ಬೇರೂರಿದ ನೋವು- ಭಾರತದಲ್ಲಿ ಬೆಂಬಲದ ಗುಂಪುಗಳ ಅವಶ್ಯಕತೆ ಹೆಚ್ಚಾಗಿದೆ

ಬೇರೂರಿದ ನೋವು- ಭಾರತದಲ್ಲಿ ಬೆಂಬಲದ ಗುಂಪುಗಳ ಅವಶ್ಯಕತೆ ಹೆಚ್ಚಾಗಿದೆ

ಬೇರೂರಿದ ನೋವು- ಭಾರತದಲ್ಲಿ ಬೆಂಬಲದ ಗುಂಪುಗಳ ಅವಶ್ಯಕತೆ ಹೆಚ್ಚಾಗಿದೆ

ಬೇರೂರಿದ ನೋವು- ಭಾರತದಲ್ಲಿ ಬೆಂಬಲದ ಗುಂಪುಗಳ ಅವಶ್ಯಕತೆ ಹೆಚ್ಚಾಗಿದೆ  -0-0-0 ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ನೋವು ಬಾಧಿಸಿದರೆ ಅದನ್ನು ಬೇರೂರಿದ ನೋವು ಎಂದು ಪರಿಗಣಿಸಲಾಗುತ್ತದೆ. ಇದು ಅಪಘಾತದಿಂದ ಸಂಭವಿಸಬಹುದು, ವೈದ್ಯಕೀಯ ನಿರ್ಲಕ್ಷ್ಯ ಅಥವಾ ಅಕ್ರಮದಿಂದ ಸಂಭವಿಸಬಹುದು ಅಥವಾ ಅನಾರೋಗ್ಯದಿಂದ ಸಂಭವಿಸಬಹುದು.

ಯಾವುದೇ ಗಾಯ ಅಥವಾ ಅನಾರೋಗ್ಯಕ್ಕೆ ಸಂಬಂಧವಿಲ್ಲದೆ ನೋವು ಕಂಡುಬಂದರೆ ವೈದ್ಯರು ಅದನ್ನು ತಿರಸ್ಕರಿಸುವುದೇ ಅಲ್ಲದೆ ಸಾಮಾನ್ಯವಾಗಿ ನೋವು ಮಾನಸಿಕವಾದದ್ದು ಎಂದು ನಿರ್ಲಕ್ಷಿಸುತ್ತಾರೆ. ಈ ರೀತಿ ಹಳೆಯ ನೋವನ್ನು ಅನುಭವಿಸುವ ಬಹಳಷ್ಟು ಜನರು ತಪ್ಪು ತಪಾಸಣೆಯ ಪರಿಣಾಮವಾಗಿ ಬೇರೂರಿದ ನೋವನ್ನು ಏಕಾಂಗಿಯಾಗಿ ಅನುಭವಿಸುವುದೂ ಉಂಟು. ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ತಮ್ಮ ನೋವಿನ ಕಾರಣವನ್ನು ಗುರುತಿಸಿಕೊಂಡು, ಅದನ್ನು ನಿಭಾಯಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. 

ಕಣ್ಣಿಗೆ ಕಾಣದ ಅನಾರೋಗ್ಯದಿಂದ ದೈಹಿಕವಾಗಿ ಬಾಧಿತವಾಗುವುದೇ ಅಲ್ಲದೆ, ನೋವು ಅನುಭವಿಸುವವರು ಒಂಟಿತನವನ್ನೂ ಎದುರಿಸುತ್ತಾರೆ. ನಿಮಗೆ ಏನಾಗುತ್ತಿದೆ ಎನ್ನುವುದು ನಿಮ್ಮ ಸುತ್ತಲಿನ ಜನರಿಗೆ ಅರ್ಥವಾಗುವುದಿಲ್ಲ. ನಿಮ್ಮ ನೋವಿನೊಡನೆ ನಿಮ್ಮಲ್ಲಿ ತಡೆಯಾಗದ ದುಃಖವೂ ಹೆಚ್ಚಾಗಿರುತ್ತದೆ. ಅಸಹಾಯಕತೆ ಮತ್ತು ಖಿನ್ನತೆಯಿಂದ ಬಳಲುವ ನೀವು ಇವುಗಳಿಂದ ದೂರ ಇರಲೂ ಸಾಧ್ಯವಾಗುವುದಿಲ್ಲ.

