ಊನತ್ವ ನಿಮ್ಮ ಹಾವಭಾವದ ಮೇಲೆ ಪರಿಣಾಮ ಬೀರಬೇಕಿಲ್ಲ!

ಊನತ್ವ ನಿಮ್ಮ ಹಾವಭಾವದ ಮೇಲೆ ಪರಿಣಾಮ ಬೀರಬೇಕಿಲ್ಲ!

ನಮ್ಮ ದೇಹದ ಬಗ್ಗೆ ನಾವೆಷ್ಟು ಅರಿತಿದ್ದೇವೆ ಎನ್ನುವುದನ್ನು ನಮ್ಮ ಹಾವಭಾವಗಳೇ ತಿಳಿಸಿಕೊಡುತ್ತದೆ.  ನಾವು ನಮ್ಮ ದೇಹವನ್ನು ಹೇಗೆ ನೋಡುತ್ತೇವೆ, ಅದರ ಭಾಗಗಳನ್ನು, ಗಾತ್ರವನ್ನು, ಆಕಾರವನ್ನು ಮತ್ತು ಇತರ ಲಕ್ಷಣಗಳನ್ನು ಹೇಗೆ ನೋಡುತ್ತೇವೆ ಎನ್ನುವುದು ಈ ತಿಳುವಳಿಕೆಯನ್ನು ಆಧರಿಸುತ್ತದೆ. ನಮ್ಮ ಈ ತಿಳುವಳಿಕೆಯ ಮೇಲೆ ನಮ್ಮದೇ ಜೀವನದ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ನಮ್ಮ ಸುತ್ತಲಿನ ವಾತಾವರಣ, ಸೂಕ್ಷ್ಮವಾದ ಮತ್ತು ಅಷ್ಟೇನೂ ಸೂಕ್ಷ್ಮ ಅಲ್ಲದ ಸಂದೇಶಗಳು, ನಮ್ಮ ನೆನಪುಗಳು, ನಮ್ಮ ಊಹೆಗಳು ಮತ್ತು ಇತರ ಸಾಮಾನ್ಯ ಸಂಗತಿಗಳ ಮೂಲಕ ನಾವು ನಮ್ಮನ್ನು ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುತ್ತೇವೆ.

ನಮ್ಮ ಬಗ್ಗೆ ನಾವೇ ನಕಾರಾತ್ಮಕ ಮಾತುಗಳನ್ನಾಡುವುದು ನಮ್ಮ ದೇಹವನ್ನು ನಕಾರಾತ್ಮಕವಾಗಿ ಬಿಂಬಿಸುತ್ತದೆ . ಬಣ್ಣ, ಆಕಾರ, ವಿಕಲತೆ, ದೇಹದ ಯಾವುದೋ ಒಂದು ಭಾಗ ಅಥವಾ ಅಂಗದ ಅಥವಾ ಇಂದ್ರಿಯದ ದೌರ್ಬಲ್ಯ ಇವುಗಳ ಬಗ್ಗೆ ಹೆಚ್ಚು ಗಮನ ನೀಡುವುದೂ ಇದಕ್ಕೆ ಕಾರಣವಾಗಬಹುದು. ಊನತ್ವ ಇರುವವರು ತಮ್ಮ ಊನತ್ವವನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿರುತ್ತಾರೆ ಎನ್ನುವುದೂ ಅವರ ಸಮಸ್ಯೆಗಳನ್ನು ನಿರ್ಧರಿಸುತ್ತದೆ. ಇದರಿಂದ ಅವರ ಹಾವಭಾವಕ್ಕೆ ಸಂಬಂಧಿಸಿದ ವಿಷಯಗಳು ಮತ್ತಷ್ಟು ಕಠಿಣವಾಗುತ್ತವೆ. ವಿಷಾದ ಎಂದರೆ ನಕಾರಾತ್ಮಕ ಹಾವಭಾವಗಳು ಒಬ್ಬ ವ್ಯಕ್ತಿಯಲ್ಲಿ ಅನೇಕ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ ಖಿನ್ನತೆ, ಆಹಾರ ಸೇವನೆಯಲ್ಲಿ ವ್ಯತ್ಯಯ, ಒಬ್ಬಂಟಿಯಾಗಿರಲು ಬಯಸುವುದು, ತನ್ನನ್ನು ತಾನೇ ಕೀಳಾಗಿ ಕಾಣುವುದು ಇತ್ಯಾದಿ.

