ಬಾರ್ಡರ್‌ಲೈನ್ ಪರ್ಸನ್ಯಾಲಿಟಿ ಡಿಸಾರ್ಡರ್

Q

ಗಡಿರೇಖೆಯ ವ್ಯಕ್ತಿತ್ವದೋಷ ಎಂದರೇನು?

A

ನಮ್ಮಲ್ಲಿ ಸಾಕಷ್ಟು ಜನ ನಾವ್ಯಾರು? ನಮ್ಮ ವೈಯಕ್ತಿಕ ವ್ಯಕ್ತಿತ್ವವೇನು ಎಂಬ ಕುರಿತು ಸ್ಪಷ್ಟವಾದ ಚಿತ್ರಣ ಹೊಂದಿರುತ್ತಾರೆ. ನಮ್ಮ ಮುಂಚಿನ ಅನುಭವಗಳು ಮತ್ತು ಅದನ್ನು ಪರಿಸರಕ್ಕೆ ಪ್ರದರ್ಶನ ಮಾಡುವುದರ ಮೂಲಕ ಈ ‘ಸ್ವಯಂ’ ಗ್ರಹಿಕೆ ಬರುತ್ತದೆ ಮತ್ತು ಇದನ್ನು ನಾವು ನಮ್ಮ ಬದುಕಿನ ೨ ದಶಕಗಳ ಅನುಭವದಿಂದ ಅಭಿವೃದ್ಧಿಪಡಿಸಿಕೊಂಡಿರುತ್ತೇವೆ. ನಮಗೆ ಏನು ಮಹತ್ವದ್ದು, ನಾವು ಏನು ಇಷ್ಟಪಡುತ್ತೇವೆ ಮತ್ತು ಏನ್ನನ್ನು ಇಷ್ಟಪಡುವುದಿಲ್ಲ, ನಾವೇನು ಬಯಸುತ್ತೇವೆ ಮತ್ತು ನಾವೆಲ್ಲಿಗೆ ಸೇರಿದ್ದೇವೆ ಎಂಬುದರಿಂದ ಈ ಸ್ವಯಂತನದ ಅರ್ಥೈಸಿಕೊಳ್ಳುವಿಕೆ ಅಥವಾ ಗುರತಿಸುವಿಕೆಯ ಅರಿವು ಮೂಡುತ್ತದೆ. ಆಂತರಿಕ ವ್ಯಕ್ತಿತ್ವದ ಖಾಯಿಲೆಯಿಂದ ಬಳಲುತ್ತಿರುವವರಲ್ಲಿ ಈ ಪ್ರಶ್ನೆಗಳಿಗೆ ಸ್ಥಿರವಾದ ಉತ್ತರ ಇರುವುದಿಲ್ಲ. ಈ ಪ್ರಶ್ನೆಗಳು ಅವರ ನಿತ್ಯದ ಸಂಕಷ್ಟವನ್ನು ವಿವರಿಸುತ್ತವೆ.

ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ವ್ಯಕ್ತಿತ್ವದ ಖಾಯಿಲೆವ್ಯಕ್ತಿಯ ಭಾವನೆ ನಿರ್ವಹಣೆ ಮಾರ್ಗದ ಮೇಲೆ ಪರಿಣಾಮ ಬೀರುತ್ತದೆ. ಈ ಖಾಯಿಲೆಯ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಸಂಬಂಧದಲ್ಲಿ (ಇತರರೊಂದಿಗೆ ಹೇಗೆ ಮಾತನಾಡಬೇಕು ಎಂಬುದರಲ್ಲಿ), ಗುರುತಿಸುವಿಕೆಯಲ್ಲಿ ಮತ್ತು ಸ್ವಯಂಚಿತ್ರಣದಲ್ಲಿ(ತಮ್ಮನು ತಾವು ಅಥವಾ ಇತರರು ಹೇಗೆ ನೋಡಬೇಕು?), ಮನೋಲಹರಿಯಲ್ಲಿ(ಇದು ಏರಿಳಿತವಾಗುತ್ತಿರುತ್ತದೆ) ಅಸ್ಥಿರತೆ.

ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ವ್ಯಕ್ತಿತ್ವದ ಖಾಯಿಲೆಹೊಂದಿರುವವರು ಸ್ವಯಂ ಗುರುತಿಸುವಿಕೆಯಲ್ಲಿ ಸ್ಥಿರತೆ ಹೊಂದಿರುವುದಿಲ್ಲ ಮತ್ತು ಅವರನ್ನು ಪ್ರಸ್ತುತದ ಪರಿಸ್ಥಿತಿ ಅಥವಾ ಪರಿಸರದಿಂದ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅವರು ಬೇರೆ ಸಂದರರ್ಭಗಳಲ್ಲಿ ವ್ಯತಿರಿಕ್ತವಾದ ವ್ಯಕ್ತಿತ್ವದ ಲಕ್ಷಣಗಳನ್ನು ಅಥವಾ ವರ್ತನೆಗಳನ್ನು ತೋರಿಸಬಹುದು. ಅವರು ನಿರಂತರವಾಗಿ ಸಂಕಷ್ಟಕ್ಕೆ ಒಗ್ಗಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಅವರು ಸುತ್ತಲು ಏನಾಗುತ್ತಿದೆ ಎಂಬುದರ ಕುರಿತು ಅವರು ಅತಿ ಸೂಕ್ಷ್ಮವಾಗಿರುತ್ತಾರೆ ಮತ್ತು ಪ್ರತಿನಿತ್ಯದ ಸರಳವಾದ ಕಾರ್ಯಗಳಿಗೂ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ. ಅವರ ವರ್ತನೆ ಬೇರೆಯವರು ಅವರತ್ತ ತಿರುಗಿ ನೋಡುವಂತಿರುತ್ತದೆ. 