ಈ ರೀತಿಯ ದೀರ್ಘ ಕಾಲದ ನೋವಿನ ಸಮಸ್ಯೆಯನ್ನು ಭಾರತದ ಅಪಾರ ಸಂಖ್ಯೆಯ ಯುವಕರು ಅನುಭವಿಸುತ್ತಿದ್ದಾರೆ. ಇವರ ಕುಟುಂಬದವರು, ಸ್ನೇಹಿತರು, ವೈದ್ಯರು ಇವರಿಗೆ ಯಾವುದೇ ರೀತಿಯಲ್ಲೂ ನೆರವಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವರ ಪೈಕಿ ಬಹುಪಾಲು ಯುವಕರು ಸಹಾಯಕ್ಕಾಗಿ ಮತ್ತು ಸಹಾನುಭೂತಿಗಾಗಿ ಆನ್ ಲೈನ್ ಮಾರ್ಗಗಳನ್ನು ಹುಡುಕುತ್ತಾರೆ.

ಈ ರೀತಿಯ ಒಂದು ಗುಂಪು ಕ್ರಾನಿಕ್ ಪೇಯ್ನ್ ಇಂಡಿಯಾ. ಈ ಗುಂಪು ಈ ರೀತಿಯ ಬೇರೂರಿದ ನೋವನ್ನು ಅನುಭವಿಸುವವರ ವೈಯಕ್ತಿಕ ಕಥೆಗಳನ್ನು ಸಂಗ್ರಹಿಸಿ, ಇದೇ ರೀತಿಯಲ್ಲಿ ನೋವು ಅನುಭವಿಸುವವರಲ್ಲಿ ಕಂಡುಬರುವ ಸಮಾನ ಅಂಶಗಳನ್ನು ಕುರಿತು ಚರ್ಚೆ ಮಾಡುತ್ತದೆ.

ಈ ಗುಂಪು ಮೊದಲು ಆರಂಭವಾದದ್ದು ಡಾ ಅನುಭಾ ಮಹಾಜನ್ ಅವರ ಟ್ವಿಟರ್ ಖಾತೆಯ ಮೂಲಕ, 2016ರ ಮಾರ್ಚ್ ತಿಂಗಳಲ್ಲಿ. ಫರಿದಾಬಾದ್ ನಿವಾಸಿ ಡಾ ಮಹಾಜನ್ ದಂತ ವೈದ್ಯರಾಗಿದ್ದು, ವೈದ್ಯರೊಬ್ಬರ ಪ್ರಮಾದದ ಪರಿಣಾಮ ಸಂಕೀರ್ಣವಾದ ನಿರ್ದಿಷ್ಟ ಅಂಗಾಂಗಗಳಲ್ಲಿ ನೋವು ಅನುಭವಿಸುವುದೇ ಅಲ್ಲದೆ, ಕೇಂದ್ರೀಕೃತ ನೋವನ್ನೂ ಅನುಭವಿಸುತ್ತಿದ್ದರು. ಕ್ರಾನಿಕ್ ಪೇಯ್ನ್ ಇಂಡಿಯಾ ಗುಂಪಿನ ವೆಬ್ ತಾಣದಲ್ಲಿ ಡಾ ಮಹಾಜನ್ ಮಾಡಿರುವ ಪೋಸ್ಟ್ ಒಂದರಲ್ಲಿ, ಆಕೆ ತನ್ನಂತೆಯೇ ನೋವು ಅನುಭವಿಸುವ ಮತ್ತೊಬ್ಬ ಮಹಿಳೆಯೊಡನೆ ಸಂಪರ್ಕ ಹೊಂದಿದ್ದಾಗ, ಆಕೆಯೂ ಇದೇ ರೀತಿಯ ಬೇರೂರಿದ ನೋವಿನ ಅನುಭವವನ್ನು ಹಂಚಿಕೊಂಡ ನಂತರ ತಮ್ಮ ದೃಷ್ಟಿಕೋನವೂ ಸಾಕಷ್ಟು ಬದಲಾಯಿತು ಎಂದು ಹೇಳುತ್ತಾರೆ. 

