ವೃದ್ಧರ ಯೋಗಕ್ಷೇಮವನ್ನು ಉತ್ತಮಗೊಳಿಸಲು ನೀವೇನು ಮಾಡಬಹುದು?

ಕ್ಷೀಣಿಸುವ ಆರೋಗ್ಯ ಮತ್ತು ಸಮಾಜದಿಂದ ದೂರ ಸರಿಯುತ್ತಿರುವ ವೃದ್ಧರಿಗೆ ನಮ್ಮ ಸಹಕಾರ

ಡಾ. ಗರಿಮಾ ಶ್ರೀವಾಸ್ತವ

ವಯಸ್ಸಾಗುವುದು ಎಂದರೆ ದೈಹಿಕ, ಬೌದ್ಧಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಾಮರ್ಥ್ಯಗಳು ಕಡಿಮೆಯಾಗುತ್ತ ಹೋಗುವುದು; ಹಾಗೂ ಅಶಕ್ತತೆಯ ಕಾರಣದಿಂದ ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸುವ ಅಗತ್ಯ ಹೆಚ್ಚಾಗುತ್ತ ಹೋಗುವುದು.

ಆದರೆ, ವಯೋವೃದ್ಧರ ದೈಹಿಕ ಯೋಗಕ್ಷೇಮಕ್ಕೆ ಕೊಡುವಷ್ಟು ಪ್ರಾಮುಖ್ಯವನ್ನು ಅವರ ಮಾನಸಿಕ ಯೋಗಕ್ಷೇಮಕ್ಕೆ ಕೊಡಲಾಗುತ್ತಿಲ್ಲ. ವೃದ್ಧಾಪ್ಯದ ಕುರಿತು ಇರುವ ನಕಾರಾತ್ಮಕ ಚಿಂತನೆಯ ಕಾರಣದಿಂದಲೇ ಇತ್ತೀಚೆಗೆ ವೃದ್ಧರ ಸಾಮರ್ಥ್ಯ ಕಡಿಮೆಯಾಗಿ, ಮರಣ ಪ್ರಮಾಣದಲ್ಲಿ ಹೆಚ್ಚಾಗತೊಡಗಿದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ. ಆದ್ದರಿಂದ ವಯಸ್ಸಾದವರಲ್ಲಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ಅವರನ್ನು ಉತ್ತೇಜಿಸುವುದು ಮುಖ್ಯ.

ವಯೋವೃದ್ಧರು ಎದುರಿಸುವ ಕೆಲವು ಸಮಸ್ಯೆಗಳೆಂದರೆ ನೋವು, ಮರಣ, ನಿರ್ಲಕ್ಷ್ಯ ಅಥವಾ ಅವರನ್ನು ಸಮಾಜದಿಂದ ದೂರ ಇಡುವುದು. ಅನಾರೋಗ್ಯ ಸಮಸ್ಯೆಗಳು, ಇಂಟರನೆಟಗಳ ಅಸಮರ್ಪಕ ಸೇವೆಗಳು, ಸಾಮಾಜಿಕ ಪರಿಸರ.

ವಯೋವೃದ್ಧರ ಯೋಗಕ್ಷೇಮವನ್ನು ಉತ್ತಮಗೊಳಿಸಲು ಕೆಲವು ವಿಧಾನಗಳು:

  • ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು : ದೈಹಿಕ ಚಟುವಟಿಕೆಗಳು, ಅದರಲ್ಲೂ ವಯಸ್ಸಾದಂತೆ ವ್ಯಾಯಾಮಗಳು ಮನೋದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತವೆ. ಇದರಿಂದ ಖಿನ್ನತೆ ಹಾಗೂ ಉದ್ವೇಗದಂಥ ಮಾನಸಿಕ ಕಾಯಿಲೆಗಳನ್ನು ಬಹುಪಾಲು ದೂರವಿಡಬಹುದಾಗಿದೆ.

  • ವ್ಯಾಯಾಮದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ದರಿಂದ – ವಿಹಾರ, ತೋಟಗಾರಿಕೆ, ನೃತ್ಯ, ಕ್ರೀಡೆ, ಮೊದಲಾದ ದೈಹಿಕ ಚಟುವಟಿಕೆಗಳನ್ನು ನಡೆಸುವುದು ಒಳ್ಳೆಯದು.  ಇಳಿ ವಯಸ್ಸಿನಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲ, ಅನಾರೋಗ್ಯವನ್ನು ಕೂಡ ಹೋಗಲಾಡಿಸಬಹುದು.

