ಕೋವಿಡ್  19 ಸಂದರ್ಭದಲ್ಲಿ ಮನೋದೌರ್ಬಲ್ಯ ಇರುವ ವೃದ್ಧರ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ಕೋವಿಡ್ 19 ಸಂದರ್ಭದಲ್ಲಿ ಮನೋದೌರ್ಬಲ್ಯ ಇರುವ ವೃದ್ಧರ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ಕೋವಿಡ್ 19 ಸಂದರ್ಭದಲ್ಲಿ ಮನೋದೌರ್ಬಲ್ಯ ಇರುವ ವೃದ್ಧರ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ಮನೋದೌರ್ಬಲ್ಯ ಇರುವ ವೃದ್ಧರು ಕೋವಿದ್ 19 ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪ್ರತ್ಯೇಕವಾಗಿ ವಾಸಿಸುವುದು ಇವೇ ಮುಂತಾದ ರಕ್ಷಣಾ ಕ್ರಮಗಳನ್ನು ಅನುಸರಿಸಲು ಕಷ್ಟ ಪಡುವ ಸಾಧ್ಯತೆಗಳಿರುತ್ತವೆ. ಇಂತಹ ಸನ್ನಿವೇಶದಲ್ಲಿ ಅವರನ್ನು ನೋಡಿಕೊಳ್ಳುವವರಿಗೆ ಹಲವು ಸವಾಲುಗಳು ಎದುರಾಗುತ್ತವೆ.

ಕೋವಿದ್ 19  ಸೃಷ್ಟಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ, ವೃದ್ಧರು – ವಿಶೇಷವಾಗಿ ಮನೋ ದೌರ್ಬಲ್ಯ ಮತ್ತಿತರ ಗಮನಿಸಬಹುದಾದ ದೌರ್ಬಲ್ಯ ಇರುವ ವೃದ್ಧರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಈವರೆಗೂ ಕಂಡಿರದ ಕಷ್ಟದ ಸನ್ನಿವೇಶಗಳನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದರಿಂದ ಅವರ ವರ್ತನೆಯಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.  ಇದರಿಂದ ಇವರ ಬಗ್ಗೆ ಕಾಳಜಿ ವಹಿಸಿ ಇವರನ್ನು ನೋಡಿಕೊಳ್ಳುವ ವ್ಯಕ್ತಿಗಳಲ್ಲಿ ಒತ್ತಡ ಹೆಚ್ಚಾಗುವುದೇ ಅಲ್ಲದೆ, ಹಲವು ಸವಾಲುಗಳನ್ನು  ಎದುರಿಸಬೇಕಾಗುತ್ತದೆ. ಮನೋದೌರ್ಬಲ್ಯ ಇರುವ ವೃದ್ಧರಿಗೆ ಮತ್ತು ಅವರನ್ನು ಸಲಹುವವರಿಗೆ ಮಾನಸಿಕ ಪ್ರಥಮ ಚಿಕಿತ್ಸೆಯನ್ನು ನೀಡುವುದು ಅವರಿಗೆ ಬೆಂಬಲ ನೀಡುವ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯಾಗುತ್ತದೆ. ಅವರ ಬೇಕು ಬೇಡಗಳ ಬಗ್ಗೆ ಗಮನ ನೀಡುವುದು ಮತ್ತು ಕೊರೋನಾ ಪಾಸಿಟಿವ್ ಇರುವ ವ್ಯಕ್ತಿಯೊಡನೆ ಸಂಪರ್ಕ ಹೊಂದಿದ್ದವರಿಗೆ ಹಿತವಾದ ಸನ್ನಿವೇಶವನ್ನು ಸೃಷ್ಟಿಸುವುದು ಮುಖ್ಯವಾಗುತ್ತದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವುದು ಅವರೊಬ್ಬರೇ ಅಲ್ಲ ಎನ್ನುವುದನ್ನು ಮನದಟ್ಟುಮಾಡಬೇಕಾಗುತ್ತದೆ.

