ಪಾಲನೆಯ ವಿಧಾನದಲ್ಲಿ ಸಾವಧಾನತೆಯನ್ನು (Mindfulness) ಬೆಳೆಸಿಕೊಳ್ಳುವುದು
Santanu

ಪಾಲನೆಯ ವಿಧಾನದಲ್ಲಿ ಸಾವಧಾನತೆಯನ್ನು (Mindfulness) ಬೆಳೆಸಿಕೊಳ್ಳುವುದು

ಪೂರ್ಣ ಮನಸ್ಸಿನ ಪಾಲನೆ, ಒಟ್ಟಾರೆ ಸಾವಧಾನತೆಯು ದಿನನಿತ್ಯದ ಒತ್ತಡವನ್ನು ನಿಭಾಯಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಕಂಡುಬರುತ್ತದೆ
Published on

ಅಪ್ಪ ಎನ್ನಿಸಿಕೊಳ್ಳುವುದು ಬದುಕಿನ ಬಹುದೊಡ್ಡ ಸಂತೋಷಗಳಲ್ಲಿ ಒಂದು ಆದರೆ ಮೂಲದಲ್ಲಿ ಅದೊಂದು ಬಹಳ ಸವಾಲಿನ ವಿಷಯವಾಗಿದೆ. ಒಬ್ಬ ತಂದೆಯಾಗಿ ಇದು ನಿಜವೆಂದು ನನಗೂ ತಿಳಿದಿದೆ. ಅಮೇರಿಕಾದ ಹಾಸ್ಯ ನಟನೊಬ್ಬ ಹೇಳುವಂತೆ 'ನವಜಾತ ಶಿಶುವನ್ನು ಮನೆಗೆ ಕರೆದುಕೊಂಡು ಬಂದಾಗ ಎಷ್ಟೋ ಪೋಷಕರು ಮುಂದೇನು ಎಂಬ ಗೊಂದಲದಲ್ಲಿ ವಸ್ತುಗಳೊಂದಿಗೆ ನೀಡಲಾಗುವ ಬಳಕೆದಾರರ ಕೈಪಿಡಿ ಇದಕ್ಕೂ ಇದ್ದಿದ್ದರೆ ಚೆನ್ನ' ಎಂಬಂತೆ ಎಂದುಕೊಳ್ಳುತ್ತಾರೆ.

ಮನಶಾಸ್ತ್ರವು ಇದಕ್ಕೆಲ್ಲ ಇನ್ನೂ ಉತ್ತರ ಕಂಡುಕೊಂಡಿಲ್ಲವಾದರೂ ಸಂಶೋಧನೆಗಳು ಪೂರ್ಣ ಮನಸ್ಸಿನ ಪಾಲನೆ ಎಂದು ಕರೆಯಲ್ಪಡುವ ವಿಧಾನವನ್ನು ಹೆಚ್ಚು ಸಮಂಜಸ ಮತ್ತು ಪ್ರಮುಖ ಆಯಾಮವೆಂದು ಪರಿಗಣಿಸಿವೆ. ಹಿಂದಿನ ವೈಟ್ ಸ್ವಾನ್ ಫೌಂಡೇಷನ್ ಅಂಕಣದಲ್ಲಿ ನಾನು ಸಾವಧಾನತೆಯ (Mindfulness) ವಿಶಾಲ ಮನೋಭಾವದ ವ್ಯಕ್ತಿತ್ವದ ಲಕ್ಷಣವನ್ನು ಪ್ರಸ್ತುತ ಕ್ಷಣದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಮತ್ತು ಅದರ ವೈವಿಧ್ಯಮಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಪ್ರಯೋಜನಗಳನ್ನು ಎತ್ತಿ ತೋರಿಸಿದ್ದೆ.

ಈ ಸಕರಾತ್ಮಕ ಪರಿಣಾಮಗಳಲ್ಲಿ ನಿಕಟ ಸ್ನೇಹ ಮತ್ತು ಪ್ರಣಯ ಪ್ರೀತಿ, ಹೆಚ್ಚಿನ ಕೆಲಸದ ಉತ್ಪಾದಕತೆ ಮತ್ತು ಉತ್ತಮಗೊಂಡ ಹೃದಯದ ರಕ್ತನಾಳದ ಫಿಟ್‌ನೆಸ್ ಕೂಡಾ ಸೇರಿವೆ.

ಮೈಂಡ್ ಫುಲ್ ಪೇರೇಂಟಿಂಗ್ ಹೆಚ್ಚು ನಿರ್ದಿಷ್ಟವಾದುದು ಎಂದು ಹೇಳಲಾಗಿದೆ. ಈ ಪ್ರಚೋದಕ ಪದದ ಉಗಮಸ್ಥಾನವಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಡಾ. ಲಾರಿಸ್ಸಾ ಡಂಕನ್ ಅವರ ಪ್ರಕಾರ, "ಉದ್ದೇಶಪೂರ್ವಕವಾಗಿ ಪೋಷಕ-ಮಕ್ಕಳ ಸಂಬಂಧಕ್ಕೆ ಕ್ಷಣ-ಕ್ಷಣ ಜಾಗೃತಿಯನ್ನು ತರುವ" ಪೋಷಕರ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ. ವಾಸ್ತವವಾಗಿ, ಸಂಶೋಧನೆಯು ಒಟ್ಟಾರೆ ಇದಕ್ಕಿಂತಲೂ ಹೆಚ್ಚಿನದನ್ನು ತೋರಿಸುತ್ತದೆ ಪಾಲನೆಯ ವಿಷಯಕ್ಕೆ ಬಂದರೆ ಕೇವಲ ಮೈಂಡ್ ಫುಲ್ನೆಸ್ ಸಾಕಾಗುವುದಿಲ್ಲ. ಯಾಕೆಂದರೆ ಅದು ಇಡೀ ದಿನ ಶಾಂತಿ ನೆಲೆಸುವಂತೆ ಮಾಡಬಹುದು ಆದರೆ ಅದು ನಮಗೆ ನಮ್ಮ ಆರು ವರ್ಷದ ಮಗನ ವಿವಿಧ  ತಂತ್ರಗಳನ್ನು ಎದುರಿಸಲು ಅಥವಾ ವಯಸ್ಕ ಮಗ ಬೆಳಗಿನ ಜಾವ ಎರಡು ಗಂಟೆಗೆ ಮನೆಗೆ ಬರುವಂತಹ ಸನ್ನಿವೇಶಗಳನ್ನು ಎದುರಿಸಲು ವಿಶೇಷವಾದ ಶಾಂತ ಮನೋಭಾವದ ಪೇರೇಂಟಿಂಗ್ ಬೇಕಾಗುತ್ತದೆ.

ಡಂಕನ್ ದೃಷ್ಟಿಯಲ್ಲಿ ಮೈಂಡ್ ಫುಲ್ ಪೇರೇಂಟಿಂಗ್ ಎನ್ನುವುದು ಎಲ್ಲಾ ಪೋಷಕರು ಕಲಿಯಬಹುದಾದ ಕೌಶಲವಾಗಿದೆ. ಇದು ಐದು ವಿಭಿನ್ನ ಆದರೆ ಪರಸ್ಪರ ಸಂಬಂಧಿತ ಆಯಾಮಗಳನ್ನು ಒಳಗೊಂಡಿದೆ:

  • ಪೂರ್ಣ ಗಮನದೊಂದಿಗೆ ಆಲಿಸುವುದು, ಇದರಿಂದ ನಮ್ಮ ಮಗು ಹೇಗೆ ವರ್ತಿಸುತ್ತಿದೆ ಎಂಬುದನ್ನು ನಾವು ಸರಿಯಾಗಿ ಗ್ರಹಿಸಬಹುದು.

  • ನಮ್ಮ ಮಗುವು ವಾಸ್ತವಿಕ ನಿರೀಕ್ಷೆಗಳು ಮತ್ತು ಗುರಿಗಳನ್ನು ಹೊಂದಲು ಸಾಧ್ಯವಾಗುವಂತೆ ಸ್ವಯಂ ಮತ್ತು ಮಗುವಿನ ಕುರಿತು ವಿವೇಕದಿಂದ ಕೂಡಿದ ಸ್ವೀಕಾರ ಮನೋಭಾವವನ್ನು ಅಳವಡಿಸಿಕೊಳ್ಳುವುದು.

  • ನಮ್ಮ ಮತ್ತು ಮಗುವಿನ ಕುರಿತಾದ ಭಾವನಾತ್ಮಕ ಅರಿವು, ಇದರಿಂದ ನಾವು ನಮ್ಮ ಮಗುವಿನ ಭಾವನೆಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಗೌರವಿಸಬಹುದು.

