ಶಿಕ್ಷಣ

ವಿದ್ಯಾರ್ಥಿಗೆ ಆಪ್ತಸಮಾಲೋಚನೆ

ವೈಟ್ ಸ್ವಾನ್ ಫೌಂಡೇಶನ್

ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಒಂದು ಸವಾಲಿನ ಕೆಲಸ. ಯಾಕೆಂದರೆ ಕಾಲೇಜು ಜೀವನವೆಂದರೆ ವಿದ್ಯಾರ್ಥಿಗೆ ಅದು ಹೊಸ ಅನುಭವದ  ಹಂತವಾಗಿದೆ. ಈಗ ಸ್ವತಂತ್ರವಾಗಿ ಯೋಚಿಸಲು ಹಾಗೂ ಸ್ವಾವಲಂಬಿಯಾಗಲು ಹಾತೊರೆಯುತ್ತಿರುತ್ತಾರೆ. ಈ ಹಂತವು ಹಲವಾರು ಬಗೆಯ ಗೊಂದಲಗಳಿಂದ ಕೂಡಿರುತ್ತದೆಯಲ್ಲದೆ ಅದು ತರಗತಿ ಮತ್ತು ಕಾಲೇಜಿನಲ್ಲಿ ಸಮಸ್ಯೆಗಳೂ ಎದುರಾಗಬಹುದು.

ವಿದ್ಯಾರ್ಥಿಯೊಬ್ಬನಿಗೆ ದೈಹಿಕ ಗಾಯವಾದಾಗ ಆ ಗಾಯಕ್ಕೆ ನಂಜಾಗದಂತೆ ಪ್ರಥಮ ಚಿಕಿತ್ಸೆ ಇರುತ್ತದೆ. ಹಾಗೇನೆ ಸೋಲು, ಪರೀಕ್ಷಾ ಭಯ, ಗೆಳೆಯರ ಗುಂಪಿನಿಂದ ತಿರಸ್ಕಾರ, ಗುರಿ ಸಾಧಿಸಲಾಗದೆ ಬರುವ ಪಶ್ಚಾತ್ತಾಪ ಭಾವ, ಆತ್ಮ ಗೌರವದ ಕೊರತೆ, ಇವೆಲ್ಲವನ್ನೂ ಶಿಕ್ಷಕರು ತಕ್ಷಣದ ಭಾವನಾತ್ಮಕ ನೆರವು ಕೊಡುವ ಮೂಲಕ ನಿರ್ವಹಿಸಬಹುದಾಗಿದೆ.

ಸಮಸ್ಯೆಯ ಆಳವು ಅಷ್ಟೇನೂ ತೀವ್ರವಿಲ್ಲ ಅಂದರೆ, ಉದಾಹರೆಣೆಗೆ -  ಪರೀಕ್ಷೆಯಲ್ಲಿ ವಿಫಲತೆ, ವಿಷಯ ಅರ್ಥವಾಗದೆ ಇರುವುದು,  ಶೈಕ್ಷಣಿಕ ಒತ್ತಡ, ಉದ್ಯೋಗದ ಸಮಸ್ಯೆ, ತರಗತಿಯಲ್ಲಾದ ಮೂದಲಿಕೆಯ ಸಮಸ್ಯೆ ಇತ್ಯಾದಿ. ಇದರಿಂದಾಗುವ ಮಾನಸಿಕ ಒತ್ತಡವನ್ನು ಶಿಕ್ಷಕರು ಈ ಕೆಳಗಿನಂತೆ ನಿರ್ವಹಿಸಬಹುದಾಗಿದೆ.

  • ವಿದ್ಯಾರ್ಥಿಗೆ ಸಮಯ ನಿರ್ವಹಣೆ ಮತ್ತು ಓದಲು ಟೈಮ್ ಟೇಬಲ್ ಮಾಡುವಲ್ಲಿ ಸಹಾಯ ಮಾಡುವುದು.

  • ವಿದ್ಯಾರ್ಥಿ ತಮ್ಮ ಭವಿಷ್ಯದ ಬಗ್ಗೆ ಕೆಲವು ಲಕ್ಷ್ಯಗಳನ್ನು ಗುರುತಿಸಲು ಸಹಾಯ ಮಾಡುವುದು

  • ಅವರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು

  • ಉದ್ಯೋಗ ಸಂಬಂಧಿ ಗುರಿಗಳನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುವುದು

  • ವಿದ್ಯಾರ್ಥಿಗಳನ್ನು ಗುಂಪು ಮಾಡಿ ಸಂವಾರ್ತೆಯ ಮೂಲಕ ತಮ್ಮಲ್ಲಿಯೇ ನಂಬುಗೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು

ಒಂದು ವೇಳೆ ವಿದ್ಯಾರ್ಥಿಯೊಬ್ಬನ ಸಮಸ್ಯೆ ತೀವ್ರವಾಗಿದೆ ಎಂದನಿಸಿದರೆ  ಕಾಲೇಜಿನ ಸಮಾಲೋಚಕರನ್ನು ಭೇಟಿ ಮಾಡಲು ತಿಳಿಸಬೇಕು. ಆತ್ಮಹತ್ಯೆಯ ಆಲೋಚನೆ, ಗೀಳು, ಲೈಂಗಿಕ ಪ್ರಕರಣಗಳು, ಇತ್ಯಾದಿ ವಿಷಯದಲ್ಲಿ ಕೌನ್ಸೆಲಿಂಗ್ ಬೇಕಾಗುತ್ತದೆ. 

ಕೌನ್ಸೆಲಿಂಗ್ ಮುನ್ನ ಶಿಕ್ಷಕರು ಈ ರೀತಿ ನೆರವು ನೀಡಬಹುದು:

  • ವಿದ್ಯಾರ್ಥಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ಕಾಳಜಿ ವಹಿಸಿ ಕೇಳಿಸಿಕೊಳ್ಳಿ 
  • ಸಹಾನುಭೂತಿ ಮತ್ತು ಕಾಳಜಿ ಪಡಿಸಿ. ಉದಾ-  "ಹಾ, ನನಗರ್ಥವಾಗುತ್ತದೆ", "ನಿನಗೆ ತುಂಬಾ ಕಷ್ಟವಾಗಿರಬೇಕಲ್ಲವೆ?” ಇತ್ಯಾದಿ ಸಮಾಧಾನದ ಮಾತಾಡುವುದು.
  • ಗೌಪ್ಯ ಕಾಪಾಡಿಕೊಳ್ಳುವುದು, ವಿಷಯವನ್ನು ಬೇರೆ ವಿದ್ಯಾರ್ಥಿಗಳೊಡನೆ ಅಥವ ಸಹೋದ್ಯೋಗಿಗಳೊಡನೆ ಹಂಚಿಕೊಳ್ಳದೇ ಇರುವುದು.

ಕೆಲ ವಿದ್ಯಾರ್ಥಿಗಳು ಕಾಲೇಜಿನ ಸಮಾಲೋಚಕರನ್ನು ಭೇಟಿ ಮಾಡಲು ಒಪ್ಪುವುದಿಲ್ಲ. ಅಂಥ ಸಂದರ್ಭದಲ್ಲಿ ನಿಮ್ಮ ಕಾಳಜಿಯನ್ನು ಸಮಾಲೋಚಕರೊಡನೆ ಹಂಚಿಕೊಂಡು ಅವರ ಸಲಹೆ ಪಡೆಯಿರಿ. ಇದು ವಿದ್ಯಾರ್ಥಿಗಳ ವಿಶ್ವಾಸ ಗಳಿಕೆಗೆ ಸಹಾಯ ಮಾಡುತ್ತದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org