ಬಾಲ್ಯ

ಯಶಸ್ಸು- ವೈಫಲ್ಯ: ಮಕ್ಕಳ ಮೇಲೆ ಪರಿಣಾಮ

ಮೌಲಿಕಾ ಶರ್ಮ

ಪ್ರತಿಯೊಬ್ಬರಿಗೂ ಯಶಸ್ಸು ಬೇಕು. ಆದರೆ ವೈಫಲ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅದಾಗ್ಯೂ ಯಶಸ್ಸು ಹಾಗೂ ವೈಫಲ್ಯ ನಿರ್ದಿಷ್ಟ ಘಟನೆಗಳನ್ನು ವಿವರಿಸುವ ಪದಗಳೇ ವಿನಃ ವ್ಯಕ್ತಿಗಳನ್ನಲ್ಲ. ಅಂದರೆ ನೀವು ಕೆಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಬಹುದು ಅಥವಾ ವಿಫಲವಾಗಿರಬಹುದು; ಕೆಲ ಮೈಲುಗಲ್ಲುಗಳನ್ನು ತಲುಪುವಲ್ಲಿ ಸಫಲವಾಗಬಹುದು ಇಲ್ಲವೇ ವಿಫಲರಾಗಬಹುದು.

ಹಾಗೆಂದರೆ ನೀವು ಸಂಪೂರ್ಣ ಯಶಸ್ವಿಯಾಗಿದ್ದೀರಿ ಅಥವಾ ಸಂಪೂರ್ಣವಾಗಿ ವಿಫಲರಾಗಿದ್ದೀರಿ ಎಂಬ ಅರ್ಥವಲ್ಲ. ನೀವು ಯಶಸ್ಸು ಸಾಧಿಸದ ಹಲವು ಆಯಾಮಗಳೂ ಅದಕ್ಕೆ ಇರಬಹುದು ಅಥವಾ ನೀವು ವಿಫಲವಾಗದ ಆಯಾಮಗಳೂ ಇರಬಹುದು. ತೀರಾ ಯಶಸ್ವಿಯಾದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಇರಬಹುದು. ಆದರೆ ಆತ ಉತ್ತಮ ತಂದೆಯಾಗಲು ಅಥವಾ ಗಂಡನಾಗಲು ಸಂಪೂರ್ಣ ವಿಫಲವಾಗಿರಬಹುದು. ಒಬ್ಬ ವ್ಯಕ್ತಿ ವ್ಯಾಪಾರದಲ್ಲಿ ಸಂಪೂರ್ಣವಾಗಿ ನಷ್ಟ ಅನುಭವಿಸಿದರೂ, ನಂಬಲು ಅಸಾಧ್ಯವಾದ ಮಟ್ಟದ ಉತ್ತಮ ಪೋಷಕ ಅಥವಾ ಅತ್ಯುತ್ತಮ ಸ್ನೇಹಿತನಾಗಬಹುದು.

ಆದ್ದರಿಂದ ಯಶಸ್ಸು ಹಾಗೂ ವೈಫಲ್ಯ ಎನ್ನುವುದನ್ನು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಘಟನೆಯನ್ನು ನಾವು ಹೇಗೆ ನಿರ್ವಹಿಸಿದ್ದೇವೆ ಎನ್ನುವುದನ್ನು ವಿವರಿಸುವ ಸಾಧನವಾಗಿ ಬಳಸುತ್ತೇವೆ. ಆದರೆ ಒಟ್ಟಾರೆ ಅಥವಾ ಸಮಗ್ರವಾಗಿ ನಾವು ಹೇಗೆ ಎಂಬ ಬಗ್ಗೆ ಮೌಲ್ಯಮಾಪನ ಮಾಡುವ ಸಾಧನವಾಗಿ ಅಲ್ಲ. ಆದರೆ ಬಹುತೇಕವಾಗಿ ನಾವು ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗುತ್ತೇವೆ.