ಸಂಭಾವ್ಯ ಸವಾಲುಗಳ ಬಗ್ಗೆ ತಿಳಿದುಕೊಂಡಿರುವುದು • ಕ್ವಾರಂಟೈನ್ ನಲ್ಲಿದ್ದಾಗ - ಮಾನಸಿಕ ದೌರ್ಬಲ್ಯ ಇರುವ ವ್ಯಕ್ತಿಯು ಮನೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವಾ ಅವರ ನಿತ್ಯ ಚಟುವಟಿಕೆಗಳಲ್ಲಿ ವ್ಯತ್ಯಾಸವಾಗುವುದರಿಂದ ಗೊಂದಲಕ್ಕೀಡಾಗಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅವಶ್ಯಕ ಎಂದು ಗುರುತಿಸಲು ಸಾಧ್ಯವಾಗದಿರಬಹುದು. ಮತ್ತೊಬ್ಬ ವ್ಯಕ್ತಿಗೆ ಮಾನಸಿಕ ದೌರ್ಬಲ್ಯ ಇದ್ದರೆ ಅವರಿಗೆ ಕೈ ತೊಳೆಯುವುದು, ಮುಖವನ್ನು ಮುಟ್ಟುಕೊಳ್ಳದಿರುವುದು ಇಂತಹ ಸಂದೇಶಗಳನ್ನು ಮನದಟ್ಟು ಮಾಡುವುದು ಕಷ್ಟವಾಗಬಹುದು. ಇಂತಹ ಸನ್ನಿವೇಶಗಳಲ್ಲಿ ವೃದ್ಧರು ಗೊಂದಲಕ್ಕೀಡಾಗಿ ಗಲಿಬಿಲಿಯಾಗುವ ಸಾಧ್ಯತೆಗಳಿದ್ದು ಕೆಲವೊಮ್ಮೆ ಆಕ್ರೋಶ ವ್ಯಕ್ತಪಡಿಸಬಹುದು, ನಿದ್ರೆ ಮಾಡದೆ ಇರಬಹುದು ಮತ್ತು ಸುಮ್ಮನೆ ತಿರುಗಾಡುತ್ತಿರಬಹುದು. - ಕೊರೋನಾ ಸೋಂಕು ತಗುಲುವ ಅಪಾಯ ಇರುವುದರಿಂದ ಅವರಿಗೆ ನಿಕಟವಾಗಿರುವ ಮತ್ತು ಅವರೊಡನೆ ಉತ್ತಮ ಬಾಂಧವ್ಯ ಹೊಂದಿರುವ ಸೇವಾ ಕಾರ್ಯಕರ್ತರು ಅವರ ನೆರವಿಗೆ ಬಾರದೆಯೂ ಇರಬಹುದು. - ನೆರವಿನೊಂದಿಗೆ ಜೀವನ ನಡೆಸುವ ಸೌಲಭ್ಯ ಹೊಂದಿರುವ ವ್ಯಕ್ತಿಯೂ ಬಾಧಿತನಾಗಬಹುದು. ಲಾಕ್ ಡೌನ್ ಪರಿಣಾಮ ನಿತ್ಯ ಜೀವನದ ಗುಂಪು ಚಟುವಟಿಕೆಗಳು ಇಲ್ಲವಾಗುತ್ತವೆ, ಕುಟುಂಬದವರೊಡನೆ ಸಂಪರ್ಕ ಕಡಿಮೆಯಾಗುತ್ತದೆ,  ಎಂದಿನಂತೆ ಕ್ಲಿನಿಕ್ ಸೇವೆಗಳು ಅಲಭ್ಯವಾಗುತ್ತವೆ. • ಸೋಂಕು ತಗುಲಿದ್ದಲ್ಲಿ - ಮಾನಸಿಕ ದೌರ್ಬಲ್ಯ ಇರುವ ಯಾವುದೇ ವ್ಯಕ್ತಿಗೆ ಕೋವಿದ್ 19 ಸೋಂಕು ತಗುಲಿದ್ದಲ್ಲಿ, ಜ್ವರ, ಗಂಟಲು ಕೆರೆತ ಮುಂತಾದ ಮುನ್ಸೂಚಕ ಲಕ್ಷಣಗಳು ಕಾಣದೆ ಇರಬಹುದು. ಆಗ ಇವರಲ್ಲಿ ರೋಗಲಕ್ಷಣಗಳನ್ನು ಗುರುತಿಸುವುದು ತಡವಾಗುತ್ತದೆ. ಆಗ ಎಂದಿನಂತೆ ಕಾಣುವ ಲಕ್ಷಣಗಳಲ್ಲದೆ ಇತರ ರೂಪದಲ್ಲಿ ಸೋಂಕು ತಗುಲಿರುವುದು ಕಂಡುಬರುವ ಸಾದ್ಯತೆಗಳಿರುತ್ತವೆ. ಉದಾಹರಣೆಗೆ ನಿತ್ರಾಣರಾಗುವುದು, ಸಪ್ಪೆಯಾಗಿರುವುದು, ಸಿಡಿಮಿಡಿಗೊಳ್ಳುವುದು, ಊಟ ಮಾಡಲು ನಿರಾಕರಿಸುವುದು ಮತ್ತು ವರ್ತನೆಯಲ್ಲಿನ ಬದಲಾವಣೆಗಳು. - ಇಂತಹ ಸನ್ನಿವೇಶದಲ್ಲಿ ಪ್ರತ್ಯೇಕವಾಗಿ ಇರಿಸುವುದು ಕಷ್ಟವಾಗುತ್ತದೆ.ಏಕೆಂದರೆ ತಮ್ಮ ಜೊತೆ ಸದಾ ಇರುವ ಜನರಿಂದ ತಮ್ಮನ್ನು ಏಕೆ ಪ್ರತ್ಯೇಕವಾಗಿ ಇಟ್ಟಿದ್ದಾರೆ ಎಂದು ಅವರಿಗೆ ಅರ್ಥವಾಗುವುದಿಲ್ಲ.

ಈ ಬಿಕ್ಕಟ್ಟಿನ ಪರಿಣಾಮವನ್ನು ಕಡಿಮೆ ಮಾಡುವ ಮಾರ್ಗಗಳು 1. ಎಂದಿನಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಿರಿ. ಮಧುಮೇಹ, ರಕ್ತದೊತ್ತಡ ಮತ್ತು ತೈರಾಯ್ಡ್ ಇರುವವರು ತಮ್ಮ ನಿತ್ಯ ಅಭ್ಯಾಸಗಳನ್ನು ಮುಂದುವರೆಸಿ. 2. ಮಾನಸಿಕ ದೌರ್ಬಲ್ಯ ಇರುವವರು ಮತ್ತು ಅವರನ್ನು ನೋಡಿಕೊಳ್ಳುವವರು ವೈದ್ಯರನ್ನು ಸಂಪರ್ಕಿಸುವುದನ್ನು ಮುಂದೂಡಬೇಕು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ವೈದ್ಯರ ಬಳಿ ಹೋಗಿ. 3. ತುರ್ತು ಸಂದರ್ಭದಲ್ಲಿ ಮಾತ್ರ ಆಸ್ಪತ್ರೆಗೆ ಹೋಗುವುದರಿಂದ ಅನಗತ್ಯವಾದ ಸೋಂಕು ತಗುಲುವುದನ್ನು ತಪ್ಪಿಸಬಹುದು. ವೈದ್ಯಕೀಯ ಚಿಕಿತ್ಸೆ ತುರ್ತು ಅನಿವಾರ್ಯ ಇದ್ದಲ್ಲಿ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಅಥವಾ ಸ್ಥಳೀಯ ವೈದ್ಯರ ಬಳಿ ಹೋಗಿ ಸಲಹೆ ಪಡೆಯಿರಿ. 4. ಮಾನಸಿಕ ದೌರ್ಬಲ್ಯ ಇರುವವರು ಆರಂಭಿಕ ಹಂತದಲ್ಲಿದ್ದರೆ ಅಂಥವರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಆಗಾಗ್ಗೆ ಕೈ ತೊಳೆಯುವಂತೆ ನೆನಪಿಸಿ ಉತ್ತೇಜಿಸಬಹುದು. 5. ಮಾನಸಿಕ ದೌರ್ಬಲ್ಯ ಇರುವವರಿಗೆ ಮತ್ತು ಅವರನ್ನು ಸಲಹುವವರಿಗೆ ಸಾಮಾಜಿಕ ತಾಣಗಳ ಮೂಲಕ, ದೂರವಾಣಿ ಕರೆಯ ಮೂಲಕ ವೈದ್ಯರ ಸಂಪರ್ಕ ಕಲ್ಪಿಸಬಹುದು. 