ಸಹಾಯ ಒಂದು ಫೋನ್ ಕಾಲ್ ದೂರವಿದೆ

ಸಹಾಯವಾಣಿ ಎಂದರೇನು?

ಸಹಾಯವಾಣಿಯು ಮಾನಸಿಕ ಒತ್ತಡ ಇರುವವರಿಗೆ ಬೆಂಬಲ ಮತ್ತು ಅಗತ್ಯ ಮಾಹಿತಿಗಳನ್ನು ಒದಗಿಸುವ ಉಚಿತ ದೂರವಾಣಿ ಸೇವೆ. ಯಾವುದೇ ಆತಂಕವಿಲ್ಲದೇ ಇಲ್ಲಿ ನಿಮ್ಮ ಸಮಸ್ಯೆಯನ್ನು ಚರ್ಚಿಸಬಹುದು.

ಹೆಚ್ಚಿನ ಸಹಾಯವಾಣಿಗಳು ದೂರವಾಣಿಗಳೇ ಆಗಿವೆ. ಕೆಲವರು ಈ-ಮೇಲ್ ಮುಖಾಂತರ ಕೂಡ ಈ ಸೌಲಭ್ಯ ಒದಗಿಸುತ್ತಿದ್ದಾರೆ.

ನಾನು ಯಾವಾಗ ಸಹಾಯವಾಣಿಯನ್ನು ಸಂಪರ್ಕಿಸಬಹುದು?

ಮಾನಸಿಕ ಒತ್ತಡ ಇಲ್ಲದಿದ್ದರೂ ಆ ಪರಿಸ್ಥಿತಿಯಲ್ಲಿ ನಿಮಗಿರುವ ಗೊಂದಲವನ್ನು ಹಂಚಿಕೊಳ್ಳಲೂ ಸಹಾಯವಾಣಿಯನ್ನು ಸಂಪರ್ಕಿಸಬಹುದು. ನಿಮಗೆ ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಸಹಾಯ ಬೇಡಿ ಕೂಡ ಕರೆ ಮಾಡಬಹುದು.

ಸಹಾಯವಾಣಿಯಿಂದ ನಾನು ಏನನ್ನು ನಿರೀಕ್ಷಿಸಬಹುದು?

ಸಹಾಯವಾಣಿಗೆ ಕರೆಮಾಡಿದಾಗ ತರಬೇತಿ ಪಡೆದ ಆಪ್ತ ಸಮಾಲೋಚಕರೊಂದಿಗೆ (ಕೌನ್ಸಲರ್) ನೀವು ಮಾತಾಡಲಿದ್ದೀರಿ. ಅವರು ನಿಮ್ಮ ಸಮಸ್ಯೆಯನ್ನು ಕೇಳಿಸಿಕೊಂಡು ನಿಮಗೆ ಸೂಕ್ತ ಸಲಹೆ ನೀಡುತ್ತಾರೆ. ಅವರು ಮೊದಲಿಗೆ ನಿಮ್ಮ ವಯಸ್ಸು, ನಿಮ್ಮ ಸಮಸ್ಯೆಯ ಬಗ್ಗೆ ಹೆಚ್ಚು ಮಾಹಿತಿಗಳನ್ನು ಕೇಳಬಹುದು. ನಂತರ ನಿಮ್ಮ ಮಾತಿಗೆ ಅಡ್ಡ ಬರದೇ ನೀವು ಹೇಳುವುದನ್ನು ಕೇಳಿಸಿಕೊಳ್ಳುವರು. ನೀವು ಹೇಳಿದ ವಿಷಯ ಗಮನಿಸಿ ಪರಿಹಾರವನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುತ್ತಾರೆ ಅಥವಾ ಸೂಕ್ತ ತಜ್ಞರನ್ನು ಸಂಪರ್ಕಿಸಲು ಸೂಚನೆ ನೀಡುತ್ತಾರೆ.

ನಾನು ನೀಡಿದ ಮಾಹಿತಿ ಗೌಪ್ಯವಾಗಿರುತ್ತದೆಯೇ?

ಸಹಾಯವಾಣಿಯ ಆಪ್ತಸಮಾಲೋಚಕರೊಂದಿಗೆ ಮಾತನಾಡುವುದು ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿದಂತೆ. ಇಲ್ಲಿ ನೀವು ಹಂಚಿಕೊಳ್ಳುವ ಎಲ್ಲಾ ವಿಷಯಗಳನ್ನು ಗೌಪ್ಯವಾಗಿಡಲಾಗುತ್ತದೆ. ನಿಮ್ಮ ಹೆಸರನ್ನು ಹೆಳದೆಯೇ ಮಾತನಾಡಬಹುದು.

ಕರೆಮಾಡಿದ ವ್ಯಕ್ತಿಯು ತನ್ನ ಜೀವಕ್ಕೆ ಅಥವಾ ಮತ್ತೊಬ್ಬರಿಗೆ ತೊಂದರೆ ಮಾಡಬಹುದು ಅನಿಸಿದಾಗ ಮಾತ್ರ ತಿಳಿಸಿದ ಕೆಲ ವಿಷಯಗಳನ್ನು ಅವರು ಹಂಚಿಕೊಳ್ಳಬಹುದು. ಮಾತು ಶುರು ಮಾಡುವ ಮೊದಲೇ ನಿಮ್ಮ ವಿಷಯ ಗೌಪ್ಯವಾಗಿಡುವಂತೆ ಹೇಳಿ ನಿಮ್ಮ ನಂಬಿಕೆ ಹೆಚ್ಚಿಸಿಕೊಳ್ಳಬಹುದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org