ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ”

ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ”

ವ್ಯಕ್ತಿಯೊಬ್ಬರ ಕಥೆ : ಜೀವನವಿಡೀ ಮಾನಸಿಕ ಸಮಸ್ಯೆಯೊಂದಿಗೆ ಬದುಕುವುದು

ವ್ಯಕ್ತಿಯೊಬ್ಬರ ಕಥೆ : ಜೀವನವಿಡೀ ಮಾನಸಿಕ ಸಮಸ್ಯೆಯೊಂದಿಗೆ ಬದುಕುವುದು

ನಾನು ಮೊದಲು ಸಣ್ಣ ಸಂಗತಿಗಳನ್ನು ಗಮನಿಸಿದೆ. ಐದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಗುವೊಂದು ರಚಿಸಿದ್ದ ಸುಂದರ ಕ್ರೆಯಾನ್ ಡ್ರಾಯಿಂಗ್, ಗೋಡೆಯ ಮೇಲೆ ತಗುಲಿಹಾಕಿದ್ದ ಚಿತ್ರಕಲೆ, ನೀವು ವಿಶೇಷ ವ್ಯಕ್ತಿ ಬ್ಲೆಚ್ ಚೆಸಿ , ಎಂದು ಮೇಲೆ ಬರೆಯಲಾಗಿದ್ದ ಒಂದು ಮಗ್ ಹೀಗೆ. ಆ ಮಗ್‍ನಲ್ಲಿ ಪೆನ್ನುಗಳಿಗಿಂತಲೂ ಹೆಚ್ಚು ಮಾರ್ಕರ್‍ಗಳು ಇದ್ದುದೇಕೆ ? ಆ ಮಾರ್ಕರ್ ಅವಳ ಉಗುರಿನ ಬಣ್ಣಕ್ಕೆ ಹೊಂದುವುದೇ ? ಇಲ್ಲ ಅವಳು  ಉಗುರಿಗೆ ಬಣ್ಣವನ್ನೇ ಹಚ್ಚಿಲ್ಲ, ತುಟಿಗೂ ಬಣ್ಣ ಹಚ್ಚಿಲ್ಲ. ಅವಳು ತೀರ ವ್ಯಕ್ತಿಗತ ಎನಿಸುವ ಪಾರದರ್ಶಕ ಉಡುಪು ಧರಿಸಿದ್ದಾಳೆಯೇ ಅಥವಾ ಹಾಗೆ ಕಾಣುತ್ತಿರುವುದೇ ? ಈಗ ತುಟಿಗಳು ಚಲಿಸುತ್ತಿವೆ. “ ನಿನಗೆ ಕೇಳಿಸುತ್ತಿರುವುದು ನೀನು ಅಪೇಕ್ಷಿಸುತ್ತಿದ್ದುದಲ್ಲ ಎನ್ನುವುದನ್ನು ಅರ್ಥ ಮಾಡಿಕೋ ”  ಈ ಮಾತುಗಳು ಕೇಳಿಬರುತ್ತಿದ್ದವು. ಪೋ,,,? ನನ್ನ ಹೆಸರು ಕೇಳಿದೊಡನೆಯೇ ನಾನು ನನ್ನ ಗಮನವನ್ನು ಅವಳ ಮುಖದ ಕಡೆ ತಿರುಗಿಸಿದೆ. ನನ್ನ ಮನಶ್ಶಾಸ್ತ್ರತಜ್ಞರಾದ ಡಾ. ಎ 30ರ ಪ್ರಾಯದ ಸುಂದರ ಹೆಣ್ಣು. ಆಕೆಯ ಮುಖಭಾವದಲ್ಲಿಯೇ ಅವರೊಳಗಿದ್ದ ಅನುಕಂಪದ ಭಾವನೆಯನ್ನು