“ ಈ ಘಟನೆಯಿಂದ, ಭಾರತದಲ್ಲಿ ನನ್ನಂತೆಯೇ ನೋವು ಅನುಭವಿಸುತ್ತಿರುವ ಇನ್ನೂ ಎಷ್ಟು ಜನರು ಇದ್ದಾರೋ , ಅವರು ತಮ್ಮ ನೋವಿನೊಡನೆ ಸೆಣಸಾಡಲು ಮಾನಸಿಕವಾಗಿ ಹಾಗೂ ದೈವಿಕವಾಗಿ ಹೇಗೆ ಹೋರಾಡುತ್ತಿರುವರೋ ಎಂದು ಅಚ್ಚರಿಯಾಗಿತ್ತು, ” ಎಂದು ಹೇಳುವ ಡಾ ಮಹಾಜನ್, “ ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎನ್ನುವ ಒಂಟಿತನದ ನಡುವೆಯೇ ಬದುಕಿನಲ್ಲಿ ಮುನ್ನಡೆಯಲು ಇದು ಪ್ರೇರಣೆ ನೀಡಿತು ” ಎಂದು ಹೇಳುತ್ತಾರೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ( ಈ ಅಧ್ಯಯನದಲ್ಲಿ 836 ಜನರನ್ನು ಮಾದರಿಯಾಗಿ ಪರಿಗಣಿಸಲಾಗಿತ್ತು), ಭಾರತದಲ್ಲಿ ಈ ರೀತಿಯ ಬೇರೂರಿದ ನೋವು ಅನುಭವಿಸುವವರ ಪ್ರಮಾಣ ಶೇ 19.3ರಷ್ಟಿದ್ದು ಇದೇ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ಇತರ ಏಷಿಯಾದ ದೇಶಗಳ ಪೈಕಿ ಭಾರತದ ಪ್ರಮಾಣ ಹೆಚ್ಚಿನದಾಗಿದೆ. 

ಕ್ರಾನಿಕ್ ಪೇಯ್ನ್ ಗುಂಪು ಅನೇಕರಲ್ಲಿ ಆತ್ಮ ಸ್ಥೈರ್ಯವನ್ನು ತುಂಬಿದೆ.  ಈ ಗುಂಪಿನ ಫೇಸ್ ಬುಕ್ ಖಾತೆಯಲ್ಲಿ 106 ಜನರಿದ್ದಾರೆ. ಈ ಕುರಿತು ಡಾ ಮಹಾಜನ್ “ ಮೊದಮೊದಲು ನನ್ನ ಬಳಿ ಬರುತ್ತಿದ್ದ ಬಹುಪಾಲು ಜನರು ತಮ್ಮ ಜೀವನದಲ್ಲಿ ನಿರಾಶರಾಗಿದ್ದು ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದರು ಅಥವಾ ತಮ್ಮ ನೌಕರಿಯನ್ನು ತ್ಯಜಿಸುತ್ತಿದ್ದರು. ಅವರಿಗೆ ವೈದ್ಯರಲ್ಲಿ ಕಿಂಚಿತ್ತೂ ವಿಶ್ವಾಸ ಇರಲಿಲ್ಲ. ಆದರೆ ಸಮಯ ಕಳೆದಂತೆ ನಾವು ಹೆಚ್ಚು ಜನರೊಡನೆ ಸಂಪರ್ಕ ಗಳಿಸಿ ನಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡ ನಂತರ ಈ ಗುಂಪಿನಿಂದ ಹೆಚ್ಚುಜನರಿಗೆ ಉಪಯೋಗವಾಗಿತ್ತು, ಅವರ ಒಂಟಿತನದ ಭಾವನೆಯೂ ಕಡಿಮೆಯಾಗಿತ್ತು ” ಎಂದು ಹೇಳುತ್ತಾರೆ.

