ದೌರ್ಬಲ್ಯಗಳು

ವೃದ್ಧಾಪ್ಯದ ಕಾಯಿಲೆಗಳು

ವೈಟ್ ಸ್ವಾನ್ ಫೌಂಡೇಶನ್

Q

ವೃದ್ಧಾಪ್ಯದ ಕಾಯಿಲೆಗಳು

A

ಈ ವಿಭಾಗವು ಜನರಿಗೆ ವಯಸ್ಸಾದಂತೆ ಕಾಡುವ ಮುಪ್ಪಿನ ಖಾಯಿಲೆಗಳಾದ (ವಯೋಮಾನ ಆಧಾರಿತ ಖಾಯಿಲೆಗಳು) ಆಲ್ಜೈಮರ್ಸ್ ಮತ್ತು ಮರೆಗುಳಿತನದ (dementia) ಕುರಿತು ಮಾಹಿತಿ ಹೊಂದಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೨೦೫೦ಕ್ಕೆ ೬೦ ವರ್ಷಕ್ಕಿಂತ ಮೇಲ್ಪಟ್ಟ ೨ ಶತಕೋಟಿ ಜನರಿರುತ್ತಾರೆ. ಇದರಲ್ಲಿ ೬೦ರ ವಯೋಮಾನದ ಮತ್ತು ಅದಕ್ಕಿಂತ ಅಧಿಕ ವಯಸ್ಸಿನ ಶೇ.೧೫ರಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುತ್ತದೆ.

ಆಲ್ಜೈಮರ್ಸ್ ಖಾಯಿಲೆಯು ಒಂದು ಕ್ಷೀಣಿಸುವ ಖಾಯಿಲೆಯಾಗಿದ್ದು ವಯಸ್ಸಾದಂತೆ ಅದರ ರೋಗ ಲಕ್ಷಣಗಳು ಹೆಚ್ಚಾಗುತ್ತ ಹೋಗುತ್ತದೆ ಹಾಗೂ ವ್ಯಕ್ತಿಯ ಜ್ಞಾಪಕ ಶಕ್ತಿ ಮತ್ತು ಜೀವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಈ ಖಾಯಿಲೆಯು ವ್ಯಕ್ತಿಯ ನೆನಪಿನ ಶಕ್ತಿ, ಮತ್ತು ಆಲೋಚನಾ ಶಕ್ತಿಯನ್ನು ಕುಗ್ಗಿಸುತ್ತದೆ. ವ್ಯಕ್ತಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳನ್ನು ಉಂಟು ಮಾಡುತ್ತದೆ ಮತ್ತು ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಗಂಭೀರವಾದ ಪರಿಣಾಮ ಬಿರುತ್ತದೆ.

ನೀವು ಈ ಖಾಯಿಲೆಗಳ ಕುರಿತು, ಅದಕ್ಕೆ ಕಾರಣ, ಲಕ್ಷಣ, ತಪಾಸಣೆ, ಚಿಕಿತ್ಸೆ ಮತ್ತು ಆರೈಕೆದಾರರಾಗಿ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದು.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org