ಚಟಗಳು ಹೇಗೆ ವ್ಯಸನಗಳಾಗುತ್ತವೆ?

ಚಟಗಳು ಹೇಗೆ ವ್ಯಸನಗಳಾಗುತ್ತವೆ?

ಚಟಗಳು ಹೇಗೆ ವ್ಯಸನಗಳಾಗುತ್ತವೆ

ನೀವು ಮೊದಲ ಸಲ ಜಿಮ್ ಸೇರಿದ ಕ್ಷಣವನ್ನು ನೆನಪು ಮಾಡಿಕೊಳ್ಳಿ.  ಆರಂಭದಲ್ಲಿ ನಿಮಗೆ ಬೆಳಿಗ್ಗೆ ಬೇಗನೆ ಏಳುವುದು, ಜಿಮ್ ಗೆ ಹೋಗುವುದು,ವ್ಯಾಯಾಮ ಮಾಡುವುದು ಇವೆಲ್ಲವೂ ಬಹಳ  ಕಷ್ಟದ ಕೆಲಸ ಎನಿಸಿರುತ್ತದೆ. ಆದರೆ ದಿನಗಳು ಕಳೆದಂತೆ ಇದು ನಿಮಗೆ ಅಭ್ಯಾಸವಾಗಿಬಿಡುತ್ತದೆ. ಆರಂಭದಲ್ಲಿ ಬೇಕಾದಷ್ಟು ಬಲವಂತದ ಪ್ರಯತ್ನಗಳು ಈಗ ಬೇಕೆನಿಸುವುದಿಲ್ಲ.  ಉದ್ಯಾನಗಳಿಗೆ ಹೋಗುವುದು, ಜೂಜಾಟದಲ್ಲಿ ತೊಡಗುವುದು,  ಹೊರಗೆ ತಿನ್ನುವುದು, ಹಲ್ಲುಜ್ಜುವುದು  ಇವೆಲ್ಲವೂ ನಮ್ಮ ನಿತ್ಯದ ಚಟಗಳಿದ್ದು ನಾವು ಪ್ರತಿದಿನವೂ ಮಾಡುತ್ತಲೇ ಇರುತ್ತೇವೆ. ಈ ಚಟಗಳು ಹೇಗೆ ಮೂಡುತ್ತವೆ ? ಕೆಲವು ಚಟಗಳು ಹೇಗೆ ವ್ಯಸನಗಳಾಗುತ್ತವೆ ?

ಚಟಗಳು ಹೇಗೆ ರೂಪುಗೊಳ್ಳುತ್ತವೆ ?

ಚಟಗಳು ಮೂರು ಹಂತಗಳಲ್ಲಿ ರೂಪುಗೊಳ್ಳುತ್ತವೆ. ಒಂದು ಸುಳಿವು (ಸಂದರ್ಭ ) ಇರುತ್ತದೆ, ಒಂದು ಪ್ರತಿಕ್ರಿಯೆ ಇರುತ್ತದೆ ಮತ್ತು ಒಂದು ಪ್ರತಿಕ್ರಿಯೆ ( ಅಥವಾ ಪರಿಣಾಮ) ಇರುತ್ತದೆ. ಎಲ್ಲವೂ ಒಂದೇ ಗುರಿಯನ್ನು ಹೊಂದಿರುತ್ತವೆ. ನಮ್ಮ ಸುತ್ತಲಿನ ವಾತಾವರಣದ ಸಂದರ್ಭ ನಮ್ಮನ್ನು ಪ್ರತಿಕ್ರಿಯಿಸಲು ಪ್ರೇರೇಪಿಸುತ್ತವೆ. ನಮ್ಮ ಮಿದುಳು ಸಂದರ್ಭ ಮತ್ತು ಪ್ರತಿಫಲವನ್ನು ಒಂದುಗೂಡಿಸುತ್ತದೆ. ಹಾಗಾಗಿಯೇ ನಾವು ಒಂದು ಚಟುವಟಿಕೆಯನ್ನು ಮತ್ತೆ ಮತ್ತೆ ಮಾಡುತ್ತಿರುತ್ತೇವೆ. ಒಂದು ನಿರ್ದಿಷ್ಟ ಗುರಿಯ ಪರಿಣಾಮವಾಗಿ ಚಟಗಳು ರೂಪುಗೊಳ್ಳುತ್ತವೆ. ಬಹುಮಟ್ಟಿಗೆ ಗುರಿ ಅಥವಾ ಧ್ಯೇಯಗಳು ಹೊಂದಾಣಿಕೆಯಾಗುವಂತಿದ್ದು ಬದಲಾಗುತ್ತಲೇ ಇರುತ್ತವೆ. ಆದರೆ ನಮ್ಮ ಚಟಗಳು ಶಾಶ್ವತವಾಗಿಬಿಡುತ್ತವೆ. ಉದ್ದೇಶಿತ ಗುರಿ ತಲುಪಲು ಸಾಧ್ಯವಾಗದಿದ್ದರೂ, ನಿರೀಕ್ಷಿತ ಉದ್ದೇಶ ಈಡೇರದಿದ್ದರೂ ಚಟಗಳು ಮುಂದುವರೆಯುವಂತೆ ಮಿದುಳಿನಲ್ಲಿ ನಿಯೋಜಿತವಾಗಿಬಿಡುತ್ತವೆ.

