ಮೆನೋಪಾಸ್ ಮತ್ತು ಮಾನಸಿಕ ಆರೋಗ್ಯ

ಮೆನೋಪಾಸ್ ಎಂದರೇನು ?

  ಋತುಚಕ್ರ,  ನೈಸರ್ಗಿಕವಾಗಿ ಮುಗಿದಾಗ ಅದನ್ನು ಮೆನೋಪಾಸ್ ಎನ್ನುತ್ತೇವೆ. ಸುಮಾರು 46 ರಿಂದ  48 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯರಲ್ಲಿ ಮೆನೋಪಾಸ್ ಶುರುವಾಗುತ್ತದೆ. ಅದಾಗ್ಯೂ ವೈದ್ಯಕೀಯ ಮತ್ತು ಜೀವನಶೈಲಿಯ ಆಧಾರದ ಮೇಲೆ ಮಹಿಳೆಯರಲ್ಲಿ ಬೇಗ ಅಥವಾ ನಿಧಾನವಾಗಿ  ಮುಟ್ಟು ನಿಲ್ಲುತ್ತದೆ.  ಕೆಲವರಿಗೆ  41 ರಿಂದ 50 ರ ವಯಸ್ಸಿನ ಅಂತರದೊಳಗೆ ಮುಟ್ಟು ನಿಲ್ಲಬಹುದು. 40 ನೇ ವಯಸ್ಸಿಗಿಂತ ಮುಂಚೆ ನಿಂತರೆ ,  ಅದನ್ನು ‘ಅರ್ಲಿ ಮೆನೋಪಾಸ್’ ಮತ್ತು 52 ನೇ ವಯಸ್ಸಿನ ನಂತರ ಮುಟ್ಟು ನಿಂತರೆ  ‘ಡಿಲೇಯ್ಡ್ ಮೆನೋಪಾಸ್’ಎನ್ನುತ್ತೇವೆ.

ಕೆಲವೊಮ್ಮೆ ಮಹಿಳೆಯರಲ್ಲಿ ಹತ್ತು ವರ್ಷಗಳ ಕಾಲ ಮೆನೋಪಾಸ್ ಆಗಬಹುದು. ಮೆನೋಪಾಸ್ ಶುರುವಾದಾಗ ಋತುಚಕ್ರದ ಸಮಯ ಬದಲಾಗುತ್ತದೆ. ಉದಾಹರಣೆಗೆ ಹೆಚ್ಚು ಅಥವಾ ಕಡಿಮೆ ಋತುಸ್ರಾವ, ತಿಂಗಳಲ್ಲಿ ಹಲವು ಬಾರಿ ಮುಟ್ಟಾಗುವ ಸಂಭವ, ಅತೀ ಉಷ್ಣ,  ಹೆಚ್ಚು ಬೆವರುವುದು,  ಮತ್ತು ನಿದ್ರೆಗೆ ತೊಂದರೆ, ಇತ್ಯಾದಿ. ಈ ಸಮಯದಲ್ಲಿ ಕುಟುಂಬದವರ ಸಹಾಯ ಅಗತ್ಯವಾಗಿರುತ್ತದೆ.

ಮೆನೋಪಾಸ್ ನಿಂದ ಮಹಿಳೆಯರಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ.

ದೈಹಿಕ ಸಮಸ್ಯೆಗಳು

ಮೆನೋಪಾಸ್  ಹಂತದಲ್ಲಿ, ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಉತ್ಪಾದನೆ ನಿಲ್ಲುತ್ತದೆ.ಇದು ಹೃದಯ, ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ. ಇದರ ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತದೆ, ಬೆನ್ನು, ಭುಜ, ಕೀಲು ನೋವು ಕಾಣಿಸಿಕೊಳ್ಳುತ್ತದೆ.

ಮೆನೋಪಾಸ್ ಅವಧಿಯಲ್ಲಿ ಕೆಲವರಿಗೆ ನಿದ್ರೆಯ ಸಮಸ್ಯೆ ಕೂಡ ಇರುತ್ತದೆ. (ಬೆಂಗಳೂರಿನ ಒಬ್ಬ ಗೈನಾಕಾಲಜಿಸ್ಟ್ ಹೇಳುವ ಪ್ರಕಾರ, ಈ ಸಮಯದಲ್ಲಿ ಆಕೆಯನ್ನು ಭೇಟಿ ಮಾಡುವ ಶೇಕಡ  20-25 ರಷ್ಟು ಮಹಿಳೆಯರು ನಿದ್ರಾಹೀನತೆಯಿಂದ ಬಳಲುತ್ತಾರೆ )

ಮೆನೋಪಾಸ್ ಮತ್ತು ಮಾನಸಿಕ ಆರೋಗ್ಯ

ಸಾಕಷ್ಟು ಮಹಿಳೆಯರಿಗೆ ಮೆನೋಪಾಸ್ ಬಗ್ಗೆ ತಿಳಿದಿರುತ್ತದೆ ಮತ್ತು ಅದನ್ನು ನಿಭಾಯಿಸುವ ಬಗ್ಗೆ ಕೂಡ ಗೊತ್ತಿರುತ್ತದೆ. ಆದರೆ ಕೆಲವರಿಗೆ ಮಾನಸಿಕವಾಗಿ ಕಷ್ಟವಾಗುತ್ತದೆ ಮತ್ತು ಅವರಿಗೆ ಸಹಾಯದ ಅಗತ್ಯವಿರುತ್ತದೆ.  

