ಉತ್ತಮ ಯೋಗಾಭ್ಯಾಸ ಮಾಡಲು ಐದು ಯೋಗ ಆ್ಯಪ್ ಗಳು

ಉತ್ತಮ ಯೋಗಾಭ್ಯಾಸ ಮಾಡಲು ಐದು ಯೋಗ ಆ್ಯಪ್ ಗಳು

ಉತ್ತಮ ಯೋಗಾಭ್ಯಾಸ ಮಾಡಲು ಐದು ಯೋಗ ಆ್ಯಪ್ ಗಳು

 ಯೋಗ ಪಂಡಿತರು ನಮ್ಮ ಮೇಲೆ ಕೂಗಾಡಬಹುದು. ಆದರೆ ಯೋಗ ತರಗತಿಗಳಿಗೆ ಹೋಗಲು ಸಾಧ್ಯವಾಗದ ನಮ್ಮಂಥವರಿಗೆ ಒಂದು ಯೋಗ ಆ್ಯಪ್ ಸಾಕಷ್ಟು ಪರಿಹಾರ ಒದಗಿಸುತ್ತದೆ. ನಾವು ಹಲವಾರು ಆ್ಯಪ್ ಸ್ಟೋರುಗಳನ್ನು ಕೆದಕಿ ನೋಡಿದ ನಂತರ ಸಾಕಷ್ಟು ಆಯ್ಕೆಗಳು ದೊರೆತಿವೆ. ಯೋಗ ಗುರುವಿನ ಸ್ಥಾನವನ್ನು ಯಾರೂ ವಹಿಸಿಕೊಳ್ಳಲು ಸಾಧ್ಯವಿಲ್ಲವಾದರೂ ಯೋಗ ಮಾಡದೆ ಇರುವುದಕ್ಕಿಂತಲೂ ಸ್ವಲ್ಪ ಮಟ್ಟಿಗೆ ಯೋಗ ಮಾಡುವುದು ಉತ್ತಮ. ವೈಟ್ ಸ್ವಾನ್ ಫೌಂಡೇಷನ್ ಸಂಸ್ಥೆಯ ಪ್ರಿಯಾಂಕ ಮಂತ್ರಿಪ್ರಗಾದ ಅವರು ವಿವಿಧ ಮೊಬೈಲ್ ವೇದಿಕೆಗಳ ಮೂಲಕ ಐದು ಯೋಗ ಆ್ಯಪ್ ಗಳನ್ನು ಪರಿಶೀಲಿಸಿದ್ದು ಯಾವುದು ಒಳ್ಳೆಯದು ಯಾವುದು ಅಲ್ಲ ಎಂದು ಕಂಡುಹಿಡಿದಿದ್ದಾರೆ. ಬಳಕೆದಾರರೊಡನೆ ಸಂಪರ್ಕದ ಮೂಲಕ ಮತ್ತು ಜನಪ್ರಿಯತೆಯ ಆಧಾರದಲ್ಲಿ ಈ ಐದು ಆ್ಯಪ್ ಗಳನ್ನು ಆಯ್ಕೆ ಮಾಡಲಾಗಿದೆ.

 • ಡೈಲಿ ಯೋಗ (ಐಒಎಸ್)