ಮಿದುಳಿನಲ್ಲಿರುವ ನರಮಂಡಲದ ಸರಪಳಿ ಈ ಸಂಪರ್ಕಗಳನ್ನು ಬೆಸೆಯುತ್ತದೆ. ಅದು ಕ್ರಮೇಣ ಶಾಶ್ವತವಾಗಿಬಿಡುತ್ತದೆ. ಅದರಲ್ಲೂ ಕೊಂಚ ಸಾಂತ್ವನ ದೊರೆತರೆ, ಸಕಾರಾತ್ಮಕ ಪ್ರತಿಕ್ರಿಯೆ ಪಡೆದರೆ ಇನ್ನೂ ಗಟ್ಟಿಯಾಗುತ್ತದೆ. ಆದ್ದರಿಂದಲೇ ಚಟವನ್ನು ಕೈಬಿಡುವುದು ಕಷ್ಟವಾಗುತ್ತದೆ.

ಒಂದು ಉದಾಹರಣೆ ನೋಡೋಣ :  ನಿಮಗೆ ಹಸಿವಾಗಿರುತ್ತದೆ. ಅಂಗಡಿಯ ಕಿಟಕಿಯಲ್ಲಿ ಒಂದು ರುಚಿಕರ ಕೇಕ್ ನಿಮ್ಮನ್ನು ಆಕರ್ಷಿಸುತ್ತದೆ.  ಕೇಕ್ ಒಂದು ಸುಳಿವು, ಹಸಿವು ಸಂದರ್ಭ. ನೀವು ಕೇಕ್ ತಿನ್ನುವುದು ಪ್ರತಿಕ್ರಿಯೆ. ನಿಮಗೆ ಹಸಿವಾಗುತ್ತದೆ ಹಾಗಾಗಿ ನಿಮ್ಮ ದೇಹ ( ಉಳಿಯುವ ಗುರಿ) ತನ್ನ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತದೆ. ಇಲ್ಲಿ ಇನ್ನೂ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗುರುತಿಸಬಹುದು. ಕೇಕ್ ತಿಂದ ನಂತರ ನೀವು ಸುಧಾರಿಸಿದಂತೆ ಕಾಣುತ್ತೀರಿ. ಇದು ನಿಮ್ಮ ವರ್ತನೆಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ. ಮುಂದಿನ ಬಾರಿ ನೀವು ಅದೇ ಕೇಕ್ ನೋಡಿದಾಗ, ನಿಮ್ಮ ಮನಸ್ಸಿನಲ್ಲಿ ನಿಮಗೇ ಅರಿವಿಲ್ಲದಂತೆ ಸ್ವಯಂ ಚಾಲನೆಯ ಶಕ್ತಿ ಮೂಡುತ್ತದೆ ಮತ್ತು ನೀವು ಆ ಕೇಕ್ ತಿನ್ನಲು ನಿರ್ಧರಿಸುತ್ತೀರಿ.

