ವೈಟ್ ಸ್ವಾನ್ ಫೌಂಡೇಷನ್, ಮಾನಸಿಕ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವಾಸಪೂರ್ವಕವಾದ, ಸುಲಭವಾಗಿ ತಲುಪುವಂತಹ, ಎಲ್ಲವನ್ನು ಒಳಗೊಂಡಂತಹ ಮಾಹಿತಿ ಜ್ಞಾನವನ್ನು ಒದಗಿಸುವ ಬದ್ಧತೆಯನ್ನು ಹೊಂದಿರುವಂತಹ ಒಂದು ಸಂಸ್ಥೆ.

ನಮ್ಮ ಸೇವೆಯನ್ನು ಬಳಸಿಕೊಳ್ಳುವ ಮತ್ತು ನಮ್ಮ ಸಲಹೆ, ನೆರವು ಬಯಸುವ ಅಸಂಖ್ಯಾತ ಜನರ ಸೂಕ್ಷ್ಮ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ರೂಪಿಸಿರುವ ನಮ್ಮ ಸಂಪಾದಕೀಯ ನೀತಿಗಳ ಮುಖ್ಯ ಲಕ್ಷಣಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇವೆ.

ನಮ್ಮಲ್ಲಿರುವ ಜ್ಞಾನ ಭಂಡಾರದ ಬಗ್ಗೆ ಓದುಗರ ಮತ್ತು ವೀಕ್ಷಕರ ಅಭಿಪ್ರಾಯ ಮತ್ತು ದೃಷ್ಟಿಕೋನವನ್ನೂ ಗಮನದಲ್ಲಿಟ್ಟುಕೊಂಡು ಅವರ ಅವಶ್ಯಕತೆಗಳಿಗೆ ಅನುಸಾರವಾಗಿ ಈ ನೀತಿಯನ್ನು ರೂಪಿಸಲಾಗಿದೆ.

ನಮ್ಮ ಸಂಪಾದಕೀಯ ನೀತಿಯ ತತ್ವಗಳು

ನಮ್ಮ ಓದುಗರು ಮತ್ತು ವೀಕ್ಷಕರು ವೈಟ್ ಸ್ವಾನ್ ಫೌಂಡೇಷನ್ ನ ಜ್ಞಾನ ಭಂಡಾರದ ಮೇಲೆ ಇಟ್ಟಿರುವ ಗೌರವ ಮತ್ತು ವಿಶ್ವಾಸವನ್ನು ನಾವು ಮಾನ್ಯ ಮಾಡುತ್ತೇವೆ. ಈ ವಿಶ್ವಾಸವನ್ನು ಉಳಿಸಿಕೊಂಡು ಎತ್ತಿ ಹಿಡಿಯುವುದು ನಮ್ಮ ಜವಾಬ್ದಾರಿ. ಇದರಿಂದ ಸಂವೇದನಾಶೀಲ ಚಟುವಟಿಕೆಗಳು ಸಾಧ್ಯವಾಗುತ್ತವೆ. ಫೌಂಡೇಷನ್ನಿನ ಸಿಬ್ಬಂದಿ ಮತ್ತು ಸಹಭಾಗಿಗಳಿಗಾಗಿ ರೂಪಿಸಲಾಗಿರುವ ಸಂಪಾದಕೀಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇದು ನೆರವಾಗುತ್ತದೆ.

ಮಾನದಂಡಗಳು:

ಗುಣಮಟ್ಟ: ವೈಟ್ ಸ್ವಾನ್ ಫೌಂಡೇಷನ್ ವತಿಯಿಂದ ನಾವು ಎಲ್ಲ ಭಾಷೆಗಳಲ್ಲೂ ಒದಗಿಸುವ ಜ್ಞಾನ ಹೆಚ್ಚಿಸುವ ವಿಚಾರಗಳನ್ನು ಓದುಗರ ಮುಂದೆ ಮಂಡಿಸುವಾಗ ನಮ್ಮ ಸಿಬ್ಬಂದಿ ಭಾಷೆ ಮತ್ತು ಸಂವಹನದ ಗುಣಮಟ್ಟವನ್ನು ವಿಶ್ವಮಟ್ಟಕ್ಕೆ ಅನುಗುಣವಾಗಿ ಕಾಪಾಡಿಕೊಳ್ಳುವಂತೆ ಎಚ್ಚರ ವಹಿಸಿದ್ದೇವೆ. ಯಾವುದೇ ತಪ್ಪುಗಳಿಲ್ಲದ ಮಾಹಿತಿಯನ್ನು, ಜ್ಞಾನವನ್ನು ನಿಮಗೆ ಒದಗಿಸುವುದು ನಮ್ಮ ಆದ್ಯತೆಯಾಗಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಲು ಸೂಕ್ತ ಅಂತರಿಕ ಪರಿಶೀಲನೆ ಮತ್ತು ಪರಿಷ್ಕರಣೆ ನಡೆಯುತ್ತದೆ.

