ಅನ್ಯಾಯಕ್ಕೊಳಗಾದ ಮೇಲೆ: ಉತ್ತಮ ಭಾವಾವೇಷದ ಆರೋಗ್ಯಕ್ಕೆ ಸ್ಥೈರ್ಯ ಬೆಳೆಸುವುದು ಹೇಗೆ ?

ಅನ್ಯಾಯಕ್ಕೊಳಗಾದ ಮೇಲೆ: ಉತ್ತಮ ಭಾವಾವೇಷದ ಆರೋಗ್ಯಕ್ಕೆ ಸ್ಥೈರ್ಯ ಬೆಳೆಸುವುದು ಹೇಗೆ ?

ಸ್ಥೈರ್ಯ ಎಂದರೆ  ನಮಗೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ  ನಿಭಾಯಿಸುವ ಸಾಮರ್ಥ್ಯ. ನಾವು ಹೆಚ್ಚು ಸ್ಥೈರ್ಯ ಬೆಳೆಸಿಕೊಂಡಷ್ಟೂ ಪ್ರತಿಕೂಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ. ತಮ್ಮ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಎದುರಿಸುವ ಮಕ್ಕಳು ಕೆಲವು ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಇದೊಂದೇ ನಿರ್ಣಾಯಕ ಅಂಶವಾಗುವುದಿಲ್ಲ.

ಸುರಕ್ಷಿತ ಹಾಗೂ ಆತ್ಮೀಯ ಪರಿಸರವನ್ನು ಸೃಷ್ಟಿಸುವ ಮೂಲಕ ಮಕ್ಕಳ ಪೋಷಕರು ಮತ್ತು ಕುಟುಂಬದವರು ಮಕ್ಕಳ ಮಾನಸಿಕ ಸ್ಥಿತಿಯನ್ನು ಸರಿಪಡಿಸುವಲ್ಲಿ, ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಬಹುದು. ತನ್ಮೂಲಕ ಮಕ್ಕಳಲ್ಲಿ ಅವರ  ಬದುಕಿನಲ್ಲಿ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಶಕ್ತಿಯನ್ನು ತುಂಬಲು ಸಾಧ್ಯ.

ಪೋಷಕರಾಗಿ ಅಥವಾ ಪಾಲಕರಾಗಿ ಯಾವುದೇ ರೀತಿಯ ದೌರ್ಜನ್ಯ ಎದುರಿಸಿರುವ ಮಗುವಿನಲ್ಲಿ ಸ್ಥೈರ್ಯ ಹೆಚ್ಚಿಸಲು ಈ ಕ್ರಮಗಳು ಅತ್ಯವಶ್ಯ :

ಅವರ  ಭಾವನೆಗಳಿಗೆ ಬೆಲೆ ಕೊಡಿ. ಅಳಬೇಡ ಎಂದಾಗಲೀ, ಮರೆತುಬಿಡು ಎಂದಾಗಲೀ ಹೇಳಬೇಡಿ.  ಅವರು ದುಃಖದಲ್ಲಿರುವುದನ್ನು ನೀವು ಗುರುತಿಸಿದ್ದೀರಿ ಎಂದು ಮನದಟ್ಟು ಮಾಡಿ. ಸನ್ನಿವೇಶದ ಪರಿಣಾಮ ಅವರಿಗೆ ನೋವಾಗಿದೆ, ಭಯಪಟ್ಟಿದ್ದಾರೆ ಎನ್ನುವುದನ್ನು ಗುರುತಿಸಿ. ಆ ರೀತಿ ಪ್ರತಿಕ್ರಯಿಸುವುದು ಸಹಜವಾದದ್ದು ಎಂದು ಅವರಿಗೆ ಭರವಸೆ ನೀಡಿ. ಅವರ  ಭಾವನೆಗಳನ್ನು ಹೇಳಿಕೊಳ್ಳಲು ಅವರಿಗೆ ಪ್ರೋತ್ಸಾಹ ನೀಡಿ.