  • ಪೋಷಕರ ಸಂಬಂಧದಲ್ಲಿ ಸ್ವಯಂ ನಿಯಂತ್ರಣ, ಇದರಿಂದಾಗಿ ನಾವು ಶಾಂತವಾಗಿರುತ್ತೇವೆ ಮತ್ತು ನಮ್ಮ ಮಗುವಿನ ತಪ್ಪುಗಳು, ಬೇಡಿಕೆಗಳು, ತಂತ್ರಗಳು ಮತ್ತು ಇತರ ನಕಾರಾತ್ಮಕ ನಡವಳಿಕೆಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಬಹುದು.

  • ತನ್ನ ಮತ್ತು ಮಗುವಿನ ಬಗ್ಗೆ ಸಹಾನುಭೂತಿ: ಇದು ವಾತ್ಸಲ್ಯ, ದಯೆ, ಕ್ಷಮೆ ಮತ್ತು ಮಗುವಿನ ಕುರಿತು ಕೃತಜ್ಞತೆ, ಮತ್ತು ಸ್ವಯಂ ಸಹಾನುಭೂತಿ ಮುಂತಾದ ಶ್ಲಾಘನೀಯ ಭಾವನೆಗಳನ್ನು ಒಳಗೊಂಡಿರುತ್ತದೆ.

ಪೋಷಕರಿಗೆ ಈ ಮನಸ್ಥಿತಿಯನ್ನು ಎಲ್ಲಾ ಸಮಯದಲ್ಲೂ ಸಾಕಾರಗೊಳಿಸಿಕೊಳ್ಳಲು  ಸಾಧ್ಯವಿಲ್ಲದಿದ್ದರೂ, ಡಂಕನ್ ಮತ್ತು ಅವರ ಸಹೋದ್ಯೋಗಿಗಳು ಇದನ್ನು ಅನುಸರಿಸಬಹುದಾದ ವಾಸ್ತವಿಕ ಆದರ್ಶವೆಂದು ಪರಿಗಣಿಸುತ್ತಾರೆ ಮತ್ತು ಇದಕ್ಕಾಗಿ ನಿರ್ದಿಷ್ಟ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಅನೇಕ ವಯಸ್ಕರಿಗೆ ತಮ್ಮ ಕ್ಷಣ-ಕ್ಷಣದ ಪೋಷಕರ ಭಾವನೆಗಳು ಮತ್ತು ಕಾರ್ಯಗಳ ಬಗ್ಗೆ ಅರಿವು ಮೂಡಿಸುವುದು ಕಷ್ಟಕರವಾಗಿದೆ ಮತ್ತು ಸಾಮಾನ್ಯ ಮೈಂಡ್ ಫುಲ್ನೆಸ್ ತರಬೇತಿಯು ಪೋಷಕತ್ವದ ದಿನನಿತ್ಯದ ಒತ್ತಡಗಳನ್ನು ಕಡಿಮೆ ಮಾಡಲು ತುಂಬಾ ಅನುಕೂಲಕರ ಎಂಬುದು ಇದರ ಮೂಲ ಆಶಯ.

