ಇಂಟರ್ಮಿಟೆಂಟ್ ಎಕ್ಸ್ ಪ್ಲೋಸೀವ್ ಡಿಸಾರ್ಡರ್-ಐಇಡಿ

ಇಂಟರ್ಮಿಟೆಂಟ್ ಎಕ್ಸ್ ಪ್ಲೋಸೀವ್ ಡಿಸಾರ್ಡರ್-ಐಇಡಿ

ಇಂಟರ್ಮಿಟೆಂಟ್ ಎಕ್ಸ್ ಪ್ಲೋಸೀವ್ ಡಿಸಾರ್ಡರ್-ಐಇಡಿ

ಇಂಟರ್ಮಿಟೆಂಟ್ ಎಕ್ಸ್ ಪ್ಲೋಸೀವ್ ಡಿಸಾರ್ಡರ್-ಐಇಡಿ

(ಬಿಟ್ಟುಬಿಟ್ಟು ಬರುವ ಸ್ಫೋಟಕ ಬೇನೆ)

26 ವರ್ಷದ ಕಾಜಲ್ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾಳೆ. ಮಕ್ಕಳೊಡನೆ ಆಕೆ ಬಹಳ ಒರಟಾಗಿ ನಡೆದುಕೊಳ್ಳುತ್ತಿದ್ದಳು ಎಂಬ ಆರೋಪಗಳು ಹೆಚ್ಚಾದ ಕಾರಣ ಶಾಲೆಯ ಆಡಳಿತ ಮಂಡಲಿ ಆಕೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತದೆ.  ಮನೆಯಲ್ಲಿರುವಾಗ ಕಾಜಲ್, ತನಗೆ ಯಾವುದೋ ಅಪರಾಧ ಮಾಡಿದಂತೆ ಅಳುಕು ಉಂಟಾಗುತ್ತಿದೆ ಎಂದೂ, ಸುಸ್ತು ಹೆಚ್ಚಾಗಿ ಕುಸಿಯುವಂತಾಗುತ್ತಿದೆ ಎಂದೂ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಅಕೆ ತನಗೆ ತಾನೇ ಹಾನಿ ಮಾಡಿಕೊಳ್ಳುವ ಯೋಚನೆಯನ್ನೂ ಮಾಡುತ್ತಾಳೆ. ಕೆಲವೊಮ್ಮೆ ಹಾಗೆ ಮಾಡಿಯೇ ಬಿಡುತ್ತಾಳೆ. ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾಳೆ ಇಲ್ಲವಾದರೆ ತನ್ನ ಮುಂಗೈ ಕತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಈ ರೀತಿಯ ಘಟನೆಗಳು ವಾರಕ್ಕೊಮ್ಮೆ ಸಂಭವಿಸುತ್ತವೆ. ಕೆಲವೊಮ್ಮೆ  ಆಕೆ ಎಷ್ಟು ಅಕ್ರೋಶ ಬರುತ್ತದೆ ಎಂದರೆ ಸಿಕ್ಕ ವಸ್ತುಗಳನ್ನು ಒಡೆದುಹಾಕುತ್ತಾಳೆ ಇಲ್ಲವಾದರ ಅಕೆಯ ಜೊತೆ ಇರುವವರಿಗೆ ಹೊಡೆದುಬಿಡುತ್ತಾಳೆ. ನಿನ್ನ ಕೋಪ ಆಕ್ರೋಶಗಳನ್ನು ಕಡಿಮೆ ಮಾಡಿಕೋ ಎಂದು ಯಾರಾದರೂ ಹೇಳಿದರೆ ಇನ್ನೂ ಆಕ್ರೋಶದಿಂದ ಅವರ ಮೇಲೆ ಜಗಳ ಕಾಯುತ್ತಾಳೆ.

ಕಾಜಲ್‍ಳನ್ನು ಒಬ್ಬ ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಆಕೆಯನ್ನು ಮನೋವೈದ್ಯರ ಬಳಿ ಕಳುಹಿಸುತ್ತಾರೆ. ಆಕೆಗೆ ಐಇಡಿ ಸಮಸ್ಯೆ ಇರುವುದನ್ನು ಮನೋವೈದ್ಯರು ಕಂಡುಹಿಡಿಯುತ್ತಾರೆ. ಕೆಲವು ತಿಂಗಳ ಚಿಕಿತ್ಸೆಯ ನಂತರ ಕಾಜಲ್ ತನ್ನ ಕೋಪವನ್ನು ನಿಯಂತ್ರಿಸಲು ಯಶಸ್ವಿಯಾಗುತ್ತಾಳೆ. ಆಕೆಯ ಆಕ್ರೊಶಭರಿತ ವರ್ತನೆಯೂ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

ಐ ಇ ಡಿ ಎಂದರೇನು ?