ಸಮರ್ಪಕ ಮಾಹಿತಿ: ನಮ್ಮ ಜ್ಞಾನ ಭಂಡಾರವನ್ನು ಕುರಿತಂತೆ ನೀಡುವ ಪ್ರತಿಯೊಂದು ಮಾಹಿತಿಯೂ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲು ಹೆಚ್ಚಿನ ನಿಗಾವಹಿಸಲಾಗುತ್ತದೆ. ನಮ್ಮ ಜ್ಞಾನ ಶಾಖೆಗಳಲ್ಲಿ ಪ್ರಕಟಿಸುವ ಮುನ್ನ ವಿಷಯವನ್ನು ತಜ್ಞರ ಮೂಲಕ ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ.

ಪ್ರಾಮಾಣಿಕತೆ: ಮಾಹಿತಿಯನ್ನು ಸಂಗ್ರಹಿಸುವಾಗ, ರೂಪಿಸುವಾಗ, ಪ್ರಕಟಿಸುವಾಗ ಅತ್ಯುನ್ನತ ಮಾನದಂಡಗಳನ್ನು ಅನುಸರಿಸುವ ಮೂಲಕ ಪ್ರಾಮಾಣಿಕ ಪ್ರಯತ್ನಗಳಿಂದ ಸಾರ್ವಜನಿಕರಿಗೆ ಸೂಕ್ತವಾದ ವಿಷಯವನ್ನು ಸರಿಯಾದ ರೀತಿಯಲ್ಲಿ ತಲುಪಿಸಲಾಗುತ್ತದೆ. ಪಕ್ಷಪಾತವಿಲ್ಲದ ಮಾಹಿತಿ : ಸಂಪಾದಕೀಯ ನಿರ್ಣಯಗಳು ವಸ್ತುಸ್ಥಿತಿಯನ್ನು ಆಧರಿಸಿದ್ದು ಮೌಲ್ಯಯುತ ಮಾಹಿತಿಯನ್ನೇ ಉದ್ದೇಶಿತ ಓದುಗರಿಗೆ, ಕೇಳುಗರಿಗೆ ತಲುಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸಮುದಾಯದ, ಫಲಾನುಭವಿಗಳ ಅಥವಾ ಚಿಂತನಾವಾಹಿನಿಯ ಹಿತಾಸಕ್ತಿಗಳಿಗೆ ಅವಕಾಶ ನೀಡಲಾಗುವುದಿಲ್ಲ.

ಅನುಭೂತಿ (ಮತ್ತೊಬ್ಬರ ಪರಿಸ್ಥಿತಿಯನ್ನು ಅರಿತು ವರ್ತಿಸುವುದು): ಅವರ ಕರ್ತವ್ಯವನ್ನು ನಿರ್ವಹಿಸುವಾಗ ವೈಟ್ ಸ್ವಾನ್ ಫೌಂಡೇಷನ್ ನ ಸಿಬ್ಬಂದಿ ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಮ್ಮ ಸಿಬ್ಬಂದಿ ಇತರ ಮೂಲಗಳಿಂದ ಸಂಗ್ರಹಿಸಿ ಕ್ರೋಢೀಕರಿಸುವ ಮಾಹಿತಿ ಮತ್ತು ವಿಚಾರಗಳ ಮೌಲ್ಯಯುತ ಅಂಶಗಳನ್ನು ಘನತೆ, ಗೌರವದಿಂದ , ಅನುಭೂತಿಯಿಂದ ಕಾಣುವಂತೆ ಪ್ರೇರೇಪಿಸುತ್ತೇವೆ.ಯಾವುದೆ ಸಂದರ್ಭದಲ್ಲೂ ಯಾವುದೇ ವ್ಯಕ್ತಿಯ ಅಸ್ಮಿತೆ, ಗೌರವ ಮತ್ತು ಘನತೆಗೆ ಕುಂದು ಬರದಂತೆ ನಾವು ಸೂಕ್ತ ಪ್ರಕ್ರಿಯೆಯನ್ನು ರೂಪಿಸಿದ್ದೇವೆ.