  • ನಿಯತಕಾಲಿಕ ಆಚರಣೆಗಳನ್ನು  ನಿರ್ವಹಿಸಿ. ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಚೌಕಟ್ಟು ಇದೆ ಎಂದಾಗ ಎಳೆಯ ಮಕ್ಕಳು ಸುರಕ್ಷಿತ ಭಾವನೆ ಹೊಂದಿರುತ್ತಾರೆ.  ಮಕ್ಕಳಿಗೆ ಆಕರ್ಷಕ ಎನಿಸುವ, ಅರ್ಥಪೂರ್ಣ ಎನಿಸುವ  ಮುಖ್ಯ ಆಚರಣೆಗಳನ್ನು ಅವರಿಗೆ ತಪ್ಪದೆ ಹೇಳಿಕೊಡಿ. ಉದಾಹರಣೆಗೆ ಮಲಗುವ ಸಮಯದಲ್ಲಿ ಕತೆ ಓದಿ ಹೇಳುವುದು ಅಥವಾ ಪ್ರತಿ ಸಂಜೆ ಅವರೊಡನೆ ಊಟ ಮಾಡುವುದು ಇತ್ಯಾದಿ.

  • ನಿಮ್ಮ ಕುಟುಂಬದಲ್ಲಿ ಮತ್ತು ಸ್ನೇಹಿತರ ವಲಯದಲ್ಲಿ ಮಕ್ಕಳಿಗೆ ವಿಶ್ವಾಸ ಇರುವವರೊಡನೆ ಅವರ ಬಾಂಧವ್ಯವನ್ನು ಗಟ್ಟಿಗೊಳಿಸಿ.

  • ದೌರ್ಜನ್ಯ ಈ ಹಿಂದೆಯೇ ನಡೆದುಹೋಗಿದೆ ಹಾಗಾಗಿ ಮತ್ತೊಮ್ಮೆ ದೌರ್ಜನ್ಯ ನಡೆಯುತ್ತದೆ ಎಂಬ ಭೀತಿಯಲ್ಲಿ ಬದುಕುವುದು ಬೇಕಿಲ್ಲ ಎಂದು ಮಕ್ಕಳಿಗೆ ಅರ್ಥವಾಗುವಂತೆ ಹೇಳಿ. ಅದೇ ರೀತಿಯ ದೌರ್ಜನ್ಯ ಮತ್ತೊಮ್ಮೆ ನಡೆಯದಂತೆ ನೀವು  ಯಾವ ರೀತಿಯ ಎಚ್ಚರಿಕೆ ವಹಿಸಿದ್ದೀರಿ ಎಂದು ಅವರಿಗೆ ನೆನಪಿಸುತ್ತಿರಿ.

  • ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಆ ಧ್ಯೇಯ ಸಾಧಿಸಲು ಹೇಗೆ ಮುನ್ನಡೆಯಬೇಕು ಎಂಬುದರ ಬಗ್ಗೆ ಅವರಿಗೆ ಸಹಾಯ ಮಾಡಿ.  ಗುರಿ ಚಿಕ್ಕದೇ ಆಗಿರಲಿ, ಸಾಧಿಸಬಹುದಾದ ಧ್ಯೇಯವೇ ಆಗಿರಲಿ, ಅದರಿಂದ ಮಕ್ಕಳು ತಮ್ಮ ಚಟುವಟಿಕೆಗಳನ್ನು ತಾವೇ ನಿಯಂತ್ರಿಸಿಕೊಳ್ಳಬಹುದು ಎಂದು ಅರ್ಥಮಾಡಿಕೊಳ್ಳುವಂತೆ ನೋಡಿಕೊಳ್ಳಿ.

  • ನೀವು ಮಕ್ಕಳೊಡನೆ ಯಾವುದೇ ಒಪ್ಪಂದ ಮಾಡಿಕೊಂಡರೂ ಅದನ್ನು ತಪ್ಪದೆ ಪಾಲಿಸುವ ಮೂಲಕ, ಹಿರಿಯರಲ್ಲಿ ವಿಶ್ವಾಸ ಇಡಬಹುದು ಎಂಬ ಭಾವನೆಯನ್ನು ಅವರಲ್ಲಿ ಬೆಳೆಸಿ.

  • ಒತ್ತಡ ಉಂಟುಮಾಡುವ ಯಾವುದೇ ಸನ್ನಿವೇಶದಿಂದ ಹೊರಬರಲು ಮಕ್ಕಳಿಗೆ ನೆರವು ನೀಡಿ. ದೌರ್ಜನ್ಯ ಎಸಗುವವರಿಂದ ಅಥವಾ ಅವರು ಹಿಂದೆ ಅನುಭವಿಸಿದ ದೌರ್ಜನ್ಯದ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುವವರಿಂದ ಮಕ್ಕಳನ್ನು ದೂರ ಇಡಿ. ಮಕ್ಕಳನ್ನು ಬೇರೊಂದು ಹೊಸ ಜಾಗಕ್ಕೆ ಕರೆದೊಯ್ಯಿರಿ.