ಹಾವಭಾವಗಳ ಸಮಸ್ಯೆಯನ್ನು ಪರಿಹರಿಸುವ ಪ್ರಶ್ನೆ ಎದುರಾದಾಗ ಸೂಕ್ತ ಬೆಂಬಲ ನೀಡುವಂತಹ ವಾತಾವರಣದೊಂದಿಗೇ ನಿಮಗೆ ಸಕಾರಾತ್ಮಕ ಧೈರ್ಯ ನೀಡುವಂತಹ ಸನ್ನಿವೇಶವೂ ಇರಬೇಕು. ಈ ಕಾರ್ಯದಲ್ಲಿ ದೌರ್ಬಲ್ಯದ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಗಳೇ ಹೆಚ್ಚಿನ ಕೆಲಸವನ್ನು ನಿಭಾಯಿಸಬೇಕು. ಸಕಾರಾತ್ಮಕ ಹಾವಭಾವಗಳನ್ನು ಹೊಂದಲು ಈ ಕೆಲವು ಹೆಜ್ಜೆಗಳು ಅಗತ್ಯ :

  1. ನಕಾರಾತ್ಮಕ ಹಾವಭಾವಗಳನ್ನು ಮೂಡಿಸುವಂತಹ ಸಂದೇಶಗಳನ್ನು ರವಾನೆ ಮಾಡುವ ಟಿವಿ, ಸಾಮಾಜಿಕ ಮಾಧ್ಯಮಗಳು ಮುಂತಾದವುಗಳನ್ನು ಗುರುತಿಸಿ ಇವುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಬಹು ಮುಖ್ಯವಾದ ಸಂಗತಿ ಎಂದರೆ ಇವುಗಳ ಬದಲು ಸಕಾರಾತ್ಮಕ ಹಾವಭಾವಗಳನ್ನು ಮೂಡಿಸುವ ಮೂಲಗಳನ್ನು ಗುರುತಿಸಿ ಒದಗಿಸಬೇಕು.

  2. ನಿಮ್ಮ ಹಾವಭಾವಗಳನ್ನು ಒಪ್ಪಿಕೊಳ್ಳುವುದಕ್ಕೆ ನಿಮ್ಮಲ್ಲಿರುವ ಅಂಗವೈಕಲ್ಯತೆಯೇ ಅಡ್ಡಿಯಾಗುತ್ತಿದೆಯೇ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಅನೇಕ ಬಾರಿ ಮೂಲ ಸಮಸ್ಯೆಯನ್ನು ಬಗೆಹರಿಸದೆ ಹೋದರೆ ಇತರ ಸಮಸ್ಯೆಗಳು ಅದರ ಸುತ್ತಲೂ ಬೆಳೆಯುತ್ತವೆ. ಇದರಿಂದ ಸಮಸ್ಯೆ ಮತ್ತಷ್ಟು ಕಠಿಣವಾಗುತ್ತವೆ. ಹಾಗಾದಲ್ಲಿ ಮೊದಲು ಊನತ್ವ ಇರುವುದನ್ನು ಒಪ್ಪಿಕೊಂಡು ಇತರ ಸಮಸ್ಯೆಗಳತ್ತ ಗಮನ ಹರಿಸುವುದು ಒಳ್ಳೆಯ ಕೆಲಸ.

  3. ನಿಮ್ಮ ಆಲೋಚನೆಗಳನ್ನು ಒಂದು ಪುಸ್ತಕದಲ್ಲಿ ಬರೆದಿಡಿ. ನಿಮ್ಮ ನಕಾರಾತ್ಮಕ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಬರೆದಿಡಿ. ಇದರಿಂದ ನಿಮ್ಮ ಬಗ್ಗೆ ನೀವೇ ನಕಾರಾತ್ಮಕವಾಗಿ ಯೋಚಿಸುವುದನ್ನು ಗುರುತಿಸಲು ಸಾಧ್ಯವಾಗುತ್ತದೆ ಹಾಗೆಯೇ ಈ ರೀತಿಯ ಆಲೋಚನೆಗೆ ಕಾರಣಗಳೇನು ಎಂದು ತಿಳಿದುಕೊಳ್ಳಲೂ ಸಹಾಯವಾಗುತ್ತದೆ.

