ಮಾನಸಿಕ ಸಮಸ್ಯೆ ನಿವಾರಣೆಗೆ ನಿರ್ಧಿಷ್ಟ ಯೋಗಾಸನ

ಮಾನಸಿಕ ಸಮಸ್ಯೆ ನಿವಾರಣೆಗೆ ನಿರ್ಧಿಷ್ಟ ಯೋಗಾಸನ

ಯೋಗದ ಪ್ರತೀ ಆಸನವೂ ಕೂಡ ನಿರ್ಧಿಷ್ಠ ಮಾನಸಿಕ ಸಮಸ್ಯೆಯನ್ನು ಕಡಿಮೆ ಮಾಡುವ ಹಾಗೂ ಉತ್ತಮ ಬದುಕನ್ನು ಕಲ್ಪಿಸುವ ಶಕ್ತಿಯನ್ನು ಹೊಂದಿದೆ.

ಯೋಗವು ಮಾನಸಿಕ ಸಮಸ್ಯೆಗಳ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು  ಇತ್ತೀಚಿನ ಪರಿಕಲ್ಪನೆಯೇನಲ್ಲ. ಬಹುಕಾಲದ ಹಿಂದಿನಿಂದಲೂ ವೈದ್ಯರು ಒತ್ತಡ ಸಂಬಂಧಿ ಖಾಯಿಲೆಗೆ ಯೋಗಾಭ್ಯಾಸದ ಸಲಹೆ ನೀಡುತ್ತಿದ್ದಾರೆ. ಆದಾಗ್ಯೂ ಕಳೆದ ಎರಡು ದಶಕದಿಂದ ಮತ್ತೆ ಈ ಬಗ್ಗೆ ಹೆಚ್ಚಿನ ಒಲವು ಮೂಡಿದ್ದು, ವೈಜ್ಞಾನಿಕ ಹಾಗೂ ಆಧುನಿಕ ಸಂಶೋಧನೆಗಳು ಕೂಡ ಯೋಗದ ಆಧಾರದಲ್ಲೇ ನಡೆಯುತ್ತಿದೆ. ಚಿಕಿತ್ಸೆಗೆ ಯೋಗದ ಮಧ್ಯಸ್ಥಿಕೆಯ ಅನಿವಾರ್ಯ ಎಂದೇ ಬಣ್ಣಿಸಲಾಗುತ್ತಿದೆ.

ಯೋಗ ಸಾಧನೆಯು ವ್ಯಕ್ತಿಯ ದೈಹಿಕ, ಮಾನಸಿಕ ಕಾರ್ಯನಿರ್ವಹಣೆಯನ್ನು ವೃದ್ಧಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಖಿನ್ನತೆ, ಆತಂಕ ಹಾಗೂ ನಿದ್ರಾಹೀನತೆಯ ಸಮಸ್ಯೆಗೆ ಸ್ವತಂತ್ರ ಹಾಗೂ ಸಹಾಯಕ ಚಿಕಿತ್ಸೆಗಳಾಗಿ  ಯೋಗವನ್ನು ಬಳಸಲಾಗುತ್ತಿದೆ. ಮಾನಸಿಕ ಅಸ್ವಸ್ಥತೆಯ ವಿಧಗಳಾದ ಸ್ಕಿಜೋಪ್ರೇನಿಯಾ, ಮಕ್ಕಳಲ್ಲಿ ಅಟೆನ್ಶನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‍ಡಿ) ಹಾಗೂ ವಯಸ್ಕರಲ್ಲಿ ಮರೆವಿನ ಕೊರತೆ ನಿವಾರಿಸುವ ಕಾರ್ಯದಲ್ಲಿಯೂ ಇದನ್ನು ಪೂರಕವಾಗಿ ಬಳಸಲಾಗುತ್ತದೆ.

ಯೋಗ ಅಭ್ಯಾಸವು ಖಿನ್ನತೆಯಲ್ಲಿರುವ ವ್ಯಕ್ತಿಯ ಅರಿವಿನ ಶಕ್ತಿಯನ್ನು ವೃದ್ಧಿಸುತ್ತದೆ. ಸ್ಕಿಜೋಪ್ರೇನಿಯಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭಾವನೆಗಳನ್ನು ಗುರುತಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಮರೆವಿನ ಸಮಸ್ಯೆ ಇರುವ ವಯಸ್ಕರ ನೆನಪಿನ ಶಕ್ತಿ ವೃದ್ಧಿಸುತ್ತದೆ. ಉತ್ತಮ ನಿದ್ರೆ, ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕರಿಸುತ್ತದೆ.

