ಬದಲಾವಣೆ ತರಲು ನಾನೇನು ಮಾಡಬಹುದು?

ಶಿಕ್ಷಕರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಪಾಠಗಳ ಯೋಜನೆ ಸಿದ್ಧಪಡಿಸುವುದು, ವಿದ್ಯಾರ್ಥಿಗಳ ಪರೀಕ್ಷೆ ಪತ್ರಿಕೆ ತಿದ್ದುವುದು, ಲೆಕ್ಚರ್ ಮತ್ತು ವರ್ಕ್‌ಶಾಪ್ ನಲ್ಲಿ ಭಾಗವಹಿಸುವುದು, ಇತ್ಯಾದಿ, ಪಾಠ ಮಾಡುವ ಜತೆಗೆ ಇತರ ಹಲವು ನಿರತರಾಗಿರುತ್ತಾರೆ. ಇಂಥ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ವಿದ್ಯಾರ್ಥಿಗಳ ಭಾವನಾತ್ಮಕ ಯೋಗಕ್ಷೇಮದ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಕೆಲವರು ಭಾವಿಸಬಹುದು.

ಆದರೆ  ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಶಿಕ್ಷಕರು ವಿದ್ಯಾರ್ಥಿಗಳ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ಇದರಿಂದ ಶಿಕ್ಷಕರು ವಿದ್ಯಾರ್ಥಿಗಳ ಮನೋಪ್ರವೃತ್ತಿಯಲ್ಲಾಗುವ ಬದಲಾವಣೆ ಗಮನಿಸಲು ಅವಕಾಶವಾಗುತ್ತದೆ. ಕೆಲವೊಮ್ಮೆ ಈ ಬದಲಾವಣೆ  ಗಹನವಾದ ಸಮಸ್ಯೆಯ ಸೂಚಕವಾಗಿರಬಹುದು ಇಲ್ಲವೇ ಮಾನಸಿಕ ಅನಾರೋಗ್ಯದ ಲಕ್ಷಣವಿರಬಹುದು. ಇಂಥ ಬದಲಾವಣೆಗಳ ಬಗ್ಗೆ ಅರಿತರೆ  ಶಿಕ್ಷಕರು ಆರಂಭಿಕ ಹಂತದಲ್ಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ತೀವ್ರವಾಗುವುದನ್ನು ತಡೆಯಬಹುದು.

ಎರಡನೆಯದಾಗಿ, ಮಾನಸಿಕವಾಗಿ ಸದೃಢವಾಗಿರುವ ವಿದ್ಯಾರ್ಥಿಗಳು ಹೆಚ್ಚು ಉತ್ತೇಜಿತರಾಗಿರುತ್ತಾರೆ. ಇವರು ಹೆಚ್ಚು ಸಕ್ರಿಯವಾಗಿದ್ದು, ಪಾಠವನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಅವರ ಶೈಕ್ಷಣಿಕ ಸಾಧನೆ ಉನ್ನತವಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org