ಪಾಸಿಟಿವ್ ಸೈಕಾಲಜಿ ಎಂದರೇನು?

ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ಸೈಕಾಲಜಿ ಒಂದು ಚರ್ಚೆಯ ವಿಷಯ. ‘ಸಂತೋಷ’, ಎಂಬ ಶೀರ್ಷಿಕೆಯ ಪುಸ್ತಕಗಳನ್ನು ಇತ್ತೀಚೆಗೆ ಪ್ರಕಾಶಕರು ಹೆಚ್ಚಾಗಿ ಹೊರತರುತ್ತಿದ್ದಾರೆ. ಸ್ಥಿತಿಸ್ಥಾಪಕತ್ವ, ಕ್ಷೇಮ, ಕೃತಜ್ಞತೆ, ಧ್ಯಾನ ಮತ್ತು ಮನಸ್ಸಿನ ಲಕ್ಷ್ಯಗಳ ಕುರಿತ ಅಧ್ಯಯನವು ಇಂದು ಶೈಕ್ಷಣಿಕ ನಿಯತಕಾಲಿಕೆಗಳಿಂದ ಸಾಮಾನ್ಯ ನಿಯತಕಾಲಿಕಗಳಿಗೆ ವರ್ಗಾವಣೆಗೊಂಡಿದೆ.

ನನ್ನದನ್ನೂ ಸೇರಿ, ಅಮೇರಿಕಾದ ಇನ್ನೂರಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಈ ಕ್ಷೇತ್ರಗಳಲ್ಲಿ ಕೋರ್ಸುಗಳನ್ನು ನೀಡುತ್ತಿವೆ. ಅಲ್ಲದೇ ಜರ್ನಲ್ ಆಫ್ ಹ್ಯಾಪಿನೆಸ್ ಸ್ಟಡೀಸ್ ಎಂಬಂತಹ ಶೀರ್ಷಿಕೆಗಳಿರುವ ನೂತನ ವೃತ್ತಿಪರ ನಿಯತಕಾಲಿಕೆಗಳು ಕೂಡ ಹೊರಬರುತ್ತಿವೆ.

ಒಂದು ಶತಮಾನದಿಂದಲೂ ಮನಃಶಾಸ್ತ್ರದ ತತ್ವಗಳು ಮತ್ತು ಅಭ್ಯಾಸಗಳು ಮಾನಸಿಕ ಅನಾರೋಗ್ಯ, ಅದರಿಂದಾಗುವ ಹಾನಿ ಮತ್ತು ಜೀವನಶೈಲಿಯ ಮೇಲೆ ಅಡ್ಡ ಪರಿಣಾಮದ  ಕುರಿತು ಹೆಚ್ಚು  ಪ್ರಾಮುಖ್ಯತೆ ನೀಡುತ್ತಾ ಬಂದಿವೆ.  

ನಂತರ 1998ರಲ್ಲಿ ಪೇನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ಡಾ. ಮಾರ್ಟಿನ್ ಸೆಲಿಗ್ಮನ್ ಅವರು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಶನ್ನಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರುಣೆ, ಕುತೂಹಲ, ಕ್ರಿಯಾತ್ಮಕತೆ, ಧೈರ್ಯ, ಕ್ಷಮಾಗುಣ, ಭರವಸೆ, ಉತ್ಸಾಹ ಮತ್ತು ನಾಯಕತ್ವ  ನಾಯಕತ್ವ ಮುಂತಾದವು  ‘ಮಾನವನ ಶಕ್ತಿ ಮತ್ತು ಗುಣಗಳು’ ಎಂದು ಪರಿಗಣಿಸಿ ಮತ್ತು ಇದರ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲು ಪ್ರೋತ್ಸಾಹಿಸಿದರು.

