ಶಿಕ್ಷಣ

ವಿದ್ಯಾರ್ಥಿಯ ಮನೋವಿಕಾಸನ

ವೈಟ್ ಸ್ವಾನ್ ಫೌಂಡೇಶನ್

ಪಠ್ಯದ ವಿಷಯಗಳನ್ನು ಹೇಳುವುದಷ್ಟೇ ಶಿಕ್ಷಕರ ಕೆಲಸವಲ್ಲ. ತಮ್ಮ ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮದ ಬಗ್ಗೆ ಸಹ ಅವರು ಗಮನಹರಿಸಬೇಕಾಗುತ್ತದೆ.

ಸಹೋದ್ಯೋಗಿಯೊಂದಿಗೆ ವಿದ್ಯಾರ್ಥಿಯ ಬಗ್ಗೆ ಚರ್ಚಿಸಿ: ನಿಮ್ಮ ತರಗತಿಯಲ್ಲಿರುವ ವಿದ್ಯಾರ್ಥಿಯ ನಡವಳಿಕೆ ಅಸಹಜವಾಗಿರುವುದು ನಿಮ್ಮ ಗಮನಕ್ಕೆ ಬಂದಾಗ ನಿಮ್ಮಷ್ಟಕ್ಕೆ ನೀವೇ ನಿರ್ಧಾರಕ್ಕೆ ಬರುವುದು ಬೇಡ. ಅಲ್ಲಿನ ವಾತಾವರಣ ಹಾಗೂ ಪರಿಸ್ಥಿತಿಗಳನ್ನು ಅವಲೋಕಿಸಿ. ವಿದ್ಯಾರ್ಥಿ ನಿಮ್ಮೊಡನೆ ಸಮಸ್ಯೆ ಹೇಳಿಕೊಂಡಿದ್ದಾನೆ ಎಂದರೆ ಅವನಿಗೆ ಅವ ನಿಮ್ಮ ಮೇಲೆ ವಿಶ್ವಾಸ ಇದೆ ಎಂದರ್ಥ. ಹಾಗಾಗಿ ನೀವು ವಿದ್ಯಾರ್ಥಿಯ ಸಮಸ್ಯೆ ಬಗ್ಗೆ ಇನ್ನೊಬ್ಬ ಶಿಕ್ಷಕರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ಮುಂದೇನು ಮಾಡಬೇಕೆಂಬುದರ ಬಗ್ಗೆ ಗೊಂದಲವಿದ್ದರೆ ಕಾಲೇಜಿನ ಆಪ್ತಸಮಾಲೋಚಕರೊಡನೆ ಚರ್ಚಿಸಿ.

ಶಿಕ್ಷಕರು ಗಂಡಾಗಲಿ, ಹೆಣ್ಣಾಗಲಿ,  ವಿದ್ಯಾರ್ಥಿಗಳ ಪಾಲಿಗೆ ಅವರು ಪಾಲಕರಂತೆ ಇರುತ್ತಾರೆ.  ಒಬ್ಬ ಶಿಕ್ಷಕಿಯ ಬಳಿ ಹುಡುಗರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಸಾಮಾನ್ಯ, ಹಾಗೆಯೇ ಒಮ್ಮೊಮ್ಮೆ ಹೆಣ್ಣು ಮಕ್ಕಳು ಶಿಕ್ಷಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ದೊಡ್ಡ ಸಮಸ್ಯೆಯಲ್ಲದಿದ್ದರೂ ಇಂಥ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರ ಮನಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅದಲ್ಲದೆ ಈ ರೀತಿಯ ಸಂಭಾಷಣೆ ಬಗ್ಗೆ ಕಾಲೇಜು ಆಡಳಿತ ಮಂಡಳಿಯ ನಿಯಮಗಳೇನೆಂಬುದನ್ನೂ ಶಿಕ್ಷಕ ತಿಳಿದಿರಬೇಕಾಗುತ್ತದೆ.

ಶಿಕ್ಷಕರು ವಿದ್ಯಾರ್ಥಿಗಳೊಡನೆ ಅತಿಯಾಗಿ ಬೆರೆಯುತ್ತಿದ್ದಾರೆಂದು ಯಾವಾಗ ಅಂದುಕೊಳ್ಳಬೇಕು?