ಕಾಣುವಂತಿತ್ತು. ಒಂದು ವರ್ಷದ ಕಾಲ ಆಕೆಯನ್ನು ಸಂಪರ್ಕಿಸಿ, ನನ್ನಲ್ಲಿ ಪ್ರಮುಖ ಖಿನ್ನತೆಯ ದೌರ್ಬಲ್ಯವಿದೆ ಎಂದು ತಪಾಸಣೆಯ ಮೂಲಕ ತಿಳಿದುಬಂದ ನಂತರ ನಾನು ನನ್ನ ಮಾನಸಿಕ ದೌರ್ಬಲ್ಯವನ್ನು ನಿಭಾಯಿಸಲು ಸಾಕಷ್ಟು ಶ್ರಮಿಸಿದೆ. ಒಬ್ಬ ವಿದ್ಯಾರ್ಥಿ ತನಗೆ ನೀಡಿದ ಪ್ರಾಜೆಕ್ಟ್ ಪೂರ್ಣಗೊಳಿಸಲು ಶ್ರದ್ಧೆ ವಹಿಸುವಂತೆ ನಾನು ಶ್ರಮವಹಿಸಿದೆ. ಜೊತೆಯಲ್ಲೇ ನಾನು ಗರ್ಭಿಣಿಯಾಗಿದ್ದುದರಿಂದ ನನ್ನ ಗರ್ಭದ ಬಗ್ಗೆ ಗಮನಹರಿಸುವಂತೆಯೇ ಇದಕ್ಕೂ ಗಮನ ನೀಡಿದ್ದೆ. ನಿತ್ಯ ಪ್ರಸವ ಪೂರ್ವ ಯೋಗಾಭ್ಯಾಸ ಮಾಡುತ್ತಿದ್ದೆ. ಕಬ್ಬಿಣದ ಅಂಶವಿರುವ ಆಹಾರ ಸೇವಿಸುತ್ತಿದ್ದೆ. ನಿತ್ಯ ವಾಕಿಂಗ್ ಮಾಡುತ್ತಿದ್ದೆ. ನನ್ನ ಸಮಸ್ಯೆಯನ್ನು ಬಗೆಹರಿಸಲು ನಾನೊಂದು ಗುಂಪು ಚಿಕಿತ್ಸೆಯಲ್ಲೂ ಪಾಲ್ಗೊಂಡಿದ್ದೆ. ಅಲ್ಲಿ ಇತರ ತಾಯಂದಿರು ಸೇರಿದ್ದರು. ಒಬ್ಬರಿಗೊಬ್ಬರು ಮುಂದಾಗಿ ಗ್ರಹಿಸಬಹುದಾದ ವರ್ತನೆಯ ಚಿಕಿತ್ಸೆ (ಸಿಬಿಟಿ) ವಿಧಾನವನ್ನು ಅನುಸರಿಸಬೇಕಿತ್ತು. ಇದರೊಂದಿಗೆ ನಾನು ಖಿನ್ನತೆಯ ನಿವಾರಣೆಗೆ ನಿತ್ಯ ಉಪಯೋಗಿಸುತ್ತಿದ್ದ ಔಷದಿಯ ಡೋಸೇಜ್ ಹೆಚ್ಚಾಗುತ್ತಾ ಹೋಯಿತು. ಇವೆಲ್ಲಾ ನಡೆಯುತ್ತಿದ್ದಂತೆಯೇ ನನ್ನ ಮಗಳಿಗೆ ಒಂದು ವರ್ಷವಾಗಿತ್ತು.  ನನ್ನ ಮನಶ್ಶಾಸ್ತ್ರಜ್ಞರು ಹೇಳುವುದನ್ನು ಕೇಳಿದಾಗ ನನಗೆ ಉದ್ರೇಕ ಹೆಚ್ಚಾಗಿತ್ತು. “ ನಾನು ಯಾವಾಗ ಗುಣಮುಖಳಾಗುತ್ತೇನೆ ಅಂದರೆ ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು ” ಎಂದು ಕೇಳಿದೆ. ಕೊಂಚ ಕಾಲ ನನ್ನ ವೈದ್ಯರು ಸುಮ್ಮನಿದ್ದರು. ನಂತರ ಬಹಳ ನೋವುಂಟು ಮಾಡುವ ಈ ಮಾತುಗಳನ್ನು ಹೇಳಿದರು “ ಪೋ,,,, ನಿನಗಿರುವ ಸಮಸ್ಯೆಯ ಗಂಭೀರತೆಯನ್ನು ನೋಡಿಯೇ ನಾವು ಇದನ್ನು ವಿಭಿನ್ನ ರೀತಿಯಲ್ಲಿ ಪರಿಶೀಲಿಸುತ್ತಿದ್ದೇವೆ. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಅಥವಾ ಬಗೆಹರಿಸುವುದಕ್ಕಿಂತಲೂ ಹೆಚ್ಚಾಗಿ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ಯೋಚಿಸುತ್ತಿದ್ದೇವೆ ” ಎಂದು ಹೇಳಿದರು. ನಾನು ಕಣ್ಣು ಮಿಟುಕಿಸಿ “ ಮ್‍ಮ್ ನನ್ನ ಈ ದೌರ್ಬಲ್ಯ ವಾಸಿಯಾಗುವುದೇ ಇಲ್ಲ ಎನ್ನುವಿರಾ ” ಎಂದು ಕೇಳಿದೆ. ಡಾ ಎ ಕೂಡಲೇ ಎಚ್ಚೆತ್ತರು “ ಖಂಡಿತವಾಗಿಯೂ ಹಾಗೇನಿಲ್ಲ. ಹಲವಾರು ವಿಧಾನಗಳ ಮೂಲಕ ನಾವು ಒಟ್ಟಾಗಿ ನಿನ್ನ ಆರೋಗ್ಯ ಉತ್ತಮಗೊಳಿಸಲು ಯತ್ನಿಸುತ್ತಿದ್ದೇವೆ. ನಿನಗೇ ಅದು ಅರಿವಾಗಿದ್ದು ಖಚಿತಪಡಿಸಿದ್ದೀಯ ” ಎಂದರು. ನಾನು ಸುಮ್ಮನಾದೆ. ಪೋ,,,, ನಾನು ಹೇಳುತ್ತಿರುವುದೇನೆಂದರೆ, ನಮ್ಮ ವಿಭಾಗದ ಮುಖ್ಯಸ್ಥರಾದ ಡಾ ಎಂ ಮತ್ತು ನಾನು ನಿನ್ನ ಸಮಸ್ಯೆಯನ್ನು ಕುರಿತು ಸಾಕಷ್ಟು ಚರ್ಚಿಸಿದ್ದೇವೆ. ನಿನ್ನ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರವಾಗಿದೆ. ಹಾಗಾಗಿ  ನೀನು ನಿನ್ನ ಜೀವನವಿಡೀ ಈ ಖಿನ್ನತೆಯನ್ನು ಎದುರಿಸಬೇಕಾದ ಸಾಧ್ಯತೆಗಳನ್ನು ಕುರಿತು ಯೋಚಿಸುತ್ತಿದ್ದೇವೆ.  ಸೂಚನೆ : ಮಸುಕು ನಾನು ಈ ಮಾತುಗಳನ್ನು ಕೇಳಲು ಅಪೇಕ್ಷಿಸಿರಲಿಲ್ಲ. ನಾನು ಯಾವುದೇ ಕಾರಣಕ್ಕೂ ಇದನ್ನು ನಿರೀಕ್ಷಿಸಿರಲಿಲ. ಖಿನ್ನತೆ ಎಂದರೆ ಹೆಚ್ಚು ಕಾಲ ಉಳಿದು ನೋವು ಹೆಚ್ಚಿಸುವ ಫ್ಲೂ ಜ್ವರದಂತೆ ಎಂದು