  • ಹಾಗೆಯೇ ನಮಗೆ ಮಾಹಿತಿ ನೀಡುವವರನ್ನು ಉಲ್ಲೇಖಿಸಿದರೂ ಅವರ ಗೋಪ್ಯತೆಗೆ ಭಂಗ ಉಂಟಾಗದಂತೆ, ನಮ್ಮಮಾಹಿತಿಯಲ್ಲಿ ಉಲ್ಲೇಖವಾಗಿರುವವರ ಗೋಪ್ಯತೆಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಲಾಗುತ್ತದೆ.
  • ನಮ್ಮ ಉದ್ದೇಶವನ್ನು ಕುರಿತು ಈ ಅಧ್ಯಯನಗಳ ಭಾಗವಾಗಿ ಭಾಗವಹಿಸುವವರಿಗೆ ಮುಂಚಿತವಾಗಿಯೇ ತಿಳಿಸಿರಲಾಗುತ್ತದೆ
  • ಭಾಗವಹಿಸುವ ಮುನ್ನ ಅವರ ಸಮ್ಮತಿ ಪಡೆಯುವುದೇ ಅಲ್ಲದೆ ನಾವು ಅನುಸರಿಸುವ ಪ್ರಕ್ರಿಯೆಯನ್ನೂ ವಿವರಿಸಲಾಗುತ್ತದೆ.
  • ಹಾಗೆಯೇ ಸಾರ್ವಜನಿಕರ ಕಾಳಜಿ, ಸಂವೇದನೆ ಮತ್ತು ಮಾಹಿತಿ ಅವಶ್ಯಕತೆಗಳಿಗೆ ಅನುಗುಣವಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮತ್ತು ಕಾಳಜಿ ವಹಿಸುವವರ ಸಮಸ್ಯೆಗಳ ವಿರುದ್ಧ ಹೋರಾಡುವವರ ಬಗ್ಗೆ ಅನುಭೂತಿಯಿಂದ ವರ್ತಿಸುತ್ತೇವೆ. ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸವ ನಿಟ್ಟಿನಲ್ಲಿ ನಾವು ಹಲವಾರು ಮಾನಸಿಕ ಆರೋಗ್ಯ ತಜ್ಞರನ್ನು, ವೈದ್ಯರನ್ನು ಸಂಪರ್ಕಿಸಿ ಅವರ ಅನುಭವವನ್ನು ದಾಖಲಿಸುತ್ತೇವೆ. ಅವರ ಬಗ್ಗೆಯೂ ನಾವು ಅನುಭೂತಿಯೊಂದಿಗೆ ವರ್ತಿಸುವುದೇ ಅಲ್ಲದೆ, ಅವರ ಅಪಾರ ಜ್ಞಾನ, ವಿದ್ವತ್ತು ಮತ್ತು ದೀರ್ಘ ಅನುಭವಕ್ಕೆ ಗೌರವ ಸಲ್ಲಿಸಿ ಅವರ ಸಲಹೆ ಪಡೆದು ನಮ್ಮ ಮಾಹಿತಿಯನ್ನು ಸಿದ್ಧಪಡಿಸುತ್ತೇವೆ.

ಪಾರದರ್ಶಕತೆ: ವೈಟ್ ಸ್ವಾನ್ ಫೌಂಡೇಷನ್ ಮಾಹಿತಿ ಸಂಗ್ರಹದಲ್ಲಿ, ಕ್ರೋಢೀಕರಣದಲ್ಲಿ ಮತ್ತು ವಿಷಯವನ್ನು ಸಿದ್ದಪಡಿಸುವಲ್ಲಿ ಅನುಸರಿಸುವ ಮಾರ್ಗ ಮತ್ತು ವಿಧಾನದ ಬಗ್ಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಿದ್ದು , ಈ ನಿಟ್ಟಿನಲ್ಲಿ ನಮ್ಮ ಸಂಪಾದಕೀಯ ತತ್ವಗಳ ಪ್ರಕಟಣೆ ಮೊದಲ ಹೆಜ್ಜೆಯಾಗಿರುತ್ತದೆ.