Q

ಆಂತರಿಕ ಎಂಬುದರ ಅರ್ಥವೇನು?

A

ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ಗಡಿರೇಖೆಯ ವ್ಯಕ್ತಿತ್ವದೋಷ ಹೊಂದಿರುವ ವ್ಯಕ್ತಿ ತನ್ನ ಆಂತರಿಕ ಮತ್ತು ಬಾಹ್ಯ ಪ್ರಪಂಚದಲ್ಲಿನ ಪ್ರತಿನಿತ್ಯದ ಒತ್ತಡ ನಿಭಾಯಿಸುವಾಗ ಅತಿಯಾದ ಭಾವುಕತೆ ಮತ್ತು ವರ್ತನೆಯನ್ನು ತೋರಿಸುತ್ತಾನೆ. ಈ ಒತ್ತಡ ಅವರನ್ನು ಇತರರ ಕುರಿತು ಪ್ರಬಲ ಅಭಿಪ್ರಾಯ ಹೊಂದುವಂತೆ ಮಾಡುತ್ತದೆ. ಇದು ಪ್ರಮುಖ ಮಾನಸಿಕ ಅಸ್ವಸ್ತಸ್ಥತೆಯ ಅಂಚಿನಲ್ಲಿ ಕಾಣಿಸಿಕೊಂಡು "ಬಾರ್ಡರ್‌ಲೈನ್" ಎಂಬ ಹೆಸರು ನೀಡಲಾಗುತ್ತದೆ.

Q

ಗಡಿರೇಖೆಯ ವ್ಯಕ್ತಿತ್ವದೋಷದ ಕಾರಣಗಳೇನು?

A

ಗಡಿರೇಖೆಯ ವ್ಯಕ್ತಿತ್ವದೋಷದ ಖಾಯಿಲೆಗೆ ನಿರ್ದಿಷ್ಟವಾದ ಕಾರಣ ಇದುವರೆಗೆ ತಿಳಿದಿಲ್ಲ. ಆದಾಗ್ಯೂ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಒಟ್ಟಾಗಿ ವ್ಯಕ್ತಿಯಲ್ಲಿ ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ವ್ಯಕ್ತಿತ್ವದ ಖಾಯಿಲೆಅಭಿವೃದ್ಧಿ ಅಪಾಯ ಉಂಟು ಮಾಡುತ್ತವೆ. ಮಿದುಳಿನ ಸೆರೊಟೊನಿನ್‌ನ ಅಸಮತೋಲನದಿಂದ ಖಾಯಿಲೆಯ ಕೆಲವು ಲಕ್ಷಣಗಳು ಕಾಣಿಸಬಹುದು.

ಆನುವಂಶೀಯ ಮನೋವೃತ್ತಿಯಿಂದ ಕೂಡ ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿರೇಖೆಯ ವ್ಯಕ್ತಿತ್ವದೋಷ ಕಾಣಿಸಿಕೊಳ್ಳಬಹುದು ಅಥವಾ ಇತರೆ ಮನೋಲಹರಿ ಖಾಯಿಲೆಗಳು ಕೂಡ ಈ ಖಾಯಿಲೆಯನ್ನು ಹುಟ್ಟುಹಾಕುವ ಅಪಾಯ ಹೆಚ್ಚಿದೆ.

ಬಾಲ್ಯದಲ್ಲಿನ ನಿಂದನೆ ಕೂಡ ವಯಸ್ಕರಲ್ಲಿ ಈ ಖಾಯಿಲೆಗೆ ಕಾರಣವಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಬಾಲ್ಯದಲ್ಲಿ ನಿಂದನೆಗೊಳಗಾದ ಮಕ್ಕಳು ಹೇಗೆ ಭಾವನೆಯನ್ನು ವ್ಯಕ್ತಪಡಿಸಬೇಕು ಎಂಬ ಕುರಿತು ಗೊಂದಲಗೊಂಡಿರುತ್ತಾರೆ ಮತ್ತು ತಮ್ಮ ಸ್ವಯಂ ಪ್ರಜ್ಞೆ ಕುರಿತು ಅಥವಾ ಸುತ್ತಲಿನ ಚಟುವಟಿಕೆ ಕುರಿತು ಪ್ರತಿಕ್ರಿಯಿಸುವಾಗ ಗೊಂದಲಗೊಂಡಿರುತ್ತಾರೆ. ಆದಾಗ್ಯೂ ಬಾಲ್ಯದ ಆಘಾತಕ್ಕೆ ಒಳಗಾದ ಎಲ್ಲ ಮಕ್ಕಳು ಆಂತರಿಕ ವ್ಯಕ್ತಿತ್ವದ ಖಾಯಿಲೆಗೆ ಒಳಾಗುತ್ತಾರೆ ಎಂದೇನಲ್ಲ.

ಈ ಖಾಯಿಲೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. 

Q

ಓರ್ವ ವ್ಯಕ್ತಿ ಗಡಿರೇಖೆಯ ವ್ಯಕ್ತಿತ್ವ ದೋಷದಿಂದ ಬಳಲುತ್ತಿದ್ದಾರೆ ಎಂದು ತಿಳಿಯುವುದು ಹೇಗೆ?

