ಮನೋವೈದ್ಯರಿಗೆ

Q

ಒಬ್ಬ ರೋಗಿಯು ಸ್ವಯಂ-ಇಚ್ಛೆಯಿಂದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ತನಗೆ ಚಿಕಿತ್ಸೆ ಬೇಕೆಂದು ದಾಖಲಾತಿಗಾಗಿ ಬರುತ್ತಾನೆ ಅಥವಾ ಪೋಷಕರು ತಮ್ಮ ಅಪ್ರಪಾಪ್ತ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ಬಂದು ದಾಖಲಾತಿಗಾಗಿ ಕೇಳಿಕೊಳ್ಳುತ್ತಾರೆ. ಆಗ ನಾವು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲೇ ಬೇಕೆ?

A

ವ್ಯಕ್ತಿ ಸ್ವಯಂ ಇಚ್ಛೆಯಿಂದ ನಿಮ್ಮ ಬಳಿ ಬಂದರೆ ಅಥವಾ ಅಪ್ರಪಾಪ್ತ ವಯಸ್ಕ ಮಗುವನ್ನು ಪೋಷಕರು ಚಿಕಿತ್ಸೆಗೆ ಕರೆತಂದರೆ, ನೀವು ಅವರನ್ನು ಪರೀಕ್ಷಿಸಿ ಆ ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆ ಬೇಕೆ ಎಂದು ಪರಿಶೀಲಿಸಬಹುದು. ಅವರನ್ನು ದಾಖಲಿಸಿಕೊಳ್ಳಬೇಕೆ? ಅಥವಾ ಬೇಡವೆ ಎಂಬುದನ್ನು ನೀವು ಮುಂದಿನ 24 ಗಂಟೆಯೊಳಗೆ ನಿರ್ಧರಿಸಬಹುದು (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  17,).

Q

ರೋಗಿ ತನ್ನ ಸ್ವಯಂ ಇಚ್ಛೆಯಿಂದ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವಂತೆ ಕೇಳಬಹುದೆ? ಆಗ ಅವರನ್ನು ನಾನು ಬಿಡುಗಡೆ ಮಾಡಲೇ ಬೇಕೆ? ಬಿಡುಗಡೆ ಮಾಡುವುದು ಅವರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದು ನನಗೆ ಅನಿಸಿದರೆ ನಾನೇನು ಮಾಡಬೇಕು?

A

ಸ್ವಯಂ ಪ್ರೇರಿತನಾಗಿ ಬಂದ ಓರ್ವ ರೋಗಿಯು ಸ್ವಇಚ್ಛೆಯಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ, ಒಳರೋಗಿಯಾಗಿ ಆತನಿಗೆ  ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ ಎಂದು ನಿಮಗೆ ಅನ್ನಿಸಿದಲ್ಲಿ ಮುಂದಿನ 24 ಗಂಟೆಗಳೊಳಗೆ ಬಿಡುಗಡೆ ಮಾಡಬಹುದು. ಒಂದೊಮ್ಮೆ ರೋಗಿ ಗುಣಮುಖನಾಗಿಲ್ಲದ ಕಾರಣ  ಈಗಲೇ ಬಿಡುಗಡೆ ಮಾಡುವುದು ಅವರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನೀವು ಭಾವಿಸಿದರೆ, ಬಿಡುಗಡೆ ಕೋರಿಕೆಪತ್ರ ಪಡೆದ 72 ಗಂಟೆಯೊಳಗೆ ಅವರನ್ನು ಸ್ವತಂತ್ರವಾಗಿ ತಪಾಸಣೆ ನಡೆಸುವ ಇಬ್ಬರು ವೈದ್ಯಾಧಿಕಾರಿಗಳ ಸಮಿತಿಯನ್ನು ರಚಿಸಬೇಕು. ಒಂದೊಮ್ಮೆ ಅವರು ಕೂಡ, ರೋಗಿ ಗುಣಮುಖವಾಗಿಲ್ಲ, ಬಿಡುಗಡೆಗೆ ಅರ್ಹನಲ್ಲ ಎಂದು ತೀರ್ಮಾನಿಸಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸೆ ಅಗತ್ಯ ಎಂದು ಅಭಿಪ್ರಾಯಪಟ್ಟರೆ, ಆಗ ನೀವು 90 ದಿನಗಳವರೆಗೆ ಚಿಕಿತ್ಸೆ ಮುಂದುವರಿಸಬಹುದು (ಮಾನಸಿಕ ಆರೋಗ್ಯ ಕಾಯ್ದೆ ವಿಧಿ  18(3)).

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org