ಹಾರ್ಮೋನ್ ನಿಯಂತ್ರಿಸುವ ಕಾರ್ಯಕ್ಕೆ ನಿರಂತರ ಯೋಗವು ಸಹಕಾರಿ. ಕಡ್ಲ್ ಹಾರ್ಮೋನ್ (cuddle hormone)ಅನ್ನು ವೃದ್ಧಿಸುತ್ತದೆ. ಮೆದುಳು ಪ್ಲಾಸ್ಟಿಸಿಟಿ ಮಾರ್ಕರ್‍ಗಳಾದ ಬ್ರೇನ್ ಡೆರೀವ್ಡ್ ನ್ಯೂರೊಟ್ರೊಪಿಕ್ ಫ್ಯಾಕ್ಟರ್ (ಬಿಡಿಎನ್‍ಎಫ್)ಗಳನ್ನು ವೃದ್ಧಿಸುತ್ತದೆ. ಮೆದುಳಿನ ಜೀವಕೋಶಗಳ ಅವನತಿಯನ್ನು ತಡೆಯುತ್ತದೆ ಅಥವಾ ನೆನಪಿಗೆ ಸಂಬಂಧಿಸಿದ ಮೆದುಳಿದ ಭಾಗಗಳ ಬೆಳವಣಿಗೆಗೆ ಸಹಕರಿಸುತ್ತದೆ. ಇದರಲ್ಲಿಯೂ ವಯಸ್ಕರಲ್ಲಿ ನಡೆಸಿದ ನರ ಚಿತ್ರಣ ಅಧ್ಯಯನದ ಪ್ರಕಾರ ‘ಓಂ’ಕಾರದ ಜಪವು ವ್ಯಕ್ತಿಯ ಆರೋಗ್ಯ ಸುಧಾರಿಸುತ್ತದೆ. ಮಾನಸಿಕ ನಿಯಂತ್ರಣ ಕ್ಷೇತ್ರದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸುತ್ತದೆ. ಮಾನಸಿಕ ಕಿರಿಕಿರಿಗಳನ್ನು ನಿವಾರಿಸುವ ಕಾರ್ಯ ಮಾಡುತ್ತದೆ ಎಂದು ಸಲಹೆ ನೀಡಲಾಗುತ್ತದೆ.

ಯೋಗಾಸನಗಳು ಹಾಗೂ ಅದರ ಶಾರೀರಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮ         

ಯೋಗ ಆಸನ

ಆರೋಗ್ಯದ ಪ್ರಯೋಜನಗಳು

ವಿಪ್ರತಕರಣಿ ಮುದ್ರಾ

ವಯಸ್ಸಿನ ಹಿರಿತನ ತಗ್ಗಿಸುತ್ತದೆ/ ನಿಲ್ಲಿಸುತ್ತದೆ/ ಕಡಿಮೆಗೊಳಿಸುತ್ತದೆ ಹಾಗೂ ಜ್ಞಾನಗೃಹಣದ ಕುಗ್ಗುವಿಕೆ ನಿಯಂತ್ರಿಸುತ್ತದೆ.

ಸೂರ್ಯಬೇದಾನ ಪ್ರಾಣಾಯಾಮ

ಪಸಿಮೋಘಟ್ಟಾಸನ

ಮತ್ಸೇಂದ್ರಾಸನ

 

 

ಮತ್ಸೇಂದ್ರಾಸನ

ಎಲ್ಲಾ ವಿಧದ ಕಾಯಿಲೆ ವಿರುದ್ಧ ಹೋರಾಡುತ್ತದೆ.

.

