ಮಾನಸಿಕ ಸಮಸ್ಯೆಯಿರುವ ಗರ್ಭಿಣಿಯರು ತಜ್ಞರ ಬಳಿ ಮುಕ್ತವಾಗಿ ಮಾತನಾಡಿ

ಮಾನಸಿಕ ಸಮಸ್ಯೆ ಇರುವ ಗರ್ಭಿಣಿಯರು ತಜ್ಞರ ಜತೆ ಮುಕ್ತವಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಲಹೆ ಪಡೆಯುವ ಮೂಲಕ ಮುಂದೆ ಎದುರಾಗುವ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

ಮಾನಸಿಕ ಖಾಯಿಲೆಯಿರುವಾಗ ಮಗುವನ್ನು ಪಡೆಯಲು ಅಪೇಕ್ಷಿಸುವುದು ಅಂತಹ ಸವಾಲಿನ ಸಂಗತಿಯೇನಲ್ಲ. ನಿಮ್ಮ ಗರ್ಭಧಾರಣೆಯ ಹಂತದಲ್ಲಿ ಮಾನಸಿಕ ತಜ್ಞರು ಮತ್ತು ಪ್ರಸೂತಿ ತಜ್ಞರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವ ಮೂಲಕ ಈ ಅವಧಿಯಲ್ಲಿ ನೀವು ನಿಮ್ಮ ಕಾಯಿಲೆಯನ್ನು ಸೂಕ್ತವಾಗಿ ನಿರ್ವಹಿಸಬಹುದು.

ನಿಮ್ಮ ಪ್ರಸೂತಿ ತಜ್ಞರಿಗೆ ಈ ಕೆಳಗಿನ ವಿಷಯಗಳನ್ನು ಮರೆಯದೇ ತಿಳಿಸಿ:

1.ನಿಮ್ಮ ಮಾನಸಿಕ ಖಾಯಿಲೆಯ ಹಿನ್ನೆಲೆ

2. ನೀವು ತೆಗೆದುಕೊಳ್ಳುತ್ತಿರುವ ಔಷಧಗಳು

ನಿಮ್ಮ  ಮಾನಸಿಕ ತಜ್ಞರು ಪ್ರಸೂತಿತಜ್ಞರ ಜೊತೆ ಮಾತನಾಡಿ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡರೆ ಇನ್ನೂ ಒಳ್ಳೆಯದು. ಇದರಿಂದ ಪ್ರಸೂತಿತಜ್ಞರಿಗೆ ನಿಮ್ಮ ಪರಿಸ್ಥಿತಿಯು ಅರ್ಥವಾಗುತ್ತದೆ ಮತ್ತು ಯಾವುದೇ ತೊಂದರೆಗಳು ಉದ್ಭವಿಸಿದಲ್ಲಿ ಅವನ್ನು ನಿಭಾಯಿಸಲು ಸಹಾಯವಾಗುತ್ತದೆ.

ನಿಮ್ಮ ಆರೈಕೆಯ ಯೋಜನೆಗಳ ಕುರಿತು ನಿಮ್ಮ ಪ್ರಸೂತಿ ತಜ್ಞರಿಗೆ ತಿಳಿಸಿ. ಇದರಿಂದ ಅವರಿಗೆ ನೀವು ವೈದ್ಯಕೀಯ ಸೌಲಭ್ಯಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಮತ್ತು ಸಮಸ್ಯೆಗಳು ಉಂಟಾದಾಗ ಏನು ಮಾಡಬಹುದು ಎಂದು ತಿಳಿಯುತ್ತದೆ.

  • ನೀವು ತೆಗೆದುಕೊಳ್ಳುತ್ತಿರುವ ಔಷಧಗಳ ಬಗ್ಗೆ ಪ್ರಸೂತಿ ತಜ್ಞರಿಗೆ ತಿಳಿಸಿ. ಇದರಿಂದ ಅವರು ನಿಮ್ಮ ಮತ್ತು ನಿಮ್ಮ ಮಗುವಿನ ಸುರಕ್ಷತೆಯ ಬಗ್ಗೆ ಕಾಳಜಿವಹಿಸಬಹುದು.
  • ಒಂದು ವೇಳೆ ನೀವು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದು, ಅನಿರೀಕ್ಷಿತವಾಗಿ ಗರ್ಭಧರಿಸಿದಲ್ಲಿ ನಿಮ್ಮ ಖಾಯಿಲೆಯ ಹಿನ್ನೆಲೆ ಮತ್ತು ಔಷಧಗಳ ಬಗ್ಗೆ ಪ್ರಸೂತಿ ತಜ್ಞರಿಗೆ ತಿಳಿಸಿ. ಅವರು ಸೂಕ್ತವಾದ ಪರೀಕ್ಷೆಗಳನ್ನು ಮತ್ತು ಸ್ಕ್ಯಾನಿಂಗುಗಳನ್ನು ನಡೆಸಿ ಭ್ರೂಣವು ಸಹಜವಾಗಿ, ಆರೋಗ್ಯಕರವಾಗಿ ಬೆಳವಣಿಗೆ ಹೊಂದುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.
  • ಕೆಲವು ಔಷಧಗಳಿಂದ ಡಯಾಬಿಟಿಸ್ ಉಂಟಾಗಬಹುದು. ಒಂದುವೇಳೆ ನಿಮ್ಮ ಔಷಧವು ಈ ಗುಂಪಿಗೆ ಸೇರಿದ್ದರೆ ಪ್ರಸೂತಿತಜ್ಞರು ನಿಯಮಿತವಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿ ಅಗತ್ಯವಿರುವಾಗ ಚಿಕಿತ್ಸೆಯನ್ನು ನೀಡುವುದು ಸಾಧ್ಯವಾಗುತ್ತದೆ.

ಮಾನಸಿಕ ತಜ್ಞರು ಮತ್ತು ಪ್ರಸೂತಿತಜ್ಞರ ಸಲಹೆಯಂತೆ ನಿಮ್ಮ ಮಾನಸಿಕ ಖಾಯಿಲೆಯನ್ನು ನಿರ್ವಹಿಸಿದರೆ ಪ್ರಸವಪೂರ್ವ ಮತ್ತು ಪ್ರಸವ ನಂತರದಲ್ಲಿ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯ ರಕ್ಷಣೆಯು ಸಾಧ್ಯವಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org