ಈ ಆ್ಯಪ್ ಐಒಎಸ್, ವಿಂಡೋಸ್ ಮತ್ತು ಆಂಡ್ರಾಯ್ಡ್, ಈ ಮೂರು ಮೊಬೈಲ್ ವೇದಿಕೆಗಳಲ್ಲಿ ಲಭ್ಯವಿರುತ್ತದೆ. ಇದು ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದೆ. ದಿನನಿತ್ಯದ ಯೋಗದಲ್ಲಿ ಆಸನಗಳನ್ನು ಯೋಗಿಯಂತೆಯೇ ಕಾಣುವ ಚಿತ್ರವು ಪ್ರದರ್ಶಿಸುತ್ತದೆ. ಈ ಆ್ಯಪ್ ನಲ್ಲಿ ಈ ಕೆಳಗಿನ ವಿಭಾಗಗಳಿವೆ. ಆರಂಭಿಕ ತರಬೇತಿ ,  ಆಸನದ  ಗ್ರಂಥಾಲಯ, ಸಮುದಾಯ, ಯೋಗ ಸಂಗೀತ ಇನ್ನೂ ಹೆಚ್ಚಿನ ಮಾಹಿತಿ ಮತ್ತು ಇತರ ಆ್ಯಪ್ ಗಳು. ಆ್ಯಪ್ ನ ಉಚಿತ ಆವೃತ್ತಿಯೂ ಲಭ್ಯವಿದ್ದು ಪರಿಪೂರ್ಣ ಅನುಭವಕ್ಕಾಗಿ ವೃತ್ತಿಪರ ಆವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಒಳ್ಳೆಯದೇನಿದೆ ?

 • ನಿಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ನಿಮ್ಮದೇ ಆದ ನಿತ್ಯ ಅಭ್ಯಾಸವನ್ನು ಮಾಡಿಕೊಳ್ಳಬಹುದು.
 • ವಿಡಿಯೋಗಳು ಹೆಚ್ ಡಿ ಗುಣಮಟ್ಟ ಹೊಂದಿವೆ
 • ಆ್ಯಪ್ ನಲ್ಲಿರುವ ಆಸನದ ಗ್ರಂಥಾಲಯವು ಪ್ರತಿಯೊಂದು ಆಸನದ ಬಗ್ಗೆಯೂ ವಿವರವಾಗಿ ತಿಳಿಸುವುದೇ ಅಲ್ಲದೆ ಪ್ರತಿಯೊಂದು ಆಸನದ ಪ್ರಯೋಜನಗಳನ್ನು ತಿಳಿಸಿಕೊಡುತ್ತದೆ.
 • ಡೌನ್ ಲೋಡ್ ಮಾಡಿದ ನಂತರ ಅನುಕರಣ ತರಗತಿಗಳನ್ನು ಆಫ್ ಲೈನಿನಲ್ಲಿಯೇ ನೋಡಬಹುದು.

ಸರಿಯಿಲ್ಲದಿರುವುದೇನು ?

 • ನೀವು ಆ್ಯಪ್ ಬಳಸುವಾಗ ಆನ್ ಲೈನ್ ನಲ್ಲಿ ಬಳಸದೆ ಇದ್ದರೆ ಅಥವಾ ನೋಡುತ್ತಿರುವ ಆಸನಗಳನ್ನು ಕೆಲಹೊತ್ತು ನಿಲ್ಲಿಸಿದ್ದರೆ ಹಲವಾರು ಜಾಹೀರಾತುಗಳು ಪರದೆಯ ಮೇಲೆ ಬರಲಾರಂಭಿಸುತ್ತವೆ. ನೀವು ಪುನಃ ನೋಡಲು ಆರಂಭಿಸಿದಾಗ ಈ ಜಾಹೀರಾತುಗಳು ಮರೆಯಾಗುವುದೇ ಇಲ್ಲ.
 • ಸಿಂಪ್ಲಿ ಯೋಗ (ಆಂಡ್ರಾಯ್ಡ್)

ಈ ಯೋಗ ಆ್ಯಪ್ ಎರಡು ಹಂತಗಳಲ್ಲಿ ಆಸನಗಳನ್ನು ಸೂಚಿಸುತ್ತದೆ. ಪ್ರತಿಯೊಂದು ಹಂತಕ್ಕೂ 20, 40 ಮತ್ತು 60 ನಿಮಿಷಗಳ ಕಾಲಾವಕಾಶ ಇರುತ್ತದೆ. ಯೋಗಾಸನಗಳ ತೀವ್ರತೆಯಲ್ಲಿ ಪ್ರತಿಯೊಂದು ಹಂತವೂ ವಿಭಿನ್ನವಾಗಿರುತ್ತದೆ. ಈ ಆ್ಯಪ್ ಉಚಿತವಾಗಿ ದೊರೆಯಲಿದ್ದು ವೃತ್ತಿಪರ ಆವೃತ್ತಿಗೆ ಬದಲಿಸಿಕೊಳ್ಳುವ ಅವಕಾಶ ಇರುತ್ತದೆ.

