ಕುಟುಂಬ ಮತ್ತು ಆರೈಕೆದಾರರಿಗೆ

Q

ನನ್ನ ಸಂಬಂಧಿಗಳಲ್ಲಿ ಸ್ಪಷ್ಟವಾಗಿ ಮಾನಸಿಕ ಖಾಯಿಲೆ ಲಕ್ಷಣಗಳು ಕಾಣಿಸಿದರೆ ನಾನು ಅವರನ್ನು ಆಸ್ಪತ್ರೆ ಸೇರಿಸುವಂತೆ ವಿನಂತಿಸಿಕೊಳ್ಳಬಹುದೇ? ಒಂದೊಮ್ಮೆ ಅವರು ಚಿಕಿತ್ಸೆಗೆ ಒಪ್ಪದಿದ್ದರೆ ನಾನೇನು ಮಾಡಬೇಕು?

A

ಒಂದೊಮ್ಮೆ ನಿಮ್ಮ ಸಂಬಂಧಿ ನಿರ್ದಿಷ್ಟ ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ, ನೀವು ನಿಮ್ಮ ಹತ್ತಿರದ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿ ಪ್ರವೇಶಾದೇಶಕ್ಕಾಗಿ ನ್ಯಾಯಾಧೀಶರ ಬಳಿ ಅರ್ಜಿ ಸಲ್ಲಿಸಬೇಕು. ಅಲ್ಲಿಂದ ಆದೇಶ ಬಂದ ಮೇಲೆ ನಿಮ್ಮ ಸಂಬಂಧಿಯನ್ನು ಮನೋರೋಗ ಆಸ್ಪತ್ರೆ/ನರ್ಸಿಂಗ್ ಹೋಮ್ ಗೆ ಸೇರಿಸಬಹುದು. (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  19, 20))

Q

ಪ್ರವೇಶಾದೇಶ ಎಂದರೇನು?

A

ಮಾನಸಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿ ಚಿಕಿತ್ಸೆಗಾಗಿ ಯಾವುದೇ ಮಾನಸಿಕ ಆರೋಗ್ಯ ಸಂಸ್ಥೆಗೆ ಸೇರಲು ಒಪ್ಪದಿದ್ದರೆ ಕುಟುಂಬದ ಸದಸ್ಯರು (ಅಥವಾ ವೈದ್ಯರು) ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರ ಬಳಿ ಪ್ರವೇಶಾದೇಶಕ್ಕೆ ಕೋರಿ ಅರ್ಜಿ ಸಲ್ಲಿಸಬಹುದು. ನ್ಯಾಯಾಧೀಶರು ಈ ಅರ್ಜಿ ಸ್ವೀಕರಿಸಿದ ನಂತರ ಎರಡು ಸಂಗತಿಗಳನ್ನು ನಿರ್ಣಯಿಸಬೇಕಾಗುತ್ತದೆ.

  • ತಮ್ಮ ಸ್ವಂತದ ರಕ್ಷಣೆ ಮತ್ತು ಆಸ್ಪತ್ರೆಯಲ್ಲಿರುವ ಇತರರ ಸುರಕ್ಷತೆಯ ದೃಷ್ಟಿಯಿಂದ ಈ ರೀತಿಯ ವ್ಯಕ್ತಿಯನ್ನು  ಮನೋರೋಗ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನಡೆಸುವ ಅವಶ್ಯಕತೆಯಿದೆಯೇ? ಹಾಗೂ,
  • ಇದನ್ನು ದೃಢಪಡಿಸಲು ನ್ಯಾಯಾಧೀಶರು ವ್ಯಕ್ತಿಯನ್ನು ಮತ್ತು ಆತನ ವೈದ್ಯಕೀಯ ದಾಖಲೆಗಳನ್ನು ಪರೀಕ್ಷಿಸುತ್ತಾರೆ. ನಂತರ ಅಗತ್ಯವಾಗಿದ್ದರೆ ಆದೇಶ ನೀಡುವ ಮನಸ್ಸು ಮಾಡಬಹುದು. (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  20, 22)

Q

ನಾನು ನನ್ನ ಮಗುವನ್ನು ಒಂದು ಮನೋರೋಗ ಆಸ್ಪತ್ರೆಗೆ ದಾಖಲಿಸಿದ್ದೆ. ಈಗ ಅಲ್ಲಿಂದ ಬಿಡುಗಡೆ ಮಾಡಿಸಬೇಕು. ಅದಕ್ಕಿರುವ ಪ್ರಕ್ರಿಯೆ ಏನು?

A

ನೀವು ನಿಮ್ಮ ಮಗುವನ್ನು ಬಿಡುಗಡೆ ಮಾಡಿಸಲು ಬಯಸಿದರೆ, ನಿಮ್ಮ ಮಗುವನ್ನು ದಾಖಲಿಸಿದ ಆಸ್ಪತ್ರೆಯ ಮನೋರೋಗ ತಜ್ಞರಿಗೆ ಒಂದು ಅರ್ಜಿ ಸಲ್ಲಿಸಬೇಕು. ತಜ್ಞರು ನಿಮ್ಮ ಮಗುವಿನ ಚೇತರಿಕೆ ಕುರಿತು ಸಂತೃಪ್ತಿ ಹೊಂದಿದ್ದಲ್ಲಿ ನಿಮ್ಮ ಮಗುವನ್ನು ಬಿಡುಗಡೆ ಮಾಡುತ್ತಾರೆ. (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  18) ಒಂದೊಮ್ಮೆ, ನಿಮ್ಮ ಮಗು ಸೂಕ್ತವಾಗಿ ಚೇತರಿಸಿಕೊಂಡಿರದಿದ್ದರೆ, ತಜ್ಞರು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಮ ಮಗುವನ್ನು ಆಸ್ಪತ್ರೆಯಲ್ಲಿಟ್ಟುಕೊಳ್ಳಲು  ಸೂಚಿಸಬಹುದು.

Q

ನನ್ನ ಸಂಬಂಧಿ ಅಥವಾ ಸ್ನೇಹಿತನನ್ನು ನ್ಯಾಯಾಧೀಶರ ಆದೇಶದಂತೆ ಮನೋರೋಗ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಿದ್ದಾರೆ. ನಾನೀಗ ಅವರನ್ನು ವಾಪಸ್ ನನ್ನ ಸುಪರ್ದಿಗೆ ತೆಗೆದುಕೊಳ್ಳಲು ಬಯಸುತ್ತೇನೆ? ಅದಕ್ಕೆ ನಾನು ಅನುಸರಿಸಬೇಕಾದ ಪ್ರಕ್ರಿಯೆ ಏನು?

A

ನೀವು ಮನೋವೈದ್ಯರಿಗೆ ಒಂದು ಅರ್ಜಿ ಸಲ್ಲಿಸಬೇಕು. ಅವರು ಅದನ್ನು ತಮ್ಮ ಸಲಹೆಗಳೊಂದಿಗೆ ನ್ಯಾಯಾಧೀಶರಿಗೆ ರವಾನಿಸುತ್ತಾರೆ. ನ್ಯಾಯಾಧೀಶರು ನಿರ್ಣಯಿಸಿದ ಮೊತ್ತದ ಬಾಂಡ್ ಅನ್ನು ನೀವು ಸಲ್ಲಿಸಿದ ನಂತರದಲ್ಲಿ ರೋಗಿಯ ಆರೈಕೆ ಮಾಡುವಲ್ಲಿ ಸಿದ್ಧರಿರುವುದಾಗಿ ನೀವು ಬರೆದುಕೊಟ್ಟ ಅಫಿಡವಿಟ್ ಮೇಲೆ ಸಹಿ ಹಾಕಬೇಕು. ರೋಗಿ ತನಗೆ ತಾನೇ ಸ್ವಯಂ ಹಾನಿಮಾಡಿಕೊಳ್ಳಬಹುದಾದ ಮತ್ತು  ಇತರರಿಗೆ ಹಾನಿಮಾಡುವಂತಹ ಸಂದರ್ಭಗಳಿಂದ ರಕ್ಷಿಸುತ್ತೇನೆ ಎಂಬ ಭರವಸೆ ಕೊಡಬೇಕು. ಇದರಿಂದ ನ್ಯಾಯಾಧೀಶರು ತೃಪ್ತಿಗೊಂಡರೆ, ಬಿಡುಗಡೆ ಮಾಡಲು ಅನುಮತಿ ಆದೇಶ ನೀಡುತ್ತಾರೆ. (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  42)

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org