A

ಬಾರ್ಡರ್‌ಲೈನ್ ಪರ್ಸನ್ಯಾಲಿಟಿ ಡಿಸಾರ್ಡರ್ (ಬಿಪಿಡಿ) ಹೊಂದಿದ ವ್ಯಕ್ತಿ ಭಾವನೆಗಳನ್ನು ನಿಭಾಯಿಸಲು ಮತ್ತು ನಿಯಂತ್ರಿಸಲು ಕಷ್ಟಪಡುತ್ತಾರೆ. ಬೇರೆಯವರು ಸಹಜವಾಗಿ ಪ್ರತಿಕ್ರಿಯಿಸುವ ಸ್ಥಿತಿಗಳಿಗೆ ಅವರು ಅತಿಯಾದ ಕೋಪದಿಂದ ಅಥವಾ ಅತಿಯಾದ ಸಂತೋಷದಿಂದ ಪ್ರತಿಕ್ರಿಯಿಸಬಹುದು. ಪದೇ ಪದೇ ಲಹರಿ ಬದಲಿಸಬಹುದು ಮತ್ತು ಆವೇಷದಿಂದ ನಿರ್ಧಾರ ತೆಗೆದುಕೊಳ್ಳಬಹುದು. ಬೇರೆಯವರನ್ನು ಸುಲಭವಾಗಿ ಪೂಜಿಸುವ ಮತ್ತು ತ್ವರಿತವಾಗಿ ಅವಮಾನಿಸುವ ಪ್ರವೃತ್ತಿಯಿಂದಾಗಿ ಅವರು ಸ್ಥಿರವಾದ ಸಂಬಂಧ ನಿರ್ವಹಿಸಲು ಪರದಾಡುತ್ತಾರೆ.

ಎಲ್ಲ ವ್ಯಕ್ತಿತ್ವದ ಖಾಯಿಲೆಗಳೊಂದಿಗೆ ಅವರು ಬಿಪಿಡಿಯ ನಾನಾ ಲಕ್ಷಣಗಳನ್ನು ಜೀವನ ಪರ್ಯಂತ ಹೊಂದಿರಬಹುದು. ರೋಗ ಲಕ್ಷಣದ ವೈವಿಧ್ಯತೆ ಮತ್ತು ಆಳದಿಂದಾಗಿ ಬಿಪಿಡಿ ಹೊಂದಿರುವ ವ್ಯಕ್ತಿಯನ್ನು ಗುರುತಿಸುವುದು ಕಠಿಣ ಮತ್ತು ಸವಾಲು. ಯಾವುದೇ ಬಗೆಯ ಗೊಂದಲಗಳನ್ನು ನಿವಾರಿಸಲು ತರಬೇತಿ ಹೊಂದಿದ ವೈದ್ಯಕೀಯ ವೃತ್ತಿಪರರಿಂದ ತಪಾಸಣೆ ಉತ್ತಮ. 

Q

ಗಡಿರೇಖೆಯ ವ್ಯಕ್ತಿತ್ವದೋಷದ ಗುಣಲಕ್ಷಣಗಳೇನು?

A

ಭಾವನಾತ್ಮಕ ಅಸ್ಥಿರತೆ/ವಿಪ್ಲವತೆ ಬಿಪಿಡಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣ. ವ್ಯಕ್ತಿ ಅತಿಯಾಗಿ ಪ್ರತಿಕ್ರಿಯಿಸಬಹುದು ಮತ್ತು ತೀವ್ರವಾದ ಮನೋಲಹರಿ ಬದಲಾವಣೆಗೆ ಒಳಗಾಗಿ, ಕೆಲ ಗಂಟೆಗಳಲ್ಲಿ ಅದನ್ನು ಕಳೆದುಕೊಳ್ಳಬಹುದು. ಅವರ ಮನೋಲಹರಿ ಮತ್ತು ವರ್ತನೆ ಅನಿರೀಕ್ಷಿತ ಹಾಗೂ ಅಸಮಂಜಸವಾಗಿರುತ್ತದೆ. ಅವರು ಬೇರೆಯವರ ಪದಗಳನ್ನು ಅಥವಾ ಕ್ರಿಯೆಗಳನ್ನು ವೈಯಕ್ತಿಕ ಅವಮಾನ ಅಥವಾ ತೀರ್ಮಾನಕ್ಕಾಗಿ ಅನುಕರಿಸಬಹುದು . ಇದು ಅವರನ್ನು ದುಖಃ ಅಥವಾ ಸಿಟ್ಟುಗೊಳಿಸಬಹುದು.

ಇತರೆ ಕೆಲ ಲಕ್ಷಣಗಳೆಂದರೆ (ವ್ಯಕ್ತಿಯ ವಯಸ್ಕ ಬದುಕಿನ): ಗುರುತಿನ ಗೊಂದಲ, ಇದನ್ನು ಮೌಲ್ಯಗಳು, ವರ್ತನೆ, ಸ್ನೇಹ, ಲೈಂಗಿಕ ಗುರುತು ಮತ್ತು ಭವಿಷ್ಯದ ಆಯ್ಕೆಗಳಲ್ಲಿ ಕಾಣಬಹುದು. ಅವರು ಯಾರೆಂದು, ಏನನ್ನು ಇಷ್ಪಪಡುತ್ತಾರೆ, ಏನನ್ನು ನಂಬುತ್ತಾರೆಂದು ಸ್ಪಷ್ಟ ಚಿತ್ರಣ ಹೊಂದಿರುವುದಿಲ್ಲ. ಅವರ ವ್ಯಕ್ತಿತ್ವ ಬದಲಾವಣೆ ಅವರು ಇಟ್ಟುಕೊಂಡ ಪರಿಸರ ಅವಲಂಬಿಸಿರುತ್ತದೆ.