ಐಇಡಿ ಒಂದು ರೀತಿಯ ಆವೇಗ ನಿಯಂತ್ರಣದ ದೌರ್ಬಲ್ಯ. ಇದು ಸಂಭವಿಸಿದಾಗ ವ್ಯಕ್ತಿಯು ಹಠಾತ್ತನೆ, ಏಕಾಏಕಿ ಆಕ್ರೋಶ ವ್ಯಕ್ತಪಡಿಸುತ್ತಾನೆ. ಈ ಆವೇಗ ಮತ್ತು ಆವೇಶಕ್ಕೆ ಯಾವುದೇ ಕಾರಣಗಳೂ ಇರುವುದಿಲ್ಲ, ಪ್ರಚೋದನೆಯೂ ಇರುವುದಿಲ್ಲ. ತಮ್ಮ ಭಾವಾವೇಷದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಇಂತಹ ವ್ಯಕ್ತಿಗಳು, ಸನ್ನಿವೇಶ ಗಂಭೀರವಾಗಿಲ್ಲದಿದ್ದರೂ ಮಿತಿ ಮೀರಿದ ಆಕ್ರೋಶ ವ್ಯಕ್ತಪಡಿಸುತ್ತಾರೆ.  ಸಾಮಾನ್ಯವಾಗಿ ಕಂಡುಬರುವ ಆವೇಶದ ವರ್ತನೆಯೂ,  ಐಇಡಿ ಸಮಸ್ಯೆ ಇರುವವರ ವರ್ತನೆಯೂ ಒಂದೇ ತೆರನಾಗಿ ಕಂಡುಬಂದರೂ ಇವೆರಡರ ನಡುವ ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು. ಕೋಪ ಮತ್ತು ಆವೇಶ ಹಂತಹಂತವಾಗಿ ಹೆಚ್ಚಾಗುತ್ತದೆ ಆದರೆ ಐಇಡಿ ಸಂದರ್ಭದಲ್ಲಿ ಕ್ಷಣಮಾತ್ರದಲ್ಲೇ ವ್ಯಕ್ತಿ ತೀವ್ರ ಆವೇಗಕ್ಕೊಳಗಾಗಿ ನಿಯಂತ್ರಣಕ್ಕೂ ಸಿಗದಂತೆ ಹಿಂಸಾತ್ಮಕ ಸ್ವರೂಪ ತಾಳುವ ಲಕ್ಷಣಗಳಿರುತ್ತವೆ. ಐಇಡಿ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳು ತಮ್ಮ ವರ್ತನೆಯ ಹಿಂದಿನ ಕಾರಣಗಳನ್ನು ಗುರುತಿಸಲಾಗುವುದಿಲ್ಲ ಅಥವಾ ತಮ್ಮ ವರ್ತನೆಯನ್ನು  ಅರ್ಥಮಾಡಿಕೊಳ್ಳಲೂ ಆಗುವುದಿಲ್ಲ.

ಸಾಮಾನ್ಯವಾಗಿ ಐಇಡಿ ಅಪ್ರಾಪ್ತ ವಯಸ್ಸಿನಲ್ಲಿ ಆರಂಭವಾಗುತ್ತದೆ. ನಂತರದ ಹಂತದಲ್ಲಿ ಈ ವ್ಯಕ್ತಿಗಳು ಆತಂಕ, ಖಿನ್ನತೆ ಮುಂತಾದ ಅನೇಕ ಮಾನಸಿಕ ದೌರ್ಬಲ್ಯಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಒಂದು  ಘಟನೆ ನಡೆದ ನಂತರದಲ್ಲಿ ಐಡಿಡಿ ಹೊಂದಿರುವ ವ್ಯಕ್ತಿಗಳು ಏನೂ ನಡೆದೇ ಇಲ್ಲ ಎನ್ನುವಂತೆ ಶಾಂತರಾಗುತ್ತಾರೆ. ಆದರೆ ಅವರ ವರ್ತನೆಯ ಬಗ್ಗೆ ಅವರಲ್ಲಿಯೇ ಪಶ್ಚಾತ್ತಾಪ, ದುಃಖ, ಪರಿತಾಪ, ತಪ್ಪಿತಸ್ಥ ಮನೋಭಾವ ಮತ್ತು ಜಿಗುಪ್ಸೆ ಇರುತ್ತದೆ. ಐಇಡಿ ಲಕ್ಷಣಗಳು ಕೇವಲ ದೈಹಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಗ್ರಹಿಸಬಹುದಾದ ವರ್ತನೆಯ ಸ್ವರೂಪಗಳ ಮೂಲಕವೂ ಕಾಣಿಸಿಕೊಳ್ಳುತ್ತದೆ. ಈ ಬೇನೆ ದೀರ್ಘ ಕಾಲ ಪೀಡಿಸುವುದಾದರೂ, ಚಿಕಿತ್ಸೆ ಮತ್ತು ಔಷಧಗಳ ಮೂಲಕ ಈ ಬೇನೆಯ ಲಕ್ಷಣಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ವಯಸ್ಸಾದಂತೆಲ್ಲಾ ಐಇಡಿ ಹೊಂದಿರುವ ವ್ಯಕ್ತಿಗಳ ಆಕ್ರೋಶ ಮತ್ತು ಅರಚಾಟಗಳು ಕಡಿಮೆಯಾಗುತ್ತವೆ.  ಒಟ್ಟು ಜನಸಂಖ್ಯೆಯ ಶೇ 3.9ರಷ್ಟು ಜನರಲ್ಲಿ ಈ ಬೇನೆಯನ್ನು ಗುರುತಿಸಬಹುದು ಎಂದು ಅಂದಾಜು ಮಾಡಲಾಗಿದೆ.