ಸೆಲಿಗ್ಮನ್ ರವರು ‘ಪಾಸಿಟಿವ್ ಸೈಕಾಲಜಿ’ ಪದವನ್ನು ಬಳಕೆಗೆ ತಂದಿದ್ದರೂ ಸಹ ನಮ್ಮಲ್ಲಿರುವ ತಪ್ಪುಗಳ ಬದಲು ನಮ್ಮ ಧನಾತ್ಮಕ ಅಂಶಗಳಿಗೆ ಪ್ರಾಮುಖ್ಯತೆ ನೀಡುವ ಪರಿಪಾಠವು 60 ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಅಬ್ರಾಹಮ್ ಮಾಸ್ಲೋವ್ ಎಂಬ ಅಮೇರಿಕನ್ ಮನಃಶಾಸ್ತ್ರಜ್ಞರಿಂದ ಆರಂಭವಾಯಿತು. ಇವರ ವ್ಯಕ್ತಿತ್ವ ಮತ್ತು ಪ್ರೋತ್ಸಾಹ ಎಂಬ ವಿಷಯಗಳ ಕುರಿತ ಅಧ್ಯಯನ ಹಾಗೂ ಯಥಾರ್ಥ ಮನೋಭಾವ, ಇವರ ಸಲುವಾಗಿ ಸೆಲ್ಫ್ ಆಕ್ಚುವವಲೈಸೇಷನ್, ಪೀಕ್-ಎಕ್ಸ್ಪೀರಿಯನ್ಸ್, ಮತ್ತು ಸಿನರ್ಜಿ ಎಂಬ ವಿಚಾರಗಳು ದಿನನಿತ್ಯದ ಭಾಷೆಯ ಭಾಗಗಳಾಗಿವೆ. ಪಾಸಿಟಿವ್ ಸೈಕಾಲಜಿಯ ಎರಡು ಪ್ರಮುಖ ಅಂಶಗಳಾದ ‘ಫ್ಲೋ ಎಕ್ಸ್ಪೀರಿಯನ್ಸಸ್ ಮತ್ತು ನಮ್ಮ ಬದುಕಿನಲ್ಲಿ ನಂಬಿಕಸ್ಥರ ಇರುವಿಕೆಯ ಕುರಿತು ನೋಡೋಣ.

ದೈನಂದಿನ ಬದುಕಿನಲ್ಲಿ ಸೊಬಗನ್ನು ಪಡೆಯುವುದು

ನೀವು ಯಾವಾಗಲಾದರೂ, ಯಾವುದಾದರೂ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ಅತ್ಯಂತ ಸಂತೋಷದಿಂದ ಸಮಯದ ಪರಿವೆಯೇ ಇಲ್ಲದಂತೆ ತೊಡಗಿಸಿಕೊಂಡಿದ್ದೀರಾ? ಇದು ಫ್ಲೋ ಎಕ್ಸ್ಪೀರಿಯನ್ಸಸ್ ಅನುಭವ.  ಆದ್ದರಿಂದ ಕೆಲಸದ ಜಾಗದಲ್ಲಿ ಇಂತಹ ಸಂದರ್ಭಗಳು ಮಗ್ನತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದರಿಂದ ಬ್ಯುಸಿನೆಸ್ ಲೀಡರ್ಸ್ ಇದರ ಬಗ್ಗೆ ಹೆಚ್ಚಿನ  ಆಸಕ್ತಿ ತೋರಿಸುತ್ತಾರೆ. ಅವರ ಉದ್ದೇಶವೇನು? ದೈನಂದಿನ ಚಟುವಟಿಕೆಗಳಲ್ಲಿ ಫ್ಲೋ ಎಕ್ಸ್ಪೀರಿಯನ್ಸಸ್ ಉಳಿಸಿಕೊಳ್ಳುವುದು ಮತ್ತು ಹೆಚ್ಚಿಸುವುದು.

ನಿಮಗೆ ಆಶ್ಚರ್ಯವೆನಿಸಿದರೂ ಈ ಮನಃಶಾಸ್ತ್ರೀಯ ಪರಿಕಲ್ಪನೆಯು  ಡಾ. ಮಿಹಾಲ್ಯೀ ಸಿಕ್ಕ್ಸ್ಝೆಂಟ್ ಮಿಹಾಲ್ಯೀ ಅವರ ಜೀವನದ ಅನುಭವಗಳ ಮೇಲೆ ಆಧಾರಿತವಾದ ಸಂಶೋದನೆಯ ಪರಿಣಾಮವಾಗಿದೆ.