ಅಸ್ಥಿರ ಸಂಬಂಧದ ದೀರ್ಘ ಮಾದರಿ

ತಪ್ಪು ಕಲ್ಪನೆ, ತಿರಸ್ಕಾರ ಅಥವಾ ಶೂನ್ಯದ ಭಾವ ಮರುಕಳಿಸುವಿಕೆ. ಅವರ ಪ್ರೀತಿಪಾತ್ರರು ತ್ಯಜಿಸಿದ ಭಾವದಿಂದ ಭಯ. ಸಂಬಂಧ ಉಳಿಸಿಕೊಳ್ಳಲು ಯತ್ನಿಸುವುದು. ಲೆಕ್ಕವಿಲ್ಲದೆ ಖರ್ಚುಮಾಡುವುದು, ಸಾಹಸ, ಅಂಗಡಿ ಕಳ್ಳತನ, ಮತ್ತು ಅಸುರಕ್ಷಿತ ಲೈಂಗಿಕತೆ ಮೊದಲಾದವುಗಳ ಆಸೆ ಮತ್ತು ಪ್ರಚೋದನೆ

ಅವರು ಅವರ ಬದುಕಿನ ಜೊತೆ ಮತ್ತು ಅಗತ್ಯವಿರುವ ಸುತ್ತ ಜನರ ಅಗತ್ಯತೆಗಳಿಗೆ ಸಹಕರಿಸುತ್ತಿಲ್ಲ ಎಂದು ಪ್ರಬಲವಾಗಿ ನಂಬುವುದು

ಪ್ರದೇಶದ ಮಿತಿಯಿಲ್ಲದೆ ಸುತ್ತಲಿನ ಜನರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ವಿಂಗಡಿಸುವುದು. ಅವರ ಕುರಿತು ಮತ್ತು ಇತರರ ಕುರಿತು ಈ ವಿಭಾಗದಲ್ಲಿ ವಿಂಗಡಿಸಲು ಅನಿಶ್ಚಿತವಾಗಿರುವುದು. 

ಸ್ವಯಂ ಹಾನಿ ಅಥವಾ ಆತ್ಮಹತ್ಯೆ ಯತ್ನದ ವರ್ತನೆ(ಬಿಪಿಡಿಯವರಲ್ಲಿ ಆತ್ಮಹತ್ಯೆ ಪ್ರಮಾಣ ಶೇ.೧೫-೨೦)

ಒತ್ತಡದ ಸಮಯದಲ್ಲಿ ವಿಭಜನೆ, ಒತ್ತಡ ಹೋಗಲಾಡಿಸುವ ಘಟನೆಗಳಿಂದ ದೂರ ಉಳಿಯುವುದು. ನಂತರ ಅದರ ನೆನಪು ಇಟ್ಟುಕೊಳ್ಳದಿರುವುದು

ಬಿಪಿಡಿ ತಪಾಸಣೆಗೆ ಸೂಚನೆ, ಈ ಲಕ್ಷಣಗಳು ವ್ಯಕ್ತಿಯ ವಯಸ್ಕ ಬದುಕಿನುದ್ದಕ್ಕೂ ಇರಬೇಕು.

Q

ಗಡಿರೇಖೆಯ ವ್ಯಕ್ತಿತ್ವದೋಷದ ತಪಾಸಣೆ

A

ಒಂದೇ ಪರೀಕ್ಷೆಯಿಂದ ಬಿಪಿಡಿ ಪತ್ತೆ ಸಾಧ್ಯವಿಲ್ಲ. ಮನೋವೈದ್ಯರು ಮೊದಲು ಇತರೆ ರೋಗಗಳಾದ ಮನೋವ್ಯಾಧಿ, ಮಾದಕವ್ಯಸನ, ಖಿನ್ನತೆ, ತಿನ್ನುವ ಖಾಯಿಲೆ, ಆತಂಕ ಮತ್ತು ಇತರೆ ವೈಯಕ್ತಿಕ ಖಾಯಿಲೆಗಳನ್ನು ತಳ್ಳಿ ಹಾಕುವ ಪರೀಕ್ಷೆಗಳನ್ನು ನಡೆಸುತ್ತಾರೆ. ಆದಾಗ್ಯೂ, ಕೆಲ ಪ್ರಕರಣಗಳಲ್ಲಿ ಈ ಖಾಯಿಲೆಗಳು ಬಿಪಿಡಿ ಜೊತೆಗೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯ ವರ್ತನೆಗೆ ಕೊಡುಗೆ ನೀಡುವ ಈ ಎಲ್ಲ ಖಾಯಿಲೆಗಳನ್ನು ತಳ್ಳಿ ಹಾಕಲು ವೈದ್ಯರು ತಪಾಸಣೆ ನಡೆಸುವ ಸಾಧ್ಯತೆಯಿದೆ.

ಈ ತಪಾಸಣೆ ರೋಗಿಯೊಂದಿಗೆ ನಡೆಸುವ ದೀರ್ಘವಾದ ಸಂವಾದವನ್ನು ಅವಲಂಬಿಸಿರುತ್ತದೆ. ವೈದ್ಯರು ಬಿಪಿಡಿಗೆ ಸಂಬಂಧಿತ ಪ್ರಶ್ನೆಗಳನ್ನು ವ್ಯಕ್ತಿಗೆ ಕೇಳುವ ಮೂಲಕ ತಪಾಸಣೆ ನಡೆಸುತ್ತಾರೆ. ಬಿಪಿಡಿ ಖಚಿತಗೊಳಿಸಲು ವ್ಯಕ್ತಿ ಕನಿಷ್ಟ ೫ ಲಕ್ಷಣಗಳನ್ನಾದರೂ ಹೊಂದಿರಬೇಕು.