ಐಇಡಿ ಸಮಸ್ಯೆಯನ್ನು ಸೂಚಿಸುವ ಲಕ್ಷಣಗಳಾವುವು ?

ಐಇಡಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮೌಖಿಕವಾಗಿ, ಮಾತಿನ ಮೂಲಕ ಅಥವಾ ದೈಹಿಕವಾಗಿ ಈ ಬೇನೆಯ ಲಕ್ಷಣಗಳನ್ನು ಹೊರಸೂಸಬಹುದು. ಈ ಸಮಸ್ಯೆ ಎದುರಿಸುವ ವ್ಯಕ್ತಿ ಕನಿಷ್ಟ ಮೂರು ಬಾರಿ ತನ್ನ ಆಕ್ರೋಶ ಭರಿತ ಅರಚಾಟವನ್ನು ವ್ಯಕ್ತಪಡಿಸಿದ್ದಲ್ಲಿ ಮಾತ್ರವೇ ಐಇಡಿ ಕಂಡುಹಿಡಿಯಲು ತಪಾಸಣೆ ನಡೆಸಲಾಗುತ್ತದೆ. ಈ ರೀತಿಯ ಘಟನೆಗಳು ಅರ್ಧ ಗಂಟೆ ಅಥವಾ ಅದಕ್ಕಿಂತಲೂ ಕಡಿಮೆ ಸಮಯ ಇರುತ್ತವೆ ಮತ್ತು ಹಠಾತ್ತನೆ ಸಂಭವಿಸುತ್ತವೆ.

ಐಇಡಿ ಲಕ್ಷಣಗಳು

ವರ್ತನೆ

ದೈಹಿಕ ಪ್ರವೃತ್ತಿ

ಗ್ರಹಿಸಬಹುದಾದುದು

ಮಾನಸಿಕ

ದೈಹಿಕವಾದ ಆಕ್ರಮಣಕಾರಿ ಪ್ರವೃತ್ತಿ

ನಡುಕ ಹುಟ್ಟುವುದು

ಜಿಗುಪ್ಸೆಯನ್ನು ತಡೆಯಲಾಗದೆ ಇರುವುದು

ಕೊಂಚ ಕಾಲ ಭಾವನಾತ್ಮಕವಾಗಿ ಇತರರಿಂದ ದೂರ ಇರುವುದು

ಮಾತುಗಳಲ್ಲಿ ಆಕ್ರಮಣಕಾರಿಯಾಗಿರುವುದು

ಮಾಂಸಖಂಡಗಳಲ್ಲಿ ಉದ್ವೇಗ

ಸ್ವಂತ ಆಲೋಚನೆಗಳ ಮೇಲೆ ಹಿಡಿತ ಕಳೆದುಕೊಳ್ಳುವುದು

ಕಿರಿಕಿರಿ ಉಂಟಾಗುವುದು

ವಸ್ತುಗಳಿಗೆ, ಬೆಲೆ ಬಾಳುವ ಪದಾರ್ಥಗಳಿಗೆ ಹಾನಿ ಉಂಟುಮಾಡುವುದು

ತಲೆ ನೋವು

ನಾಗಾಲೋಟದ  ಚಿಂತನೆಗಳು

ಆಕ್ರೋಶದ ಭಾವನೆಗಳು

ಉದ್ರೇಕದ ಸ್ವಭಾವ

ದೇಹದೊಳಗೆ ಜುಮಗುಟ್ಟುವ ಅನುಭವ

ಜನರ ಮೇಲೆ ವಸ್ತುಗಳ ಮೇಲೆ ದೈಹಿಕ ಆಕ್ರಮಣ ಮಾಡುವುದು

ಕಂಪನ

ಐಇಡಿ ಉಂಟಾಗಲು ಏನು ಕಾರಣ ?