ಮತ್ಸ್ಯಾಸನ

ಭುಜಂಗಾಸನ

ಕಪಾಲಭಾತಿ ಪ್ರಾಣಾಯಾಮ

 

 

ಪಶ್ಚಿಮೋತ್ಥಾಸನ

ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ

 

 

ಚಯಾಪಚಯ ಶಕ್ತಿ ವೃದ್ಧಿ

ಮತ್ಸೇಂದ್ರಾಸನ

ಪಶ್ಚಿಮೋತ್ಥಾಸನ

ವಿಪ್ರತಕರಣಿ ಮುದ್ರಾ

ಭುಜಂಗಾಸನ

ಸೂರ್ಯಬೇದಾನ ಪ್ರಾಣಾಯಾಮ

ಬಸ್ತ್ರಿಕಾ ಪ್ರಾಣಾಯಾಮ

 

 

 

ನಂದಿಶುದ್ಧಿ ಪ್ರಾಣಾಯಾಮ

ನಾಡಿ ಶುದ್ಧಿಗೊಳಿಸುವುದು (ಜೀವಶಕ್ತಿ ಸಾಗಿಸುವ ಅಪ್ಪಟ ವಾಹಿನಿಗಳು, ಉದಾ: ಪ್ರಾಣ)

ಶವಾಸನ

ಒತ್ತಡ, ಬಳಲಿಕೆ, ಆಯಾಸ ಹಾಗೂ ಮಾನಸಿಕ ನೆಮ್ಮದಿಯನ್ನು ತಂದುಕೊಡುತ್ತದೆ. 

ತದಾಸನ (ಮರದ ಭಂಗಿ)

ನೆನಪಿನ ಶಕ್ತಿ ತಗ್ಗಿದ್ದರೆ ಅದನ್ನು ವೃದ್ಧಿಸುತ್ತದೆ, ಯೋಚನೆ, ಗಮನ ಕೇಂದ್ರಿಕರಿಸಲು ಸಹಕಾರ

ಅದಮುಕ್ತ ಶವಾಸನ (ಶ್ವಾನ ಭಂಗಿ)

ನಿರುತ್ಸಾಹ ಸ್ಥಿತಿ, ಶಕ್ತಿ ಕಡಿಮೆಗೊಳ್ಳುವುದಕ್ಕೆ ಪರಿಹಾರ

ವೀರಭದ್ರಾಸನ (ಯೋಧ ಭಂಗಿ)

ಖಿನ್ನತೆಗೆ ಒಳಗಾದಾಗ

ಸಿಂಹಾಸನ (ಸಿಂಹ ಭಂಗಿ)

ಖಿನ್ನ ಮನಸ್ಸಿಗೆ, ಮರೆವಿನ ಸಮಸ್ಯೆಗೆ, ಯೋಚನೆ ಹಾಗೂ ಗಮನ ಕೇಂದ್ರೀಕರಿಸುವಲ್ಲಿ ಸಮಸ್ಯೆ ಇದ್ದಾಗ.     

ಅರ್ಧ- ಮತ್ಸ್ಯೇಮದ್ರಾಸನ (ಅರ್ಧ ಬೆನ್ನು ವಿಸ್ತರಣಾ ಭಂಗಿ)

ಅನೊರೆಕ್ಸಿಯಾ, ತೂಕ ಇಳಿಸುವ/ಹೆಚ್ಚಿಸುವ ಸ್ಥಿತಿಗೆ

ಯೋಗಮುದ್ರಾ

ಖಿನ್ನ ಮನಸ್ಸು, ಲೈಂಗಿಕ ಆಸಕ್ತಿ ಕುಗ್ಗುವುದು/ಕಾರ್ಯನಿರ್ವಹಣೆ.

ಮಾರ್ಜಾಲಾಸನ (ಬೆಕ್ಕಿನ ಭಂಗಿ)

ಆಯಾಸ/ಶಕ್ತಿಯ ಕೊರತೆ, ಮಾನಸಿಕ ತಳಮಳ   

ಧನುರಾಸನ (ಕೆಳಮುಖ ಬಿಲ್ಲಿನಾಕಾರ ಭಂಗಿ)

ಅನೊರೆಕ್ಸಿಯಾ, ತೂಕ ಇಳಿಕೆ/ ಹೆಚ್ಚಿಸಿಕೊಳ್ಳುವುದು ಹಾಗೂ ಮಲಬದ್ಧತೆ      

ನಂದಿಶುದ್ಧಿ

ಖಿನ್ನತೆಗೆ ಒಳಗಾದ ಮನಸ್ಸು, ಮರೆವು, ಯೋಚನೆ ಹಾಗೂ ಏಕಾಗ್ರತೆ, ಖಿನ್ನತೆಯ ಭಾವನೆ

ಭ್ರಮರಿ (ಜೇನುಹುಳುವಿನ ಮಾದರಿ ಉಸಿರಾಟ)