Q

ಬಿ ಪಿ ಡಿ ಯಿಂದಾಗುವ ಪರಿಣಾಮ

A

ಬಿಪಿಡಿ ಹೊಂದಿರುವ ವ್ಯಕ್ತಿ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧ ನಿಭಾಯಿಸಲು ಕಷ್ಟಪಡುತ್ತಾನೆ. ಇದು ನಿತ್ಯದ ಬದುಕು, ಕೆಲಸ ಮತ್ತು ಸಂಬಂಧಗಳಿಗೆ ಪರಿಣಾಮ ಬೀರುತ್ತದೆ. ಅವರು, ತನ್ನ ಅತಿಯಾದ ಆತಂಕ ಮತ್ತು ಆಳವಾದ ಭಾವನಾತ್ಮಕ ಪ್ರತಿಕ್ರಿಯೆಯಿಂದಾಗಿ ಉದ್ಯೋಗ ಅಥವಾ ಸಂಬಂಧವನ್ನು ನಿಭಾಯಿಸಲು ಅಸಮರ್ಥರಾಗುತ್ತಾರೆ. ತಮ್ಮ ಮಣಿಕಟ್ಟುಗಳನ್ನು ತಾವೇ ಸೀಳಿಕೊಳ್ಳುವುದು, ಅತಿಯಾಗಿ ಔಷಧ ಸೇವಿಸುವುದು ಅಥವಾ ಮದ್ಯ ಸೇವನೆ, ಆತ್ಮಹತ್ಯೆಗೆ ಶರಣಾಗುವುದು ಮೊದಲಾದವುಗಳು ಮೂಲಕ ತಮಗೆ ತಾವೆ ಹಾನಿ ಮಾಡಿಕೊಳ್ಳುತ್ತಾರೆ. ಬಿಪೋಲಾರ್‌ ಡಿಸಾರ್ಡರ್‌, ಖಿನ್ನತೆ, ಅನೊರೆಕ್ಸಿಯಾ ಅಥವಾ ಬುಲಿಮಿಯಾ ಮತ್ತು ಆತಂಕ ಮೊದಲಾದ ಮಾನಸಿಕ ಅಸ್ವಸ್ಥತೆಗಳಿಗೂ ತುತ್ತಾಗಬಹುದು.

 

Q

ಬಿಪಿಡಿಗೆ ಚಿಕಿತ್ಸೆ

A

ಬಿಪಿಡಿಯನ್ನು ಔಷಧ, ಚಿಕಿತ್ಸೆ ಮತ್ತು ಬೆಂಬಲಗಳ ಸಮ್ಮಿಶ್ರಣದಿಂದ ಚಿಕಿತ್ಸಿಸಲಾಗುತ್ತದೆ. ವೈದ್ಯರು ರೋಗಿಗೆ ಮನೋಲಹರಿ ನಿಯಂತ್ರಕಗಳು(ಮನೋಲಹರಿ ಬದಲಾವಣೆ ಕಡಿಮೆ ಮಾಡಲು) ಅಥವಾ ಆಂಟಿ ಸೈಕೊಟಿಕ್‌ಗಳನ್ನು(ಭ್ರಮೆ ಮತ್ತು ಏರಿಳಿತ ಕಡಿಮೆ ಮಾಡಲು)ಸೂಚಿಸಬಹುದು. ಇದರೊಂದಿಗೆ ಈ ಖಾಯಿಲೆ ಹೊಂದಿರುವ ವ್ಯಕ್ತಿಗಳಿಗೆ ಅವರ ಭಾವನೆ ಮತ್ತು ಸಂಬಂಧಗಳು ನಿರ್ವಹಿಸಲು ಸಾಧ್ಯವಾಗುವಂತೆ ಮಾಡುವ ಥೆರೆಪಿಗಳನ್ನು ಪಡೆಯಲು ಸೂಚಿಸಬಹುದು.

ಬಿಪಿಡಿ ಹೊಂದಿರುವ ವ್ಯಕ್ತಿಗಳು ಖಿನ್ನತೆ, ಆತಂಕ, ಪಿಟಿಎಸ್‌ಡಿ, ತಿನ್ನುವ ಖಾಯಿಲೆ, ಬೈಪೋಲಾರ್‌ ಖಾಯಿಲೆ, ಮಾದಕ ವ್ಯಸನ ಮೊದಲಾದ ಸಂಕಷ್ಟಗಳಿಗೆ ತುತ್ತಾಗಬಹುದು. ಅಂಥ ಪ್ರಕರಣಗಳಲ್ಲಿ ಬಿಪಿಡಿಗೆ ಚಿಕಿತ್ಸೆ ವ್ಯಕ್ತಿ ಹೊಂದಿದ ಇತರೆ ಯಾವುದೇ ಖಾಯಿಲೆಯ ಚಿಕಿತ್ಸೆಯೊಂದಿಗೆ ಸಹಕರಿಸಬೇಕಾಗುತ್ತದೆ. ಕೆಳಗಿನ ಚಿಕಿತ್ಸೆಗಳು ಬಿಪಿಡಿ ಹೊಂದಿರುವ ವ್ಯಕ್ತಿಗಳಿಗೆ ಸಹಕಾರಿ:

ಅರಿವಿನ ವರ್ತನೆ ಚಿಕಿತ್ಸೆ(Cognitive Behavioral Therapy): ರೋಗಿಗಳಿಗೆ ಅವರ ಕುರಿತು ಅವರು ಹೊಂದಿರುವ ಮೂಲ ನಂಬಿಕೆಗಳನ್ನು ಬದಲಿಸಲು ಚಿಕಿತ್ಸಕರು ಸಹಾಯ ಮಾಡುತ್ತಾರೆ. ಈ ಮೂಲ ನಂಬಿಕೆಗಳ ಬದಲಾವಣೆ ರೋಗಿಗೆ ಅವರ ಕುರಿತು ಗ್ರಹಿಕೆಯನ್ನು ಬದಲಿಸಲು, ಇತರರೊಂದಿಗೆ ಸುಲಭವಾಗಿ ಬೆರೆಯಲು ಸಹಾಯ ಮಾಡುತ್ತದೆ.