  • ಸಂಭಾವನೆ ಪಡೆದು ಇಲ್ಲವೇ ಯಾವುದೇ ಬಗೆಯ ಕೆಲಸದಲ್ಲಿ ಚಟುವಟಿಕೆಯಿಂದ ತೊಡಗಿಕೊಳ್ಳುವುದು ವಯೋವೃದ್ಧರ ಪಾಲಿಗೆ ಒಳ್ಳೆಯದು. ಏಕೆಂದರೆ ಅದರಿಂದ ನಾನೂ ಸಮಾಜಕ್ಕೆ ಏನಾದರೊಂದನ್ನು ನೀಡುತ್ತಿರುವೆನು ಅನ್ನುವ ಸಮಾಧಾನಕವನ್ನು ಮೂಡಿಸುವುದು. ಇದು ವಯೋವೃದ್ಧರ ಆರ್ಥಿಕ ಪರಿಸ್ಥಿತಿ ಹಾಗೂ ಸಮಾಜದಲ್ಲಿ ಪಾಲ್ಗೊಳ್ಳುವ ಅವರ ಸಾಮರ್ಥ್ಯದ ಮೇಲೆಯೂ ಪರಿಣಾಮ ಬೀರುವುದು.

  • ಸಾಮಾಜಿಕ ಜಾಲತಾಲಗಳನ್ನು ಉಪಯೋಗಿಸುವುದರಿಂದ ವಯೋವೃದ್ಧರನ್ನು ಸಮಾಜದ ಇತರ ಜನರೊಂದಿಗೆ ಬೆರೆಯಲು ಮತ್ತು ಸಮುದಾಯದ ಸಹಕಾರ ಪಡೆಯಲು  ಅನುಕೂಲವಾಗುವುದು.

ಉದಾ: ಅನೇಕ ವಸತಿ ಸಮುಚ್ಚಯಗಳಲ್ಲಿ ಬುಕ್ ಕ್ಲಬ್’ಗಳಿದ್ದು, ವಾರಕ್ಕೊಮ್ಮೆ ಯುವ ಸ್ವಯಂಸೇವಕರು ವೃದ್ಧರೊಡನೆ ಬೆರೆತು ಓದು, ಚರ್ಚೆ ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಾರೆ.   

  • ಸಾಮಾಜಿಕ ಬೆರೆಯುವಿಕೆ : ಸಾಮಾಜದಿಂದ ದೂರ ಇಡುವುದು ಹಾಗೂ ಒಂಟಿತನಗಳು ವೃದ್ಧರ ಮಾನಸಿಕ ಹಾಗೂ ದೇಹಾರೋಗ್ಯಗಳೆರಡರ ಮೇಲೂ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ, ವಿಶೇಷವಾಗಿ ಯುವಜನರು ಸಮಾಜದಲ್ಲಿ ಬೆರೆತು ಬಾಂಧವ್ಯಗಳನ್ನು ಬೆಸೆಯುತ್ತಾ ಹೋಗುವುದು ಉತ್ತಮ ಬದುಕಿಗೆ ಅಗತ್ಯಗತ್ಯ. ಇದಕ್ಕಾಗಿ ಸ್ನೇಹಿತರೊಂದಿಗೆ ಮತ್ತು ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡು, ಹೊಸ ಹೊಸ ಗೆಳೆಯರನ್ನೂ ಗಳಿಸಿಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ. (ನಿರ್ದಿಷ್ಟವಾಗಿ ತೀವ್ರ ಅನಾರೋಗ್ಯ ಹೊಂದಿದ್ದಲ್ಲಿ ಅಥವಾ ಮಾರಣಾಂತಿಕ ಕಾಯಿಲೆ ಹೊಂದಿದ್ದಲ್ಲಿ ಇತರರೊಂದಿಗೆ ಬೆರೆತು ಕಷ್ಟಸುಖಗಳ ಚರ್ಚೆ ನಡೆಸುವುದು ಒಳಿತು. ಇದರಿಂದ ನಿಮ್ಮ ಅನುಭವಗಳನ್ನು ಹಂಚಿಕೊಂಡಂತೆ ಆಗುತ್ತದೆ. ಈ ಮೂಲಕ ನಿಮ್ಮ ನೋವು ಕೂಡ ಸ್ವಲ್ಪಮಟ್ಟಿಗೆ ಕಡಿಮೆಯಾದಂತೆ ತೋರುತ್ತದೆ).

ವೃದ್ಧಾಪ್ಯ, ಜೀವನದಲ್ಲಿ ಉಂಟಾಗುವ ಬದಲಾವಣೆ ಆಗಿದ್ದರೂ ಕೂಡ ಅದನ್ನು ಒಪ್ಪಿಕೊಂಡು ಸಾಗುವುದು ಬಹಳ ಕಷ್ಟ. ಅದರಿಂದ ಉಂಟಾಗುವ ಒಂಟಿತನ ಹಾಗೂ ಖಿನ್ನತೆಯೇ ಮೊದಲಾದ ಹತಾಶೆ ಭಾವನೆಗಳನ್ನು ಸಾಮಾಜದಲ್ಲಿ ಬೆರೆಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಮತ್ತು ಆ ಮೂಲಕ ಮನಸ್ಸಿನ ಸಮಾಧಾನ ಕಾಯ್ದುಕೊಳ್ಳಬಹುದು.

ಆಕರಗಳು: References: Levy, B. R., Slade, M. D., Kunkel, S. R., & Karsi, S. V. (2002). Longevity increased by positive self-perceptions of aging. Journal of Personality and Social Psychology, 83, 261- 270.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org