ಒಳ್ಳೆಯದೇನಿದೆ ?

 • ಆಸನಗಳನ್ನು ತೋರಿಸುವ ಕಾರ್ಯಕ್ರಮಗಳು ವಿಡಿಯೋ ರೂಪದಲ್ಲಿದ್ದು ಸುಲಭವಾಗಿ ಲೋಡ್ ಆಗುತ್ತದೆ.
 • ಆರಂಭದ ಹಂತದಲ್ಲಿರುವವರಿಗೆ ಈ ಆ್ಯಪ್ ಸ್ನೇಹಮಯಿಯಾಗಿರುತ್ತದೆ.

ಸರಿಯಿಲ್ಲದಿರುವುದೇನು ?

 • ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತರ್ಜಾಲ ಸಂಪರ್ಕ ಇಲ್ಲದಿದ್ದರೆ ನಿಮಗೆ ಈ ಆ್ಯಪ್ ಬಳಸಲು ಸಾಧ್ಯವಾಗುವುದಿಲ್ಲ.
 • ನಿಮ್ಮ ಯೋಗಾಭ್ಯಾಸವನ್ನು ವಾಡಿಕೆ ಮಾಡಿಕೊಳ್ಳಲಾಗುವುದಿಲ್ಲ
 • ಉಚಿತ ಆವೃತ್ತಿಯಲ್ಲಿ ಮೊದಲ ಹಂತದ ಆಸನಗಳನ್ನು ಮಾತ್ರ ಪಡೆಯಬಹುದು.
 • ಯೋಗ ಸ್ಟುಡಿಯೋ (ಐಒಎಸ್)

ಇದು ಹೊಸಬರಿಗೆ ಮತ್ತು ವೃತ್ತಿಪರರಿಗೆ ಬಳಕೆಯಾಗುವ ಜನಪ್ರಿಯ ಆ್ಯಪ್ ಆಗಿದೆ. ಯೋಗ ಸ್ಟುಡಿಯೋ ಪಾವತಿ ಮಾಡಬೇಕಾದ ಯೋಗ ಆ್ಯಪ್. ಯೋಗಾಸನ ತರಗತಿಗಳನ್ನು ಚಿತ್ರಗಳ ಮೂಲಕ ಬಿತ್ತರಿಸಲಾಗುತ್ತದೆ. ಹಿನ್ನೆಲೆಯಲ್ಲಿ ಮೆಲ್ಲನೆಯ ಸಂಗೀತವೂ ಇರುತ್ತದೆ. ನಿಮಗೆ ಲಭ್ಯವಾದ ಸಮಯದ ಅನುಸಾರ ನೀವು ನಿಮ್ಮ ಯೋಗಾಭ್ಯಾಸದ ಸಮಯವನ್ನು ವಾಡಿಕೆ ಮಾಡಿಕೊಳ್ಳಬಹುದು. ಈ ಆ್ಯಪ್ ನ ಬೆಲೆ 250 ರೂಪಾಯಿಗಳಾಗಿದ್ದು ಕೇವಲ ವೃತ್ತಿಪರ ಆವೃತ್ತಿ ದೊರೆಯುತ್ತದೆ.

ಒಳ್ಳೆಯದೇನಿದೆ ?