1934 ರಲ್ಲಿ ಹಂಗರಿ ದೇಶದಲ್ಲಿ ಜನಿಸಿದ ಅವರು ತಮ್ಮ ಹೆಚ್ಚಿನ ಭಾಗವನ್ನು 2ನೇ ಮಹಾಯುದ್ಧದ ಜೈಲು ಶಿಬಿರದಲ್ಲಿ ಕಳೆದರು. ಆಗ ಅವರು ತಮ್ಮ ಸುತ್ತಲಿನ ಹೇಳಿಕೊಳ್ಳಲಾಗದ ಯಾತನೆಯನ್ನು ಚೆಸ್ ಆಡುವುದರ ಮೂಲಕ ಮರೆಯಲು ಸಾಧ್ಯವಾಗಿದ್ದನ್ನು ಕಂಡುಕೊಂಡರು. “ಇದು ಅತ್ಯಂತ ಭಯಾನಕ ವಿಷಯಗಳನ್ನು ಕೂಡ ಮರೆಸುವಂತಹ, ಒಂದು ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡುಹೋಗುವ ಚಮತ್ಕಾರಿ ಮಾರ್ಗ. ಗಂಟೆಗಳವರೆಗೆ ನಾನು ಸ್ಪಷ್ಟ ನಿಯಮ ಮತ್ತು ಉದ್ದೇಶವಿರುವ ನೈಜತೆಯಲ್ಲಿ ಕಳೆದುಹೋಗುತ್ತಿದ್ದೆ.” ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ, ಹದಿಹರೆಯದಲ್ಲಿ ಚಿತ್ರಕಲೆ ಕಲಿತಾಗ ಅವರಿಗೆ ಇದೇ ಮಗ್ನತೆಯ ಅನುಭವವಾಯಿತು, ನಂತರ 1965 ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ನಂತರ ಅವರು ಕಲಾವಿದರು ಮತ್ತು ಅತ್ಯಂತ ಕ್ರಿಯಾತ್ಮಕ ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಿದರು.  ಆ ಸಂಶೋಧನೆಗಳು ಅವರನ್ನು ‘ಫ್ಲೋ’ ವಿಚಾರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಾಯ ಮಾಡಿತು.

"ಫ್ಲೋ ಎಕ್ಸ್ಪೀರಿಯನ್ಸಸ್ "ಅನ್ನು ಅವರು ಈ ರೀತಿ ವರ್ಣಿಸಿದ್ದಾರೆ, “ಇದು, ನಾವು ಒಂದು ಚಟುವಟಿಕೆಯಲ್ಲಿ ಅತ್ಯಂತ ಮಗ್ನರಾಗಿ, ಉಳಿದ ಯಾವ ವಿಷಯಗಳು ಗಮನಕ್ಕೆ ಬರದಂತಹ ಸ್ಥಿತಿ; ಈ ಅನುಭವವು ಎಷ್ಟು ಸಂತೋಷದಾಯಕವೆಂದರೆ ಜನರು ಎಷ್ಟು ಬೆಲೆಯನ್ನಾದರೂ ತೆತ್ತು ಈ ಕಾರ್ಯದಲ್ಲಿ ಮಗ್ನರಾಗಲು ಬಯಸುತ್ತಾರೆ.”

ನೀವು ಫ್ಲೋ ಎಕ್ಸ್ಪೀರಿಯನ್ಸಸ್ ಹೊಂದಿದ್ದೀರೆಂದು ನಿಮಗೆ ಹೇಗೆ ತಿಳಿಯುತ್ತದೆ? ಡಾ. ಮಿಹಾಲ್ಯಿಯವರ ಪ್ರಕಾರ ಈ ಅನುಭವಕ್ಕೆ 8 ಲಕ್ಷಣಗಳಿವೆ.

  1. ನೀವು ಅರಿತಂತೆ ಆ ಚಟುಚಟಿಕೆಯಲ್ಲಿ ಸಂಪೂರ್ಣವಾಗಿ ಮುಳುಗುತ್ತೀರಿ.