ಅಂತಹ ತರಬೇತಿ ಕಾರ್ಯಕ್ರಮಗಳು ನಿಜವಾಗಿ ಪ್ರಯೋಜನಕಾರಿಯೇ? ಎನ್ನುವ ಪ್ರಶ್ನೆಗೆ ಉತ್ತರ ಹೌದು ಎನ್ನುತ್ತವೆ ಹಲವು ಸಂಶೋಧನೆಗಳು. ಉದಾಹರಣೆಗೆ, ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಡಾ. ಕೈಟ್ಲಿನ್ ಟರ್ಪಿನ್ ನೇತೃತ್ವದ ಅಧ್ಯಯನವು ಪೋಷಕರ ಮೈಂಡ್ ಫುಲ್ ಪಾಲನೆಯ ಮಟ್ಟವನ್ನು ಸಮೀಕ್ಷೆ ಮಾಡಿತು ಮತ್ತು ನಂತರ ಅವರು ತಮ್ಮ 12 ರಿಂದ 14 ವರ್ಷದ ಮಕ್ಕಳೊಂದಿಗೆ ತಮ್ಮ ಸಂಬಂಧದಲ್ಲಿನ ಸಂಘರ್ಷದ ಬಗ್ಗೆ ಹೇಗೆ ಮಾತನಾಡಿದರು ಎಂಬುದನ್ನು ವಿಶ್ಲೇಷಿಸಿದ್ದಾರೆ. ಮೈಂಡ್ ಫುಲ್ ಪೇರೇಂಟಿಂಗಿನ ಹೆಚ್ಚಿನ ಪೋಷಕರು ಕಡಿಮೆ ಋಣಾತ್ಮಕ ಭಾವನೆಯನ್ನು (ಕೋಪದಂತಹ) ವ್ಯಕ್ತಪಡಿಸುತ್ತಾರೆ ಮತ್ತು ಮೈಂಡ್ ಫುಲ್ ಪೇರೇಂಟಿಂಗ್ ಕಡಿಮೆ ಇರುವವರೊಂದಿಗೆ ಹೋಲಿಸಿದರೆ ಹೆಚ್ಚು ಸಕಾರಾತ್ಮಕ ಭಾವನೆಯನ್ನು (ನಗೆಯಂತಹ) ಹಂಚಿಕೊಂಡಿದ್ದಾರೆ. ಮತ್ತೊಂದು ಅಧ್ಯಯನದಲ್ಲಿ, ವರ್ಮೊಂಟ್ ವಿಶ್ವವಿದ್ಯಾಲಯದ ಡಾ. ಜಸ್ಟಿನ್ ಪೇರೆಂಟ್ ನೇತೃತ್ವದ ಸಂಶೋಧನಾ ತಂಡವು ಪೋಷಕರ ಒಟ್ಟಾರೆ ಸಾವಧಾನತೆ ಮತ್ತು ಪೋಷಕರ ಸಾವಧಾನತೆಯನ್ನು ನಿರ್ಣಯಿಸಿತು ಮತ್ತು ನಂತರ ಅವರ ಮಕ್ಕಳ ಭಾವನಾತ್ಮಕ ಸಮಸ್ಯೆಗಳ ವ್ಯಾಪ್ತಿಯನ್ನು ವಿಶ್ಲೇಷಿಸಿತು. ಮಕ್ಕಳು ಮತ್ತು ಹದಿಹರೆಯದವರಿಗಾಗಿ, ಹೆಚ್ಚಿನ ಮಟ್ಟದ ಪೋಷಕರ ಸಾವಧಾನತೆ - ಆದರೆ ಒಟ್ಟಾರೆ ಸಾವಧಾನತೆ ಅಲ್ಲ - ಮಕ್ಕಳೊಂದಿಗಿನ ಸಂಬಂಧದ ಉತ್ತಮ ಫಲಿತಾಂಶಗಳಿಗೆ ಗಮನಾರ್ಹವಾಗಿ ಸಂಬಂಧಿಸಿದೆ.

ಪೋಷಕರಾಗಿ ನಿಮ್ಮ ಮೈಂಡ್ ಫುಲ್ನೆಸ್ಸನ್ನು ನೀವು ಹೇಗೆ ಸುಧಾರಿಸಬಹುದು?

ನಿಮ್ಮ ನಡವಳಿಕೆಯನ್ನು ಬದಲಾಯಿಸಲು ನಿರ್ಧರಿಸುವ ಮೊದಲು, ಈ ಪ್ರಮುಖ ಕೆಳಗಿನ ಲಕ್ಷಣಗಳ ವಿಷಯಕ್ಕೆ ಬಂದಾಗ ನೀವು ನಿಜವಾಗಿ ಎಲ್ಲಿ ನಿಲ್ಲುತ್ತೀರಿ ಎಂದು ಮೊದಲು ನಿರ್ಣಯಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಉದಾಹರಣೆಗೆ, ಡಂಕನ್‌ರ ಸಂಶೋಧನಾ ತಂಡವು ಅಭಿವೃದ್ಧಿಪಡಿಸಿದ ಪ್ರಶ್ನಾವಳಿಯು ಕಳೆದ ಎರಡು ವಾರಗಳ ಒಬ್ಬರ ಪೋಷಕರ ನಡವಳಿಕೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು “ನಿಮ್ಮ ಮಗು ನಿಮಗೆ ಹೇಳದಿದ್ದರೂ ಸಹ, ನಿಮ್ಮ ಮಗು ಏನು ಯೋಚಿಸುತ್ತಿದೆ ಎಂದು ನೀವು ಎಷ್ಟು ಬಾರಿ ಹೇಳಬಹುದು?” ಎಂಬತಹ ಉಪಯುಕ್ತ ಪ್ರಶ್ನೆಗಳನ್ನು ಒಳಗೊಂಡಿದೆ; “ನಿಮ್ಮ ಮಗು ಇನ್ನೊಂದು ಮಗುವಿನಂತೆ ಇರಬೇಕೆಂದು ನೀವು ಬಯಸಿದ್ದೀರಾ?”; “ನಿಮ್ಮ ಮಗು ನಿಮ್ಮೊಂದಿಗೆ ಮಾತನಾಡುವಾಗ ನೀವು ಇತರ ಕೆಲಸಗಳನ್ನು ಮಾಡಿದ್ದೀರಾ?”; “ನಿಮ್ಮ ಭಾವನೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ವಿಧಾನವನ್ನು ನೀವು ಗಮನಿಸಿದ್ದೀರಾ?”; ಮತ್ತು “ನಿಮ್ಮ ಪಾಲನೆಯ ಬಗ್ಗೆ ಯೋಚಿಸಲು ನೀವು ಸಮಯ ತೆಗೆದುಕೊಂಡಿದ್ದೀರಾ?” ಎಂದೆಲ್ಲಾ ಪ್ರಶ್ನಿಸುತ್ತದೆ.

