ಕಂಪ್ಯೂಟರೈಸ್ಡ್ ಕಾಗ್ನೆಟಿವ್ ಬಿಹೇವಿಯರಲ್ ಥೆರಪಿ, ಖಿನ್ನತೆಗೆ ಪರಿಣಾಮಕಾರಿ ಚಿಕಿತ್ಸೆಯಲ್ಲ

ಖಿನ್ನತೆಗೆ ನೀಡಲಾಗುವ  ಥೆರಪಿಗಳಲ್ಲಿ ಕಾಗ್ನೆಟಿವ್ ಬಿಹೇವಿಯರಲ್ ಥೆರಪಿ, ಒಂದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆದರೆ ಮೊಬೈಲ್ ಆಪ್ ಅಥವ ವೆಬ್ಸೈಟ್ ನಿಂದ ನೀಡುವ ಕಂಪ್ಯೂಟರೈಸ್ಡ್ ಥೆರಪಿ, ಸೂಕ್ತ ಚಿಕಿತ್ಸೆಯಲ್ಲ.

ಬ್ರಿಟನ್ ನಲ್ಲಿರುವ ಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ಖಿನ್ನತೆಯಿರುವ ವ್ಯಕ್ತಿ, ಥೆರಪಿಸ್ಟ್ ನೊಂದಿಗೆ ಪರಸ್ಪರ ಮುಖಾಮುಖಿಯಾಗಿ ಥೆರಪಿ ಪಡೆದಾಗ, ಚಿಕಿತ್ಸೆ ಹೆಚ್ಚು ಪರಿಣಾಮಕಾರಿ. CBT ಚಿಕಿತ್ಸೆಯಲ್ಲಿ ಖಿನ್ನತೆಗೆ ಕಾರಣಗಳನ್ನು ಹುಡುಕಿ, ಆಲೋಚನಾ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡು ವ್ಯಕ್ತಿಯ ನಕಾರಾತ್ಮಕ ಯೋಚನೆಗಳನ್ನು  ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತಾರೆ.

Was this helpful for you?