ಡೈಲೆಕ್ಟಿಕ ಬಿಹೇವಿಯರ್‌ ಥೆರಪಿ(Dialectical Behavior Therapy): ಚಿಕಿತ್ಸಕರು ಯೋಚನೆಗಳನ್ನು ಅಥವಾ ರೋಗಿಯಲ್ಲಿ ಸಮಸ್ಯೆಯುನ್ನುಂಟು ಮಾಡುತ್ತಿರುವ ನಂಬಿಕೆಯನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ಚಿಕಿತ್ಸಕರು ರೋಗಿಗೆ ಅವರನ್ನು ಅರ್ಥೈಸಿಕೊಳ್ಳಲು ಮತ್ತು ಸ್ವೀಕರಿಸಲು ಮಾಗದರ್ಶನ ನೀಡುತ್ತಾರೆ. ಈ ಹಂತದ ಬಳಿಕ ರೋಗಿಗಳು ಅವರ ಬದುಕಿನಲ್ಲಿ ಮಾಡಿಕೊಳ್ಳಬೇಕಾದ ಬದಲಾದವಣೆಯನ್ನು ಗುರುತಿಸುತ್ತಾರೆ.

Q

ಬಿಪಿಡಿಯೊಂದಿಗೆ ಬದುಕುವುದು

A

ನೀವು ಬಿಪಿಡಿ ಹೊಂದಿದ್ದೀರಿ ಎಂದು ಚಿಂತಿಸುತ್ತಿದ್ದರೆ ಅಥವಾ ನೀವು ಇದರಿಂದ ಬಳಲುತ್ತಿದ್ದರೆ ಎಂದೆಗುಂದಬೇಡಿ. ವೈದ್ಯಕೀಯ ಆರೈಕೆ ಮತ್ತು ಕುಟುಂಬ ಮತ್ತು ಸ್ನೇಹಿತರು ನಿಮಗೆ ಚಟುವಟಿಕೆಯುತ ಬದುಕು ನಡೆಸಲು ಬೆಂಬಲ ನೀಡುತ್ತಾರೆ. ಇಲ್ಲಿ ನಿಮಗೆ ನೀವು ಸಹಾಯ ಮಾಡಿಕೊಳ್ಳಬಹುದಾದ ಒಂದಷ್ಟು ಸಲಹೆಗಳಿವೆ:

ಬೆಂಬಲಿಸುವ ವ್ಯವಸ್ಥೆ ಹುಡುಕಿ. ನೀವು ನಂಬುವ ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ಜೊತೆ ಮಾತನಾಡಿ ನಿಮ್ಮ ತಪಾಸಣೆ ಕುರಿತು ಹೇಳಿ. ಅವರಿಗೆ ಖಾಯಿಲೆ ಕುರಿತು ಹೆಚ್ಚು ತಿಳಿದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ವೈದ್ಯರ ಬಳಿ ಮುಂದಿನ ಭೇಟಿಯ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳಲು ಹೇಳಿ.

ನೀವು ಒತ್ತಡದ ಕಾರ್ಯಕ್ರಮಗಳಲ್ಲಿ ನಿಮ್ಮ ಪ್ರತಿಕ್ರಿಯೆ ಬಗ್ಗೆ ಗೊಂದಲಗೊಳ್ಳಬಹುದು. ನಿಮ್ಮ ಪಾಲುದಾರ ಅಥವಾ ಸ್ನೇಹಿತ ಜಗತ್ತಿನಲ್ಲಿ ಅತ್ಯಂತ ಪ್ರೀತಿಯ ಅಥವಾ ಅತಿ ಕೆಟ್ಟ ವ್ಯಕ್ತಿ ಎಂದು ಭಾವಿಸಬಹುದು. ಕೆಲವು ವೇಳೆ ಹತಾಶೆಯಿಂದ ಹೊರಬರಲು ನೀವು ಏನಾದರು ಮಾಡಲು ಬಯಸಬಹುದು. ಅಂಥ ಸ್ಥಿತಿಯಲ್ಲಿ ನೀವು ವೈದ್ಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನ ತೆಗೆದುಕೊಳ್ಳಿ. ಅಪಾಯದ ಅಥವಾ ಪ್ರೇರೇಪಿಸುವ ಯಾವುದೇ ಕೆಲಸ ಮಾಡಬೇಡಿ. ನೀವು ಕಡಿಮೆ ಅಥವಾ ಕೆಳಗಿನವರು ಎನ್ನಿಸಿದಾಗ ನಿಮ್ಮನ್ನು ಬೆಂಬಲಿಸುವ ಸ್ನೇಹಿತ ಅಥವಾ ಸಂಬಂಧಿ ಬಳಿ ಮಾತನಾಡಿ.

ನಿತ್ಯದ ಯೋಜನೆಗಳನ್ನು ರೂಪಿಸಲು ವೈದ್ಯರ ಬಳಿ ಮಾತನಾಡಿ. ನಿಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಿ. ನೀವು ಖುಷಿಪಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ಸೂಚಿತ ಚಿಕಿತ್ಸೆಯೊಂದಿಗೆ ಸಹಕರಿಸುವುದು ಮತ್ತು ನೀಡಿದ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವುದು ರೋಗವನ್ನು ನಿಭಾಯಿಸಲು ಅತ್ಯುತ್ತಮ ಮಾರ್ಗ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ಚಿಕಿತ್ಸಕರನ್ನು ಭೇಟಿ ಮಾಡಿದರೆ, ನಿಮ್ಮ ಸಮಸ್ಯೆ ಕುರಿತು ಮಾತನಾಡಿ ಮತ್ತು ಯಾವುದೇ ಮಾಹಿತಿಯನ್ನು ಮುಚ್ಚಿಡಬೇಡಿ. ಅದಿಲ್ಲವಾದರೆ ಚಿಕಿತ್ಸಕರಿಗೆ ನಿಮ್ಮನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಅವರು ನಿಮಗೆ ಸಹಾಯ ಮಾಡಲು ಯತ್ನಿಸುತ್ತಾರೆ.