6. ಮಾನಸಿಕ ದೌರ್ಬಲ್ಯ ಇರುವವರು ಮತ್ತು ಅವರನ್ನು ಸಲಹುವವರು ತಮ್ಮ ನಿತ್ಯದ ದೈಹಿಕ ಚಟುವಟಿಕೆಗಳನ್ನು ಮುಂದುವರೆಸಬಹುದು, ವ್ಯಾಯಾಮ ಮುಂತಾದ ವಿರಾಮದ ತಂತ್ರಗಳನ್ನು ಎಂದಿನಂತೆ ಮುಂದುವರೆಸಬಹುದು. 7. ಒತ್ತಡಗಳ ಸೂಚನೆಗಳು ಕಂಡುಬಂದಾಗ ಸಲಹುವವರು ಸಕಾರಾತ್ಮಕವಾದ ಮತ್ತು ಸರಳವಾದ ರೀತಿಯಲ್ಲಿ ಸೂಚನೆ ನೀಡಿ ಕೆಲವು ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಭರವಸೆ ಮೂಡಿಸಬಹುದು. 8. ಕುಟುಂಬದವರೊಡನೆ ಮತ್ತು ಗೆಳೆಯರೊಡನೆ ವಿಡಿಯೋ ಸಂಭಾಷಣೆ, ಮೊಬೈಲ್, ದೂರವಾಣಿ ಸಂಭಾಷಣೆಯಲ್ಲಿ ತೊಡಗಿಸಿ. ಅವರ ಸಹಾಯವನ್ನು ಪಡೆಯಿರಿ. ಸಂಗೀತ ಮತ್ತು ಕಲೆಯಲ್ಲಿ, ಇತರ ಹವ್ಯಾಸಗಳಲ್ಲಿ ಆಸಕ್ತಿ ಹುಟ್ಟಿಸಿ. ಅವರ ಸುತ್ತಲಿನ ಪರಿಸರವನ್ನು ಮೃದುವಾಗಿ ಇಡುವ ಮೂಲಕ ಅವರ ವರ್ತನೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ. 9. ಮಾನಸಿಕ ದೌರ್ಬಲ್ಯ ಇರುವ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಬೇಕೆಂದರೆ, ಅವರಿಗಾಗಿ ವಿಶೇಷ ಜಾಗವನ್ನು ರೂಪಿಸಿ. ಮಧುರ ಸಂಗೀತ, ಹೆಚ್ಚು ಪ್ರಖರ ಇಲ್ಲದ ಬೆಳಕಿನ ವ್ಯವಸ್ಥೆ ರೂಪಿಸಿ. ಅವರನ್ನು ಸಲಹುವವರು ಸರಳ ಭಾಷೆಯಲ್ಲಿ ಅವರೊಡನೆ ಮಾತನಾಡಲು ಹೇಳಿ. ಮಾನಸಿಕ ದೌರ್ಬಲ್ಯ ಇರುವವರನ್ನು ನೋಡಿಕೊಳ್ಳುವವರು ಅವರ ಮಾತನ್ನು ಕೇಳುವುದೇ ಅಲ್ಲದೆ ಅವರ ಭಾವನೆಗಳಿಗೆ ಸ್ಪಂದಿಸಿ, ಅವರ ಭಾವನಾತ್ಮಕ ಅನುಭವಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. 10. ಸುರಕ್ಷತಾ ಕ್ರಮಗಳನ್ನು ಹೊರತುಪಡಿಸಿ, ಅವರು ಇರುವ ಸ್ಥಳದಲ್ಲಿ ನಿರ್ವಹಣೆ ಮಾಡುವ ಸಿಬ್ಬಂದಿಯೂ ಸಹ ಅವರ ಆತಂಕವನ್ನು ಕಡಿಮೆ ಮಾಡಿ, ಸುರಕ್ಷತಾ ಭಾವನೆಯನ್ನು ಮೂಡಿಸಲು ಯತ್ನಿಸಬೇಕು. 