ಸಾಕ್ರ ವರ್ಲ್ಡ್ ಆಸ್ಪತ್ರೆಯ ಮನೋವೈದ್ಯರಾದ ಡಾ. ಸಬೀನ ರಾವ್, ಹೇಳುವ ಪ್ರಕಾರ “ ಉನ್ನತ ಹುದ್ದೆಯಲ್ಲಿರುವ ಅಥವ,  ಸದೃಢ  ಮತ್ತು ಯುವ ಮನಸ್ಥಿತಿ ಇರುವ ಕೆಲವು ಮಹಿಳೆಯರು ತಮಗೆ ವಯಸ್ಸಾಗುತ್ತಿದೆ ಎಂದು  ಒಪ್ಪಿಕೊಳ್ಳುವುದಿಲ್ಲ. ಏನಾದರೂ ಸಾಧಿಸಬೇಕು ಎಂದುಕೊಂಡಿರುವ ಮಹಿಳೆಯರಿಗೆ, ಮೆನೋಪಾಸ್ ಶುರುವಾದಾಗ, ಅವರಿಗೆ ವಯಸ್ಸಾಗಿದೆ ಎಂಬ ಸೂಚನೆ ನೀಡುತ್ತದೆ. ಇದರಿಂದ ಒತ್ತಡ, ಆತಂಕ ಅಥವ ಹತಾಶೆ ಉಂಟಾಗುತ್ತದೆ.

ಮೆನೋಪಾಸ್ ನ  ಪರಿಣಾಮ

ಮೆನೋಪಾಸ್ ಆದಾಗ  ಹಾರ್ಮೋನಿನಲ್ಲಿ ವ್ಯತ್ಯಾಸ, ಮಾನಸಿಕ ಮತ್ತು ಭಾವನಾತ್ಮಕ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತದೆ.

 •   ಆಯಾಸ; ದಣಿವು , ನಿದ್ರೆಯಲ್ಲಿ ವ್ಯತ್ಯಾಸ
 •   ಅತೀ ಉಷ್ಣ, ಬೆವರುವುದು
 • ಜೋರಾದ ಎದೆಬಡಿತ ಮತ್ತು ಮೂಡ್ ನಲ್ಲಿ ವ್ಯತ್ಯಾಸ
 • ಅರಿವಿಲ್ಲದೇ ಮೂತ್ರ ಸೋರುವುದು
 • ಭುಜ ಮತ್ತು ಬೆನ್ನು ನೋವು 
ನೈಸರ್ಗಿಕ ಪ್ರಕ್ರಿಯೆ ತೊಂದರೆಯ ಲಕ್ಷಣ
ದಣಿವು ಮತ್ತು ಕೆಲವೊಮ್ಮೆ ಬೇಜಾರಾಗುವುದು ನಿರಂತರ ದಣಿವು,  ಹತಾಶೆ, ಎರಡು ವಾರಕ್ಕಿಂತಲೂ ಹೆಚ್ಚು ಕಾಲ , ಆಗ್ಗಾಗ್ಗೆ ಅಳುವುದು, ಇತ್ಯಾದಿ
ಮೂಡ್ ನಲ್ಲಿ ವ್ಯತ್ಯಾಸ, ಕಿರಿಕಿರಿ, ಕೋಪ,ಬೇಸರ; ತಲೆನೋವು  ಅಥವ ಏಕಾಗ್ರತೆಯ ಕೊರತೆ ಎರಡು ವಾರಕ್ಕಿಂತಲೂ ಹೆಚ್ಚು ಸಮಯ ಮೂಡ್ನಲ್ಲಿ ಬದಲಾವಣೆ,  ಹತಾಶೆ ಅಥವ ದಿನನಿತ್ಯದ ಕಾರ್ಯಗಳನ್ನು  ನಿಭಾಯಿಸಲು ಸಾಧ್ಯವಾಗದೇ ಇರುವುದು

