ಗಡಿರೇಖೆಯ ವ್ಯಕ್ತಿತ್ವ ದೋಷ (ಬಾರ್ಡರ್‌ಲೈನ್ ಪರ್ಸನ್ಯಾಲಿಟಿ ಡಿಸಾರ್ಡರ್): ಕಲ್ಪನೆ ಮತ್ತು ವಾಸ್ತವ

ಕಲ್ಪನೆ: ಬಿಪಿಡಿಯನ್ನು ಚಿಕಿತ್ಸೆಗೊಳಪಡಿಸಲು ಸಾಧ್ಯವಿಲ್ಲ

ವಾಸ್ತವ: ಬಿಪಿಡಿಯನ್ನು ಔಷಧ, ಥೆರೆಪಿ ಮತ್ತು ಭಾವನಾತ್ಮಕ ಬೆಂಬಲದೊಂದಿಗೆ ಚಿಕಿತ್ಸೆಗೊಳಪಡಿಸಬಹುದು. ಚಿಕಿತ್ಸೆ ವ್ಯಕ್ತಿಗೆ ಪರಿಸ್ಥಿತಿ ನಿಭಾಯಿಸಲು ಮತ್ತು ಬದುಕಿಗೆ ಅಗತ್ಯ ಗುಣಮಟ್ಟಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಖಾಯಿಲೆಯ ಗಂಭೀರತೆ ಆಧರಿಸಿ ಮತ್ತು ಚಿಕಿತ್ಸೆಗೆ ಸ್ಪಂದನೆ ಆಧರಿಸಿ ವ್ಯಕ್ತಿ ಅಭಿವೃದ್ಧಿ ತೋರಿಸಲು ೬ ತಿಂಗಳಿನಿಂದ ಒಂದು ವರ್ಷ ಕಾಲ ತೆಗೆದುಕೊಳ್ಳಬಹುದು.

ಕಲ್ಪನೆ: ಆತ್ಮಹತ್ಯೆ ಪ್ರವೃತ್ತಿ ಹೊಂದಿರುವ ವ್ಯಕ್ತಿಗಳೆಲ್ಲ ಬಿಪಿಡಿ ಹೊಂದಿರುತ್ತಾರೆ.

ವಾಸ್ತವ: ಬಿಪಿಡಿ ಹೊಂದಿರುವ ವ್ಯಕ್ತಿ ಬಲವಂತವಾಗಿ ತನಗೆ ಹಾನಿ ಮಾಡಿಕೊಳ್ಳಲು ಯತ್ನಿಸಬಹುದು. ಆದಾಗ್ಯೂ, ಆತ್ಮಹತ್ಯಗೆ ಯತ್ನಿಸುವ ವ್ಯಕ್ತಿಗಳೆಲ್ಲ ಬಿಪಿಡಿ ರೋಗಿಗಳಾಗಿರುವುದಿಲ್ಲ. ಬಿಪಿಡಿ ತಪಾಸಣೆ ವೇಳೆ ವ್ಯಕ್ತಿ ತೋರುವ ಇತರೆ ಲಕ್ಷಣಗಳನ್ನು ತಪಾಸಣೆ ಮಾಡಬಹುದು.

ಕಲ್ಪನೆ: ಬಿಪಿಡಿ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯಗೆ ಯತ್ನಿಸಿದಾಗ ನಿಜವಾಗಿಯೂ ಸಾಯಲು ಬಯಸುವುದಿಲ್ಲ. ಅವರು ಕೇವಲ ಗಮನ ಸೆಳೆಯಲು ಯತ್ನಿಸುತ್ತಾರೆ.