ಗ್ರಂಥಸ್ವಾಮ್ಯ (ಕಾಪಿರೈಟ್): ವೈಟ್ ಸ್ವಾನ್ ಫೌಂಡೇಷನ್ ಸಿಬ್ಬಂದಿಗಳು ತಾವು ಸಂಗ್ರಹಿಸುವ ಮಾಹಿತಿ ಅಥವಾ ವಿಷಯದ ಬಗ್ಗೆ, ತಾವು ಪ್ರಕಟಿಸುವ ವಿಷಯವನ್ನು ಕುರಿತು ತಮಗೆ ಮೌಲ್ಯಯುತ ಎಂದು ಕಂಡುಬರುವ ಯಾವುದೇ ವಿಷಯದ ಮೂಲ ಆಕರದ ಗ್ರಂಥಸ್ವಾಮ್ಯವನ್ನು ಮಾನ್ಯ ಮಾಡುತ್ತದೆ. ಯಾವುದೇ ಸಂದರ್ಭದಲ್ಲೂ ನಾವು ಯಾವುದೇ ವಿಷಯದ ಗ್ರಂಥಸ್ವಾಮ್ಯವನ್ನುಉಲ್ಲಂಘಿಸುವುದಿಲ್ಲ. ನಮ್ಮ ಜ್ಞಾನ ಭಂಡಾರದ ಒಂದು ಭಾಗವಾಗಿ ಬಳಸಿಕೊಳ್ಳುವ ವಿಷಯದ ಮೂಲ ಒದಗಿಸುವವರ ಅನುಮತಿ ಪಡೆದೇ ಮುಂದುವರೆಯುತ್ತೇವೆ.

ಉತ್ತೇಜನ: ಯಾವುದೇ ಪರಿಸ್ಥಿತಿಯಲ್ಲೂ ವೈಟ್ ಸ್ವಾನ್ ಫೌಂಡೇಷನ್ ಒಂದು ಉತ್ಪನ್ನವನ್ನು, ಚಿಂತನೆಯನ್ನು, ಪರಿಕಲ್ಪನೆಯನ್ನು, ಚಿಂತನಾವಾಹಿನಿಯನ್ನು ಉತ್ತೇಜಿಸುವುದಿಲ್ಲ. ಮಾನಸಿಕ ಆರೋಗ್ಯವನ್ನು ಕುರಿತಂತೆ ಜ್ಞಾನದ ಬೆಳಕು ಚೆಲ್ಲುವ ಯಾವುದೇ ಮಾಹಿತಿಯನ್ನು ಮತ್ತು ಅದರ ಸುತ್ತಲಿನ ವಿದ್ಯಮಾನಗಳನ್ನು ನಾವು ನಮ್ಮ ಓದುಗರಿಗೆ, ವೀಕ್ಷಕರಿಗೆ ಪ್ರಸ್ತುತಪಡಿಸುತ್ತೇವೆ. ಇದರಲ್ಲಿ ಯಾವುದೇ ಪಕ್ಷಪಾತ, ತಾರತಮ್ಯ ಇರುವುದಿಲ್ಲ, ಯಾವುದೇ ಚಿಂತನಾವಾಹಿನಿಯ ಬಗ್ಗೆ ಅಥವಾ ಉತ್ಪನ್ನದ ಬಗ್ಗೆ ಪಕ್ಷಪಾತ ಇರುವುದಿಲ್ಲ. ನಮ್ಮ ಜ್ಞಾನ ಭಂಡಾರದ ಮೂಲಕ ನಾವು ಓದುಗರಿಗೆ, ವೀಕ್ಷಕರಿಗೆ ಒದಗಿಸುವ ಮಾಹಿತಿ, ವಿಚಾರಗಳ ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಓದುಗರಿಗೇ ಇರುತ್ತದೆ.

ಭಾಷೆ: ನಮ್ಮ ಜ್ಞಾನ ಭಂಡಾರದಲ್ಲಿ ಬಳಸಲಾಗುವ ಆಂಗ್ಲ ಭಾಷೆ ಅಮೆರಿಕನ್ ಇಂಗ್ಲಿಷ್ ಆಗಿರುತ್ತದೆ. ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತಹ ಸರಳ ಭಾಷೆ ಬಳಸುವುದು ನಮ್ಮ ಉದ್ದೇಶವಾಗಿರುತ್ತದೆ. ವಸ್ತುನಿಷ್ಠ , ನೈಜ ಮಾಹಿತಿಯನ್ನು ನೀಡುವುದರೊಂದಿಗೇ ನಮ್ಮ ಬರಹಗಳಲ್ಲಿ ವೈಜ್ಞಾನಿಕ ಪದಗಳನ್ನು ಮತ್ತು ವ್ಯಾಖ್ಯಾನಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಸಮಸ್ಯೆಗಳು, ಅನಾರೋಗ್ಯ ಮತ್ತು ದೌರ್ಬಲ್ಯ ಎಂಬ ಪದಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸುತ್ತಾ ಬಳಸುತ್ತೇವೆ.