ಆತಂಕ, ಕಿರಿಕಿರಿ, ಹಸಿವಿನಲ್ಲಿ ಅಥವಾ ನಿದ್ರೆಯಲ್ಲಿ ವ್ಯತ್ಯಾಸ; ಒತ್ತಡ, ಅಥವ ಕೆಲವೊಮ್ಮೆ ದಣಿವು

ಎರಡು ವಾರಕ್ಕಿಂತಲೂ ಹೆಚ್ಚು ಕಾಲ ನಿರಂತರ ಆತಂಕ, ಒತ್ತಡ, ದಣಿವು, ಜೀವನದ ಬಗ್ಗೆ ನಿರುತ್ಸಾಹ

ಕೆಲವೊಮ್ಮೆ ಬೆವರುವುದು, ಕೈನಡುಕ; ಅಥವ ಅತೀ ಉಷ್ಣ

15 ನಿಮಿಷಕ್ಕೂ ಹೆಚ್ಚು ಕಾಲ  ಅಂಜಿಕೆ,ಪ್ಯಾನಿಕ್, ಉದ್ವೇಗ, ಗಾಬರಿ, ಪದೇ ಪದೇ ಪ್ಯಾನಿಕ್ ಗೆ ಒಳಗಾದರೆ ತಜ್ಞರ ಸಹಾಯ ಪಡೆಯಿರಿ.

ಋತುಬಂಧದ ಸಮಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ

ತಜ್ಞರ ಪ್ರಕಾರ ಮೆನೋಪಾಸ್ ಆದಾಗ, ಐವರಲ್ಲಿ  ಒಬ್ಬ ಮಹಿಳೆ  ಖಿನ್ನತೆಗೊಳಗಾಗುತ್ತಾರೆ. ಹಿಂದೆ ಖಿನ್ನತೆ ಇದ್ದು, ( ಪ್ರಸವಾನಂತರ ಖಿನ್ನತೆಯೂ ಸೇರಿ) ಅಥವಾ ಕುಟುಂಬದಲ್ಲಿ ಖಿನ್ನತೆಯ  ಹಿನ್ನಲೆ ಇರುವ ಮಹಿಳೆಯರಲ್ಲಿ ಖಿನ್ನತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.  

ಮೆನೋಪಾಸ್ ನೈಸರ್ಗಿಕವಾಗಿ ಆಗದಿದ್ದಾಗ...  

ಶಸ್ತ್ರ ಚಿಕಿತ್ಸೆಯಿಂದ ಅಂಡಾಶಯವನ್ನು ತೆಗೆಸಿದಾಗ ಮೆನೋಪಾಸ್ ಆಗಬಹುದು. ಅದೇ ರೀತಿ ಗರ್ಭಪಾತ, ಕ್ಯಾನ್ಸರ್ ( ಕೀಮೋ ಥೆರಪಿ) ನಿಂದಲೂ ಮೆನೋಪಾಸ್ ಆಗಬಹುದು. ಇದರಿಂದ ಮಹಿಳೆಯರು ತಮ್ಮ ಹೆಣ್ತನದ ಮೌಲ್ಯ ಕಳೆದುಕೊಂಡಂತೆ ಭಾವಿಸಿ ವ್ಯಸನ ಪಡುವರು. ಹೆಣ್ತನದ ಮೌಲ್ಯ ಕಳೆದುಕೊಂಡಂತೆ ವ್ಯಸನ ಪಡುವರು. ಹಾರ್ಮೋನಿನ ಬದಲಾವಣೆಯಿಂದ ದೇಹದ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗಬಹುದು.ಈ ಎಲ್ಲಾ ಕಾರಣಗಳಿಂದ ಮಹಿಳೆಗೆ   ಖಿನ್ನತೆ ಅಥವಾ ಆತಂಕ ಉಂಟಾಗಬಹುದು.

ಇಂತಹ ಸನ್ನಿವೇಶದಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಸರಿಯಾದ ಆರೈಕೆ, ಬೆಂಬಲ ಸಿಕ್ಕಾಗ ಮಹಿಳೆಯರು ಬೇಗ ಚೇತರಿಸಿಕೊಳ್ಳುತ್ತಾರೆ.  

ಕುಟುಂಬದ ಬೆಂಬಲ

ಮೆನೋಪಾಸ್ ನೈಸರ್ಗಿಕವಾಗಿರಲಿ ಅಥವಾ ಶಸ್ತ್ರ ಚಿಕಿತ್ಸೆಯಿಂದ ಆಗಿರಲಿ, ಹೆಣ್ಣಿಗೆ ಕುಟುಂಬದವರ/ ಪತಿಯ  ಬೆಂಬಲ ಸಿಕ್ಕಾಗ,  ತನ್ನ ಪರಿಸ್ಥಿತಿಯನ್ನು ನಿಭಾಯಿಸಲು ಸುಲಭವಾಗುತ್ತದೆ.