  4. ನಿಮ್ಮ ನಗರದಲ್ಲೇ ಇರುವ ಸಮಾಧಾನದ ಮಾತುಗಳನ್ನು ಆಡುವ ಮೂಲಕ ನಿಮಗೆ ಬೆಂಬಲ ನೀಡುವವರನ್ನು ಸಂಪರ್ಕಿಸಿ ಅವರೊಡನೆ ಮಾತನಾಡಿ, ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಿಮಗೆ ತಿಳಿಯದೆ ಇರುವ ವಿಷಯಗಳನ್ನು ತಿಳಿದುಕೊಳ್ಳಬಹುದು.

  5. ನಕಾರಾತ್ಮಕ ಹಾವಭಾವಗಳ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದು, ಅದು ಹೇಗೆ ಉಂಟಾಗುತ್ತದೆ, ಹೇಗೆ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಇದನ್ನು ಓದಿನ ಮೂಲಕ, ಅಂತರ್ಜಾಲದಲ್ಲಿ ಚರ್ಚೆಗಳನ್ನು ನೋಡುವ ಮೂಲಕ, ಭಾಷಣಗಳನ್ನು ಕೇಳುವ ಮೂಲಕ ತಿಳಿದುಕೊಳ್ಳಬಹುದು. ಇದರಿಂದ ನಮ್ಮ ಅನುಭವಗಳ ಬಗ್ಗೆ ನಾವೇ ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ನಮ್ಮ ಆಲೋಚನೆಯ ವಿಧಾನಗಳನ್ನು ಅರಿತುಕೊಳ್ಳುವುದೂ ಸಾಧ್ಯವಾಗುತ್ತದೆ.

  6. ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸಿ ಆರೋಗ್ಯಕರವಾದ ಆಹಾರವನ್ನು ತಿನ್ನುವುದು, ದಿನನಿತ್ಯ ವ್ಯಾಯಾಮ ಮಾಡುವುದು, ಉತ್ಸಾಹದಿಂದ ಇರುವುದರ ಮೂಲಕ ನಿಮ್ಮನ್ನು ನೀವೇ ಉತ್ತೇಜಿಸುವುದು ಇವೆಲ್ಲವೂ ಅಗತ್ಯ.

  7. ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಹೊಸ ವಿದ್ಯೆಯನ್ನು ಕಲಿಯಲು, ಕೌಶಲ್ಯ ಗಳಿಸಲು ಹೊರ ಜಗತ್ತಿನಲ್ಲಿ ಓಡಾಡಿ. ಇದರಿಂದ ನಿಮ್ಮ ಹಾವಭಾವಗಳನ್ನೂ ಮೀರಿದ ನಿಮ್ಮ ದೇಹದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ನೀವು ಏನನ್ನು ಸಾಧಿಸಬಹುದು ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯ. ನಿಮಗೆ ದೊರೆತಿರುವ ಹೊಸ ಉಪಕರಣಗಳಿಂದ ನೀವು ಇದನ್ನು ಸಾಧಿಸಬಹುದು.

  8. ಕೊನೆಯದಾಗಿ, ನಿಮಗೆ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ನೀವೇ ಎದುರಿಸುವುದು ಸಾಧ್ಯವಿಲ್ಲ ಎಂದೆನಿಸಿದಲ್ಲಿ ಯಾರಾದರೂ ಮಾನಸಿಕ ಆರೋಗ್ಯ ಚಿಕಿತ್ಸಕರನ್ನು ಸಂಪರ್ಕಿಸಿ. ಅವರು ತಪಾಸಣೆ ಮಾಡುವ ಮೂಲಕ ನಿಮಗೆ ಸಹಾಯ ಮಾಡುತ್ತಾರೆ ಮತ್ತು ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತಾರೆ. ನಿಮ್ಮ ಕಾಳಜಿಗಳನ್ನೂ ನಿವಾರಿಸುತ್ತಾರೆ.

ಶ್ರೇಯಾ ಶ್ರೀಧರನ್ - ಮ್ಹಾತ್ರೆ ಮುಂಬಯಿಯಲ್ಲಿ ನೆಲೆಸಿರುವ ಮನಶ್ಶಾಸ್ತ್ರಜ್ಞೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org