 • ಕಲಿಕೆಯ ಹಂತದಲ್ಲಿ ಇರುವವರಿಗೆ, ಮಧ್ಯ ಹಂತದಲ್ಲಿರುವವರಿಗೆ, ತರಬೇತಿ ಪಡೆದ ತಜ್ಞರಿಗೆ ನೆರವಾಗುವಂತೆ ರೆಕಾರ್ಡ್ ಮಾಡಲಾದ ತರಗತಿಗಳನ್ನು ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ. ಇವುಗಳನ್ನು ಅಂತರ್ಜಾಲದ ಬಳಕೆಯ ಮೂಲಕ ಡೌನ್ ಲೊಡ್ ಮಾಡಿಕೊಳ್ಳಬಹುದು.
 • ಈ ಆ್ಯಪ್ ನಲ್ಲಿ ಹೊಸ ಆಸನಗಳನ್ನು ಸೇರ್ಪಡೆ ಮಾಡುವ ಅವಕಾಶವಿರುತ್ತದೆ.
 • ನಿಮ್ಮ ನಿಗದಿತ ಸಮಯ ಮತ್ತು ಆಸನಗಳನ್ನು ಅಭ್ಯಾಸ ಮಾಡುವ ತೀವ್ರತೆಗೆ ಅನುಗುಣವಾಗಿ ವಾಡಿಕೆ ಮಾಡಲ್ಪಟ್ಟ ತರಗತಿಗಳು ಲಭ್ಯವಿರುತ್ತದೆ.

ಸರಿಯಿಲ್ಲದಿರುವುದೇನು ?

 • ಈ ಆ್ಯಪ್ ನ್ನು ಬಳಕೆ ಮಾಡಿ ನೋಡಲು ಉಚಿತ ಆವೃತ್ತಿ ಲಭ್ಯವಿರುವುದಿಲ್ಲ.
 • ಹಿನ್ನೆಲೆ ಸಂಗೀತವನ್ನು ನಿಲ್ಲಿಸಲಾಗುವುದಿಲ್ಲ.
 • ಯೋಗ ಕ್ಯೂರ್ (ವಿಂಡೋಸ್)

ವಿಂಡೋಸ್ ವೇದಿಕೆಯಲ್ಲಿ ದೊರೆಯುವ ಮತ್ತೊಂದು ಸಮಗ್ರ ಆ್ಯಪ್ ಎಂದರೆ ಯೋಗ ಕ್ಯೂರ್. ಇದರಲ್ಲಿ ಮೂರು ವಿಭಾಗಗಳಿವೆ : ನನ್ನ ದೇಹ, ನನ್ನ ಆರೋಗ್ಯ ಮತ್ತು ಯೋಗ ಕೇಂದ್ರಗಳು (ದೇಶಾದ್ಯಂತ ಇರುವ ಯೋಗ ಕೇಂದ್ರಗಳ ಸ್ಥಳ ವಿವರ ಒದಗಿಸುತ್ತದೆ). ನನ್ನ ದೇಹ ವಿಭಾಗದಲ್ಲಿ ನಿರ್ದಿಷ್ಟ ಆಸನಗಳನ್ನು ತೋರಿಸಲಾಗುತ್ತದೆ. ಈ ಆಸನಗಳಿಂದ ದೇಹದ ಅಂಗಗಳಾದ ಮಿದುಳು, ಭುಜಗಳು, ಥೈರಾಯ್ಡ್, ಕಿಬ್ಬೊಟ್ಟೆ ಇವುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ತೋರಿಸಲಾಗುತ್ತದೆ. ನನ್ನ ಆರೋಗ್ಯ ವಿಭಾಗದಲ್ಲಿ ಹೆಚ್ಚಿನ ರಕ್ತದೊತ್ತಡ, ಬೆನ್ನು ನೋವು, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಅನುಕೂಲವಾಗುವಂತಹ ಆಸನಗಳನ್ನು ತೋರಿಸಲಾಗಿದೆ. ಅನಿಮೇಟೆಡ್ ವಿಡಿಯೋಗಳನ್ನು ಪುನಃ ಬಿತ್ತರಿಸುವ ಅವಕಾಶ ಲಭ್ಯವಿದೆ.

ಒಳ್ಳೆಯದೇನಿದೆ ?