ಈ ರೀತಿಯ ವರ್ತನೆಯಲ್ಲಿ ಯಾವುದೇ ತಪ್ಪು ಕಂಡುಹಿಡಿಯಲಾಗುವುದಿಲ್ಲ. ಆದರೆ ಇದು ಒಳ್ಳೆಯದು ಮಾಡುವುದಕ್ಕಿಂತಲೂ ಹೆಚ್ಚಾಗಿ ಹಾನಿ ಮಾಡುವಂತೆ ಆದಾಗ , ಈ ಚಟಗಳು ಕೆಟ್ಟ ಚಟಗಳಾಗಿಬಿಡುತ್ತವೆ. ಒತ್ತಡದಲ್ಲಿ ಆಹಾರ ಸೇವಿಸುವ ಬಗೆಯನ್ನೇ ಗಮನಿಸಿ. ಒತ್ತಡ ಹೆಚ್ಚಾದಾಗ ಬಹುಪಾಲು ಜನರು ಹೆಚ್ಚಿನ ಸಕ್ಕರೆ ಅಂಶ ಇರುವ ಆಹಾರ ಸೇವಿಸುತ್ತಾರೆ. ನಾವು ಯಾವುದೇ ಸಿಹಿಯಾದ ಆಹಾರ ಸೇವಿಸಿದಾಗ ನಮ್ಮ ದೇಹ ತಾನು ಎಲ್ಲಿ, ಏನನ್ನು ಸೇವಿಸಿದೆ ಎಂದು ನೆನಪಿಟ್ಟುಕೊಳ್ಳುವಂತೆ ಮಿದುಳಿಗೆ ಸಂದೇಶ ನೀಡುತ್ತದೆ. ನಂತರ ನಿಮಗೆ ಒತ್ತಡ ಹೆಚ್ಚಾದಾಗಲೆಲ್ಲವೂ ನಿಮ್ಮ ಮಿದುಳು ನಿಮಗೆ ಅದೇ ಕೇಕ್ ಅಥವಾ ಐಸ್ ಕ್ರೀಂ ಮುಂತಾದ ಸಿಹಿ ತಿಂಡಿ ತಿನ್ನಲು ಪ್ರೇರೇಪಿಸುತ್ತದೆ. ಏಕೆಂದರೆ ಇದನ್ನು ಸೇವಿಸುವುದರಿಂದ ಹಿಂದಿನ ಬಾರಿ, ಅದಕ್ಕೂ ಮುನ್ನ, ಬಹಳ ದಿನಗಳ ಹಿಂದೆ ಹೀಗೆ,  ನಮಗೆ ಆಹ್ಲಾದ ಉಂಟಾಗಿರುತ್ತದೆ. ಇದು ಒಂದು ರೀತಿಯಲ್ಲಿ ಪ್ರತಿಬಿಂಬದಂತೆ ಕೆಲಸ ಮಾಡುತ್ತಿರುತ್ತದೆ ಮತ್ತು ನಿಮಗೆ ಯಾವುದೇ ನಿಯಂತ್ರಣ ಸಾಧಿಸಲು ಆಗುವುದಿಲ್ಲ.

