ಮೂಡ್ ಬದಲಾಗುವುದು ಸಹಜವೇ?

ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರು ದುಪ್ಪಟ್ಟು ಸಂಖ್ಯೆಯಲ್ಲಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಲಿಂಗ ಅಸಮಾನತೆಗೆ ಕಾರಣವಾದ ಕೆಲವು ಅಂಶಗಳು ಹೀಗಿವೆ:

ಹಾರ್ಮೋನುಗಳು: ಪುರುಷರಿಗಿಂತ ಮಹಿಳೆಯರಲ್ಲಿ ಹಾರ್ಮೋನುಗಳ  ಏರಿಳಿತ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಮಹಿಳೆಯರ ಬದುಕಿನ (ಋತುಚಕ್ರ, ಮೆನೋಪಾಸ್) ಹಲವಾರು ಹಂತಗಳಲ್ಲಿ ಖಿನ್ನತೆ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸದಿಂದ ಮೂಡ್ ಬದಲಾವಣೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ.

ಜೀನ್ಸ್: ಒಂದೇ ತರಹದ/ ಸೋದರ ಅವಳಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ತಿಳಿದು ಬಂದಿರುವ ವಿಷಯವೆಂದರೆ ಅನುವಂಶಿಕವಾಗಿ ಖಿನ್ನತೆಗೆ ಒಳಗಾಗುವವರಲ್ಲಿ  ಮಹಿಳೆಯರೇ ಹೆಚ್ಚು. ಕೆಲವು ನಿರ್ಧಿಷ್ಟ ಅನವಂಶಿಕ ಬದಲಾವಣೆಯ ಕಾರಣದಿಂದ  ಮಹಿಳೆಯರಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆ.

ಪರಿಸರದ ಪ್ರಭಾವ: ಸುತ್ತಮುತ್ತಲ ವಾತಾವರಣ, ಸಾಮಜಿಕ ಕಾರಣಗಳು, ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ.ಉದಾಹರಣೆಗೆ ಶಿಶು/ ಯೌವ್ವನದಲ್ಲಿ ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ, ದೌರ್ಜನ್ಯಇತ್ಯಾದಿ ಸಮಸ್ಯೆಗಳಿಂದ ಮಹಿಳೆಯರು ಒತ್ತಡಕ್ಕೊಳಗಾಗುತ್ತಾರೆ. ಅಧ್ಯಯನಗಳ ಪ್ರಕಾರ, ಈ ರೀತಿ ಒತ್ತಡ ಮಹಿಳೆಯರಲ್ಲಿ  ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.  

ಮನೆಯಲ್ಲಿ ಹಿರಿಯರಿಗೆ ಖಾಯಿಲೆ ಇದ್ದರೆ ಅವರ ಆರೈಕೆ ಮಾಡುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು. ಇದರಿಂದ ಸತತವಾದ ಆರೈಕೆಯಿಂದ ಧೀರ್ಘಕಾಲದ ಒತ್ತಡ ಉಂಟಾಗಿ ಖಿನ್ನತೆಗೆ  ಕಾರಣವಾಗುತ್ತದೆ.

ಚಿಕಿತ್ಸೆ: ಅಂದಾಜಿನ ಪ್ರಕಾರ, ಖಿನ್ನತೆಗೆ ಚಿಕಿತ್ಸೆ ಪಡೆದುಕೊಳ್ಳುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಇದೂ ಕೂಡ ಲಿಂಗ ಅಸಮಾನತೆಯನ್ನು ಸೂಚಿಸುತ್ತದೆ. ಪುರುಷರು ಸಾಮಾನ್ಯವಾಗಿ ತಮ್ಮ ಭಾವನಾತ್ಮಕ ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ.ಆದರೆ ಪುರುಷರಲ್ಲಿ ಕುಡಿತದ ಚಟ ಅಥವಾ ಹಿಂಸಾತ್ಮಕ ನಡವಳಿಕೆ ಇದ್ದರೆ, ಅವರಿಗೆ ಖಿನ್ನತೆ ಇರಬಹುದೆಂದು ಅಧ್ಯಯನಗಳು ಸೂಚಿಸುತ್ತದೆ.

ದೈಹಿಕ ಆರೋಗ್ಯ: ಹೈಪೋ ಥೈರಾಯಿಡ್ ಸಮಸ್ಯೆ ಇದ್ದರೆ ಇದರಿಂದ ಖಿನ್ನತೆ ಉಂಟಾಗಬಹುದು.

Related Stories

No stories found.