  • ಮಕ್ಕಳಿಗೆ ತಮ್ಮ ಬಗ್ಗೆ ಆತ್ಮವಿಶ್ವಾಸ ಮತ್ತು ನಂಬಿಕೆ ಬೆಳೆಸಿಕೊಳ್ಳಲು ಸಹಾಯ ಮಾಡಿ. ಅವರು ಹಿಂದೆಯೂ ಇಂತಹ ಸವಾಲುಗಳನ್ನು ಎದುರಿಸಿರುವುದನ್ನು ಅವರಿಗೆ ನೆನಪಿಸಿ. ಇನ್ನು ಮುಂದೆಯೂ ಅಂತಹ ಸನ್ನಿವೇಶವನ್ನು ಅವರು ನಿಭಾಯಿಸುತ್ತಾರೆ ಎಂಬ ನಂಬಿಕೆ ಇರಿಸಿ.  ಇದೇ ವೇಳೆ, ಅವರಿಗೆ ಅಗತ್ಯ ಬಿದ್ದಾಗ ನೆರವಿಗೆ ನೀವು ಇರುತ್ತೀರಿ ಎಂದು ಅವರಲ್ಲಿ ವಿಶ್ವಾಸ ಉಂಟುಮಾಡಿ.

  • ಅವರಿಗೆ ಸಾಧ್ಯವಾದಷ್ಟೂ ಪ್ರೀತಿ ತೋರಿಸಿ,  ಅವರೊಡನೆ ವಾತ್ಸಲ್ಯದಿಂದ ವರ್ತಿಸಿ ಮತ್ತು ಬೆಂಬಲ ಪ್ರೋತ್ಸಾಹ ನೀಡಿ. ಅವರನ್ನು ಪ್ರೀತಿಸಲಾಗುತ್ತಿದೆ, ಅವರ  ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎನ್ನುವುದು ಅವರಿಗೆ ತಿಳಿಯಲಿ.

  • ಮತ್ತೊಮ್ಮೆ ಅಂತಹುದೇ ಸನ್ನಿವೇಶ ಎದುರಾದರೆ ಏನು ಮಾಡಬೇಕು ಎನ್ನುವುದನ್ನು ಮಕ್ಕಳು ಅರಿತುಕೊಳ್ಳಲಿ. ಅಂತಹ ಸನ್ನಿವೇಶದಲ್ಲಿ ನಿಮ್ಮಬಳಿಗೆ ಸಹಾಯಕ್ಕಾಗಿ ಬಂದರೆ ನಿಮ್ಮ ಸಹಾಯ ದೊರೆಯುತ್ತದೆ ಎಂಬ ಭರವಸೆ ನೀಡಿ. ಒಂದು ವೇಳೆ ಅಂತಹ ಸನ್ನಿವೇಶದಲ್ಲಿ ನಿಮ್ಮನ್ನು ತಲುಪಲು ಸಾಧ್ಯವಾಗದಿದ್ದರೆ  ಮಕ್ಕಳ ಸಹಾಯವಾಣಿಗೆ ಫೋನ್ ಮಾಡುವುದು ಮುಂತಾದ ಇತರ ಮಾರ್ಗಗಳಿವೆ ಎಂದು ಮಕ್ಕಳಿಗೆ ಮನವರಿಕೆ ಮಾಡಿ.  ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ ಕೆಲವು ಸರಳ ರಕ್ಷಣಾ ವಿಧಾನಗಳನ್ನು ಹೇಳಿಕೊಡುವ ಮೂಲಕ ಅವರ  ಆತ್ಮ ವಿಶ್ವಾಸವನ್ನು ಹೆಚ್ಚಿಸಲು ನೆರವಾಗಿ.  ತಮ್ಮನ್ನು ತಾವು ನಿಭಾಯಿಸಿಕೊಳ್ಳಲು ಸಾಧ್ಯ ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡಿ.

  • ಅಗತ್ಯ ಬಿದ್ದಲ್ಲಿ ಸಹಾಯಕ್ಕಾಗಿ ವೃತ್ತಿಪರರನ್ನು ಸಂಪರ್ಕಿಸಿ

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org