ಸಾಮಾನ್ಯವಾಗಿ ಕೇಳಲಾಗುವವ ಕಾನೂನು ಪ್ರಶ್ನೆಗಳು: ಮದುವೆ ಮತ್ತು ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ಕಾನೂನು

Q

ಒಂದು ವೇಳೆ ನಾನು ಮಾನಸಿಕ ಅಸ್ವಸ್ಥನಾಗಿದ್ದ ಪಕ್ಷದಲ್ಲಿ ಅಥವಾ ಅನಾರೋಗ್ಯಯುತ ಮನಸ್ಸನ್ನು ಹೊಂದಿದ್ದೇನೆ ಎಂದು ಘೋಷಿಸಲ್ಪಟ್ಟಿದ್ದಲ್ಲಿ, ಕಾನೂನು ರೀತ್ಯಾ ಊರ್ಜಿತ ಮದುವೆಯಾಗಲು ಅರ್ಹನಾಗಿದ್ದೇನೆಯೇ?

A

ಭಾರತದಲ್ಲಿ, ಮದುವೆ ಎಂಬ ಸಂಸ್ಥೆಯನ್ನು ನಿರ್ದೇಶಿಸುವಲ್ಲಿ ಪ್ರತಿಯೊಂದು ಧರ್ಮವೂ ತನ್ನದೇ ಆದ ವೈಯಕ್ತಿಕ ಕಾನೂನು ಹೊಂದಿದೆ.  ಕೆಲವು ಧರ್ಮಗಳಲ್ಲಿ, ವಧುವರರಿಬ್ಬರಲ್ಲಿ ಯಾರಾದರೊಬ್ಬರು ಮಾನಸಿಕ ಅನಾರೋಗ್ಯ ಪೀಡಿತರಾಗಿದ್ದರೂ ಮದುವೆಯನ್ನು ಕಾನೂನುಬದ್ಧವೆಂದು  ಪರಿಗಣಿಸುವದಿಲ್ಲ. (ಅಥವಾ ಅದನ್ನು ಅಕ್ರಮವೆಂದು ಎಂದು ಪರಿಗಣಿಸಲಾಗುತ್ತದೆ). ಇಂತಹ ಸಂದರ್ಭಗಳಲ್ಲಿ ಮದುವೆಯೇ ನಡೆಯಲಿಲ್ಲ ಎಂಬ ಫಲಿತಾಂಶವನ್ನು ಇದು ಪರಿಣಾಮಕಾರಿಯಾಗಿ ಪ್ರತಿನಿಧಿಸುತ್ತದೆ. ಆಗ ಅದು ವಿಚ್ಛೇದನಕ್ಕೆ ವೇದಿಕೆ ಒದಗಿಸುತ್ತದೆ. ಮಾನಸಿಕ ಅಸ್ವಸ್ಥತೆ ಮತ್ತು ಮದುವೆಗೆ ಸಂಬಂಧಿಸಿದಂತೆ ಪ್ರತಿಯೊಂದು ಧರ್ಮವೂ ತನ್ನದೇ ಆದ ಪ್ರತ್ಯೇಕ ಕಾನೂನು ಹೊಂದಿದೆ ಎನ್ನುವುದನ್ನು ಈ ಕೆಳಗೆ ಹೇಳಲಾಗಿದೆ.

ಹಿಂದೂಗಳಲ್ಲಿ:

ಊರ್ಜಿತ ಹಿಂದೂ ಮದುವೆಗೆ ಅವಶ್ಯಕವಾದ ಪರಿಸರವನ್ನು ಹಿಂದೂ ವಿವಾಹ ಕಾಯಿದೆ ವಿವರಿಸುತ್ತದೆ. ಈ ಕಾಯಿದೆಯ ಕಲಂ (ii) ರಲ್ಲಿ ಮಾನಸಿಕ  ಅಸ್ವಸ್ಥತೆಯ ಕುರಿತು ಈ ಕೆಳಗಿನಂತೆ ಹೇಳಲಾಗಿದೆ.