ವೈಟ್ ಸ್ವಾನ್ ಫೌಂಡೇಷನ್ ನ ವಿಷಯಗಳನ್ನು ಕುರಿತು: ವೈಟ್ ಸ್ವಾನ್ ಫೌಂಡೇಷನ್ ರೂಪಿಸುವ ಎಲ್ಲ ವಿಷಯಗಳು ನಮ್ಮ ಜ್ಞಾನ ಭಂಡಾರದ ಮೂಲಕ ಪ್ರಕಟಿಸಲ್ಪಡುತ್ತದೆ. ವ್ಯತಿರಿಕ್ತವಾದ ಯಾವುದೇ ಸಂದೇಶ ಇಲ್ಲದಿದ್ದಲ್ಲಿ, ಎಲ್ಲ ವಿಷಯಗಳ ಮೇಲೆಯೂ ಸಹ ವೈಟ್ ಸ್ವಾನ್ ಫೌಂಡೇಷನ್ ನ ಗ್ರಂಥ ಸ್ವಾಮ್ಯದ ಹಕ್ಕು ಅಬಾಧಿತವಾಗಿರುತ್ತದೆ.

ಆದರೆ ಸಾರ್ವಜನಿಕರ ಉಪಯೋಗಕ್ಕಾಗಿ ಈ ವಿಚಾರಗಳನ್ನು ನಮ್ಮ ಮಾಧ್ಯಮಗಳ ಮೂಲಕ , ನಮ್ಮ ಪೂರ್ವ ಅನುಮತಿ ಪಡೆದು, ಉಚಿತವಾಗಿ ಬಳಸಲು ಅವಕಾಶವಿರುತ್ತದೆ. ನಿಮಗೆ ಅಗತ್ಯವಿದ್ದಲ್ಲಿ ಈ ವಿಳಾಸಕ್ಕೆ ಬರೆಯಿರಿ : connect@whiteswanfoundation.org

ನೀತಿಗಳನ್ನು ಕುರಿತು ವೈಟ್ ಸ್ವಾನ್ ಫೌಂಡೇಷನ್ ನ ಸಂಪಾದಕೀಯ ನೀತಿಗಳನ್ನು ನಾವು ಆಗಾಗ್ಗೆ ಪರಿಶೀಲಿಸಿ ಪರಿಷ್ಕರಿಸುತ್ತಿರುತ್ತೇವೆ. ಇದರಿಂದ ನಮ್ಮ ಜ್ಞಾನ ಭಂಡಾರಕ್ಕೆ ಭೇಟಿ ನೀಡುವ ನಮ್ಮ ಓದುಗರ ಮತ್ತು ವೀಕ್ಷಕರ ಅನುಭವಗಳನ್ನು ದಾಖಲಿಸುತ್ತಿರುತ್ತೇವೆ.

ಓದುಗರು ಮತ್ತು ವೀಕ್ಷಕರಾದ ನೀವು ನಮ್ಮ ಕಣ್ಣು ಕಿವಿಗಳಿದ್ದಂತೆ. ನಮ್ಮ ತಾಣದಲ್ಲಾಗಲೀ ಇತರ ಯಾವುದೇ ಮಾಧ್ಯಮದಲ್ಲಾಗಲೀ ನಿಮಗೆ ಒದಗಿಸುವ ಮಾಹಿತಿಯ ಬಗ್ಗೆ ನಮಗೆ ಪ್ರತಿಕ್ರಿಯೆ ನೀಡಿ ನಮ್ಮ ವಿಚಾರ ಮಂಡನೆ ಇನ್ನೂ ತೀಕ್ಷ್ಣವಾಗಿಸಲು ನೆರವಾಗಿ. ಈ ಮಾಹಿತಿಗಳಲ್ಲಿ ತಪ್ಪುಒಪ್ಪುಗಳು ಕಂಡುಬಂದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ನಮಗೆ ಮಾಹಿತಿ ನೀಡಿ. ಮಾನಸಿಕ ಆರೋಗ್ಯದ ಬಗ್ಗೆ ಅತ್ಯಂತ ಮೌಲ್ಯಯುತವಾದ ಮಾಹಿತಿಯನ್ನು ನಿಮಗೆ ಒದಗಿಸಲು ನಿಮ್ಮ ಸಲಹೆಗಳೂ ನೆರವಾಗುತ್ತವೆ. ನೀವು ನೀಡುವ ಸಲಹೆಗಳ ಇನ್ನೂ ನಿಖರ ಮಾಹಿತಿ ಒದಗಿಸಲು ನೆರವಾಗುತ್ತದೆ.

ಸಂಪಾದಕೀಯ ನೀತಿಯ ಈ ಸ್ವರೂಪವನ್ನು 2020ರ ಜೂಲೈ1 ರಂದು ಪ್ರಕಟಿಸಲಾಗಿದೆ.

logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org