ಮತ್ತೊಂದು ಉದಾಹರಣೆಯನ್ನು ನೋಡೋಣ :  ಇತರರಂತೆ ಸದಾ ತಾಳ್ಮೆಯಿಂದಿರುವಂತೆ ಕಾಣಲು ಧೂಮಪಾನದ ಚಟ ಹತ್ತಿಸಿಕೊಂಡ ಸ್ನೇಹಿತ ನಮಗೆ ಇದ್ದೇ ಇರುತ್ತಾನೆ. ಕೈಯ್ಯಲ್ಲಿ ಸಿಗರೇಟು, ಬಾಯಿಂದ ವಿವಿಧ ಭಂಗಿಗಳಲ್ಲಿ ಹೊಗೆ ಹೊರಬಿಡುವುದು, ಹಾಗೆಯೇ ಫ್ಯಾನ್ಸಿ ಕಾರ್ ಓಡಿಸುವುದು, ಹೀಗೆ. ಆ ಸಂದರ್ಭದಲ್ಲಿ ಧೂಮಪಾನ ಆಹ್ಲಾದಕರವಾಗಿರುತ್ತದೆ. ಸುಖ ನೀಡುತ್ತದೆ. ಧೂಮಪಾನ ಮಾಡುವವರಿಗೆ ತಾವು ಇತರ ತಾಳ್ಮೆ ಹೊಂದಿರುವ ಜನರ ಗುಂಪಿಗೆ ಸೇರಿದ್ದೇವೆ ಎಂಬ ಭಾವನೆ ಮೂಡುತ್ತದೆ. ಕಾಲೇಜು ಮುಗಿದು 15 ವರ್ಷ ಕಳೆದ ನಂತರ, ಬಿಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ, ಅವರು ಧೂಮಪಾನವನ್ನು ಮುಂದುವರೆಸಿರುತ್ತಾರೆ.  ಧೂಮಪಾನ ಕೈಬಿಡುವಲ್ಲಿ ಅವರು ಕೆಲವು ಯಶಸ್ಸುಗಳನ್ನು ಕಂಡಿರಬಹುದು. ಆದರೆ ಯಾವುದೇ ಒತ್ತಡದ ಸಂದರ್ಭ ಎದುರಾದಾಗ  ಮತ್ತೆ ಅದೇ ಚಟಕ್ಕೆ ಬಲಿಯಾಗಿರುತ್ತಾರೆ.

ಹಾಗಾದರೆ ಒತ್ತಡದ ಘಟನೆಗಳ ಸಂದರ್ಭದಲ್ಲಿ ನಮ್ಮ ಮಿದುಳಿನಲ್ಲಿ ಏನಾಗುತ್ತದೆ ?

ತಾರ್ಕಿಕ ವಿವೇದನೆ, ನಿರ್ಣಯ ಕೈಗೊಳ್ಳುವ ಗುಣ, ಕ್ರಿಯಾಶೀಲ ಪ್ರಕ್ರಿಯೆ ಇವೇ ಮುಂತಾದ ಮುಖ್ಯ ಕೆಲಸಗಳನ್ನು ನಿರ್ವಹಿಸುವಲ್ಲಿ ಮಿದುಳಿನಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಭಾಗ – ಪ್ರೀ ಫ್ರಂಟಲ್ ಕಾರ್ಟೆಕ್ಸ್ ನ ಕಾರ್ಯ ನಿರ್ವಹಣೆಯನ್ನು ಗಮನಿಸುವುದು ಅಗತ್ಯ.  ಜಂಕ್ ಆಹಾರ ತಿನ್ನುವುದು  ಅಥವಾ ಧೂಮಪಾನ ಮಾಡುವುದು ನಿಮ್ಮ ದೇಹಕ್ಕೆ ಅಪಾಯಕಾರಿ ಎನ್ನುವುದನ್ನು  ಪ್ರೀ ಫ್ರಂಟಲ್ ಕಾರ್ಟೆಕ್ಸ್ ತಿಳಿದಿರುತ್ತದೆ.

ಒತ್ತಡದ ಸಂದರ್ಭಗಳಲ್ಲಿ – ಪ್ರೀ ಫ್ರಂಟಲ್ ಕಾರ್ಟೆಕ್ಸ್ ಮೊದಲು ನಿಷ್ಕ್ರಿಯವಾಗುತ್ತದೆ. ಅಂದರೆ ಕೆಲಸ ಮಾಡದಂತಾಗುತ್ತದೆ. ಇದರಿಂದ ನಮ್ಮ ವಿವೇಚನೆ ಮತ್ತು ನಿರ್ಣಯ ಕೈಗೊಳ್ಳುವ ಶಕ್ತಿ ಕುಂದುತ್ತದೆ. ಆದ್ದರಿಂದಲೇ ನಾವು ಒತ್ತಡದ ಸಂದರ್ಭ ಎದುರಿಸಿದಾಗೆಲ್ಲಾ ಮತ್ತೊಬ್ಬರ ಮೇಲೆ ರೇಗಾಡುತ್ತೇವೆ ಇಲ್ಲವಾದರೆ ಕೆಟ್ಟ ಚಟಗಳಿಗೆ ಬಲಿಯಾಗುತ್ತೇವೆ. ಈ ರೀತಿಯ ವರ್ತನೆ ಸಹಾಯಕವಾಗುವುದಿಲ್ಲ ಎಂದು ತಿಳಿದಿದ್ದರೂ ಹೀಗೆಯೇ ಮಾಡುತ್ತೇವೆ.