ಈ ಐದು ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ಪೋಷಕರಾಗಿ ನಿಮ್ಮ  ಸಾವಧಾನತೆಯನ್ನು ಹೆಚ್ಚಿಸಬಹುದೆಂದು ತೋರಿಸಿದರೆ, ಮುಂದಿನ ಎರಡು ವಾರಗಳವರೆಗೆ ಒಂದು ಪುಸ್ತಕದಲ್ಲಿ  ಪ್ರತಿ ದಿನ ನೀವು ಪೋಷಕರಾಗಿ ಮಾಡಿದ ಉತ್ತಮ ಕೆಲಸ ಮತ್ತು ಸುಧಾರಿಸಬಹುದಾದ  ಯಾವುದನ್ನಾದರೂ ಕುರಿತು ಒಂದು ಪ್ಯಾರಾಗ್ರಾಫ್ ಬರೆಯಿರಿ. ಅಂತಹ ಸ್ವಯಂ ಕಾಣುವಿಕೆಯು ಪರಿಣಾಮಕಾರಿಯಾದುದು ಎಂದು ನೀವು ನಿಸ್ಸಂದೇಹವಾಗಿ ಕಂಡುಕೊಳ್ಳುತ್ತೀರಿ.

ಡಾ. ಎಡ್ವರ್ಡ್ ಹಾಫ್ಮನ್ ನ್ಯೂಯಾರ್ಕ್ ನಗರದ ಯೆಶಿವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಹಾಯಕ ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಖಾಸಗಿ ಪ್ರಾಕ್ಟೀಸ್ ಪರವಾನಗಿ ಪಡೆದ ಕ್ಲಿನಿಕಲ್ ಮನಶ್ಶಾಸ್ತ್ರಜ್ಞ, ಅವರು ಮನೋವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ 25 ಕ್ಕೂ ಹೆಚ್ಚು ಪುಸ್ತಕಗಳ ಲೇಖಕ / ಸಂಪಾದಕರಾಗಿದ್ದಾರೆ. ಡಾ. ಹಾಫ್ಮನ್ ಅವರು ಡಾ. ವಿಲಿಯಂ ಕಾಂಪ್ಟನ್ ಆಫ್ ಪಾಸಿಟಿವ್ ಸೈಕಾಲಜಿ: ದಿ ಸೈನ್ಸ್ ಆಫ್ ಹ್ಯಾಪಿನೆಸ್ ಅಂಡ್ ಫ್ಲರಿಶಿಂಗ್ ಜೊತೆ ಸಹ-ಲೇಖಕರಾಗಿದ್ದಾರೆ ಮತ್ತು ಇಂಡಿಯನ್ ಜರ್ನಲ್ ಆಫ್ ಪಾಸಿಟಿವ್ ಸೈಕಾಲಜಿ ಮತ್ತು ಜರ್ನಲ್ ಆಫ್ ಹ್ಯೂಮನಿಸ್ಟಿಕ್ ಸೈಕಾಲಜಿಯ ಸಂಪಾದಕೀಯ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಅವರನ್ನು columns@whiteswanfoundation.org ನಲ್ಲಿ ಸಂಪರ್ಕಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org