ಮಾನಸಿಕ ತಳಮಳ, ಸುಲಭ ಆಯಾಸ

ಈ ಮೇಲಿನ ವಿಷಯಗಳು ಮಾನಸಿಕ ಅಸ್ವಸ್ಥತೆಗೆ ಯೋಗ ಆಧಾರಿತ ಪರಿಹಾರೋಪಾಯಗಳಾಗಿವೆ. ಆದಾಗ್ಯೂ, ವೈದ್ಯಲೋಕದಲ್ಲಿ ಯೋಗವನ್ನು ಅಳವಡಿಸುವುದಕ್ಕೆ ಹಲವಾರು ಸವಾಲುಗಳು ಎದುರಾಗುತ್ತವೆ. ಯೋಗ ತರಬೇತಿಯಲ್ಲಿ ಬೇರೆ ಬೇರೆ ಯೋಗ ತರಬೇತಿ ಸಂಸ್ಥೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹೆಚ್ಚುವರಿಯಾಗಿ ಹೇಳುವುದಾದರೆ ಸಾಂಪ್ರದಾಯಿಕವಾಗಿ ಇರುವ ಯೋಗ ಪದ್ಧತಿಗೆ ಒಂದಿಷ್ಟು ಸೇರ್ಪಡೆ ಹಾಗೂ ಬದಲಾವಣೆ ತಂದಿರುವುದರಿಂದ ಆಧುನಿಕ ವೈದ್ಯ ಪದ್ಧತಿಯಲ್ಲಿ ನಿರ್ಧಿಷ್ಟ ಅಸ್ವಸ್ಥತೆಗೆ ಪರಿಹಾರ ಕಂಡುಕೊಳ್ಳುವಲ್ಲಿ ತೊಂದರೆಯನ್ನುಂಟುಮಾಡುತ್ತಿದೆ.

ಯೋಗವನ್ನೇ ಮೂಲಭೂತವಾಗಿ ಅರಿತಿರುವ ವೈದ್ಯರು ಬದುಕಿನಲ್ಲಿ ಯೋಗ ಅಳವಡಿಸಿಕೊಂಡ ತಜ್ಞರು ಪ್ರತಿಪಾದಿಸುವ ಅಂಶವೆಂದರೆ ಯೋಗವು ಸಮಗ್ರ ಹಾಗೂ ಅಧ್ಯಾತ್ಮಿಕ ಜೀವನಕ್ರಮಕ್ಕೆ ಸೂಕ್ತವಾದುದು. ನಿರ್ಧಿಷ್ಟ ಯೋಗ ಕ್ರಮ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಣೆಗೆ ಪೂರಕವಾಗುವುದಿಲ್ಲ ಎಂದಿದ್ದಾರೆ. ಸಾಕ್ಷಿ ಆಧಾರಿತ ಆಧುನಿಕ ವೈದ್ಯ ವಿಜ್ಞಾನವು “ವೈಜ್ಞಾನಿಕ ದಾಖಲೆ’ಯನ್ನು ‘ಯಾದ್ರಚ್ಛಿಕ ನಿಯಂತ್ರಿತ ಪ್ರಯೋಗ’ದ ಮೂಲಕ ಸೂಕ್ತ ಯೋಗ ಮಾದರಿ ಅಥವಾ ಪ್ಯಾಕೇಜ್‍ನ್ನು ಸೂಕ್ತ ಸಮಸ್ಯೆಗೆ ಬಯಸುತ್ತದೆ. ಯೋಗದ ಗರಿಷ್ಠ ಲಾಭ ಹೆಚ್ಚಿನ ಜನರಿಗೆ ಸಿಗಲಿ ಎಂದು ಈ ಸಹಕಾರ ಕುರಿತ ಸಂಶೋಧನೆಯನ್ನು ವೈದ್ಯರು ಹಾಗೂ ಯೋಗ ತಜ್ಞರು ನಡೆಸಿದ್ದಾರೆ.