ಪ್ರತಿಫಲವನ್ನು ಆಧರಿಸಿದ ಕಲಿಕೆ ಚಟ ಹತ್ತಿಸಿಕೊಳ್ಳಲು ನೆರವಾಗುತ್ತದೆ. ಇದರ ಮೂಲ ನಮ್ಮ ಉಳಿಯುವಿಕೆಯ ಬಯಕೆಯಲ್ಲಿ ಇರುತ್ತದೆ.  ಆದರೆ ಕಾಲ ಕ್ರಮೇಣ ಇದೇ ನಮ್ಮ ಸಾವಿಗೆ ಕಾರಣವಾಗಿಬಿಡುತ್ತದೆ. ಬೊಜ್ಜು ಮತ್ತು ತಂಬಾಕು ವಿಶ್ವದಾದ್ಯಂತ ಅತಿ ಹೆಚ್ಚಿನ ಸಾವಿಗೆ ಕಾರಣವಾಗಿವೆ.

ಈ ಎಲ್ಲ ಚಟಗಳೂ ಸಹ ವ್ಯಕ್ತಿಯಲ್ಲಿ ಮತ್ತೆ ಮತ್ತೆ ಮರಳಿ ಬರುವ ಪರಿಣಾಮಗಳನ್ನು ಹೊಂದಿರುತ್ತವೆ. ಈ ರೀತಿಯಾಗಿಯೇ ಮಿದುಳು ಸಹ ಇಂತಹುದೇ ಚಟುವಟಿಕೆಯನ್ನು ಬಲಪಡಿಸುತ್ತಾ ಹೋಗುತ್ತದೆ.

ಆದರೆ ಜೂಜಾಡದಂತಹ ಚಟಗಳು ಹೇಗೆ ಮುಂದುವರೆಯುತ್ತವೆ ? ಮಾನವ ವರ್ತನೆಯ ಮನಶ್ಶಾಸ್ತ್ರಜ್ಞ ಸ್ಟೀಫನ್ ಕೆಂಡಾಲ್ ಮನುಷ್ಯನ ಚಟಗಳು ಮತ್ತು ಅವುಗಳ ಬಲಗೊಳ್ಳುವಿಕೆಯನ್ನು ಕುರಿತು ಅಧ್ಯಯನ ನಡೆಸಿದ್ದು ಒಂದು ಪ್ರಸಿದ್ಧ ಪ್ರಯೋಗವನ್ನೂ ನಡೆಸಿದ್ದಾರೆ. ಇದು ಬಲಗೊಳ್ಳುವಿಕೆ ಮತ್ತು ಪ್ರತಿಫಲದ ಕಾರ್ಯತಂತ್ರವನ್ನು ವಿವರಿಸುತ್ತದೆ.  ಎರಡು ಪಂಜರಗಳಲ್ಲಿ ಕೆಂಡಾಲ್ ಪಾರಿವಾಳಗಳನ್ನು ಬಂಧಿಸಿ ಅದರೊಳಗೆ  ಒಂದು ಸನ್ನೆ ಕೋಲನ್ನು ಇರಿಸುತ್ತಾರೆ.  ಒಂದು ಪಂಜರದಲ್ಲಿ ಪಾರಿವಾಳದ ಮುಂದೆ ಸನ್ನೆ ಕೋಲನ್ನು ಇವರು ಒತ್ತಿದಾಗಲೆಲ್ಲಾ ಆಹಾರವನ್ನು ಒದಗಿಸಿ ಉತ್ತೇಜಿಸುತ್ತಾರೆ. ಮತ್ತೊಂದು ಪಂಜರದಲ್ಲಿ ಪಾರಿವಾಳಗಳು ಉತ್ತೇಜನಗೊಳ್ಳುವುದಿಲ್ಲ.  ಕೆಂಡಾಲ್ ಅವರು ಗಮನಿಸಿದಂತೆ, ಆಹಾರವನ್ನು ಕಂಡು ಕಡಿಮೆ ಪ್ರಮಾಣದಲ್ಲಿ ಉತ್ತೇಜನ ತೋರಿದ ಪಾರಿವಾಳಗಳು ಕಡಿಮೆ ಬಾರಿ ಸನ್ನೆಕೋಲನ್ನು ಒತ್ತುತ್ತವೆ. ಮತ್ತೊಂದು ಗುಂಪು ಹೆಚ್ಚು ಬಾರಿ ಒತ್ತುತ್ತವೆ.