ಮದುವೆಯ ಸಮಯದಲ್ಲಿ ಎರಡೂ ಪಕ್ಷದವರಲ್ಲಿ ಯಾರಾದರೂ ಒಬ್ಬರು:

ಒಂದೊಮ್ಮೆ ಮನಸ್ಸಿನ ಸ್ವಾಸ್ಥ್ಯವಿಲ್ಲದೇ ನ್ಯಾಯಸಮ್ಮತವಾದ ಒಪ್ಪಿಗೆಯನ್ನು ನೀಡಲು ಅಸಮರ್ಥರಾಗಿದ್ದ ಪಕ್ಷದಲ್ಲಿ, ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಲ್ಲಿ, ಅಥವಾ ಮದುವೆಯಾಗಲು  ಮತ್ತು ಮಕ್ಕಳಿಗೆ ಜನ್ಮ ನೀಡಲು ಅಸಮರ್ಥರಾಗಿದ್ದ ಪಕ್ಷದಲ್ಲಿ, ಅಲ್ಲದೇ ನಿರಂತರವಾಗಿ ಬುದ್ದಿಭ್ರಮಣೆಗೆ ಒಳಗಾಗಿದ್ದಲ್ಲಿ ಈ ಕಾಯಿದೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಬೇಕು.

ಕಾಯಿದೆಯ 12ನೇ ಕಲಮಿನ ಪ್ರಕಾರ, ಒಂದೊಮ್ಮೆ ಈ ಎಲ್ಲ ನಿಯಮಗಳು ಪೂರೈಕೆಯಾಗದೇ ಇದ್ದಲ್ಲಿ, ಅಂತಹ ಮದುವೆಯು ಅನೂರ್ಜಿತಗೊಳ್ಳುತ್ತದೆ ಮತ್ತು ಪೀಡಿತ ಸಂಗಾತಿಯು ನ್ಯಾಯಾಲಯದ ಮೊರೆ ಹೋದಾಗ ರದ್ದಾಗುತ್ತದೆ.

ಮುಸ್ಲಿಂ ಕಾನೂನು:

ಮುಸ್ಲಿಂ ಕಾಯಿದೆಯ ಪ್ರಕಾರ, ಯಾವುದೇ ಮುಸ್ಲಿಂ ವ್ಯಕ್ತಿ ಅಸ್ವಸ್ಥ ಮನಸ್ಕನಾಗಿದ್ದಲ್ಲಿ ಮತ್ತು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ತನ್ನ ಕಾನೂನಾತ್ಮಕ ಪೋಷಕರ ಸಹಾಯದಿಂದ ನ್ಯಾಯೋಚಿತ ಮದುವೆ ಒಡಂಬಡಿಕೆಯನ್ನು ಮಾಡಿಕೊಳ್ಳಬಹುದು. ಈ ರೀತಿಯ ಮದುವೆ ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗಿರುತ್ತದೆ.

ಪಾರ್ಸಿಗಳ ಕಾನೂನು:

ಪಾರ್ಸಿಗಳ ಕಾನೂನಿನ ಅಡಿಯಲ್ಲಿ, ಯಾವುದೇ ಒಂದು ಪಕ್ಷದ ಸಂಗಾತಿಯು ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ ಅಂತಹ ಮದುವೆಯನ್ನು ಅನೂರ್ಜಿತಗೊಳಿಸುವಂತಿಲ್ಲ. ಮತ್ತು ಇದನ್ನು ಕಾನೂನಿನಲ್ಲಿ ಮಾನ್ಯಮಾಡಲಾಗುತ್ತದೆ.