ಸಾಮಾನ್ಯವಾಗಿ ನಾವು ಯಶಸ್ವಿಯಾಗಿದ್ದೇವೆ ಎಂದೇ ನಾವು ಅಂದುಕೊಳ್ಳುತ್ತೇವೆ. ನಮ್ಮ ಮಕ್ಕಳು ಕೂಡಾ ಯಶಸ್ವಿಯಾಗಬೇಕು ಎನ್ನುವುದು ನಮ್ಮ ನಿರೀಕ್ಷೆ. ಆದ್ದರಿಂದ ಯಾವುದೇ ಒಂದು ಸಣ್ಣ ಘಟನೆಯಲ್ಲಿ ವೈಫಲ್ಯದ ಒಂದು ಸುಳಿವು ಅಥವಾ ನಮ್ಮ ಮಕ್ಕಳ ವಿಚಾರದಲ್ಲಿ ಇಂಥ ವೈಫಲ್ಯ ನಮ್ಮನ್ನು ಅಧೀರರನ್ನಾಗಿಸುತ್ತದೆ. ಆದ್ದರಿಂದ ನಾವು ಜೀವನದಲ್ಲಿ ವಿಫಲರಾಗುತ್ತಿದ್ದೇವೆ ಎಂದು ಕಲ್ಪಿಸಿಕೊಳ್ಳುತ್ತೇವೆ. ಅಂತೆಯೇ ತಮ್ಮ ಮಕ್ಕಳು ಕೂಡಾ ನಮ್ಮಂತೆ ನಮ್ಮ ಮಕ್ಕಳು ಕೂಡಾ ಜೀವನದಲ್ಲಿ ವಿಫಲರಾಗಬಾರದು ಎಂಬ ನಿರ್ಧಾರಕ್ಕೆ ಬರುತ್ತೇವೆ.

ಮಕ್ಕಳು ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ನಾವು ಅದನ್ನು ವೈಫಲ್ಯ ಎಂದು ಕರೆಯುತ್ತೇವೆ. ಅಂದರೆ ನಿನ್ನ ಇಡೀ ಜೀವನದಲ್ಲಿ ನೀನು ವೈಫಲ್ಯವನ್ನೇ ಎದುರಿಸಬೇಕಾಗುತ್ತದೆ ಎಂದು ಹೇಳುತ್ತೇವೆ. ಆದರೆ ವಾಸ್ತವವಾಗಿ ಆತ ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರಬಹುದು. ಆದರೆ ಜೀವನದಲ್ಲಿ ಇತರ ಹಲವು ಆಯಾಮಗಳೂ ಇರುತ್ತವೆ. ಇವುಗಳಲ್ಲಿ ಅವರು ಈಗಾಗಲೇ ಯಶಸ್ಸು ಸಾಧಿಸಿರಬಹುದು ಅಥವಾ ಯಶಸ್ಸು ಸಾಧಿಸಬಹುದು.

ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದಷ್ಟೇ ನಮ್ಮ ದೃಷ್ಟಿಗೆ ಗೋಚರಿಸುವುದರಿಂದ, ಅವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಮ್ಮ ಗಮನಕ್ಕೆ ಬಾರದೇ ಇರಬಹುದು ಅಥವಾ ಅದನ್ನು ಗುರುತಿಸುವಲ್ಲಿ ನಾವು ವಿಫಲರಾಗಬಹುದು. ಅವರು ಅಸಾಧಾರಣ ಒಳ್ಳೆಯ ಮನಸ್ಸಿನವರಾಗಿರಬಹುದು; ಒಳ್ಳೆಯ ಗಾಯಕ ಅಥವಾ ಕಲಾವಿದ ಆಗಿರಬಹುದು. ಅವರು ಸೃಜನಶೀಲ ಅಥವಾ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ನಿಸ್ಸೀಮರಾಗಿರಬಹುದು.

ಅವರು ಪ್ರಾಮಾಣಿಕ ಮತ್ತು ಸಹಾಯ ಮಾಡುವ ಮನೋಭಾವದವರೂ ಆಗಿರಬಹುದು ಅಥವಾ ಹಲವು ಕೌಶಲಗಳನ್ನು ರೂಢಿಸಿಕೊಂಡವರಾಗಿ ಇರಬಹುದು. ಆದರೆ ಇವೆಲ್ಲವನ್ನೂ ಕಡೆಗಣಿಸಿ ನಾವು ಆತ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದನ್ನೇ ದೊಡ್ಡ ವೈಫಲ್ಯ ಎಂದು ಬಿಂಬಿಸುತ್ತೇವೆ.