ಇದೇ ತಂತ್ರಗಾಋಇಕೆಯನ್ನು ಜೂಜಾಟದಲ್ಲೂ ಕಾಣಬಹುದು. ನೀವು ಏನು ಪಡೆಯಲಿದ್ದೀರಿ ಎಂದು ಖಚಿತವಾಗಿ ತಿಳಿಯದೆ ಉಂಟಾಗುವ ಕುತೂಹಲ ನಿಮ್ಮನ್ನು ಮತ್ತಷ್ಟು ಗಳಿಸುವತ್ತ ಕರೆದೊಯ್ಯುತ್ತದೆ. ಮಕ್ಕಳು ಸ್ಲಾಟ್ ಯಂತ್ರಗಳೊಡನೆ ಆಟ ಆಡುವಾಗಲೂ ಇದೇ ನಿಯಮ ಅನ್ವಯಿಸುತ್ತದೆ. ಕೆಂಡಾಲ್ ಅವರ  ಪ್ರಯೋಗ, ಒಂದೇ ಸಮನೆ ಉತ್ತೇಜನ  ನೀಡುವುದರ ಬದಲು  ಆಗಾಗ್ಗೆ ನೀಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ನಮ್ಮ ಚಟಗಳು ನಮ್ಮ ಸಾಮಾಜಿಕ, ವೈಯಕ್ತಿಕ ಮತ್ತು ಕಚೇರಿಯೊಳಗಿನ ಸಂಬಂಧಗಳಿಗೆ ಮಾರಕವಾಗತೊಡಗಿದಾಗ, ಸಮಸ್ಯೆ ಹೆಚ್ಚಾಗುತ್ತದೆ. ಸಿಗರೇಟ್ ಇಲ್ಲದೆ ಸರಿಯಾಗಿ ಕೆಲಸವನ್ನೇ ಮಾಡಲಾಗದ ಪರಿಸ್ಥಿತಿ ತಲುಪಿದಾಗ  ಅಥವಾ ನಿಮಗೆ ಪ್ರತಿ ಬಾರಿ ಒತ್ತಡ ಹೆಚ್ಚಾದಾಗಲೂ ಚಾಕೊಲೇಟ್ ತಿನ್ನಲೇ ಬೇಕು ಎಂಬ ಆಸೆ ಹುಟ್ಟಿದಾಗ, ನೀವು ನಿಮ್ಮನ್ನು ಪರಿಶೀಲಿಸಿಕೊಳ್ಳುವುದು ಒಳಿತು.  ಎಲ್ಲ ವ್ಯಸನಗಳಿಗೂ ಚಟಗಳೇ ಆಧಾರ. ಉತ್ತೇಜಕವಾಗಿ ಕಾರ್ಯ ನಿರ್ವಹಿಸುವುದು,  ಆವೇಗವನ್ನು ನಿಯಂತ್ರಣ ಸಾಧ್ಯವಾಗದಿರುವುದು, ಯಾವುದೋ ಒಂದು ವಸ್ತುವಿನ ಬಗ್ಗೆ ಅತಿ ಆಸೆ ಉಂಟಾಗುವುದು ಇವೆಲ್ಲ ಚಟಗಳೂ ವ್ಯಸನದ ಒಂದು ಭಾಗವಾಗಿದ್ದರೂ, ಇತರ ಚಟಗಳು ರೂಪುಗೊಳ್ಳಲು ಉಪಯೋಗಿಸಲ್ಪಡುವ ತಂತ್ರಗಾರಿಕೆಯೇ ಇಲ್ಲಿಯೂ ಬಳಕೆಯಾಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org