  2. ನೀವು ಮಾಡುತ್ತಿರುವ ಕಾರ್ಯದಲ್ಲಿ ಸಂಪೂರ್ಣ ಏಕಾಗ್ರತೆಯಿರುವುದರಿಂದ ಬೇರೆ ಯಾವುದೇ ವಿಷಯದ ಕಡೆಗೂ ಮನಸ್ಸು ಓಡುವುದಿಲ್ಲ.

  3. ನಿಯಂತ್ರಣ ಕಳೆದುಕೊಳ್ಳುವ ಚಿಂತೆಯಿಲ್ಲ.

  4. ನಿಮ್ಮ ಅಹಂಗೆ ಪ್ರಾಮುಖ್ಯತೆ ನೀಡದೆ ಕಾರ್ಯನಿರ್ವಹಿಸುವುದು

  5. ಸಾಮಾನ್ಯವಾಗಿ ಅತ್ಯಂತ ವೇಗವಾಗಿ ಅಥವಾ ಅತ್ಯಂತ ನಿಧಾನವಾಗಿ ಸಮಯವು ಅಸಹಜವಾಗಿ ಕಳೆಯುತ್ತದೆ.

  6. ಯಾವ ಒಂದು ಫಲಿತಾಂಶದ ಬಗ್ಗೆ ಸಂತಸದಿಂದ ಕಾರ್ಯ ಮಾಡುವ ಸಲುವಾಗಿ ಮಾಡುವುದು

  7. ಇದು ಕೌಶಲ್ಯಯುಕ್ತ ಚಟುವಟಿಕೆಯನ್ನು ಹೊಂದಿರುತ್ತದೆ. ಅಂದರೆ ನಿಮ್ಮ ಸಾಮಾನ್ಯ ಕೌಶಲ್ಯದ ಹಂತಕ್ಕಿಂತಲೂ ಹೆಚ್ಚಿನ ಸಾಮರ್ಥ್ಯ ಬೇಕಿರುತ್ತದೆ.

  8. ನಿಮ್ಮ ಚಟುವಟಿಕೆಯಿಂದ ಯಾವ ಪರಿಣಾಮವಿದೆ ಎಂದು ನೀವು ಬಲ್ಲಿರಿ. ಅಂದರೆ ನೀವು ಏನನ್ನು ಸಾಧಿಸಬೇಕೆಂಬುದನ್ನು ತಿಳಿದಿರುತ್ತೀರಿ ಮತ್ತು ನಿಮ್ಮ ಕೆಲಸ ಮುಗಿಸುವ ಬಗ್ಗೆ ಸಂದೇಹವಿರುವುದಿಲ್ಲ.

ನೀವು ಅಂತರಂಗದ ಆಪ್ತಮಿತ್ರನನ್ನು ಹೊಂದಿದ್ದೀರಾ?

25 ಕ್ಕೂ ಹೆಚ್ಚು ವರ್ಷಗಳಿಂದ ನಡವಳಿಕೆಯ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು ಸ್ನೇಹ ಮತ್ತು ಯೋಗಕ್ಷೇಮದ ನಡುವೆ ಸಂಬಂಧವಿರುವುದನ್ನು ದೃಢಪಡಿಸುತ್ತಿದ್ದಾರೆ. ಆದರೆ ಇನ್ನೂ ಈ ವಿಷಯವು ಹೊಸತಾಗಿದೆ.

ಪುರಾತನ ಗ್ರೀಕ್ ತತ್ವಜ್ಞಾನಿಯಾದ ಅರಿಸ್ಟಾಟಲ್ ಮೂರು ಬಗೆಯ ಗೆಳೆತನವನ್ನು ದಾಖಲಿಸಿದ್ದಾನೆ- ವ್ಯಾವಹಾರಿಕ ಗೆಳೆತನ (ಉದಾಹರಣೆಗೆ ವ್ಯಾಪಾರ, ಲಾಭ), ಸಂತೋಷ (ಮೋಜು, ಆಸಕ್ತಿಯನ್ನು ಹಂಚಿಕೊಳ್ಳುವುದು) ಮತ್ತು ಮೌಲಿಕ (ಭಾವನಾತ್ಮಕ ಕಾಳಜಿ).

