ಆಪ್ತಸಮಾಲೋಚನೆಗೆ ಬರುವ ಮಕ್ಕಳು ಮತ್ತು ಹದಿಹರೆಯದವರು ವಿವರಿಸುವ ಸಮಸ್ಯೆ ಏನೇ ಇದ್ದರೂ ಅವರಲ್ಲಿ ಮುಕ್ಕಾಲು ಭಾಗ ಜನರು ಆತ್ಮಗೌರವದ ಸಮಸ್ಯೆಗೆ ಅಥವಾ ಅದರಿಂದ ಉದ್ಭವಿಸಿರಬಹುದಾದ ಸಮಸ್ಯೆಗೆ ತುತ್ತಾಗಿರುತ್ತಾರೆ ಎಂದರೆ ತಪ್ಪಾಗಲಾರದು. “ನಾನು ಚೆನ್ನಾಗಿಲ್ಲ,” “ನಾನು ಅಷ್ಟು ಬುದ್ಧಿವಂತನಲ್ಲ,” “ನಾನು ಅಂದವಾಗಿಲ್ಲ,” “ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿಲ್ಲ,ಆದ್ದರಿಂದ ನನಗೆ ಯಾರೂ ಒಳ್ಳೆಯ ಸ್ನೇಹಿತರಾಗುವುದಿಲ್ಲ,” “ಯಾರೂ ನನ್ನೊಂದಿಗೆ ಮಾತನಾಡುತ್ತಿಲ್ಲ,” “ಟೀಚರ್ ನನ್ನನ್ನು ಬಯ್ಯಬಹುದು ಅಥವಾ ಉಳಿದವರು ನನ್ನನ್ನು ನೋಡಿ ನಗಬಹುದು ಹಾಗಾಗಿ ನಾನು ಪ್ರಶ್ನೆಯನ್ನು ಕೇಳುವುದಿಲ್ಲ,” “ ಎಲ್ಲರೂ ನನ್ನನ್ನು ನೋಡಿ ನಗುತ್ತಾರೆ ಆದುದರಿಂದ ನಾನು ವೇದಿಕೆಯನ್ನು ಹತ್ತುವುದಿಲ್ಲ,” ಇತ್ಯಾದಿಯಾಗಿ ಅವರು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ.