ತಾಯ್ತನ
ತಾಯಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇದ್ದಲ್ಲಿ, ಕುಟುಂಬದ ಸದಸ್ಯರ ಪಾತ್ರ
ಸಂಭವನೀಯ ತೊಂದರೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ/ತಿಳಿವಳಿಕೆ ಪಡೆಯುವುದರಿಂದ ಮಾನಸಿಕ ಸಮಸ್ಯೆಯಿರುವಾಗಲೂ ಸಹ ಗರ್ಭಾವಸ್ಥೆಯನ್ನು ಸುಲಲಿತವಾಗಿ ಕಳೆಯಲು ಸಾಧ್ಯವಿದೆ.
ಗರ್ಭಾವಸ್ಥೆ ಸಂದರ್ಭದಲ್ಲಿ ಸಂಭವನೀಯ ತೊಂದರೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ/ತಿಳಿವಳಿಕೆ ಪಡೆಯುವುದರಿಂದ ಮಾನಸಿಕ ಸಮಸ್ಯೆಯಿರುವಾಗಲೂ ಸಹ ಗರ್ಭಾವಸ್ಥೆಯನ್ನು ಸುಲಲಿತವಾಗಿ ಕಳೆಯಲು ಸಾಧ್ಯವಿದೆ. ಈ ಅವಧಿಯಲ್ಲಿ ಕುಟುಂಬದವರ ಮತ್ತು ಸಂಗಾತಿಯ ಬೆಂಬಲ ಅತ್ಯಂತ ಅವಶ್ಯಕ.
ಕುಟುಂಬದವರು ಮತ್ತು ಸಂಗಾತಿ ಈ ರೀತಿಯಲ್ಲಿ ತಮ್ಮ ಬೆಂಬಲ ನೀಡಬಹುದು:
- ಮಾನಸಿಕ ಸಮಸ್ಯೆಯ ಕಾರಣದಿಂದ ಮಹಿಳೆಯು ತೆಗೆದುಕೊಳ್ಳುತ್ತಿರಬಹುದಾದ ಔಷಧಗಳ ಬಗ್ಗೆ ಪ್ರಸೂತಿ ತಜ್ಞರಲ್ಲಿ ಚರ್ಚಿಸಿ, ಗರ್ಭಧಾರಣೆಯ ಬಗ್ಗೆ ಯೋಜಿಸಿ.
- ನೀವು ತಿಳುವಳಿಕೆಯನ್ನು ಪಡೆದು, ಕುಟುಂಬದವರು ಮತ್ತು ಸ್ನೇಹಿತರಲ್ಲಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ. ತಾಯಿಗೆ ಸಮಾಜದ ಪೂರ್ವಗ್ರಹದಿಂದ ತೊಂದರೆಯಾಗದಂತೆ ನೋಡಿಕೊಳ್ಳಿ.
- ಒಂದುವೇಳೆ ಗರ್ಭಧಾರಣೆಯ ನಂತರ ಮಾನಸಿಕ ಸಮಸ್ಯೆಯು ಆರಂಭವಾದರೆ/ಉಲ್ಭಣಿಸಿದರೆ ಅದಕ್ಕಾಗಿ ತಾಯಿಯನ್ನು ದೂಷಿಸಬೇಡಿ. ಇತರ ದೈಹಿಕ ಖಾಯಿಲೆಗಳಂತೆ ಮಾನಸಿಕ ಸಮಸ್ಯೆ ಉಂಟಾಗುವುದನ್ನು ಊಹಿಸಲು ಅಥವಾ ತಪ್ಪಿಸಲು ಸಾಧ್ಯವಿಲ್ಲ.
- ಗರ್ಭಧಾರಣೆಯ ಸಮಯದಲ್ಲಿ ಆತಂಕ ಮತ್ತು ಮನಸ್ಥಿತಿಯ ಬದಲಾವಣೆಗಳು ಸಾಮಾನ್ಯವಾಗಿರುತ್ತವೆ. ಆದರೆ ಮಾನಸಿಕ ಸಮಸ್ಯೆಯಿದ್ದಲ್ಲಿ ಇವು ಇನ್ನೂ ಜಾಸ್ತಿಯಾಗಬಹುದು.
- ಆಕೆಯ ಮೇಲೆ ಯಾವುದೇ ಕೌಟುಂಬಿಕ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಿ. ಇದರಿಂದ ಮಗುವಿನ ಮೇಲೂ ಪರಿಣಾಮವಾಗುತ್ತದೆ.
- ಮಾನಸಿಕ ಖಾಯಿಲೆಗಾಗಿ ತೆಗೆದುಕೊಳ್ಳುತ್ತಿರುವ ಔಷಧಗಳು ಅಡ್ಡ ಪರಿಣಾಮ ಬೀರಬಹುದು. ಅವುಗಳ ಲಾಭ, ನಷ್ಟಗಳ ಕುರಿತು ನಿಮ್ಮ ಮನೋವೈದ್ಯರು ಮತ್ತು ಪ್ರಸೂತಿ ತಜ್ಞರಲ್ಲಿ ಚರ್ಚಿಸಿ. ಚಿಕಿತ್ಸೆಯನ್ನು ನಿರಾಕರಿಸಬೇಡಿ ಮತ್ತು ವೈದ್ಯರಿಗೆ ತಿಳಿಸದೇ ಔಷಧಗಳನ್ನು ನಿಲ್ಲಿಸಬೇಡಿ.
- ಮಾನಸಿಕ ಸಮಸ್ಯೆಯ ಲಕ್ಷಣಗಳ ಕುರಿತು ಗಮನವಿರಲಿ.
- ಮಾನಸಿಕ ಸಮಸ್ಯೆಯಿರುವ ವ್ಯಕ್ತಿಗಳ ಆರೈಕೆಯು ಸವಾಲಿನದ್ದಾಗಿದೆ. ನಿಮ್ಮ ಒತ್ತಡ ಮತ್ತು ಆತಂಕಗಳ ಬಗ್ಗೆ ಕುಟುಂಬದವರು, ಸ್ನೇಹಿತರು ಅಥವಾ ಆಪ್ತ ಸಮಾಲೋಚಕರಲ್ಲಿ ಹೇಳಿಕೊಳ್ಳಿ.