2014ರಲ್ಲಿ ನಮ್ರತಾ ಹೆಸರಿನ 34 ವರ್ಷದ ಮಹಿಳೆಗೆ ಹಷಿಮೊಟೋ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು. ಹೂಡಿಕೆ ಬ್ಯಾಂಕ್ ಒಂದರಲ್ಲಿ ನೌಕರಿಯಲ್ಲಿದ್ದ ನಮ್ರತಾ ಅವರನ್ನು ಕಾಡುತ್ತಿದ್ದ ಈ ಸಮಸ್ಯೆ ಮೂಲತಃ ರೋಗ ನಿರ್ಬಂಧಕ ತಂತಾನೇ ಹೆಚ್ಚಾಗುವ ಒಂದು ಗಂಭೀರ ಸಮಸ್ಯೆ. ಥೈರಾಯ್ಡ್ ಗ್ಲಾಂಡಿನ ವಿರುದ್ಧ ಇರುವ ಶರೀರ ನಿರೋಧಕ ಶಕ್ತಿಯಿಂದ ಇವರಲ್ಲಿ ಶಾಖ ಹೆಚ್ಚಾಗುತ್ತದೆ. ಇದು (ತಮಗೆ ಈ ಕುರಿತ ಜ್ಞಾನ ಇಲ್ಲದೆ ಇದ್ದುದರಿಂದ) ತಡವಾಗಿ ತಮ್ಮನ್ನು ಎಚ್ಚರಿಸಿದ ಸಮಸ್ಯೆ ಎಂದು ಹೇಳುವ ನಮ್ರತಾ ತಮ್ಮ ನೌಕರಿಯಲ್ಲಿ ಯಶಸ್ಸಿನ ತುದಿಯಲ್ಲಿದ್ದಾಗ ಇದು ತಲೆದೋರಿತು ಎಂದು ಹೇಳುತ್ತಾರೆ. 

ತಮಗೆ ಇದ್ದ ಅನಾರೋಗ್ಯದಿಂದ ಎದುರಿಸಬೇಕಾಗಿದ್ದ ಇತಿಮಿತಿಗಳನ್ನು ಅರಿತುಕೊಳ್ಳಲು ಕ್ರಾನಿಕ್ ಪೇಯ್ನ್ ಇಂಡಿಯಾ ಗುಂಪು ಹೇಗೆ ನೆರವಾಯಿತು ಎನ್ನುವುದನ್ನು ನಮ್ರತಾ ಹೀಗೆ ಹೇಳುತ್ತಾರೆ: “ಈ ಗುಂಪಿನ ಸದಸ್ಯರೊಡನೆ ನಾನು ಬೆರೆತು ಪರಸ್ಪರ ಮಾತನಾಡುತ್ತಿದ್ದುದರಿಂದ ನನಗೆ ಅನಾರೋಗ್ಯದಿಂದಿರುವುದು ಸಮಸ್ಯೆ ಎನಿಸಲೇ ಇಲ್ಲ. ನಾವು ನಮ್ಮ ನಿತ್ಯ ಬದುಕಿನಲ್ಲಿ ಯಾರೊಡನೆಯೂ ಪೈಪೋಟಿ ನಡೆಸುತ್ತಿಲ್ಲ, ಇವೆಲ್ಲದರ ನಡುವೆಯೂ ಬದುಕು ಮುನ್ನಡೆಸಲು ನಾವು ಸತತ ಸಂಘರ್ಷದಲ್ಲಿರುತ್ತೇವೆ ಮತ್ತು ಈ ಸಂಘರ್ಷ ವಾಸ್ತವವಾದುದು.”