11. ಮನೆಯಲ್ಲಿ ಇಂತಹ ವ್ಯಕ್ತಿಗಳನ್ನು ನೋಡಿಕೊಳ್ಳುವವರು ಅವರ ನಡುವೆಯೇ ಹೊಂದಾಣಿಕೆ ಮಾಡಿಕೊಂಡು ಪ್ರತಿಯೊಬ್ಬರೂ ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯಬೇಕು. ಹೆಚ್ಚಿನ ಒತ್ತಡ ಮತ್ತು ಜವಾಬ್ದಾರಿ ಇರುವುದನ್ನು ಅರಿತು ಇದನ್ನು ನಿರ್ವಹಿಸಬೇಕು. ಮನೆಯಲ್ಲಿ ಮಾನಸಿಕ ದೌರ್ಬಲ್ಯ ಇರುವವರನ್ನು ನೋಡಿಕೊಳ್ಳಲು ಒಬ್ಬರನ್ನೇ ನೇಮಿಸದೆ ಪ್ರತಿಯೊಬ್ಬರೂ ಪಾಳಿಯ ಮೇಲೆ ಜವಾಬ್ದಾರಿ ಹೊರಬೇಕು.  ಆಗ ಎಲ್ಲರಿಗೂ ವಿಶ್ರಾಂತಿ ದೊರೆತು ಅವರಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪೋಷಣೆಯ ಮುಂದುವರಿಕೆ ಮತ್ತು ನಿರ್ವಹಣೆ ಮನೆಯಲ್ಲೇ ನೋಡಿಕೊಳ್ಳುವುದಾಗಲಿ, ಎಚ್ಚರಿಗೆ ವಹಿಸುವುದಾಗಲಿ ಅಥವಾ ಮತ್ತೊಬ್ಬರ ಸಹಾಯದೊಂದಿಗೆ ಸಲಹುವುದಾಗಲಿ, ಮಾನಸಿಕ ದೌರ್ಬಲ್ಯ ಇರುವ ವ್ಯಕ್ತಿಗಳನ್ನು ಮತ್ತು ಅವರನ್ನು ಸಲಹುವವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ ಸದಾ ಚಾಲನೆಯಲ್ಲಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಅಗತ್ಯವಾಗಿ ಅನುಸರಿಸಬೇಕಾದ ಅಂಶಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಅವಶ್ಯ ಔಷಧಿಗಳನ್ನು ಇಟ್ಟುಕೊಂಡಿರಬೇಕು  ಮತ್ತು ತುರ್ತು ಸಂದರ್ಭಕ್ಕೆ ಅಗತ್ಯವಾದ ವೈದ್ಯರ ಸಂಪರ್ಕದ ಮಾಹಿತಿಯನ್ನು ಇಟ್ಟುಕೊಂಡಿರಬೇಕು. - ಮಾನಸಿಕ ಆರೋಗ್ಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುವ ತಂತ್ರಗಳನ್ನು ಅನುಸರಿಸಿ - ಸಾಧ್ಯವಾದಷ್ಟೂ ನಿತ್ಯ ಚಟುವಟಿಕೆಗಳನ್ನು ಮುಂದುವರೆಸಿ - ಆನ್ ಲೈನ್ ಸಹಾಯ ಗುಂಪುಗಳೊಡನೆ ಸಂಪರ್ಕ ಇಟ್ಟುಕೊಂಡು ಮಾನಸಿಕ ಬೆಂಬಲ ಪಡೆಯಿರಿ. ನೀವು ಕೆಲವು ಸಂಘಟನೆಗಳನ್ನೂ ಸಂಪರ್ಕಿಸಬಹುದು. ಉದಾಹರಣೆಗೆ ಆಲ್ ಜೈಮರ್ ಮತ್ತು ಇತರ ಮಾನಸಿಕ ದೌರ್ಬಲ್ಯಗಳನ್ನು ನಿರ್ವಹಿಸುವ ಎ ಆರ್ ಡಿ ಎಸ್ ಐ ಸಂಸ್ಥೆಯನ್ನು ಸಂಪರ್ಕಿಸಬಹುದು.  