ಕ್ರಿಶ್ಚಿಯನ್ ಕಾನೂನಿನ ಪ್ರಕಾರ:

ಕ್ರಿಶ್ಚಿಯನ್ ಮದುವೆ ಕಾನೂನಿನಲ್ಲಿ ಯಾವುದೇ ರೀತಿಯ ಮಾನಸಿಕ ಕಾಯಿಲೆ ಮತ್ತು ಮನಸ್ಸಿನ ಅಸ್ವಸ್ಥತೆ ಕುರಿತಂತೆ ಹೇಳುವುದೇ ಇಲ್ಲ. ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯ ಸಮಯದಲ್ಲಿ ಯಾವುದೇ ಒಂದು ಪಕ್ಷದ  ವ್ಯಕ್ತಿ ಅಸ್ವಸ್ಥ ಮನಸ್ಸನ್ನು ಹೊಂದಿದ್ದರೆ, ಆ ಮದುವೆ ಅನೂರ್ಜಿತವಾಗುವುದಿಲ್ಲ.

ಮದುವೆಗಳ ವಿಶೇಷ ಕಾನೂನಿನ ಅಡಿಯಲ್ಲಿ ಜ್ಯಾತ್ಯತೀತ ಮದುವೆಗಳಿಗಾಗಿ ಸಂಬಂಧಿಸಿದಂತೆ:

ಈ ಕಾಯಿದೆಯ ಪ್ರಕಾರ ವ್ಯಕ್ತಿ ಅಸ್ವಸ್ಥ ಮನಸ್ಸಿನಿಂದ ಕೂಡಿದ್ದರೆ, ಅಂತಹ ವ್ಯಕ್ತಿಯ ಮದುವೆಯನ್ನು ಪುರಸ್ಕರಿಸುವುದಿಲ್ಲ. ಮದುವೆಯ ಸಮಯದಲ್ಲಿ, ಯಾರಾದರೂ ಒಂದು ಪಕ್ಷದವರು,

ಮಾನಸಿಕ ಅಸ್ವಸ್ಥತೆಯ ಕಾರಣಕ್ಕಾಗಿ ನ್ಯಾಯಸಮ್ಮತವಾದ ಒಪ್ಪಿಗೆಯನ್ನು ನೀಡಲು ಅಸಮರ್ಥರಾಗಿದ್ದ ಪಕ್ಷದಲ್ಲಿ, ಅಥವಾ, ನ್ಯಾಯಸಮ್ಮತವಾದ ಒಪ್ಪಿಗೆಯನ್ನು ನೀಡಲು ಸಮರ್ಥರಿದ್ದು, ಮದುವೆ ಮತ್ತು ಮಕ್ಕಳನ್ನು ಹೆರುವಲ್ಲಿ ಅಸಮರ್ಥರಾಗಬಹುದಾದ ತೀವ್ರಸ್ವರೂಪದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರೆ,

ನಿರಂತರವಾಗಿ ಬುದ್ಧಿಭ್ರಮಣೆಗೆ ಒಳಗಾಗುತ್ತಿದ್ದರೆ, ಅಂತಹ ಮದುವೆ ಅನೂರ್ಜಿತಗೊಳ್ಳುತ್ತದೆ.

Q

ನನ್ನ ಸಂಗಾತಿ ತೀವ್ರಸ್ವರೂಪದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ನನಗೆ ಈ ಸಂಬಂಧವನ್ನು ಮುಂದುವರೆಸುವುದು ಸಾಧ್ಯವೇ ಇಲ್ಲವೆಂಬಂತಹ ಪರಿಸ್ಥಿತಿಯುಂಟಾಗಿದೆ. ಇಂತಹ ಪರಿಸ್ಥಿತಿಯಿರುವಾಗ ವಿವಾಹ ವಿಚ್ಛೇದನ ಪಡೆದುಕೊಳ್ಳುವ ಸಾಧ್ಯತೆಯಿದೆಯೇ?