ಇಂತಹ ಸಂದರ್ಭದಲ್ಲಿ ಕುಟುಂಬದವರು ಹೇಗೆ ಸಹಾಯ ಮಾಡಬಹುದು : ಕುಟುಂಬದವರು ಈ ಪರಿಸ್ಥಿತಿಯ ಬಗ್ಗೆ ತಿಳಿದಿರಬೇಕು.

 • ವೈದ್ಯರನ್ನು ಭೇಟಿ ಮಾಡಲು ಹೋಗುವಾಗ, ಪತಿಯೂ ಜೊತೆಯಿದ್ದರೆ, ಆಕೆಗೆ  ತನ್ನ ಆರೈಕೆ ಮಾಡಿಕೊಳ್ಳಲು ಸುಲಭವಾಗುತ್ತದೆ.
 • ಪತಿಯ ಜೊತೆ  ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮ ಮಾಡಬಹುದು.
 • ಒಂದು ವೇಳೆ ಆಕೆಯ ಮನಸ್ಥಿತಿ ಕುಸಿದಿದ್ದರೆ, ಪ್ರಿ ಮೆನಸ್ಟ್ರುಲ್ ಸಿಂಡ್ರೋಮ್  ಲಕ್ಷಣವೆಂದು  ತಾತ್ಸಾರ ಮಾಡಬೇಡಿ ಬದಲಾಗಿ  ಭಾವನಾತ್ಮಕ ಬೆಂಬಲ ನೀಡಿ

ಮೆನೋಪಾಸ್ ಸಮಯದಲ್ಲಿ ಮಾನಸಿಕವಾಗಿ ಆರೋಗ್ಯವನ್ನು ಕಾಯ್ದುಕೊಳ್ಳುವುದು

ಈ ಸಮಯದಲ್ಲಿ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಂದಿರಲು ಸಾಧ್ಯ.

 • ನಿಯಮಿತವಾಗಿ ಗೈನಕಾಲಜಿಸ್ಟ್ ರನ್ನು ಭೇಟಿ ಮಾಡಿ,ಆರೋಗ್ಯ ತಪಾಸಣೆ ಮಾಡಿಸುತ್ತಿರಿ. ಒಂದು ವೇಳೆ ಥೈರಾಯ್ಡ್ ಅಥವಾ ಗರ್ಭಕೋಶದ ಸಮಸ್ಯೆ ಇದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ.
 • ಯೋಗ, ಪ್ರಾಣಾಯಾಮ, ಮತ್ತಿತರ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ.ಸೂರ್ಯನ ಬೆಳಕಿಗೆ ಮೈಯೊಡ್ಡಿ , ವಿಟಮಿನ್   D ಯಿಂದ ಮೂಳೆಗಳು ಗಟ್ಟಿಯಾಗುತ್ತವೆ.
 • ದೇಹದ ತೂಕ ಇಳಿಸುವ  ಕಡೆ ಗಮನ ನೀಡಬೇಡಿ, ಬದಲಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ.
 • ನಿಮ್ಮ ಡಯಟ್ ಬಗ್ಗೆ ಗಮನವಿರಲಿ.ಫೈಬರ್, ವಿಟಮಿನ್ ಮತ್ತು ಮಿನರಲ್ ಯುಕ್ತ ಆಹಾರವನ್ನು ಸೇವಿಸಿ.
 • ಮನಸ್ಸಿಗೆ ಸಂತೋಷ ನೀಡುವ  ಹವ್ಯಾಸ, ಚಟುವಟಿಕೆಗಳನ್ನು ರೂಢಿಸಿಕೊಳ್ಳಿ.
 • ಒಂದು ವೇಳೆ ನಿಮ್ಮ ಸ್ಥೈರ್ಯ ಕುಸಿದು, ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾದರೆ, ಕೌನ್ಸಲರ್ ಅಥವ ಮನೋವೈದ್ಯರನ್ನು ಭೇಟಿ ಮಾಡಿ.

ಮಾಹಿತಿ ಕೊಡುಗೆ : ಡಾ. ಸಬೀನಾ ರಾವ್, ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್, ಸಾಕ್ರ ವರ್ಡ್ ಆಸ್ಪತ್ರೆ ; ಡಾ. ಅರುಣಾ ಮುರಳೀಧರ್, ಪ್ರಸೂತಿ ತಜ್ಞರು ಮತ್ತು ಸ್ತ್ರೀ ರೋಗ ತಜ್ಞರು, ಅಪೋಲೋ ಕ್ರಾಡಲ್ ಆಸ್ಪತ್ರೆ, ಜಯನಗರ ; ಡಾ. ಗೀತಾ ದೇಸಾಯ್, ಹೆಚ್ಚುವರಿ ಪ್ರಾಧ್ಯಾಪಕರು, ಮನೋವೈದ್ಯ ಶಾಸ್ತ್ರ ವಿಭಾಗ, ನಿಮ್ಹಾನ್ಸ್, ಬೆಂಗಳೂರು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org