ನಮ್ರತಾ ಈಗ ಮನೆಯಿಂದಲೇ ಸ್ವತಂತ್ರ ಸಂಪಾದಕಿಯಾಗಿ, ಲೇಖಕಿಯಾಗಿ ಕಾರ್ಯನಿರ್ವಹಿಸುತ್ತಾರೆ. ಫಿಸಿಷಿಯನ್, ಮಾನಸಿಕ ಚಿಕಿತ್ಸಕರು, ಹಿಪ್ನೋ ಚಿಕಿತ್ಸಕರೂ ಆಗಿರುವ ಡಾ ದೀಪಾಲಿ ಎಸ್ ಅಜಿಂಕ್ಯ ಅವರ ಅಭಿಪ್ರಾಯದಲ್ಲಿ ಬೇರೂರಿದ ನೋವಿನ ಸಮಸ್ಯೆ ಇರುವವರು ಸಾಮಾನ್ಯವಾಗಿ ದೈಹಿಕ  ಮತ್ತು ಮಾನಸಿಕವಾಗಿ ಎದುರಿಸುವ ಸಮಸ್ಯೆಗಳನ್ನೇ ವೈದ್ಯರ ಬಳಿ ಹೇಳಿಕೊಳ್ಳುತ್ತಾರೆ.

“ ಬಹುಪಾಲು ರೋಗಿಗಳಲ್ಲಿ  ತೀವ್ರವಾದ ನೋವು ಹೆಚ್ಚಾಗುತ್ತಲೇ ಹೋಗುವುದಲ್ಲದೆ, ಹೆಚ್ಚುಸಮಯ ಇರುವುದರಿಂದ ಅದು ಬೇರೂರಿದ ನೋವಾಗಿ ಪರಿಣಮಿಸುತ್ತದೆ” ಎಂದು ಹೇಳುತ್ತಾರೆ. ಈ ರೀತಿ ಅತಿಯಾದ ನೋವಿನ ಹಂತದಿಂದ ಬೇರೂರಿದ ನೋವಾಗಿ ಪರಿಣಮಿಸುವ ಪ್ರಕ್ರಿಯೆಯಲ್ಲಿ ಅವರ ವಿಶ್ವಾಸ ಸಾಕಷ್ಟು ಕುಗ್ಗಿಹೋಗುತ್ತದೆ, ಅವರ ಚಟುವಟಿಕೆಗಳಿಗೂ ಧಕ್ಕೆ ಉಂಟಾಗುತ್ತದೆ ಮತ್ತು ಸಾಮಾನ್ಯವಾಗಿ ಅವರ ನಿತ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದೂ  ಕಷ್ಟವಾಗುತ್ತದೆ. ಇದು ಅಂಥವರ ಆತ್ಮಗೌರವಕ್ಕೆ ತೀವ್ರ ಧಕ್ಕೆ ಉಂಟುಮಾಡುತ್ತದೆ.