A

ಈ ಮೇಲೆ ಹೇಳಿರುವಂತೆ, ಹಲವಾರು ಕೇಸುಗಳಲ್ಲಿ, ತೀವ್ರಸ್ವರೂಪದ ಮಾನಸಿಕ ಖಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆಯಿಂದಾಗಿ ಒಂದು ಮದುವೆಯನ್ನು ಅನೂರ್ಜಿತವೆಂದು ಘೋಷಿಸಲು ಕೆಲಮಟ್ಟಿಗೆ ಸಾಧ್ಯವಿದೆ. ಆದಾಗ್ಯೂ, ಮದುವೆಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳು ನಮ್ಮ ದೇಶದಲ್ಲಿ ಬೇರೆಬೇರೆಯೇ ಆಗಿವೆ. ನಿಮ್ಮ ಸಂಗಾತಿ ಮದುವೆಯ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆ ಅಥವಾ ಮಾನಸಿಕ ಖಾಯಿಲೆಯಿಂದ ಬಳಲದೇ ಇದ್ದ ಸಾಧ್ಯತೆಯೂ ಇದೆ. ಇಂತಹ ಕೇಸುಗಳಲ್ಲಿ, ನಿಮ್ಮ ಮದುವೆಯನ್ನು ನಿರ್ದೇಶಿಸುವ ವೈಯಕ್ತಿಕ ಕಾನೂನುಗಳನ್ನಾಧರಿಸಿ ನಿಮಗೆ ಈ ಕೆಳಗೆ ಹೇಳಲಾದ ಪರಿಹಾರಗಳು ದೊರೆಯಬಹುದು.

ಹಿಂದೂಗಳಿಗೆ:

ಹಿಂದೂ ವಿವಾಹ ಕಾಯಿದೆಯ 13ನೇ ಕಲಮಿನ ಪ್ರಕಾರ, ಒಂದೊಮ್ಮೆ ನಿಮ್ಮ ಸಂಗಾತಿಯು ನಿರಂತರವಾಗಿ ಅಥವಾ ನಡುನಡುವೆ ಆಗಾಗ ತೀವ್ರಸ್ವರೂಪದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಪಕ್ಷದಲ್ಲಿ, ನೀವು ಮಾನಸಿಕ ಖಾಯಿಲೆ ಪೀಡಿತ ನಿಮ್ಮ ಸಂಗಾತಿಯೊಂದಿಗೆ ನಿರೀಕ್ಷತ ಜೀವನವನ್ನು ಬದುಕುವುದು ಸಾಧ್ಯವಾಗುತ್ತಿಲ್ಲವಾದ್ದರಿಂದ  ವಿವಾಹ ವಿಚ್ಛೇದನಕ್ಕೆ ನೀವು ಅರ್ಜಿಯನ್ನು ಹಾಕಬಹುದು.

ಮುಸ್ಲಿಮರಿಗೆ:

ನೀವು ಮಹಿಳೆಯಾಗಿದ್ದ ಪಕ್ಷದಲ್ಲಿ, ನಿಮ್ಮ ಗಂಡನು ಎರಡು ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಮತಿವಿಕಲನಾಗಿದ್ದಲ್ಲಿ, ಮುಸ್ಲಿಂ ವಿವಾಹ ಕಾನೂನಿನ ಅಡಿಯಲ್ಲಿ ನಿಮ್ಮ ಮದುವೆಯನ್ನು ಬರಖಾಸ್ತುಗೊಳಿಸುವಂತೆ ಅರ್ಜಿ ನೀಡಬಹುದಾಗಿದೆ.

ಪಾರ್ಸಿಗಳಿಗೆ:

ಒಂದೊಮ್ಮೆ ನಿಮ್ಮ ಸಂಗಾತಿಯು ಮದುವೆಯ ಸಂದರ್ಭದಲ್ಲಿ ಮಾನಸಿಕವಾಗಿ ಸ್ವಸ್ಥವಿಲ್ಲದಿದ್ದಲ್ಲಿ ಮತ್ತು ನೀವು ನ್ಯಾಯಾಲಯವನ್ನು ಯಾಚಿಸುವ ಸಮಯದಲ್ಲಿಯೂ ಅದೇ ಪರಿಸ್ಥಿತಿ ಮುಂದುವರೆದಿದ್ದಲ್ಲಿ, ವಿವಾಹ ವಿಚ್ಛೇದನವನ್ನು ನೀಡಬಹುದಾಗಿದೆ. ಆದಾಗ್ಯೂ, ನೀವು ಮದುವೆಯ ಸಂದರ್ಭದಲ್ಲಿ ಈ ವಿಷಯ ನಿಮಗೆ ತಿಳಿದಿರಲಿಲ್ಲ ಎಂಬುದನ್ನು ಸಾಧಿಸಿ ಸಾಬೀತುಪಡಿಸಬೇಕಾಗುತ್ತದೆ. ಅಲ್ಲದೇ, ಮದುವೆಯಾದ ಮೂರು ವರ್ಷಗಳೊಳಗಾಗಿ ವಿವಾಹ ವಿಚ್ಛೇದನ  ಮೊಕದ್ದಮೆಯನ್ನು ಹಾಕಬೇಕಾಗುವುದು.