ಭಾವಿಸಿದ್ದೆ. ನಿಮಗೆ ಇದು ತಾಕಿದಾಗ ನಿಸ್ತೇಜರನ್ನಾಗಿ ಮಾಡುತ್ತದೆ ಮತ್ತು ಬಿಡುವ ಮುನ್ನ ಕೆಲ ಕಾಲ ನಿಮ್ಮ ಸುತ್ತಲೂ ಕಾಡುತ್ತಿರುತ್ತದೆ. ಆದರೆ ಕೊನೆಗೊಮ್ಮೆ ನಿಮ್ಮನ್ನು ಬಿಟ್ಟು ಹೋಗುತ್ತದೆ. ಆದರೆ ಇದು ನನ್ನಲ್ಲಿ ಶಾಶ್ವತಗಾಗಿ ಉಳಿದುಬಿಡುತ್ತದೆ ಎಂಬ ಊಹೆಯೂ ನನಗಿರಲಿಲ್ಲ. ಇದು ಒಂದು ರೀತಿ ಜಿಗಣೆಯಂತೆ, ಚಾಟಿ ಏಟಿನಂತೆ, ಜೀವಾವಧಿ ಶಿಕ್ಷೆಯಂತೆ. “ ನನಗೆ ಈ ಸಮಸ್ಯೆ ಜೀವನವಿಡೀ ಇರುತ್ತದೆ ಎಂದು ನಿಮಗೆ ಯಾವಾಗ ಗೊತ್ತಾಯಿತು ? ” ಕೆಲವೊಮ್ಮೆ ಯಾವುದನ್ನೂ ನಂಬದ ರೋಗಿಗೂ, ಅನುಮಾನ ಪಡುವ ಗೂಢಚಾರನಿಗೂ ವ್ಯತ್ಯಾಸವೇ ಕಾಣುವುದಿಲ್ಲ. “ ಸರಿ, ನಾವು ಆರಂಭದಿಂದಲೂ ನಿನ್ನ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇವೆ. ಕ್ರಮೇಣ ನಾವು ಈ ರೀತಿಯ ಮುನ್ಸೂಚನೆಯನ್ನು ಪಡೆದಿದ್ದೇವೆ ”

ಹಕ್ಕು : ಉಳಿದಂತೆ ಆ ಸಂವಾದ ಡಾ ಎ ನನಗೆ ಹೇಳಿದ ವಿಷಯದ ಬಗ್ಗೆ ಕೇಂದ್ರೀಕೃತವಾಗಿತ್ತು.  ಜೀವನವಿಡೀ ಈ ಸಮಸ್ಯೆ ಇದ್ದ ಮಾತ್ರಕ್ಕೆ ನಾನು ಜೀವನವಿಡೀ ಫ್ಲೂ ಜ್ವರದಲ್ಲಿದ್ದಂತೆ ಸೀನುತ್ತಲೇ ಇರಬೇಕು ಎಂದೇನಿಲ್ಲ ಎಂದು ಡಾ ಎ ಹೇಳಿದರು. ಸರಿಯಾದ ಜೀವನಶೈಲಿಯನ್ನು ಅನುಸರಿಸಿ, ಧ್ಯಾನ ಮಾಡುತ್ತಾ ಇತರ ನಿರ್ವಹಣಾ ತಂತ್ರಗಳನ್ನು ಅನುಸರಿಸಿದರೆ ಈ ಸಮಸ್ಯೆ ಮರೆಯಾಗುತ್ತಾ ಹೋಗುತ್ತದೆ ಮತ್ತು ನಾನು ನನಗೆ ಹಲವು ದಿನಗಳ ಕಾಲ ಅಥವಾ ತಿಂಗಳುಗಳ ಕಾಲ ಯಾವುದೇ ಸಮಸ್ಯೆಯೇ ಇಲ್ಲ ಎನ್ನುವಂತೆ ಇರಬಹುದು ಎಂದು ಹೇಳಿದರು. ನಮ್ಮ ಬಗ್ಗೆ ನಾವೇ ಮರುಕ ತೋರುವುದು ಉತ್ತಮ ಭಾವನೆಯಾಗಲಾರದು.  