ಅಂತೆಯೇ ನಾವು ನಮ್ಮ ಉದ್ಯೋಗ ಕಳೆದುಕೊಂಡೆವು ಎಂದುಕೊಳ್ಳೋಣ. ನಮ್ಮ ಸರ್ವಸ್ವವೂ ಮುಗಿದೇ ಹೋಯಿತು ಎಂದು ನಾವು ಅಂದುಕೊಳ್ಳುತ್ತೇವೆ. ನಾವು ಜೀವನದಲ್ಲಿ ಕಳೆದುಕೊಂಡದ್ದನ್ನು ಇನ್ನೆಂದೂ ಪಡೆಯಲು ಸಾಧ್ಯವೇ ಇಲ್ಲ ಎಂದು ಹತಾಶರಾಗುತ್ತೇವೆ. ನಾವು ಆ ಉದ್ಯೋಗ ಅಥವಾ ನಿರ್ಧಾರದ ಬಗ್ಗೆ ಮಾತ್ರ ನಾವು ಯೋಚಿಸುತ್ತೇವೆ. ಹಾಗೂ ಇತರ ಹಲವು ವಿಧಗಳಲ್ಲಿ ಇಡೀ ಜೀವನದಲ್ಲಿ ನಾನು ಹಿಂದಿನಂತಾಗಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತೇವೆ.

ನಮ್ಮ ಮಕ್ಕಳ ಯಶಸ್ಸು/ವೈಫಲ್ಯವನ್ನು ಅದರ ಎಲ್ಲ ಬಲ ಹಾಗೂ ದೌರ್ಬಲ್ಯಗಳೊಂದಿಗೆ ಸಮಗ್ರವಾಗಿ ಸ್ವೀಕರಿಸಲು ಮತ್ತು ನಾವು ನಮ್ಮ ಸಾಧನೆ/ವೈಫಲ್ಯಗಳನ್ನು ಸ್ವೀಕರಿಸಬೇಕಾದರೆ ನಾವು ಯಶಸ್ಸು ಹಾಗೂ ವೈಫಲ್ಯ ಎನ್ನುವುದು ಒಂದು ವ್ಯಕ್ತಿಯನ್ನು ವ್ಯಾಖ್ಯಾನಿಸುವ ಪರಿಕಲ್ಪನೆಗಳಲ್ಲ; ಕೇವಲ ಘಟನೆಗಳನ್ನು ಆಧರಿಸಿದ ಪರಿಕಲ್ಪನೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂದರೆ ನಾವು ನಮ್ಮನ್ನು ನೋಡಿಕೊಳ್ಳುವುದು ಅಥವಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರ್ಥ.

ನಮ್ಮಲ್ಲೇ ಕೆಲ ಆಯಾಮಗಳಲ್ಲಿ ಯಶಸ್ಸು ಸಾಧಿಸಿದ ವ್ಯಕ್ತಿಯನ್ನು ಹಾಗೂ ಕೆಲ ಆಯಾಮಗಳಲ್ಲಿ ವಿಫಲವಾದ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಬೇಕು. ಈ ಮೂಲಕ ನಾವು ಕೆಲ ವಿಷಯಗಳಲ್ಲಿ ವಿಫಲರಾಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಹಾಗೂ ನಮ್ಮ ವೈಫಲ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿಕೊಳ್ಳಲು ಮುಂದಾಗಬೇಕು.

