ಸಂದರ್ಶನ : ಮಹಿಳೆಯ ಸಲಹುವ ಸಾಮಥ್ರ್ಯದ ಮೇಲೆ ಹಿಂಸೆಯ ಪ್ರಭಾವ

ಸಂದರ್ಶನ : ಮಹಿಳೆಯ ಸಲಹುವ ಸಾಮಥ್ರ್ಯದ ಮೇಲೆ ಹಿಂಸೆಯ ಪ್ರಭಾವ

ಸಂದರ್ಶನ : ಮಹಿಳೆಯ ಸಲಹುವ ಸಾಮಥ್ರ್ಯದ ಮೇಲೆ ಹಿಂಸೆಯ ಪ್ರಭಾವ

ವೈಟ್ ಸ್ವಾನ್ ಫೌಂಡೇಷನ್‍ಗೆ ನೀಡಿರುವ ಈ ಸಂದರ್ಶನದಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ನಿರ್ದೇಶಕಿ ಡಾ ಮರಿಯಾ ಮುಝಿಕ್ ಗರ್ಭಿಣಿ ಮಹಿಳೆಯರ ಆರೋಗ್ಯ ಸ್ಥಿತಿಯನ್ನು ಕುರಿತು ಚರ್ಚೆ ಮಾಡಿದ್ದಾರೆ. ಶಿಶು ಜನನದ ಪ್ರಕ್ರಿಯೆಯಲ್ಲಿ ಎದುರಿಸುವ ಸಂಕಷ್ಟಗಳು, ಬಾಲ್ಯದಲ್ಲಿ ಎದುರಿಸಿದ ಅಪಮಾನಗಳು, ವಯಸ್ಕರಾದ ಮೇಲೆ ಕೌಟುಂಬಿಕ ದೌರ್ಜನ್ಯ ಇವೆಲ್ಲವೂ ತಾಯಿಯ ಸಲಹುವ ಸಾಮಥ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. 

ನಕಾರಾತ್ಮಕ ಜನನ ಅನುಭವ ಎಂದರೇನು ? ಇದು ಮಗುವಿನ ಮಾನಸಿಕ ಆರೋಗ್ಯಕ್ಕೆ ಹೇಗೆ ಸಂಬಂಧಿಸಿರುತ್ತದೆ ?

ಜನನ ಎನ್ನುವುದು ಒಂದು ಅದ್ಭುತ ಸ್ವಾಭಾವಿಕ ಪ್ರಕ್ರಿಯೆ. ಬಹಳಷ್ಟು ಮಹಿಳೆಯರಿಗೆ, ಇದು ಅತಿಯಾದ ನೋವಿನ, ಒತ್ತಡದ ಆದರೂ ಬಲ ಹೆಚ್ಚಿಸುವ ಅನುಭವವೂ ಹೌದು. ಈ ಪ್ರಕ್ರಿಯೆಯಲ್ಲಿ ವೈದ್ಯಕೀಯ ಹಸ್ತಕ್ಷೇಪ ಮತ್ತು ಚಿಕಿತ್ಸೆ ಹೆಚ್ಚಾದಷ್ಟೂ ಜನನದ ಪ್ರಕ್ರಿಯೆ ಸಂಕೀರ್ಣವಾಗುತ್ತಲೇ ಹೋಗುತ್ತದೆ.  ಹೀಗಾದಾಗ ಹೆಂಗಸಿಗೆ ಇದನ್ನು ತಡೆದುಕೊಳ್ಳುವುದು ಕಷ್ಟ ಎನಿಸುತ್ತದೆ. ಕುತೂಹಲಕಾರಿ ಸಂಗತಿ ಎಂದರೆ ಕ್ರೋಢೀಕೃತ ಸಂಶೋಧನೆಯ ಅನುಸಾರ ಈ ವೈದ್ಯಕೀಯ ಸಂಕೀರ್ಣತೆಗಳು- ನೋವು, ರಕ್ತಸ್ರಾವ ಮತ್ತು ಅನಿರೀಕ್ಷಿತ ಸಿ ಸೆಕ್ಷನ್- ಇವೆಲ್ಲವೂ ಆಘಾತ ಉಂಟುಮಾಡುವ ಅನುಭವಗಳು. ಆದರೆ ಸುರಕ್ಷಿತವಾದ ಮತ್ತು ಕಾಳಜಿಯುಕ್ತ ವಾತಾವರಣದಲ್ಲಿದ್ದರೆ ಈ ಅನುಭವಗಳು ಹುಟ್ಟುವ ಮಗುವಿನ  ಮೇಲೆ ಅಥವಾ ಗರ್ಭಿಣಿ ಹೆಂಗಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದಿಲ್ಲ. ಈ ವಾತಾವರಣವನ್ನು ಗರ್ಭಿಣಿ ಮಹಿಳೆಯನ್ನು ನೋಡಿಕೊಳ್ಳುವ ವೈದ್ಯರು ಮತ್ತು ಶುಶ್ರೂಷಕಿಯರು ರೂಪಿಸುತ್ತಾರೆ. ಆಕೆಗೆ ಅಗತ್ಯವೆನಿಸಿದ ಮಾಹಿತಿಯನ್ನು ನೀಡುತ್ತಿರುತ್ತಾರೆ ಮತ್ತು ಈ ಅನುಭವದ ಸಂದರ್ಭದಲ್ಲಿ ಸಾಕಷ್ಟು ಬೆಂಬಲ ನೀಡುತ್ತಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ತಾಯಿಯಾಗುವ ಹೆಂಗಸು ಕೂಡಲೇ ತನ್ನ ನೋವಿನ ಅನುಭವದಿಂದ ಚೇತರಿಸಿಕೊಳ್ಳುತ್ತಾಳೆ.

