ಆಟವಿಲ್ಲದ ಪಾಠ

ಪ್ರತಿ ವರ್ಷ ಪರೀಕ್ಷೆ ಸಮಯ ಹತ್ತಿರವಾದಾಗ ಮಕ್ಕಳು ಆಟ ಆಡಲು ಪೋಷಕರು ಬಿಡುವುದಿಲ್ಲ. ದೈಹಿಕ ಚಟುವಟಿಕೆ ಇದ್ದರೆ ನಮ್ಮ ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ.

'ನಾನು ವ್ಯಾಯಾಮ ಮಾಡಲಾರೆ'

ವ್ಯಾಯಾಮವೆಂದರೆ ತುಂಬಾ ಬೆವರು ಸುರಿಸಿ ಕಷ್ಟ ಪಟ್ಟು ಮಾಡುವುದು ಅಂದುಕೊಂಡಿದ್ದೇವೆ. ಕೆಲವರು ಆ ರೀತಿ ವ್ಯಾಯಾಮ ಮಾಡುತ್ತಾರೆ. ಆದರೆ ಎಲ್ಲಾ ವ್ಯಾಯಾಮಗಳೂ ಹಾಗೆ ಇರಬೇಕಿಲ್ಲ. ನಿಮಗೆ ಹೊಂದುವ ವ್ಯಾಯಾಮ ಮಾಡಿ. ಫಿಟ್ ಆಗಿರಲು ನೀವು ಈಜಬಹುದು, ಸೈಕಲ್ ತುಳಿಯಬಹುದು ಅಥವಾ ಪ್ರತಿದಿನ ವಾಕಿಂಗ್ ಮಾಡಬಹುದು. ಇವೆಲ್ಲಾ ನಿಮಗೆ ಬೇಜಾರೆನಿಸಿದರೆ, ನೃತ್ಯ ಅಥವಾ ಕ್ರೀಡೆಯನ್ನು ಕಲಿಯಿರಿ. ನಿಮ್ಮನ್ನು ಚುರುಕಾಗಿಡುವ ಕೆಲವು ಚಟುವಟಿಕೆಗಳೆಂದರೆ:

  • ಹತ್ತಿರದಲ್ಲಿರುವ ಸ್ಥಳಕ್ಕೆ ಹೋಗಲು ಸೈಕಲ್ ಬಳಸಿ ಅಥವಾ ನಡೆದುಕೊಂಡು ಹೋಗಿ.
  • ಎಲಿವೇಟರ್, ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ.
  • ವಾರದಲ್ಲಿ ಸ್ವಲ್ಪ ಸಮಯ ಹೊರ ಹೋಗಿ ಆಟವಾಡಿ.

'ನಾನು ಓದಬೇಕು, ನನಗೆ ಸಮಯವಿಲ್ಲ'

ಪರೀಕ್ಷೆಯ ವೇಳೆ ಸಮಯವು ಬಹಳ ಅಮೂಲ್ಯವಾಗಿರುತ್ತದೆ. ಆದರೆ ಸ್ವಲ್ಪ ಸಮಯ ಆಟ ಆಡಿದರೆ ಅಥವಾ ವ್ಯಾಯಾಮ ಮಾಡಿದರೆ ನೀವು ಉತ್ಸಾಹದಿಂದ ಸಮಯವನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದು. ಬೆಳಿಗ್ಗೆ 15 ರಿಂದ 30 ನಿಮಿಷ ವ್ಯಾಯಾಮ ಮಾಡಿದರೆ ದಿನವಿಡೀ ಲವಲವಿಕೆಯಿಂದ ಇರಬಹುದು.

'ನಾನು ಮನೆಯಲ್ಲಿ ಕೂತು ಓದಿಕೊಳ್ಳಬೇಕೆಂದು ನನ್ನ ತಂದೆ ತಾಯಿ ಹೇಳುವರು'

ಪರೀಕ್ಷೆಯ ಸಮಯದಲ್ಲಿ ಪೋಷಕರೂ ಆತಂಕದಲ್ಲಿರುತ್ತಾರೆ! ನಿಮ್ಮ ಏಕಾಗ್ರತೆ ಕೆಡಿಸುವ ವಸ್ತುಗಳನ್ನು ದೂರವಿಡಲು ಬಯಸುತ್ತಾರೆ. ನಿಮ್ಮೊಂದಿಗೆ ವಾಕಿಂಗ್ ಅಥವಾ ಜಾಗಿಂಗ್ ಗೆ ಬರುವಂತೆ ಅವರಿಗೆ ಹೇಳಿ. ಆಗ ನೀವು ಸುಮ್ಮನೆ ಕಾಲ ಕಳೆಯುತ್ತಿಲ್ಲ ಎಂದು ಅವರಿಗೆ ತಿಳಿಯುತ್ತದೆ. ಮನೆಗೆ ಬೇಕಾದ ಸಾಮಾನು ತರಲು ತಾಯಿಯೊಂದಿಗೆ ಅಂಗಡಿಗೆ ನಡೆದುಕೊಂಡು ಹೋಗಿ. ದಿನದ ಟೈಮ್ ಟೇಬಲ್ ನಲ್ಲಿ ಓದಿನ ಜೊತೆಗೆ ಆಟ/ವ್ಯಾಯಾಮಕ್ಕೆ ಸಮಯ ಮೀಸಲಿಡಿ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org