ಐಇಡಿ ಉಂಟಾಗಲು ಸರಿಯಾದ ಕಾರಣಗಳು ತಿಳಿದುಬಂದಿಲ್ಲವಾದರೂ, ತಜ್ಞರ ಅಭಿಪ್ರಾಯದಲ್ಲಿ ಜೈವಿಕ ಮತ್ತು ಸುತ್ತಲಿನ ಪರಿಸರದ ಕೆಲವು ಅಂಶಗಳು ಕಾರಣವಾಗಬಹುದು. ಕೆಲವು ಸಾಕ್ಷಿ ಪುರಾವೆಗಳ ಅನುಸಾರ ಈ ಸಮಸ್ಯೆ ಎದುರಿಸುವ ಬಹುಪಾಲು ಜನರು, ಸಾಮಾನ್ಯವಾಗಿ ಹೆಚ್ಚು ದೈಹಿಕ ಮತ್ತು ಮೌಖಿಕ ಜಗಳ, ಸಂಘರ್ಷ ಹೆಚ್ಚಾಗಿರುವ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ.  ಮನೆಯಲ್ಲಿನ ದೊಡ್ಡವರು ಮುಕ್ತವಾಗಿಯೇ ಈ ರೀತಿಯ ಜಗಳ, ಕಚ್ಚಾಟದಲ್ಲಿ ತೊಡಗಿದ್ದರೆ ಮಕ್ಕಳು ಅದನ್ನೇ ಕಲಿತು ಅನುಕರಿಸುತ್ತಾರೆ. ವಂಶವಾಹಿಯಾಗಿಯೂ ಈ ಸಮಸ್ಯೆ ಬರುವ ಸಾಧ್ಯತೆಗಳಿವೆ. ಕೆಲವು ಪುರಾವೆಗಳ ಅನುಸಾರ ಸೆರೋಟೋನಿನ್ ಮುಂತಾದ ನರಸಂಬಂಧಿತ ಪ್ರವಹಿಸುವಿಕೆಯೂ ಇದಕ್ಕೆ ಕಾರಣವಾಗುತ್ತದೆ.

. ಐಇಡಿಯನ್ನು ಹೇಗೆ ಗುಣಪಡಿಸಬಹುದು ?

ಐಇಡಿ ಸಮಸ್ಯೆಗೆ ನೀಡುವ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಚಿಕಿತ್ಸೆ ನೀಡುವಾಗ ಮಾನಸಿಕ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುವ ಮೂಲಕ ಸರಿಪಡಿಸಲು ಯತ್ನಿಸಲಾಗುತ್ತದೆ.

• ಔಷಧೀಯ ಚಿಕಿತ್ಸೆ : ಖಿನ್ನತೆಯನ್ನು ಹೋಗಲಾಡಿಸುವ, ಆತಂಕವನ್ನು ಕಡಿಮೆ ಮಾಡುವ ಮತ್ತು ಮನಸ್ಸನ್ನು ನಿಯಂತ್ರಿಸುವಂತಹ ಕೆಲವು ಔಷಧಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ.

• ಚಿಕಿತ್ಸೆ : ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ತಂತ್ರಗಳು, ಗುಂಪು ಸಲಹೆ, ಕೋಪ ನಿಯಂತ್ರಣದ ಕ್ರಮಗಳು ಉತ್ತಮ ಫಲಿತಾಂಶ ನೀಡಿವೆ. ಕೋಪವನ್ನು ಕಡಿಮೆ ಮಾಡಲು ವಿಶ್ರಾಂತಿ ಪಡೆಯುವ ವಿಧಾನವನ್ನೂ ಅನುಸರಿಸಲಾಗುತ್ತದೆ.

ಉಲ್ಲೇಖ :

ಕೆಸ್ಲರ್ ಆರ್ ಸಿ, ಕೊಕಾರೋ ಇ ಎಫ್, ಫಾವಾ ಎಮ್, ಜೇಗರ್ ಎಸ್, ಜಿನ್ ಆರ್ ಮತ್ತು ವಾಲ್ಟರ್ಸ್ (2006). ಡಿಎಸ್‍ಎಂ 4 –ಐಇಡಿ – ಸಮಸ್ಯೆಯ ಇರುವಿಕೆ ಮತ್ತು ಸಂಬಂಧಿತ ವಿಚಾರಗಳು, ರಾಷ್ಟ್ರೀಯ ಸಮೀಕ್ಷೆ, ಸಾಮಾನ್ಯ ಮನಶ್ಶಾಸ್ತ್ರದ ದಾಖಲೆಗಳು 63(6) 669-678

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org