ವಾಸ್ತವ: ಆತ್ಮಹತ್ಯೆಗೆ ಶರಣಾಗುವ ಇತರೆ ಸಾಕಷ್ಟು ವ್ಯಕ್ತಿಗಳಂತೆ ಬಿಪಿಡಿ ಹೊಂದಿರುವ ವ್ಯಕ್ತಿಯು ತನ್ನನ್ನು ತಾನು ಅಥವಾ ಅವಳು ಸಾಯಿಸಿಕೊಳ್ಳಲು ಯತ್ನಿಸುತ್ತಾರೆ. ಆ ಕ್ಷಣದಲ್ಲಿ ಅವರ ಯಾತನೆ ದೊಡ್ಡದಾಗಿದ್ದು ಅವರು ಜೀವ ಬದುಕಲು ಯೋಗ್ಯವಲ್ಲ ಎಂದು ಆಲೋಚಿಸುತ್ತಾರೆ. ಅವರು ತೀವ್ರವಾದ, ನೋವಿನ ಭಾವನೆಗೆ ಒಳಗಾಗಬಹುದು ಮತ್ತು ಆತ್ಮಹತ್ಯೆಯೊಂದೆ ದಾರಿ ಎಂದು ಭಾವಿಸಬಹುದು. ಆತ್ಮಹತ್ಯೆ ವರ್ತನೆ ಸಹಾಯಕ್ಕಾಗಿನ ಹತಾಶೆಯ ಕೂಗು.

ಕಲ್ಪನೆ: ಬಿಪಿಡಿ ಹೊಂದಿರುವವರು ಯಾವುದೇ ನೈಜ ಖಾಯಿಲೆ ಹೊಂದಿರುವುದಿಲ್ಲ. ಇತರರ ದಿಕ್ಕು ತಪ್ಪಿಸಲು ಹಾಗೆ ಮಾಡುತ್ತಾರೆ.

ವಾಸ್ತವ: ಬಿಪಿಡಿ ಮುಧುಮೇಹ ಅಥವಾ ಸಂಧಿವಾತದಂತೆ ಒಂದು ಖಾಯಿಲೆ. ಬಿಪಿಡಿ ಹೊಂದಿರುವ ವ್ಯಕ್ತಿ ಇತರರು ಊಹಿಸಲಾಗದ ಅಥವಾ ನಂಬಲಾಗದ ಮಾರ್ಗದಲ್ಲಿ ನಟಿಸಬಹುದು. ಇತರರಿಗೆ ಇದು ಇತರರನ್ನು ಹಾದಿ ತಪ್ಪಿಸುವ ಅಥವಾ ಗಮನ ಸೆಳೆಯುವ ಉದ್ದೇಶ ಹೊಂದಿರುವ ಪ್ರಜ್ಞಾಪೂರ್ವಕ ಆಯ್ಕೆಯಂತೆ ಕಾಣಿಸಬಹುದು. ಬಿಪಿಡಿ ಹೊಂದಿರುವ ವ್ಯಕ್ತಿ ಭಾವನೆ ಮತ್ತು ಸ್ವಯಂ ಚಿತ್ರಣದಲ್ಲಿ ಅಸ್ಥಿರತೆ ಹೊಂದಿರುತ್ತಾರೆ. ಅವರು ತಮ್ಮ ಕುರಿತು ಕೀಳುಭಾವನೆ ಹೊಂದಿರುತ್ತಾರೆ ಮತ್ತು ಅವರು ಪ್ರೀತಿಪಾತ್ರರಿಗೆ ಏನಾದರೂ ಸಹಾಯ ಮಾಡಲು ಅವರಲ್ಲಿನ ತಿರಸ್ಕಾರದ ಭಯ ಕಾಡುತ್ತದೆ. ಅವರ ಉದ್ದೇಶ ಹಾನಿ ಮಾಡುವುದು ಅಥವಾ ಇತರರನ್ನು ಹಾದಿ ತಪ್ಪಿಸುವುದು ಆಗಿರುವುದಿಲ್ಲ. ಆದರೆ ಸಹಾಯಕ್ಕೆ ಹತಾಶೆಯ ಕೂಗು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org