ನಿಮ್ಮ ಮನೋಲಹರಿ ಬದಲಾವಣೆ ಮತ್ತು ಇತರರೊಂದಿಗೆ ಸಂಬಂಧ ನಿಮ್ಮನ್ನು ಕೆಟ್ಟವರಾಗಿಸುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಿ. ಇದು ನಿಮ್ಮ ತಪ್ಪಲ್ಲ. 

Q

ಬಿಪಿಡಿ ಹೊಂದಿರುವವರ ಆರೈಕೆ

A

ಬಿಪಿಡಿ ಹೊಂದಿರುವ ಹೆಚ್ಚಿನ ರೋಗಿಗಳು ಸಹಾಯ ಎದುರು ನೋಡಲು ನಿರಾಕರಿಸುತ್ತಾರೆ. ಅವರಿಗೆ ಅವರ ವರ್ತನೆ ಅವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಆಯಾಸ ಉಂಟು ಮಾಡುತ್ತಿದೆ ಎಂಬುದನ್ನು ಅರಿಯಲು ಸಾಧ್ಯವಾಗುವುದಿಲ್ಲ. ಆಯಾಸ ಮತ್ತು ವರ್ತನೆ ಬದಲಿಸಿಕೊಳ್ಳಲು ರೋಗಿಯ ಮನಸ್ಸಿಲ್ಲದಿರುವಿಕೆ ಆರೈಕೆದಾರರಿಗೆ ಹೊರೆಯಾಗಬಹುದು.

ಬಿಪಿಡಿ ರೋಗಿಯನ್ನು ಹೊಂದಿರುವ ಹೆಚ್ಚಿನ ಕುಟುಂಬಗಳು ಒತ್ತಡ, ಅಸಹಾಯಕತೆ ಮತ್ತು ಹತಾಶೆ ಭಾವನೆಯನ್ನು ವ್ಯಕ್ತಪಡಿಸುತ್ತವೆ. ಅವರ ಪ್ರೀತಿಪಾತ್ರರರು ತಮ್ಮನ್ನು ತಾವು ಹಾನಿಗೊಳಿಸಿಕೊಳ್ಳುವುದು ಮತ್ತು ಸಾಯಿಸಿಕೊಳ್ಳುವುದನ್ನು ನೋಡಲು ಕಷ್ಟವಾಗುತ್ತದೆ. ಈ ಅನುಭವದಿಂದ ಉಂಟಾಗುವ ಆಯಾಸ ರೋಗಿಯ ವರ್ತನೆಯನ್ನು ಅವಲಂಬಿಸಿರುತ್ತದೆ. ರೋಗಿ ಒಂದು ಕ್ಷಣ ಅವರ ಕುಟುಂಬದ ಸದಸ್ಯರನ್ನು ಪ್ರೀತಿಸಬಹುದು ಮತ್ತು ಇನ್ನೊಂದು ಕ್ಷಣದಲ್ಲಿ ದ್ವೇಷಿಸಬಹುದು. ರೋಗಿಗಳನ್ನು ಎಲ್ಲಿ ನಿಂತು ಗಮನಿಸಬೇಕು, ಬೆಂಬಲಿಸಬೇಕು ಎಂಬುದನ್ನು ಗುರುತಿಸಲು, ಕುಟುಂಬ ಕಷ್ಟಪಡುತ್ತದೆ.

ಆರೈಕೆದಾರರು ಅವರ ಪ್ರೀತಿಪಾತ್ರರ ಖಾಯಿಲೆ ಕುರಿತು ಪ್ರಬಲವಾಗಿ ತಪ್ಪಿತಸ್ಥ ಭಾವ ಹೊಂದಿರಬಹುದು. ಬಿಪಿಡಿ ಬಾಲ್ಯದಲ್ಲಿನ ನಿಂದನೆ ಅಥವಾ ಟ್ರೌಮದಿಂದ ಆರಂಭವಾಗಬಹುದು ಮತ್ತು ಈ ಖಾಯಿಲೆ ಹೊಂದಿದವರೊಂದಿಗೆ ರೋಗಿ ಆನುವಂಶೀಯ ಸಂಬಂಧ ಬೆಳೆಸಿದರೆ ಖಾಯಿಲೆ ಹೆಚ್ಚಾಗುವ ಸಾಧ್ಯತೆಯಿದೆ. ಇದು ಪಾಲಕರಿಗೆ ಜವಬ್ದಾರಿಯುತ ಭಾವನೆ ನೀಡಬಹುದು ಮತ್ತು ಪ್ರತ್ಯೇಕವಾಗಿ ಈ ಸಮಸ್ಯೆಗೆ ಪರಿಹಾರ ಹುಡುಕುವಂತೆ ಮಾಡುತ್ತದೆ.