ನಾವು ನಮ್ಮ ಹಿಂದಿನ ವೈಫಲ್ಯಗಳನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆಯೇ? ಆ ಅನುಭವದಿಂದ ಯಾವ ಅನುಭವ ಪಡೆದುಕೊಂಡಿದ್ದೇವೆ ಎನ್ನುವುದನ್ನು ಪರಿಶೀಲಿಸಲು ಸಿದ್ಧರಿದ್ದೇವೆಯೇ? ನಾವು ಕೆಲ ಆಯಾಮಗಳಲ್ಲಿ ವಿಫಲರಾಗಿದ್ದನ್ನು ನಮ್ಮ ಮಕ್ಕಳ ಜತೆ ಹಂಚಿಕೊಳ್ಳಲು ಸಿದ್ಧರಿದ್ದೇವೆಯೇ? ನಮ್ಮ ವೈಫಲ್ಯವನ್ನು ನಾವು ಹೇಗೆ ನಿರ್ವಹಿಸಿದೆವು ಎನ್ನುವುದನ್ನು ನಮ್ಮ ರಾತ್ರಿಯ ಊಟದ ಚರ್ಚೆಯಲ್ಲಿ ವಿವರಿಸಲು ಸಮರ್ಥರಾಗಿರುತ್ತೇವೆಯೇ? ಆಗ ಮಾತ್ರ ನಾವು ನಮ್ಮ ಮಕ್ಕಳನ್ನು ಸಮಗ್ರವಾಗಿ ವಿಫಲ ಎಂದು ನಿರ್ಧರಿಸುವ ಬದಲು ಮಕ್ಕಳಲ್ಲಿ ದೊಡ್ಡ ವೈಫಲ್ಯವನ್ನು ಕೂಡಾ ಒಂದು ಮಾಮೂಲಿ ಘಟನೆ ಎಂದು ಸ್ವೀಕರಿಸುವ ಶಕ್ತಿಯನ್ನು ತುಂಬಲು ಸಾಧ್ಯವಾಗುತ್ತದೆ. ಹೀಗೆ ಕಲಿಕೆ ಮಾರ್ಗ ತಾನಾಗಿಯೇ ಸೃಷ್ಟಿಯಾಗುತ್ತದೆ.

ಕೆಲ ವೈಫಲ್ಯಗಳು ನಮ್ಮ ಜೀವನದಲ್ಲಿ ಹಾಗೂ ಮಕ್ಕಳ ಜೀವನದಲ್ಲಿ ಅನಿವಾರ್ಯ. ಮಕ್ಕಳಲ್ಲಿ ಅವರ ವೈಫಲ್ಯವನ್ನು ತಮ್ಮ ಬಗೆಗಿನ ಆತ್ಮವಿಮರ್ಶೆಗೆ ಸಾಧನವಾಗಿ ಕಂಡುಕೊಳ್ಳುವ ಜೀವನ ಕೌಶಲವನ್ನು ಬೆಳೆಸಿದರೆ ಹಾಗೂ ಇದನ್ನು ಅಂಥ ಪರಿಸ್ಥಿತಿಯಿಂದ ಹೊಸದನ್ನು ಕಲಿಯುವ ಪ್ರಯೋಜನವಾಗಿ ಪರಿವರ್ತಿಸಿದರೆ ಅದು ನಾವು ಅವರಿಗೆ ನೀಡಬಹುದಾದ ಅತಿ ದೊಡ್ಡ ಉಡುಗೊರೆ. ಅದು ನಾವು ಹಾತೊರೆಯುವ ಯಾವುದೇ ದೊಡ್ಡ ಬ್ಯಾಂಕ್ ಬ್ಯಾಲೆನ್ಸ್‌ಗಿಂತ ಅಮೂಲ್ಯವಾದದ್ದು.

ಅದು ಅವರಿಗೆ ಸ್ಥಿತಿಸ್ಥಾಪಕತ್ವದ ಮಹತ್ವವನ್ನು ತಿಳಿಸಿಕೊಡುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಪುಟಿದೇಳುವ ಚೈತನ್ಯವನ್ನು ಅವರಲ್ಲಿ ತುಂಬುತ್ತದೆ ಹಾಗೂ ಪ್ರತಿಕೂಲ ಪರಿಸ್ಥಿತಿಯು ಅವರನ್ನು ವ್ಯಾಖ್ಯಾನಿಸುವುದರಿಂದ ದೂರವಾಗಿಸುತ್ತದೆ. ಇದರ ಜತೆಗೆ ನಮ್ಮ ಮಕ್ಕಳು ಜೀವನ ಪಾಠ ಕಲಿಯುವಂತೆ ಮಾಡುತ್ತದೆ ಹಾಗೂ ಅವರನ್ನು ಉತ್ತಮ ಸ್ಥಿತಿಯಂತೆ ಒಯ್ಯುವಂತೆ ಮಾಡುತ್ತದೆ.