 • ಫ್ಲ್ಯಾಷ್ ವಿಡಿಯೋಗಳು ಹೆಚ್ಚಿನ ಮಾಹಿತಿಯನ್ನು ಬಳಸುವುದಿಲ್ಲ ಮತ್ತು ಚೆನ್ನಾಗಿ ಕಾಣುವಂತಿರುತ್ತದೆ.
 • ದೇಹಕ್ಕೆ ಸೂಕ್ತವಾದ ಆಸನಗಳನ್ನು ತೋರುವುದರಿಂದ ಯೋಗಾಸನಗಳನ್ನು ವಾಡಿಕೆ ಮಾಡಿಕೊಳ್ಳಬಹುದು.

ಸರಿಯಿಲ್ಲದಿರುವುದೇನು ?

 • ಜಾಹೀರಾತುಗಳು ಹೆಚ್ಚಾಗಿವೆ.
 • ವಿಡಿಯೋಗಳು ಫ್ಲ್ಯಾಷ್ ಆಗುವಂತಿದ್ದು ತಡೆಹಿಡಿಯುವ ಮತ್ತು ಪುನಃ ಆರಂಭಿಸುವ ಆಯ್ಕೆ ಇರುವುದಿಲ್ಲ.

5. ಯೋಗ.ಕಾಂ (ಆಂಡ್ರಾಯ್ಡ್)

289 ಆಸನಗಳ ನ್ನು ಮತ್ತು ಉಸಿರಾಟದ ಕಸರತ್ತುಗಳನ್ನು , 37 ವಿವಿಧ ಯೋಗ ಕಾರ್ಯಕ್ರಮಗಳನ್ನು ಹೊಂದಿರುವ ಭಂಡಾರದೊಂದಿಗೆ ಯೋಗ.ಕಾಂ ಆ್ಯಪ್ ಸಮಗ್ರವಾದ ಯೋಗಾಭ್ಯಾಸ ಆಯ್ಕೆಗಳನ್ನು ಒದಗಿಸುತ್ತದೆ. ಉದಾಹರಣೆಗೆ, ಪ್ರತಿಯೊಂದು ಆಸನಕ್ಕೂ ನೀವು ಸಚಿತ್ರ ಮಾಹಿತಿಯನ್ನು ಪಡೆಯಬಹುದು ಅಥವಾ ವಿಡಿಯೋ ಪ್ರದರ್ಶನವನ್ನು ನೋಡಬಹುದು.

ಒಳ್ಳೆಯದೇನಿದೆ ?

 • ಉಚಿತ ಆವೃತ್ತಿಯಲ್ಲಿ ಹಲವಾರು ಆಸನಗಳು ಲಭ್ಯವಿರುತ್ತದೆ.
 • ವಿಡಿಯೋಗಳು ಉತ್ತಮ ಹೆಚ್ ಡಿ ಗುಣಮಟ್ಟ ಹೊಂದಿರುತ್ತವೆ. ಮಾಂಸಖಂಡಗಳನ್ನು 3ಡಿ ತಂತ್ರಜ್ಞಾನದ ಮೂಲಕ ಬಿತ್ತರಿಸಲಾಗುತ್ತದೆ ಮತ್ತು ಪ್ರತಿಯೊಂದು ಆಸನದಲ್ಲೂ ವಿಭಿನ್ನ ಭಂಗಿಗಳನ್ನು ನೋಡಬಹುದು.
 • ಬಳಸಲು ಬಹಳ ಸರಳವಾಗಿದೆ.

ಸರಿಯಿಲ್ಲದಿರುವುದೇನು ?

 • ವಿಡಿಯೋಗಳು ಆಗಾಗ್ಗೆ ಮರೆಯಾಗುತ್ತಿರುತ್ತವೆ. ಸಣ್ಣ ಕ್ರಾಸ್ ಚಿಹ್ನೆ ಕಾಣಿಸಿಕೊಳ್ಳುತ್ತದೆ. ಅದನ್ನು ಒತ್ತಿದಾಗ ವಿಡಿಯೋ ಬಂದ್ ಆಗಿಬಿಡುತ್ತದೆ. ಇದನ್ನು ಸರಿಪಡಿಸಬೇಕು.
 • ವಿಡಿಯೋಗಳು ಆಫ್ ಲೈನ್ ದೊರೆಯುವಂತೆ ಮಾಡಬೇಕು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org