ಲಾಕ್ ಡೌನ್ ಮತ್ತು ಪ್ರತ್ಯೇಕೀಕರಣದ ಪರಿಣಾಮಗಳು ದೇಶವ್ಯಾಪಿ ಲಾಕ್ ಡೌನ್ ಪರಿಣಾಮವು ಸಾರ್ವತ್ರಿಕ ಲಕ್ಷಣಗಳನ್ನು ಹೊಂದಿದ್ದು, ಇದು ಕೇವಲ ವ್ಯಕ್ತಿಗಳನ್ನು ಬಾಧಿಸುವ ಸಮಸ್ಯೆಯಲ್ಲ. ಮಾನಸಿಕ ದೌರ್ಬಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಕೋವಿದ್ 19 ಸೋಂಕು ತಗುಲುವುದು ಸಾಧ್ಯವಿದ್ದರೂ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅಪಾಯದ ಮಟ್ಟದಲ್ಲಿ ವ್ಯತ್ಯಾಸವಿರುತ್ತದೆ. ಅವರು ಎಲ್ಲಿ ವಾಸಿಸುತ್ತಾರೆ ಎನ್ನುವುದು ಮುಖ್ಯವಾದಂತೆಯೇ ಸೋಂಕಿಗೆ ಸುಲಭವಾಗಿ ತುತ್ತಾಗುವರೋ ಅಥವಾ ಅವರಲ್ಲಿ ಸೋಂಕಿನಿಂದ ಪಾರಾಗುವ ಶಕ್ತಿ ಇರುವುದೋ ಎನ್ನುವುದು ಮುಖ್ಯವಾಗುತ್ತದೆ. ಹೊಸ ಸವಾಲುಗಳು ಎದುರಾಗುವ ಸಂಭವ ಇರುವುದರಿಂದ ಮಾಹಿತಿಯನ್ನು ಸರಿಯಾಗಿ ಪಡೆದು, ವೈದ್ಯರ ಹಾಗೂ ವೃತ್ತಿಪರರ ಸಲಹೆ ಪಡೆಯುವುದು ಅಗತ್ಯ. ಯಾವ ಯಾವ ಸಂಪನ್ಮೂಲಗಳು ಲಭ್ಯವಿರುತ್ತವೆ ಎಂದು ಮಾಹಿತಿ ಪಡೆಯುವುದೂ ಮುಖ್ಯವಾಗುತ್ತದೆ.

ನಿಮ್ಮ ಆತ್ಮೀಯರಿಗೆ ನೀವು ಹೇಗೆ ಬೆಂಬಲ ಪ್ರೋತ್ಸಾಹ ನೀಡಬಹುದು ಎಂದು ತಿಳಿಯಲು, ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಯಲು ನೀವು ನಿಮ್ಹಾನ್ಸ್ ನಲ್ಲಿರುವ ಗಮನಾರ್ಹ ದೌರ್ಬಲ್ಯಗಳ ಚಿಕಿತ್ಸಾಲಯಕ್ಕೆ (NIMHANS Cognitive Disorders Clinic,)ಭೇಟಿ ನೀಡಬಹುದು. ಈ ಸಂಖ್ಯೆಗೆ ಕರೆ ಮಾಡಬಹುದು 91 9686248282 ಅಥವಾ ಈ ಇ ಮೇಲ್ ವಿಳಾಸಕ್ಕೆ ಬರೆಯಬಹುದು. dementia.nimhans@gmail.com.

ಈ ಮಾರ್ಗದರ್ಶನಗಳನ್ನು ನಿಮ್ಹಾನ್ಸ್‍ನ NIMHANS Cognitive Disorders Clinic ವತಿಯಿಂದ ಸಿದ್ಧಪಡಿಸಲಾಗಿದ್ದು ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ನಿಮ್ಹಾನ್ಸ್ ನಲ್ಲಿರುವ AADAR DementiaScience Program, NIMHANS  ಇವರ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org