ರೋಗದ ಕುರಿತು ತಿಳಿಯಿರಿ: ಬಿಪಿಡಿ ಅತ್ಯಂತ ಗಂಭೀರ ಸಮಸ್ಯೆ. ಈ ಖಾಯಿಲೆ ಕುರಿತು ಸಾಮಾನ್ಯವಾಗಿ ನಂಬಿಕೆ ಹೊಂದಿರುವ ಹಲವು ತಪ್ಪು ಕಲ್ಪನೆಗಳಿವೆ. ಬಿಪಿಡಿ ಹೊಂದಿರುವ ವ್ಯಕ್ತಿಗಳಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಿಲ್ಲ. ಕೇವಲ ಗಮನಕ್ಕಾಗಿ ಅವರು ತಮ್ಮನ್ನು ತಾವು ಕೊಲ್ಲುವಂತೆ ನಟಿಸುತ್ತಾರೆ. ಅವರು ಹಠಮಾರಿಗಳು ಮತ್ತು ತಮ್ಮ ವರ್ತನೆ ಬದಲಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇದು ನಿಮಗೆ ಸಂಕಷ್ಟದಲ್ಲಿರುವ ನಿಮ್ಮ ಪ್ರೀತಿಪಾತ್ರರನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ.

ಆರೈಕೆದಾರರಾಗಿ, ಪರಿಸ್ಥಿತಿಗೆ ನೀವು ಕಾರಣರಲ್ಲ ಎಂಬುದನ್ನು ಸ್ವೀಕರಿಸಲು ಪ್ರಯತ್ನಿಸಿ ಮತ್ತು ನಿಮಗೆ ನೀವು ಪ್ರತಿಯೊಂದು ನಿಗದಿಪಡಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಮಾಡಬಹುದಾಗಿದ್ದೆಂದರೆ ರೋಗಿಗೆ ಚಿಕಿತ್ಸೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬಹುದು ಮತ್ತು ಚಿಕಿತ್ಸೆ ಯೋಜನೆಗೆ ಬದ್ಧರಾಗಿದ್ದಾರಾ ಎಂಬುದನ್ನು ಖಚಿತಪಡಿಸಬಹುದು. ಎಲ್ಲ ಸಮಯದಲ್ಲಿ ಎಚ್ಚರದಿಂದಿರಲು ಪ್ರಯತ್ನಿಸಿ.

ವಾಸ್ತವವೆಂದರೆ ನಿಮ್ಮ ಪ್ರೀತಿಪಾತ್ರರು ನಿಮಗೆ ವಿಲಕ್ಷಣ ಮತ್ತು ಅವಿವೇಕ ಎಂಬಂತೆ ವರ್ತಿಸುವ ಖಾಯಿಲೆಯಿದು. ಬಿಪಿಡಿಯಲ್ಲಿನ ವಿಭಜನೆಯಿಂದಾಗಿ ಅವರು ಒಮ್ಮೆ ನಿಮ್ಮನ್ನು ಪೂಜಿಸಬಹುದು ಮತ್ತು ಮರುದಿನ ನಿಮ್ಮನ್ನು ದ್ವೇಷಿಸಬಹುದು. ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಮತ್ತು ಇದು ನಿಮ್ಮ ವೈಫಲ್ಯ ಎಂದು ಭಾವಿಸಬೇಡಿ.

ಅವರ ಮನೋಲಹರಿಯಲ್ಲಿನ ಅಸ್ಥಿರತೆಯಿಂದಾಗಿ ರೋಗಿಯ ಜೊತೆಗೆ ಸಂವಹನ ಸವಾಲಾಗಿರಬಹುದು. ನೇರವಾಗಿರಿ. ಮಾತನಾಡುವಾಗ ಸ್ಪಷ್ಟವಾಗಿರಿ ಮತ್ತು ಸಣ್ಣ ಅನರ್ಥಕ್ಕೆ ಯಾವುದೇ ಜಾಗವಿಲ್ಲದಂತೆ ವಾಕ್ಯಗಳಲ್ಲಿ ಮಾತನಾಡಿ. ನಿಮ್ಮ ಮಾತು ಅನರ್ಥವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ರೋಗಿಯ ಜೊತೆ ಮಾತನಾಡುವಾಗ ವಿಶ್ವಾಸಾರ್ಹವಾಗಿರಿ.

ಅವರನ್ನು ಖುಷಿಪಡಿಸಲು ಹೊಗಳಬೇಡಿ. ನೀವು ಅವರಲ್ಲಿ ಇಷ್ಟಪಡುವ ಅಥವಾ ನಂಬುವ ವರ್ತನೆಯನ್ನು ಹುಡುಕಿ ಮತ್ತು ಅದರ ಕುರಿತು ಪ್ರಾಮಾಣಿಕವಾಗಿ ಮಾತನಾಡಿ. ಇದು ಅವರ ಸ್ವಯಂ ಚಿತ್ರಣಕ್ಕೆ ಸಹಾಯ ಮಾಡಬಹುದು ಮತ್ತು ನೀವು ಅವರ ಕುಳಿತು ಕಾಳಜಿ ಹೊಂದಿರುವಿರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ.

ರೋಗಿಯ ದಿನಚರಿಯಲ್ಲಿ ತತಕ್ಷಣದ ಬದಲಾವಣೆ ಮಾಡಲು ಯತ್ನಿಸಬೇಡಿ. ಈ ಖಾಯಿಲೆ ಹೊಂದಿರುವ ವ್ಯಕ್ತಿಗಳು ತಕ್ಷಣದ ಬದಲಾವಣೆಗೆ ಒಗ್ಗಿಕೊಳ್ಳಲು ಕಷ್ಟಪಡಬಹುದು. ನೀವು ರೋಗಿಗೆ ಆಗುವ ಬದಲಾವಣೆ ಕುರಿತು ತಿಳಿದುಕೊಂಡರೆ ರೋಗಿಯನ್ನು ಅದಕ್ಕೆ ಸಿದ್ಧಪಡಿಸಿದೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org