ಆದರೆ ನಾನು ಅದರಲ್ಲೇ ಕೆಲ ಕಾಲ ಕೊರಗಿದೆ. ಹೌದು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ ; ನನಗೇ ಏಕೆ ? ನಾನು  ಚಾಕೋಲೇಟ್ ಮೇಲೆ ಆಸೆ ಪಟ್ಟಿರಬಹುದು ಅಥವಾ ಪಡದೆ ಇರಬಹುದು. ನನ್ನನ್ನು ಪ್ರೋತ್ಸಾಹಿಸುವ ಉತ್ತಮ ಗೆಳತಿಯೊಂದಿಗೆ ವಾಗ್ವಾದ ಮಾಡಿರಬಹುದು, ಮಾಡದೆ ಇರಬಹುದು. ಈ ಸಮಯದಲ್ಲಿ ನನ್ನ ಆ ಗೆಳತಿ ನನಗಾಗಿ ಏನನ್ನು ಮಾಡಲೂ ಸಿದ್ಧವಾಗಿದ್ದಳು ಆದರೆ ಆಕೆ ನನ್ನಲ್ಲಿ ಕೋಪ ಹುಟ್ಟಿಸಿದಳು. ಅವಳಿಗೆ ಹಾರೈಸುತ್ತೇನೆ. ನಾನು ಇವೆಲ್ಲಾ ಮಾಡುತ್ತಲೇ ಅಂತಿಮವಾಗಿ ನನ್ನ ಸಮಸ್ಯೆಯನ್ನು ಒಪ್ಪಿಕೊಳ್ಳುವ ಹಂತ ತಲುಪಿದೆ.  ನನ್ನ ಖಿನ್ನತೆ ಮಧುಮೇಹದಂತೆ ಎಂದು ನನಗೆ ನಾನೇ ಹೇಳಿಕೊಂಡೆ. ನಿಜ, ಇದು ಸ್ವಾಗತಾರ್ಹವಲ್ಲ. ಆದರೆ ಇದು ನನ್ನನ್ನು ಕಾಡುತ್ತಿದೆ ಮತ್ತು ಇನ್ನು ಮುಂದೆಯೂ ನನ್ನೊಡನೆ ಇರುತ್ತದೆ. ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡೆ.  ಮಧುಮೇಹ ಇರುವವರು ನಮ್ಮ ಸುತ್ತಲೂ ಇದ್ದಾರೆ. ಅವರು ನಮ್ಮೊಡನೆ ಆರಾಮವಾಗಿ ಬದುಕುತ್ತಿದ್ದಾರೆ. ನಾನೂ ಅವರಂತೆಯೇ ಇರುತ್ತೇನೆ. ಅವರು ಯಾವುದೇ ಸಂಕೋಚ ಇಲ್ಲದೆ ಇನ್ಸುಲಿನ್ ಚುಚ್ಚಿಕೊಳ್ಳುವಂತೆ ನಾನೂ ಸಂಕೋಚವಿಲ್ಲದೆ ಔಷಧಿ ಸೇವಿಸುತ್ತೇನೆ.  ಹೌದು ನನ್ನ ಆರೋಗ್ಯವನ್ನು ನಾನು ಇನ್ನೂ ಹತ್ತಿರದಿಂದ ಗಮನಿಸುತ್ತೇನೆ.  ಮಧುಮೇಹ ಇದ್ದರೆ ನಿಮ್ಮೊಳಗಿನ ಇತರ ಆರೋಗ್ಯ ಸಮಸ್ಯೆಗಳನ್ನು ಬೇಗನೆ ಉಲ್ಬಣಿಸುವಂತೆ ಮಾಡಿ ಹದಗೆಡಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು , ರಕ್ತದೊತ್ತಡ ಇತ್ಯಾದಿ. ಮಾನಸಿಕ ಆರೋಗ್ಯದಲ್ಲಿ ಖಿನ್ನತೆಯೂ ಹೀಗೆಯೇ, ಆತಂಕ,ಇತರ ಮಾನಸಿಕ ಖಾಯಿಲೆಗಳು ಖಿನ್ನತೆಯಿಂದ ಇನ್ನೂ ಹೆಚ್ಚಾಗುತ್ತವೆ. ನಮ್ಮ ಜಾಗೃತಿ ನಮಗೆ ನೆರವಾಗುತ್ತದೆ.  ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ಆಗಾಗ್ಗೆ ಚರ್ಚೆ ಮಾಡುವುದರಿಂದಲೂ ನೆರವಾಗುತ್ತದೆ.  ನನ್ನೊಂದಿಗೆ ಅತಿಯಾಗಿ ಪ್ರೀತಿಸುವ, ನನ್ನನ್ನು ಸದಾ ಬೆಂಬಲಿಸುವ ಪತಿ ಇರುವುದಕ್ಕೆ ನಾನು ಕೃತಜ್ಞಳು.  ಹಾಗೆಯೇ ನನ್ನ ಕಾಲೇಜು ಗೆಳತಿಯಲ್ಲಿ ನನ್ನ ಅತ್ಯಂತ ನಿಕಟ ಸ್ನೇಹಿತೆಯನ್ನು ಕಾಣುತ್ತೇನೆ. ನಾನು ಕುಸಿಯದಂತೆ ತಡೆದು ನಿಲ್ಲಿಸುವಲ್ಲಿ ಈ ಇಬ್ಬರು ಹೆಬ್ಬಂಡೆಯಂತೆ ನನ್ನೊಡನಿದ್ದಾರೆ. ನಾನು ಮಾತನಾಡಲು ಬಯಸಿದಾಗ ಕೊಂಚವೂ ಬೇಸರಿಸಿಕೊಳ್ಳದೆ ನನ್ನ ಮಾತುಗಳನ್ನು ಇವರಿಬ್ಬರೂ ಕೇಳಿಸಿಕೊಳ್ಳುತ್ತಾರೆ. ನಾನು ಮಾಡಲು ಇಚ್ಚೆ ಪಡುವ ದಿನ,  ಗಮನವಿಟ್ಟು ನೋಡುವ ವ್ಯಾಯಾಮ, ಯೋಗಾಭ್ಯಾಸ ನನಗೆ ನೆರವಾಗುತ್ತದೆ. ನನ್ನ ಬಗ್ಗೆ ನಾನೇ ಕಾಳಜಿ ವಹಿಸುವುದು ಅದ್ಭುತ ಫಲಿತಾಂಶ ನೀಡುತ್ತದೆ. ನಾನು ಕೆಲವು ಕ್ಷುಲ್ಲಕ ಕೆಲಸಗಳನ್ನು ಮಾಡುವಾಗ, ಕಿರಾಣಿ ಅಂಗಡಿಗೆ ಹೋಗುವಾಗಲೂ ಕೆಂಪು ಬಣ್ಣದ ಲಿಪ್ ಸ್ಟಿಕ್ ಬಳಸುವಾಗ, ನಾನು ಹೇಗಿದ್ದೇನೆ ಎಂದು ನನಗೆ ಅರಿವಾಗುತ್ತದೆ. ಆದ್ದರಿಂದ ನನಗೆ ಕುಸಿದು ಹೋಗುತ್ತಿರುವಂತೆ ಭಾಸವಾಗುತ್ತಿದ್ದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ, ಅದನ್ನು ಸ್ವೀಕರಿಸಿ ಮುನ್ನಡೆಯುತ್ತೇನೆಯೇ ಹೊರತು, ಬೇರೆಲ್ಲೋ ಗಮನ ಹರಿಸಿ ನನ್ನೊಳಗಿನ ಆ ಭಾವನೆಯನ್ನು ಅಸಹನೆಯಿಂದ ತೊಡೆದುಹಾಕಲು ಇಚ್ಚಿಸುವುದಿಲ್ಲ. ಹಾಗೆ ಮಾಡಿದರೆ ಜಿಗುಪ್ಸೆ ಹೆಚ್ಚಾಗಿ ಅದು ಹಾಗೆಯೇ ಉಳಿದುಬಿಡುತ್ತದೆ ಎಂದು ಅರ್ಥ ಮಾಡಿಕೊಳ್ಳುತ್ತೇನೆ. ನನ್ನಲ್ಲಿ ಮೂಡುವ ಕರಾಳ ಯೋಚನೆಗಳು ನನ್ನನ್ನು ಪಾತಾಳದತ್ತ ಕೊಂಡೊಯ್ಯುತ್ತದೆ ಎಂದು ಅರಿತು ಅವುಗಳನ್ನು ಪಟ್ಟಿ ಮಾಡುತ್ತೇನೆ. ಈ ಎಲ್ಲಾ ಯೋಚನೆಗಳ ಹೊರತಾಗಿಯೂ ನಾನು ಇಲ್ಲಿದ್ದೇನೆ, ಇಲ್ಲಿ ನೆಲೆ ಕಂಡಿದ್ದೇನೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.  ಈ ರೀತಿಯ ವರ್ತನೆ ಮತ್ತು ಧೋರಣೆ ನನ್ನನ್ನು ಯೋಧಳನ್ನಾಗಿ ಮಾಡುವುದೋ ಅಥವಾ ಜೀವನವಿಡೀ ಅನಾರೋಗ್ಯ ಸಮಸ್ಯೆಯನ್ನು ಎದುರಿಸುವವರ ಮೇಲೆ ಸಮಾಜ ಹೊರಿಸುವ  ಅರ್ಥಪೂರ್ಣವಾದ ಹಳಸಲು ಮಾತುಗಳನ್ನು ಕೇಳಿ ಉಳಿದ ವ್ಯಕ್ತಿಯನ್ನಾಗಿ ಮಾಡುವುದೋ ನನಗೆ ತಿಳಿಯದು. ಕೆಲವು ದಿನಗಳು ಕರಾಳವಾಗಿರುತ್ತವೆ, ಕೆಲವೊಮ್ಮೆ ಶೂನ್ಯ ಎನಿಸುತ್ತದೆ. ಆದರೆ ಅಂತಹ ದಿನಗಳು ಬಹಳ ಕಡಿಮೆ. ಕೆಲವು ದಿನಗಳು ನಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇನೆ, ಅಲ್ಲಿ ನನಗೆ ನಿತ್ರಾಣಳಾದ ಮಹಿಳೆಯನ್ನು, ಪ್ರಸವದ ನಂತರ ದಪ್ಪ ಹೊಟ್ಟೆಯನ್ನು ಹೊಂದಿರುವ ಮಹಿಳೆಯನ್ನು, ಕಣ್ಣಸುತ್ತಲೂ ಕಪ್ಪು ಮಚ್ಚೆ ಇರುವ ಮಹಿಳೆಯನ್ನು ಕಾಣುತ್ತೇನೆ. ಇತರ ದಿನಗಳಲ್ಲಿ , ಅವೆಲ್ಲವೂ ನಾನು  ಪೋ, ಪಾಂಡಾ ಎಂದು ನಿರೂಪಿಸುವ ಲಕ್ಷಣಗಳು ಎಂದು ಭಾವಿಸುತ್ತೇನೆ. ಇದು ಲೇಖಕಿಯ ಸ್ವಂತ ಜೀವನದ ಕಥೆಯಾಗಿದ್ದು ಅವರ ಇಚ್ಚೆಯಂತೆ ಹೆಸರನ್ನು ಮರೆಮಾಚಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org