ಇದರ ಪ್ರಕಾರ ಸುಗುಣಗಳನ್ನು ಆಧರಿಸಿದ ಸ್ನೇಹವು ಮಾನವನ ದೈನಂದಿನ ಯೋಗಕ್ಷೇಮದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನಂತರ ಮಧ್ಯಯುಗದಲ್ಲಿ ಅರಿಸ್ಟಾಟಲ್ ನ ಚಿಂತನೆಗಳನ್ನು ಸ್ಪೇನ್ ಮತ್ತು ಈಜಿಪ್ಟ್ನಲ್ಲಿ ವಾಸವಾಗಿದ್ದ ಮೋಸಸ್ ಮೈಮೊನಿಡಸ್ ಎಂಬ ರಬ್ಬಿ ವೈದ್ಯನು ವಿಸ್ತರಿಸಿದನು. ವೈಯಕ್ತಿಕ ಯೋಗಕ್ಷೇಮಕ್ಕೆ ಗೆಳೆತನ ಮುಖ್ಯ ಎಂದು ಹೇಳುತ್ತಾರೆ . “ಜನರಿಗೆ ಜೀವನ ಪರ್ಯಂತ ಗೆಳೆಯರು ಬೇಕು ಎಂಬುದು ತಿಳಿದ ವಿಷಯ. ಒಬ್ಬನು ತನ್ನ ಆರೋಗ್ಯವಂತ ಸ್ಥಿತಿಯಲ್ಲಿ ಮತ್ತು ವೈಭವದ ಕ್ಷಣಗಳಲ್ಲಿ ಗೆಳೆಯರ ಸಂಗವನ್ನು ಇಷ್ಟಪಡುತ್ತಾನೆ. ಅದೇ ರೀತಿ ತೊಂದರೆಯಲ್ಲಿದ್ದಾಗ ಅವನಿಗೆ ಗೆಳೆಯರ ಅಗತ್ಯವುಂಟಾಗುತ್ತದೆ. ವೃದ್ಧಾಪ್ಯದಲ್ಲಿ ದೇಹವು ದುರ್ಬಲವಾದಾಗ ಗೆಳೆಯರ ಸಹಾಯದ ಅವಶ್ಯಕತೆ ಇರುತ್ತೆ.”

ಐತಿಹಾಸಿಕ ಚಿಂತಕರಾದ ಅರಿಸ್ಟಾಟಲ್ ಮತ್ತು ಮೈಮೊನಿಡೆಸ್ ಗೆಳೆತನ ಹಾಗೂ ಯೋಗಕ್ಷೇಮದ ನಡುವೆ ಸ್ಪಷ್ಟವಾದ ಸಂಬಂಧವನ್ನು ಗುರುತಿಸಿದ್ದರೂ ಸಹ ವೈಜ್ಞಾನಿಕವಾಗಿ ಅದನ್ನು ದೃಢಪಡಿಸುವ ಕಾರ್ಯವು ಈಗ ಆರಂಭವಾಗಿದೆ.

ಉತ್ತರ ಅಮೇರಿಕಾದ ಹದಿಹರೆಯದವರಲ್ಲಿ ಕಂಡುಬರುವ ಮಾದಕ ವ್ಯಸನ ಮತ್ತು ಖಿನ್ನತೆಯಿಂದ ಹಿಡಿದು ಮೆಕ್ಸಿಕನ್ ಜನರ ಆರೋಗ್ಯಾಭ್ಯಾಸದ ಕುರಿತು ಅಧ್ಯಯನಗಳು ನಡೆದಿವೆ. ಒಬ್ಬ ವಿಶ್ವಾಸಾರ್ಹ ಗೆಳೆಯನು ಎಲ್ಲಾ ರೀತಿಯ ಅಪಾಯ ಮತ್ತು ಸ್ವಯಂ-ಹಾನಿಮಾಡಿಕೊಳ್ಳುವ ನಡವಳಿಕೆಯನ್ನು ಕಡಿಮೆ ಮಾಡುತ್ತಾನೆ ಎಂದು ಅಧ್ಯಯನಗಳು ಪುನರುಚ್ಚರಿಸಿ ತೋರಿಸಿದೆ.