ವಿದ್ಯಾರ್ಥಿಗಳ ಬದುಕನ್ನು ಕಟ್ಟುವುದಕ್ಕೆ ಮತ್ತು ಶಾಲೆಯಲ್ಲಿ ಒಳ್ಳೆಯ ವಾತಾವರಣವನ್ನು ತರುವುದಕ್ಕೆ ಕಾಳಜಿ ಇರುವುದು ನಿಜವೇ ಆದರೂ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಅತಿಯಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಬಾರದು. ಶಿಕ್ಷಕರ ಜೊತೆ ಸಂವಹನದ ಹೊಂದಿರುವ ವಿದ್ಯಾರ್ಥಿ ನಿಧಾನಕ್ಕೆ  ಭಾವನಾತ್ಮಕವಾಗಿ ಆತುಕೊಳ್ಳಲು ಶುರುಮಾಡಬಹುದು. ಶಿಕ್ಷಕರು ತಮ್ಮ ಭಾವನೆಗಳ ವಿಷಯದಲ್ಲಿ ಸ್ವಯಂ ನಿಯಂತ್ರಣ ಹೊಂದುವುದು ಮತ್ತು ನಿಯಂತ್ರಿಸುವುದು ಅಗತ್ಯವಾಗಿದೆ. ಅದಕ್ಕೆ ಈ ಕೆಳಗಿನ ಅಂಶಗಳು ಸಹಾಯ ಮಾಡಬಲ್ಲವು.

  • ವಿದ್ಯಾರ್ಥಿಗಳಿಗೆ ಸಿಗುವಂತಿರಿ, ಆದರೆ ನಿಮ್ಮ ಸಮಯಾನುಕೂಲವನ್ನು ನೋಡಿಕೊಂಡೇ ವಿದ್ಯಾರ್ಥಿ ನಿಮ್ಮ ಬಳಿ ಬರುವಂತಿರಲಿ.

  • ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದಾದ ಮಾರ್ಗ ನಿಮಗೆ ಗೊತ್ತಿಲ್ಲವೆಂದರೆ ಆಪ್ತಸಮಾಲೋಚಕರ ಸಹಾಯ ಪಡೆಯಲು ಸೂಚಿಸಿ.

  • ವಿದ್ಯಾರ್ಥಿಗೆ ಹೇಳಿದ್ದಷ್ಟೇ ಆಲ್ಲ ಅದನ್ನು ನೀವು ಕಾರ್ಯರೂಪದಲ್ಲೂ ತೋರಿಸಬೇಕಾಗುತ್ತದೆ . ಉದಾ- ಸಂಜೆ ಭೇಟಿಯಾಗು ಎಂದು ಹೇಳಿದ್ದರೆ ಆ ಸಮಯಕ್ಕೆ ನೀವು ಅಲ್ಲಿರಬೇಕು.

  • ವಿದ್ಯಾರ್ಥಿಯೊಬ್ಬ ನಿಮ್ಮ ಸಮಯ ಮತ್ತು ಶಕ್ತಿಯನ್ನು ಅತಿಯಾಗಿ ಬಳಸುತ್ತಿದ್ದಾನೆ ಅನ್ನಿಸಿದರೆ ನಿಧಾನಕ್ಕೆ ನೀವಿಲ್ಲದೆಯೂ ಕಾರ್ಯನಿರ್ವಹಿಸುವ ಕೌಶಲವನ್ನು ಕಲಿಸಿಕೊಡಿ. ಅದಲ್ಲದೆ ಅಗತ್ಯವಿದ್ದಾಗ ಜೊತೆಗಿದ್ದೇನೆಂಬ ಭಾವ ತುಂಬುತ್ತಲೇ ಅಂತರ ಕಾಯ್ದುಕೊಳ್ಳಿ.

ಶಿಕ್ಷಕರೆಂದರೆ ಆಪ್ತಸಮಾಲೋಚಕರಲ್ಲ ನಿಜ, ಆದರೆ ಇವತ್ತು ಶಿಕ್ಷಕರು ಆ ಗುಣಗಳನ್ನು ಬೆಳೆಸಿಕೊಂಡು ಕರುಣಾಳುವಾಗಿ ವ್ಯವಹರಿಸುವ ಅಗತ್ಯವಿದ ಹಾಗೂ ವಿದ್ಯಾರ್ಥಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org