ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD) : ಮಿಥ್ಯ ಮತ್ತು ಸತ್ಯ

Published on

ಮಿಥ್ಯ: ಅತೀ  ಚುರುಕು ಮತ್ತು ಹುರುಪು ಇರುವ ಯಾವುದೇ ಮಗುವಿಗೆ  ADHD ಇರುತ್ತದೆ.  

ಸತ್ಯ: ಒಂದು ವೇಳೆ ಮಗುವಿಗೆ  ADHD ಇರುವ ಲಕ್ಷಣಗಳು ಕಾಣಿಸಿಕೊಂಡರೆ ,ಸಮಸ್ಯೆ ಇದೆ ಎಂದು ನಿರ್ಧರಿಸಲು  ತಜ್ಞರ ಅಭಿಪ್ರಾಯ  ಪಡೆಯಿರಿ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಮಗುವಿಗೂ  ADHDಯ ಸುಳ್ಳು ಆರೋಪ ಮಾಡಲಾಗುತ್ತಿದೆ. ತಜ್ಞರು ಬೇರೆ ಬೇರೆ ಸಂದರ್ಭಗಳಲ್ಲಿ ( ಮನೆ, ಶಾಲೆ ಮತ್ತು ಸಾಮಾಜಿಕವಾಗಿ  ) ಮಗುವಿನ ನಡವಳಿಕೆ  ಗಮನಿಸಿ  ಸಮಸ್ಯೆ ಪತ್ತೆ ಮಾಡುತ್ತಾರೆ.  ನಂತರ ಮಗುವಿಗೆ ಚಿಕಿತ್ಸೆ ಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ.   

ಮಿಥ್ಯ : ಮಕ್ಕಳಿಗೆ  ಮಾತ್ರ ADHD ಬರುತ್ತದೆ.

ಸತ್ಯ : ADHD ಸಾಮಾನ್ಯವಾಗಿ ಬಾಲ್ಯದಲ್ಲಿ ( ಏಳು ವರ್ಷ ವಯಸ್ಸಿನೊಳಗಿರುವ ಮಕ್ಕಳು) ಶುರುವಾಗುತ್ತದೆ. ಮಕ್ಕಳು ದೊಡ್ಡವರಾಗುತ್ತಾ  ಹೈಪರ್ ಆಕ್ಟಿವಿಟಿ ಮತ್ತು ಉದ್ವೇಗದ ನಡವಳಿಕೆ ಕಡಿಮೆಯಾಗಬಹುದು, ಆದರೆ ನಿರ್ಲಕ್ಷ್ಯದಿಂದಾಗಿ ಹಾಗೆ ಉಳಿಯಬಹುದು.  ದೊಡ್ಡವರಲ್ಲಿ ಸಹ  ADHD ಕಾಣಬಹುದು. ಬಹುತೇಕ ಜನರಲ್ಲಿ, ಅವರು ಚಿಕ್ಕವರಾಗಿದ್ದಾಗ ADHD ಪತ್ತೆ ಮಾಡದೇ ಅದಕ್ಕೆ ಯಾವುದೇ ಚಿಕಿತ್ಸೆ ಪಡೆಯದಿದ್ದಾಗ, ಈ ಸಮಸ್ಯೆ ಹಾಗೇ ಇರುತ್ತದೆ.  

ಮಿಥ್ಯ : ಇತರ ಮಾನಸಿಕ ಆರೋಗ್ಯ ಸ್ಥಿತಿಗೂ ADHD ಗೂ ಸಂಬಂಧವಿಲ್ಲ.

ಸತ್ಯ: ADHD ಗೆ ಚಿಕಿತ್ಸೆ ಪಡೆಯದ ಅಥವ ಸರಿಯಾದ ಚಿಕಿತ್ಸೆ ಸಿಗದ  ಮಕ್ಕಳು ಮಾನಸಿಕ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಈ ಮಕ್ಕಳಲ್ಲಿ ನಡವಳಿಕೆ ಸಮಸ್ಯೆ, ಮೂಡ್ ಡಿಸಾರ್ಡರ್, ಆತಂಕದ ಸಮಸ್ಯೆ ಮತ್ತು ಕಲಿಕೆಯ ಸಮಸ್ಯೆ ಇರಬಹುದು.   

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org