ಕೆಲವು ಅಧ್ಯಯನಗಳ ಪ್ರಕಾರ ಒಬ್ಬ ಆಪ್ತ ಮಿತ್ರನನ್ನು ಹೊಂದಿರುವವರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಅವರು ಹೃದಯದ ಸಮಸ್ಯೆ, ರಕ್ತದೊತ್ತಡ ಮತ್ತು ಅಸ್ತಮಾ ಸಮಸ್ಯೆಗಳಿಂದ ಬಳಲುವ ಸಂಭವ ಕಡಿಮೆ. ಅಂತರಂಗದ ಗೆಳೆಯನನ್ನು ಹೊಂದಿರುವವರು ಹೆಚ್ಚು ಸಮಚಿತ್ತವನ್ನು ಹೊಂದಿರುತ್ತಾರೆ ಮತ್ತು ಖಿನ್ನತೆಗೆ ಒಳಗಾಗುವ ಸಂಭವವು ಕಡಿಮೆಯಿರುತ್ತದೆ. ಬ್ರಿಟನ್ನಿನಲ್ಲಿ ಬೊಜ್ಜಿನಕುರಿತು ನಡೆದ ಒಂದು ಅಧ್ಯಯನದಲ್ಲಿ ಕೇಂಬ್ರಿಡ್ಜಿನ ಸ್ಟ್ರೇಂಜ್ ವೇಸ್ ಪ್ರಯೋಗಾಲಯದ ಡಾ. ಪಾಲ್ ಸುಟಿಸ್ ರವರು ವಿಶ್ವಾಸಿಗಳಿಲ್ಲದ ಪುರುಷರು 4 ವರ್ಷ ಮತ್ತು ಮಹಿಳೆಯರು 5 ವರ್ಷ ಹೆಚ್ಚಿಗೆ ವಯಸ್ಸಾದವರಂತೆ ಕಾಣಿಸುತ್ತಾರೆ ಎಂದು ಅಂದಾಜಿಸಿದ್ದಾರೆ!

ಪ್ರತಿ ತಿಂಗಳು ನಾನು ನಿಮಗೆ ಪಾಸಿಟಿವ್ ಸೈಕಾಲಜಿಯ ಕುರಿತು ಆಸಕ್ತಿಕರ ಮಾಹಿತಿಗಳನ್ನು ನೀಡುತ್ತೇನೆ. ನನ್ನ ಮುಂದಿನ ಲೇಖನವು ನಮ್ಮ ದೈನಂದಿನ ಯೋಗಕ್ಷೇಮದಲ್ಲಿ ಕೃತಜ್ಞತೆ ಮತ್ತು ಕ್ಷಮೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ.

ಎಡ್ವರ್ಡ್ ಹಾಫ್ಮನ್ ಅವರು ನ್ಯೂಯಾರ್ಕಿನ ಯೆಶಿವಾ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದ ಸಹಪ್ರಾಧ್ಯಾಪಕರಾಗಿದ್ದಾರೆ. ಖಾಸಗಿಯಾಗಿ ವೃತ್ತಿಪರ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಅವರು ಮನಃಶಾಸ್ತ್ರ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ 25 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ/ಸಂಪಾದಿಸಿದ್ದಾರೆ. ಇವರು ಇತ್ತೀಚೆಗೆ ಡಾ. ವಿಲಿಯಮ್ ಕಾಂಪ್ಟನ್ ಅವರ ಜೊತೆಗೆ ಪಾಸಿಟಿವ್ ಸೈಕಾಲಜಿ: ದ ಸೈನ್ಸ್ ಆಫ್ ಹ್ಯಾಪಿನೆಸ್ & ಫ್ಲರಿಶಿಂಗ್ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಇವರು ಇಂಡಿಯನ್ ಜರ್ನಲ್ ಆಫ್ ಪಾಸಿಟಿವ್ ಸೈಕಾಲಜಿ ಹಾಗೂ ಜರ್ನಲ್ ಆಫ್ ಹ್ಯೂಮನಿಸ್ಟಿಕ್ ಸೈಕಾಲಜಿಯ ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರನ್ನು ಸಂಪರ್ಕಿಸಲು columns@whiteswanfoundation.org ವಿಳಾಸಕ್ಕೆ ಈ-ಮೇಲ್ ಬರೆಯಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org