ಇವರಿಗೆ ಕುಟುಂಬದವರಿಂದ ಯಾವುದೇ ರೀತಿಯ ಬೆಂಬಲ ದೊರೆಯದೆ ಹೋದರೆ ಅಥವಾ ಸಾಮಾಜಿಕ ಬೆಂಬಲ ದೊರೆಯದಿದ್ದರೆ, ಪರಿಸ್ಥಿತಿ ಇನ್ನೂ ಹದಗೆಟ್ಟು ಖಿನ್ನತೆ ಮತ್ತು ಆತಂಕ ಹೆಚ್ಚಾಗುತ್ತದೆ. ಮುಂಬಯಿಯಲ್ಲಿ ನೋವು ನಿವಾರಕ ವೈದ್ಯರಾಗಿರುವ ಡಾ ಮಹೇಶ್ ಮೆನನ್ ಹೇಳುವಂತೆ, ಕೆಲವೊಮ್ಮೆ ಒಂದು ನಿರ್ದಿಷ್ಟ ಘಟನೆ, ಉದಾಹರಣೆಗೆ ಅನಾರೋಗ್ಯ, ಗಾಯಗೊಳ್ಳುವುದು, ಶಸ್ತ್ರ ಚಿಕಿತ್ಸೆ, ಇಂತಹ ಬೇರೂರಿದ ನೋವಿಗೆ ಕಾರಣವಾಗುತ್ತದೆ. ಆದರೆ “ ಕೆಲವರು ತಾವು ಅನುಭವಿಸುವ ನೋವಿಗೆ ಆ ನಿರ್ದಿಷ್ಟ ಘಟನೆಯನ್ನು ನೆನಪಿಸಿಕೊಳ್ಳುವುದಿಲ್ಲ.  ಬೇರೂರಿದ ನೋವು ನಮ್ಮ ನರಮಂಡಲದಲ್ಲಿನ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ಗಳ ಉಪ ಉತ್ಪನ್ನದಂತೆ ಹುಟ್ಟಿಕೊಳ್ಳುತ್ತದೆ. ಇದು ದೇಹದ ಒಳಗಿನ ಮತ್ತು ಹೊರಗಿನ ಅಂಶಗಳಿಂದ ತೀವ್ರವಾಗುವುದಲ್ಲದೆ, ನೋವು ಅತಿಯಾಗಿಬಿಟ್ಟರೆ ಚಿಕಿತ್ಸೆ ಮತ್ತು ನಿವಾರಣೆಯೇ ಅಸಾಧ್ಯವಾಗಿಬಿಡುತ್ತದೆ ” ಎನ್ನುತ್ತಾರೆ ಡಾ ಮಹೇಶ್.

ಕ್ರಾನಿಕ್ ಪೇಯ್ನ್ ಇಂಡಿಯಾ ಗುಂಪಿನ ಅರುಣ್ ದಹಿಯಾ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು ಇವರಿಗೆ ಇಂಟರ್ ಸ್ಟಿಟಿಯಲ್ ಸಿಸ್ಟಿಟಿಸ್, ಫೈಬ್ರೋಮಯಾಲ್ಜಿಯಾ ಮತ್ತು ಮಯಾಲ್ಜಿಕ್ ಎನ್ಸೆಫಲೋಮೆಲಿಟಿಸ್ ಈ ಮೂರೂ ಖಾಯಿಲೆಗಳಿವೆ. ಇವರು ಬೇರೂರಿದ ನೋವನ್ನು ಕುರಿತು ಮಾತನಾಡುತ್ತಾ “ ನನ್ನ ಅಭಿಪ್ರಾಯದಲ್ಲಿ ಭವಿಷ್ಯದ ದಿನಗಳಲ್ಲಿ ಇಂತಹ ಹೆಚ್ಚುಹೆಚ್ಚು ಬೆಂಬಲ ಗುಂಪುಗಳು ಹುಟ್ಟಿಕೊಳ್ಳುತ್ತವೆ ಮತ್ತು ಅಗೋಚರ ಅನಾರೋಗ್ಯದ ಬಗ್ಗೆ ಇರುವ ಕಳಂಕವನ್ನು ತೊಡೆದುಹಾಕುತ್ತವೆ. ಆಗ ಈ ಪರಿಸ್ಥಿತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದೇ ಅಲ್ಲದೆ ಈ ಪರಿಸ್ಥಿತಿಯನ್ನು ಎದುರಿಸುವವರಿಗೆ ಪ್ರೇರಣೆ ದೊರೆಯುತ್ತದೆ.