ನಕಾರಾತ್ಮಕ ಭಾವನೆಯ ಶಿಶು ಜನನ ಅನುಭವದ ಪರಿಕಲ್ಪನೆ, ಶಿಶು ಜನನದ ಸಂದರ್ಭದಲ್ಲಿ ಉಂಟಾಗುವ ಅನುಭವದ ನಕಾರಾತ್ಮಕ ಲಕ್ಷಣಗಳನ್ನು ಕುರಿತದ್ದಾಗಿದ್ದು, ಈ ಅನುಭವ ತಾಯಿಯಾಗುವ ಮಹಿಳೆಯನ್ನು ಮುಂದೆಯೂ ಕಾಡುತ್ತದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಹೆರಿಗೆಯಾದ ನಂತರ ಆಕೆ ಖಿನ್ನತೆ ಎದುರಿಸುತ್ತಾಳೋ ಅಥವಾ ಆಘಾತದ ನಂತರದಲ್ಲಿ ಎದುರಾಗುವ ಒತ್ತಡದ ಸಮಸ್ಯೆ ಎದುರಿಸುತ್ತಾಳೋ ಎಂದು ಈ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹಾಗೆಯೇ ಇದರಿಂದ ಆಕೆ ಚೇತರಿಸಿಕೊಂಡು ಎಂದಿನಂತಾಗುವಳೋ ಇಲ್ಲವೋ ಎನ್ನುವುದನ್ನೂ  ತಿಳಿದುಕೊಳ್ಳಲಾಗುತ್ತದೆ.  ಮತ್ತೊಂದೆಡೆ ಆಕೆಯನ್ನು ಅಪಮಾನಿಸಿ, ಅವಹೇಳನ ಮಾಡಿ, ಕೆಟ್ಟದಾಗಿ ನಡೆಸಿಕೊಂಡರೆ, ಸಮರ್ಪಕವಾಗಿ ಆಕೆಯೊಡನೆ ಮಾತುಕತೆ ನಡೆಸದಿದ್ದರೆ, ಹೆರಿಗೆಯ  ಸಮಯದಲ್ಲಿ ಆಕೆಯೊಡನೆ ಹಿಂಸಾತ್ಮಕವಾಗಿ ವರ್ತಿಸಿದರೆ, ಆ ಮಹಿಳೆ ಒಂಟಿತನವನ್ನು ಅನುಭವಿಸುವುದೇ ಅಲ್ಲದೆ ತಿರಸ್ಕøತಳಂತೆ ಭಾವಿಸುತ್ತಾಳೆ.

ಈ ಸಂದರ್ಭದಲ್ಲಿ ನಕಾರಾತ್ಮಕತೆಯ ಭಾವನಾತ್ಮಕ ಅನುಭವಗಳು ವೈದ್ಯಕೀಯ ಆಘಾತಕ್ಕೆ ಪುಷ್ಟಿ ನೀಡುತ್ತವೆ. ಈ ಎರಡೂ ಸಮಸ್ಯೆಗಳು ಒಟ್ಟಿಗೆ ಕಾಣಿಸಿಕೊಂಡಾಗ ಬಹಳ ಆರೋಗ್ಯವಂತ, ಶಕ್ತಿವಂತ ಮಹಿಳೆಯಲ್ಲೂ ಸಹ ಖಿನ್ನತೆ ಮತ್ತು ಆಘಾತದ ನಂತರ ಉಂಟಾಗುವ ಒತ್ತಡವನ್ನು ಹೆಚ್ಚಿಸುತ್ತದೆ.

