# ನಾವೂ ಕೆಲಸ ಮಾಡಬಲ್ಲೆವು

# ನಾವೂ ಕೆಲಸ ಮಾಡಬಲ್ಲೆವು

ಮಾನಸಿಕ ಖಾಯಿಲೆ ಇರುವವರಿಗೆ ನೌಕರಿಯಲ್ಲಿ ಅವಕಾಶ ನೀಡುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಜನವರಿ 27 2019, ಬುಧವಾರದಂದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರವನ್ನು ಹಮ್ಮಿಕೊಳ್ಳಲಾಗಿತ್ತು. #ನಾವೂಕೆಲಸಮಾಡಬಲ್ಲೆವು ಎಂಬ ಹೆಸರಿನ ಈ ಪ್ರಚಾರಕ್ಕೆ ಬೆಂಬಲಿಸಲು ಮಾನಸಿಕ ಖಾಯಿಲೆ ಇರುವ ಅನೇಕ ಜನರು ಮುಂದೆ ಬಂದಿದ್ದು, ಮಾನಸಿಕ ಖಾಯಿಲೆ ಇರುವವರೂ ಕೆಲಸ ಮಾಡಬಲ್ಲರು ಎನ್ನುವ ಭಾವನೆಯನ್ನು ಬೆಂಬಲಿಸಲು ತಮ್ಮದೇ ಆದ ಸಂದೇಶಗಳನ್ನು ಹೊತ್ತು ಫೋಟೋ ಸಮೇತ ಪ್ರದರ್ಶನ ಮಾಡಿದ್ದರು. ಈ ಪ್ರಚಾರಾಂದೋಲನ ಚೆನ್ನೈನಲ್ಲಿರುವ ‘ಸಾಮಾಜಿಕ ನ್ಯಾಯದ ಮುನ್ನಡೆಗಾಗಿ ಸಮಾನ ಜನರ ಕೇಂದ್ರ‘ ಎಂಬ ಸಂಸ್ಥೆಯೊಂದರಲ್ಲಿ ರೂಪುಗೊಂಡಿದ್ದು ದೇಶದ ಎಲ್ಲ ಭಾಗಗಳಿಂದಲೂ ವ್ಯಾಪಕವಾದ ಬೆಂಬಲ ಗಳಿಸಿದೆ. ಬಡವರು ಸಾಹುಕಾರರು ಎನ್ನದೆ ಎಲ್ಲ ರೀತಿಯ ಜನರೂ ಇದನ್ನು ಬೆಂಬಲಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಾನಸಿಕ ಖಾಯಿಲೆ ಇರುವವರ ಹಕ್ಕುಗಳ ಮಸೂದೆಯನ್ನು ಕುರಿತು ಕೇಂದ್ರ ಮಂತ್ರಿಯವರು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಪ್ರಚಾರವನ್ನು ಕೈಗೊಳ್ಳಲಾಗಿದೆ. ಸಚಿವರು ತಮ್ಮ ಈ ಹೇಳಿಕೆಯಲ್ಲಿ, ಮಾನಸಿಕ ಖಾಯಿಲೆ ಇರುವ ವ್ಯಕ್ತಿಗೆ ನೌಕರಿ ನೀಡುವುದೇ ಬೇರೆ, ಮಾನಸಿಕ ದೌರ್ಬಲ್ಯ ಇರುವ ವ್ಯಕ್ತಿಗೆ ನೌಕರಿ ನೀಡುವುದೇ ಬೇರೆ ಎಂದು ಹೇಳುವ ಮೂಲಕ ಮಾನಸಿಕ ಖಾಯಿಲೆ ಇರುವವರ ಕೆಲಸ ಮಾಡುವ ಶಕ್ತಿಯನ್ನು ಅವಮಾನಿಸಿದ್ದರು . ಈ ಪ್ರಚಾರ ಮತ್ತು ಚಳುವಳಿಯ ಹಿಂದೆ ಕೆಲಸ ಮಾಡುತ್ತಿರುವವರು ಇಂತಹ ಹೇಳಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಕೂಡದು ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.  ಮಾನಸಿಕ ಖಾಯಿಲೆ ಇರುವ ಜನರನ್ನು ಮತ್ತಷ್ಟು ಮೂಲೆಗೆ ತಳ್ಳುವ ರೀತಿಯಲ್ಲಿ ಮಸೂದೆಯನ್ನು ಸಿದ್ಧಪಡಿಸುವ ಸಾಧ್ಯತೆ ಇರುವುದರಿಂದ ಈ ಪ್ರಚಾರವನ್ನು ನಡೆಸಲಾಗುತ್ತಿದೆ.

ಅಷ್ಟೇ ಅಲ್ಲ, ಈ ಪ್ರಚಾರ ಕಾರ್ಯದ ಮೂಲಕ ಸಮಾಜದಲ್ಲಿ ಸಾಮಾನ್ಯವಾಗಿ ಕೇಳಿಬರುವಂತಹ ಕೆಲವು ವಿಷಯಗಳನ್ನು ಪ್ರಶ್ನಿಸುವುದೇ ಅಲ್ಲದೆ,  ಇಂತಹ ಘಟನೆಗಳ ಪರಿಣಾಮವಾಗಿ ಆಗಿಂದಾಗ್ಗೆ  ಕೇಳಿಬರುತ್ತಲೇ ಇರುವ ಈ ವಿಚಾರಗಳಿಗೆ ಸವಾಲು ಒಡ್ಡಲಾಗುತ್ತದೆ. ಈ ಪ್ರಚಾರದಲ್ಲಿ ಭಾಗಿಯಾಗಿರುವ ಜನರ ಪೈಕಿ ಮಾನಸಿಕ ಖಾಯಿಲೆ ಇರುವವರಿಗೆ ಕೆಲಸ ನೀಡಿರುವವರೂ ಇದ್ದಾರೆ,  ನೌಕರಿ ಪಡೆದು ಸಫಲವಾಗಿರುವ ಸಂತ್ರಸ್ತರೂ ಇದ್ದಾರೆ, ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಮಾನಸಿಕ ದೌರ್ಬಲ್ಯ ಇರುವವರೂ ಸಹ ಇದ್ದಾರೆ. ಈ ಪ್ರಚಾರ ಮತ್ತು ಚಳುವಳಿಯನ್ನು ಈ ವಿಳಾಸದಲ್ಲಿ ನೋಡಬಹುದು: http://wecanwork.tumblr.com/

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org