ಈಗ ಬಹಳಷ್ಟು ಜನರು ತಪಾಸಣೆಗೊಳಗಾಗದೆಯೇ ನೋವು ಅನುಭವಿಸುತ್ತಿದ್ದು, ಯಾರ ಬಳಿ ಸಹಾಯ ಪಡೆಯಬೇಕು ಎಂಬುದನ್ನೇ ತಿಳಿಯದೆ ಪರದಾಡುತ್ತಿದ್ದಾರೆ ” ಎಂದು ಹೇಳುತ್ತಾರೆ. ಬೇರೂರಿದ ನೋವಿನಿಂದ ಬಳಲುವವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ತಮ್ಮ ಅನಾರೋಗ್ಯದ ಬಗ್ಗೆ ಇತರರೊಡನೆ ಮಾತನಾಡಲು ಭಯ ಪಡುತ್ತಾರೆ. ಏಕೆಂದರೆ ತಮ್ಮನ್ನು ದೂರ ಮಾಡಬಹುದು, ಬಹಿಷ್ಕರಿಸಬಹುದು, ನೌಕರಿಯಿಂದ ವಜಾ ಮಾಡಬಹುದು, ಸಮಸ್ಯೆಯ ನಿವಾರಣೆ ಮತ್ತು ನಿರ್ವಹಣೆಗೆ ಅಪಾರ ವೆಚ್ಚ ತಗುಲಬಹುದು ಹೀಗೆ ಹಲವು ಕಾರಣಗಳು ಇರುತ್ತವೆ. 

ತನ್ನ ಭವಿಷ್ಯದ ಯೋಜನೆಯ ಅನುಸಾರ ಕ್ರಾನಿಕ್ ಪೇಯ್ನ್ ಇಂಡಿಯಾ ಗುಂಪು ಈ ರೀತಿ ಕಣ್ಣಿಗೆ ಕಾಣದ, ಬೇರೂರಿದ ನೋವು ಅನುಭವಿಸುತ್ತಿರುವ ಪ್ರತಿಯೊಬ್ಬರಲ್ಲೂ ಜಾಗೃತಿ ಮತ್ತು ತಿಳುವಳಿಕೆ ಮೂಡಿಸಲು ಯತ್ನಿಸುತ್ತದೆ. ಆಸ್ಪತ್ರೆಗಳಲ್ಲಿ ಉಪನ್ಯಾಸಗಳು ಮತ್ತು ಗೋಷ್ಟಿಗಳನ್ನು ಏರ್ಪಡಿಸಿ ವೈದ್ಯರಿಗೂ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತದೆ. ಆಗ ವೈದ್ಯರು ಇಂತಹ ಸಮಸ್ಯೆ ಇರುವವರನ್ನು ಸೂಕ್ತ ವೈದ್ಯರ ಬಳಿ ಚಿಕಿತ್ಸೆಗಾಗಿ, ಸಲಹೆಗಾಗಿ ಕಳುಹಿಸಬಹುದು ಮತ್ತು ನೋವು ನಿವಾರಕ ವೈದ್ಯರ ಬಳಿ ಕಳುಹಿಸಬಹುದು.  ಇದರ ಮೂಲ ಉದ್ದೇಶ ಆಭರತದಲ್ಲಿ ಒಂದು ಬಾರಿಗೆ ಒಂದು ನಗರದಲ್ಲಿ

ಈ ರೀತಿಯ ಬೆಂಬಲ ಗುಂಪುಗಳನ್ನು ಸ್ಥಾಪಿಸುವುದೇ ಆಗಿದ್ದು, ಇದರ ಉಪಯೋಗಗಳನ್ನು ತಿಳಿದುಕೊಳ್ಳಲು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಕಳೆದ ವರ್ಷದ ಕೊನೆಯಲ್ಲಿ ಭಾರತದ ಪ್ರಪ್ರಥಮ ಸಮಾವೇಶವನ್ನು ಏರ್ಪಡಿಸಲಾಗಿತ್ತು, ಈ ಸಮಾವೇಶದಿಂದಲೇ ಡಾ ಮಹಾಜನ್ ಅನೇಕ ಹರ್ಷಚಿತ್ರ ಜನರನ್ನು ಪರಿಚಯಿಸುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org