಣದ ಲಾಲನೆ ಪೋಷಣೆಯಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.  ಇದರಿಂದ ಅತಿಯಾದ ಒತ್ತಡ ಉಂಟಾಗುವುದಿಲ್ಲವಾದರೂ, ಈ ಒತ್ತಡಗಳು ತೀವ್ರವಾಗುತ್ತಾ ಹೋದಂತೆಲ್ಲಾ ಹೆಂಗಸರು ಕ್ರಮೇಣ ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗುವ ಇನ್ನು ಕೆಲವು ಸುತ್ತಲಿನ ಪರಿಸರದ ಸಂಗತಿಗಳೆಂದರೆ ಬಡತನ , ಒಂಟಿ ಜೀವನ, ನೌಕರಿಗಾಗಿ ಅಲೆದಾಟ, ಕೆಲಸದ ಒತ್ತಡಗಳು, ಕುಟುಂದ ನಿರ್ವಹಣೆಯ ಜವಾಬ್ದಾರಿ ಇತ್ಯಾದಿ.

ರೋಗ ತಪಾಸಣೆ: ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಖಿನ್ನತೆಗಾಗಿ ತಪಾಸಣೆಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದಲೂ ಲಿಂಗಬೇಧ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.  ಇದಕ್ಕೆ ಕಾರಣ ಎಂದರೆ  ಗಂಡಸರು ಭಾವಾವೇಶದ ವಿಚಾರಗಳನ್ನು ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ ಅಥವಾ ತಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಮತ್ತೊಬ್ಬರ ನೆರವು ಕೋರುವುದಿಲ್ಲ. ಉಗ್ರ ವರ್ತನೆ ಮತ್ತು ಮದ್ಯಪಾನ ಗಂಡಸರಲ್ಲಿನ ಖಿನ್ನತೆಯನ್ನು ಮರೆಮಾಚಿಬಿಡುತ್ತದೆ. 

ದೈಹಿಕ ಆರೋಗ್ಯ: ಖಿನ್ನತೆಗೆ ಕಾರಣವಾಗುವ ತೀವ್ರ ಹೈಪೋ ಥೈರಾಯ್ಡ್ ಸಮಸ್ಯೆ ಹೆಂಗಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಡಿಮೆ ದೈಹಿಕ ಚಟುವಟಿಕೆಯಿಂದಲೂ ಖಿನ್ನತೆ ಹೆಚ್ಚಾಗುತ್ತದೆ.        

ಮೂಲ:

http://www.health.harvard.edu/womens-health/women-and-depression http://www.who.int/mental_health/prevention/genderwomen/en/ http://www.mayoclinic.org/diseases-conditions/depression/in-depth/depression/art-20047725

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org