ಆದರೆ ಮಕ್ಕಳು ತಾವು ನೋಡಿದ್ದರಿಂದ ಹಾಗೂ ಅನುಭವಿಸಿದ್ದರಿಂದ ಬಹಳಷ್ಟು ಕಲಿಯುತ್ತಾರೆಯೇ ವಿನಃ ನಾವು ಹೇಳಿದ್ದರಿಂದ ಅಥವಾ ಚೀರಿದ್ದರಿಂದ ಅಲ್ಲ. ಅಂದರೆ ನಮ್ಮ ಜೀವನದ ಯಶಸ್ಸು- ವೈಫಲ್ಯದಿಂದ ಅವರು ಕಲಿಯುತ್ತಾರೆ. ನಮ್ಮ ಜೀವನದಲ್ಲಿ ನಾವು ಯಶಸ್ಸು ಹಾಗೂ ವೈಫಲ್ಯವನ್ನು ಹೇಗೆ ಸ್ವೀಕರಿಸಿದ್ದೇವೆ ಎನ್ನುವುದನ್ನು ನೋಡಿಕೊಂಡು ಮಕ್ಕಳು ಕೂಡಾ ತಮ್ಮ ಜೀವನಶಿಕ್ಷಣ ಪಡೆಯುತ್ತಾರೆ. ಯಾವುದೇ ಘೋರ ವೈಫಲ್ಯವನ್ನು ಕೂಡಾ ಯಶಸ್ವಿಯಾಗಿ ಹಿಮ್ಮೆಟ್ಟಿಸುವಂಥ ಕೌಶಲ ಬೆಳೆಸಿಕೊಳ್ಳಲು ನಾವು ಅವರಿಗೆ ಮಾದರಿಯಾಗಬೇಕು. ನಮ್ಮ ವೈಫಲ್ಯದಿಂದ ಅವರು ಕಲಿಯುವಂತೆ ಮಾಡಬೇಕು.

ಅಂದರೆ ನಾವು ನಿರ್ದಿಷ್ಟ ಹಂತದಲ್ಲಿ ಬಿದ್ದುದನ್ನು ಹಾಗೂ ಮತ್ತೆ ಜೀವನದಲ್ಲಿ ಪುಟಿದೆದ್ದುದನ್ನು ಅವರು ಅರಿತುಕೊಳ್ಳುವಂತಾಗಬೇಕು. ಕೆಲವೊಮ್ಮೆ ಹೊಸ ಎತ್ತರಕ್ಕೆ ಏರಿದ್ದನ್ನು ಹಾಗೂ ಮತ್ತೆ ಪುಟಿದೆದ್ದ ನಮ್ಮ ಅನುಭವಗಳು ಅವರಿಗೆ ದಾರಿದೀಪವಾಗಬೇಕು. ಕೆಲವೊಮ್ಮೆ ನಮ್ಮ ಯಶಸ್ಸನ್ನು ಅವರು ಕಾಣಬೇಕು ಹಾಗೂ ಪ್ರತಿಕೂಲ ಪರಿಸ್ಥಿತಿಯನ್ನು ಹೇಗೆ ಯಶಸ್ವಿಯಾಗಿ ಪರಿವರ್ತಿಸಿಕೊಂಡೆವು ಎನ್ನುವುದನ್ನು ಕಾಣಬೇಕು. ನಮ್ಮ ಯಶಸ್ಸಿನ ಅಪೂರ್ವ ಅನುಭವವನ್ನು ಅವರು ಕಂಡುಕೊಳ್ಳುವಂತಾಗಬೇಕು.