ನಿಮಾನ್ಸ್‍ನ ಯೋಗ ಸಮಗ್ರ ಕೇಂದ್ರವು ಈ ವಿಚಾರವಾಗಿ ಸಾಕಷ್ಟು ಶ್ರಮ ತೊಡಗಿಸಿದೆ. ಮನೋವಿಜ್ಞಾನಿಗಳು, ನರರೋಗ ತಜ್ಞರನ್ನು ಬೆರೆಸಿ ಬಳಸಿಕೊಂಡು ಸಾಕಷ್ಟು ಸಂಶೋಧನೆ ನಡೆಸಿದೆ. ಇವರೊಂದಿಗೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನಮ್ (ಎಸ್‍ವಿವೈಎಎಸ್‍ಎ) ಹಾಗೂ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗ, ಹೊಸದಿಲ್ಲಿ (ಕೇಂದ್ರ ಆಯುಶ್ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ) ಇದರ ಸಹಯೋಗ ಪಡೆದಿದೆ. ಈ ಶ್ರಮದ ಫಲವಾಗಿಯೇ ಮಾನಸಿಕ ಖಿನ್ನತೆ, ವಯಸ್ಸಾದವರಲ್ಲಿ ಅರಿವಿನ ಕೊರತೆ, ಸ್ಕಿಜೋಫ್ರೇನಿಯಾ ಸಮಸ್ಯೆಗೆ ಕೆಲ ಸೂಚಿತ ಯೋಗ ಪ್ರಕಾರಗಳು ಅಭಿವೃದ್ಧಿ ಹಾಗೂ ಕ್ರಮಬದ್ಧ ಪ್ರಕಾರಗಳು ಸಹಕಾರಿಯಾಗಬಲ್ಲದು ಎಂದಿದೆ. ಮಾನಸಿಕ ಅಸಮತೋಲನದಿಂದ ಬಳಲುತ್ತಿರುವವರಿಗೆ ಇದು ಸಹಕಾರಿಯಗಬಲ್ಲದು ಎಂದು ಸಾಧಿಸಿ  ತೋರಿಸಿದೆ.

(ಡಾ. ಶಿವರಾಮ ವರಂಬಲ್ಲಿ, ಇವರು ನಿಮಾನ್ಸ್‍ನ ಯೋಗ ಕೇಂದ್ರದ ಸಲಹೆಗಾರರು ಹಾಗೂ ನಿಮಾನ್ಸ್‍ನ ಮನೋವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕರು.)

ಉಲ್ಲೇಖಗಳು:

1.ಹರಿಪ್ರಸಾದ್ ವಿಆರ್, ವರಂಬಲ್ಲಿ ಎಸ್, ವರಂಬಲ್ಲಿ ಪಿಟಿ, ತೀರ್ಥಳ್ಳಿ ಜೆ, ಬಸವರೆಡ್ಡಿ ಐವಿ, ಗಂಗಾಧರ ಬಿಎನ್. ಇವರು ವಯಸ್ಸಾದವರಲ್ಲಿ ಯೋಗ ಆಧಾರಿತ ಹಸ್ತಕ್ಷೇಪದ ಊರ್ಜಿತತೆ ಕುರಿತು ಮಾಹಿತಿ ಒದಗಿಸಿದ್ದಾರೆ. ಇಂಡಿಯನ್ ಜೆ ಸೈಕ್ರಿಯಾಟ್ರಿ 2013; 55:344-9

2. ನವೀನ್ ಜಿಎಚ್, ರಾವ್ ಎಂಜಿ, ವಿಶಾಲ್ ವಿ, ತೀರ್ಥಳ್ಳಿ ಜೆ, ವರಂಬಲ್ಲಿ ಎಸ್, ಗಂಗಾಧರ ಬಿಎನ್. ಭಾರತದಲ್ಲಿ ಖಿನ್ನತೆ ಹಾಗೂ ಹೊರ ರೋಗಿಗಳು ಯೋಗ ಅಭಿವೃದ್ಧಿ ಚಿಕಿತ್ಸೆ ಘಟಕ  ಮತ್ತು ಕಾರ್ಯಸಾಧ್ಯತೆಗಳನ್ನು ಒಳಗೊಳ್ಳುವಿಕೆ. ಇಂಡಿಯನ್ ಜೆ ಸೈಕ್ರಿಯಾಟ್ರಿ 2013; 55:350-6

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org