ಒಂದೊಮ್ಮೆ ನಿಮ್ಮ ಸಂಗಾತಿಯು ಎರಡು ವರ್ಷಗಳ ಕಾಲ ಅತೀವ ಪ್ರಮಾಣದ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದು, ನಿಮ್ಮ ಸಂಗಾತಿಯೊಂದಿಗೆ ಜೀವನವನ್ನು ನಿರ್ವಹಿಸುವುದು ನಿಜವಾಗಿಯೂ ಸಾಧ್ಯವಿಲ್ಲ  ಎಂಬಂತಹ ಪರಿಸ್ಥಿತಿಯಿದ್ದ ಪಕ್ಷದಲ್ಲಿ ಕೂಡ ನೀವು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಬಹುದು.

ಕ್ರೈಸ್ತರಿಗೆ:

ಭಾರತೀಯ ವಿವಾಹ ವಿಚ್ಛೇದನ ಕಾಯ್ದೆಯ ಅಡಿಯಲ್ಲಿ, ಈ ಕೆಳಗಿನ ಕಾರಣಗಳ ಪರಿಸ್ಥಿತಿಯಿದ್ದ ಪಕ್ಷದಲ್ಲಿ ನೀವು ವಿವಾಹ ವಿಚ್ಛೇದನಕ್ಕೆ ಆಧಾರವನ್ನು ಪಡೆಯಬಹುದು:

ನಿಮ್ಮ ಸಂಗಾತಿಯ ಪರಿಸ್ಥಿತಿ ‘ಗುಣಮುಖವಾಗದಂತಿದ್ದಲ್ಲಿ’. ಇದನ್ನು ಸಾಧಿಸಿ ತೋರಿಸಲು ವೈದ್ಯಕೀಯ ಪುರಾವೆಗಳಿರಲೇಬೇಕು.

ವಿವಾಹ ವಿಚ್ಛೇದನ ಅರ್ಜಿಯನ್ನು ಹಾಕುವುದಕ್ಕೂ ಪೂರ್ವದಲ್ಲಿ ಅವರ ಖಾಯಿಲೆಯ ಪರಿಸ್ಥಿತಿ ಕನಿಷ್ಟವೆಂದರೆ ಎರಡುವರ್ಷಗಳಿಗೂ ಮೊದಲಿನಿಂದಲೂ ಅಸ್ತಿತ್ವದಲ್ಲಿ ಇದ್ದಿರಬೇಕು.

ವಿಶೇಷ ವಿವಾಹ ಕಾನೂನಿಯಡಿಯಲ್ಲಿ ಬರುವ ಜಾತ್ಯತೀತ ವಿವಾಹಗಳಿಗಾಗಿ:

ಒಂದೊಮ್ಮೆ ನಿಮ್ಮ ಸಂಗಾತಿಯು ಗಣನೀಯವಾದ ಅವಧಿಯಿಂದ ತೀವ್ರಸ್ವರೂಪದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅವರೊಂದಿಗೆ ಖಂಡಿತವಾಗಿಯೂ ಜೀವನ ನಡೆಸುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿರುವಾಗ ಮಾನಸಿಕ ಖಾಯಿಲೆಯು ವಿವಾಹ ವಿಚ್ಛೇದನಕ್ಕೆ ಆಧಾರವಾಗಿ ಒದಗಿಬರುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org