ಒಟ್ಟಿನಲ್ಲಿ ನಮ್ಮ ಯಶಸ್ಸು- ವೈಫಲ್ಯವನ್ನು ಅವರು ಅನುಭವಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಯಶಸ್ಸು ಹಾಗೂ ವೈಫಲ್ಯ ಎನ್ನುವುದು ಕ್ಷಣಿಕ ಎನ್ನುವುದು ಅವರಿಗೆ ಮನವರಿಕೆಯಾಗಬೇಕು ಹಾಗೂ ಇದು ನಮ್ಮ ಜೀವನದ ಕಾಯಂ ವ್ಯಾಖ್ಯಾನಗಳಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಜಾನ್ ವುಡನ್ ಅವರ ಮಾತಿನಲ್ಲಿ ಹೇಳುವುದಾದರೆ, "ಯಶಸ್ಸು ಖಂಡಿತಾ ಅಂತ್ಯವಲ್ಲ; ವೈಫಲ್ಯ ಎನ್ನುವುದು ಮಾರಕವೂ ಅಲ್ಲ. ಅದು ಆ ಲೆಕ್ಕದಲ್ಲಿ ಸ್ಫೂರ್ತಿದಾಯಕ"

ಪ್ರತಿಕೂಲ ಹಂತದಲ್ಲಿನ ನಮ್ಮ ಸಾಹಸ ಹಾಗೂ ಸಮೃದ್ಧಿ ಸಂದರ್ಭದ ಅವಮಾನದ ಮೂಲಕ ನಾವು ಮಾದರಿ ಪೋಷಕರಾಗಬೇಕು. ಆಗ ಮಾತ್ರ ನಮ್ಮ ಮಕ್ಕಳು ನಮ್ಮ ಅನುಭವದಿಂದ ಪಾಠ ಕಲಿಯುತ್ತಾರೆ. ಈ ಮೂಲಕ ಮಾತ್ರ ಅವರು ಜೀವನದಲ್ಲಿ ಸಮಬಾಳ್ವೆ ನಡೆಸುವ ಕೌಶಲ ಕಲಿಯುತ್ತಾರೆ.

ಈ ಮೂಲಕ ಹಾಗೂ ಈ ಮಾರ್ಗದ ಮೂಲಕವಷ್ಟೇ ಅವರು ಜವಾಬ್ದಾರಿಯುತ ನಾಗರಿಕರಾಗಿ ಮುಂದೆ ಬಾಳ್ವೆ ನಡೆಸಲು ಹೇಗೆ ಸಾಧ್ಯ ಎನ್ನುವುದನ್ನು ಅವರಿಗೆ ಕಲಿಸಬಹುದು. ಅವರನ್ನು ಪುಟಿದೇಳುವ ಚೆಂಡುಗಳಾಗಿ ಬೆಳೆಸಬಹುದು. ಎಲ್ಲ ಸವಾಲು ಹಾಗೂ ಸಂತೋಷವನ್ನು, ಯಶಸ್ಸು ಹಾಗೂ ವೈಫಲ್ಯವನ್ನು ತಮ್ಮದೇ ಜೀವನ ಮಾರ್ಗದ ಮೂಲಕ ಎದುರಿಸಲು ಆಗ ನಮ್ಮ ಮಕ್ಕಳು ಶಕ್ತರಾಗುತ್ತಾರೆ.

ನಾವು ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ನಮ್ಮ ಶಕ್ತಿಯನ್ನು ಖಂಡಿತವಾಗಿಯೂ ಕಡೆಗಣಿಸಬಾರದು. ಅದು ಋಣಾತ್ಮಕವಾಗಿರಬಹುದು ಇಲ್ಲವೇ ಧನಾತ್ಮಕವಾಗಿರಬಹುದು. ಆದ್ದರಿಂದ ಧನಾತ್ಮಕ ಪರಿಣಾಮಗಳನ್ನು ಗರಿಷ್ಠ ಮಾಡೋಣ ಹಾಗೂ ಋಣಾತ್ಮಕ ಪರಿಣಾಮ ಕನಿಷ್ಠವಾಗುವಂತೆ ನೋಡಿಕೊಳ್ಳೋಣ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org