ನಕಾರಾತ್ಮಕ ಶಿಶು ಜನನ ಅನುಭವ ಮಕ್ಕಳ ಮೇಲೆ ಯಾವ ರೀತಿ ಉದ್ವೇಗಭರಿತ ಪ್ರಭಾವ ಬೀರುತ್ತದೆ ? ಇದು  ಬಾಲ್ಯಾವಸ್ಥೆಯಲ್ಲಿ ಮತ್ತು ವಯಸ್ಕರಾದ ಮೇಲೂ ಮುಂದುವರೆಯುವುದೇ ?

ಮಕ್ಕಳಿಗೆ ಸಕಾರಾತ್ಮಕ ಪೋಷಣೆಯನ್ನು ಒದಗಿಸುವಂತಹ ತಂದೆ ತಾಯಿಯರನ್ನು ಎಳೆ ಮಕ್ಕಳಿಗೆ ಪರಿಚಯಿಸಬೇಕು. ಅಂದರೆ, ಮಕ್ಕಳ ಅವಶ್ಯಕತೆಗಳಿಗೆ ಸ್ಪಂದಿಸುವ ಮತ್ತು ಸಂವೇದನೆಯಿಂದ ಪ್ರತಿಕ್ರಯಿಸುವ ನಡವಳಿಕೆ ಅಗತ್ಯ. ಹಾಲುಣಿಸುವುದು, ಡಯಾಪರ್ ಬದಲಿಸುವುದು, ಸುರಕ್ಷಿತ ವಾತಾವರಣ ಒದಗಿಸುವುದು ಇಂತಹ ದೈಹಿಕ ಅವಶ್ಯಕತೆಯಾಗಲೀ, ಪ್ರೀತಿ ವಾತ್ಸಲ್ಯ ತೋರಿ ಸಲಹುವ ಭಾವನಾತ್ಮಕ ಅವಶ್ಯಕತೆಗಳಾಗಲೀ ಎರಡೂ ಬಹಳ ಮುಖ್ಯವಾಗುತ್ತದೆ.

ಎಳೆಯ ಮಕ್ಕಳಿಗೆ ಸಕಾರಾತ್ಮಕ ಪ್ರೋತ್ಸಾಹದ ಅವಶ್ಯಕತೆ ಬಹಳ ಇರುತ್ತದೆ. ತಟಸ್ಥರಾಗಿದ್ದರೆ ಸಾಲುವುದಿಲ್ಲ. ತಂದೆ ತಾಯಿಯರು ಹಾಡು ಹೇಳುವುದು, ಮಾತನಾಡುವುದು , ನಗುನಗುತ್ತಾ ಇರುವುದನ್ನು ಮಕ್ಕಳು ಬಯಸುತ್ತವೆ. ಒತ್ತಡಕ್ಕೆ ಸಿಲುಕಿಯೋ, ಆತಂಕಕ್ಕೊಳಗಾಗಿಯೋ, ಖಿನ್ನತೆಯಿಂದಲೋ ಪೋಷಕರು ಇದನ್ನು ಮಾಡದಿದ್ದರೆ ಮಕ್ಕಳು ಇದರಿಂದಲೇ ಪ್ರಭಾವಿತರಾಗಿ ನಕಾರಾತ್ಮಕ ಅನುಭವಗಳನ್ನು ತಮ್ಮೊಳಗೆ ಅಳವಡಿಸಿಕೊಳ್ಳುತ್ತಾರೆ. ಮಕ್ಕಳು ಹುಟ್ಟಿದ ಕೂಡಲೇ ಇವೆಲ್ಲವೂ ಪ್ರಕಟವಾಗುತ್ತವೆ. ಮಕ್ಕಳು ಬೆಳೆದು ದೊಡ್ಡವರಾಗುತ್ತಿರುವಂತೆ ಹೆಚ್ಚು ಸಂಕೀರ್ಣವಾಗುತ್ತಾ ಹೋಗುತ್ತವೆ.

ಆದರೆ ವಿಶ್ವಾಸಾರ್ಹತೆ, ಆತ್ಮ ಗೌರವ, ತಮ್ಮ ಬಗ್ಗೆ ತಾವೇ ಹೆಮ್ಮೆ ಪಟ್ಟುಕೊಳ್ಳುವುದು, ಸ್ಪರ್ಧಾತ್ಮಕ ಧೋರಣೆ, ಸಾಮಥ್ರ್ಯ, ದೃಢತೆ ಇವೆಲ್ಲವೂ ಬಾಲ್ಯಾವಸ್ಥೆಯಲ್ಲೇ ರೂಢಿಯಾಗುತ್ತದೆ. ಹಾಗಾಗಿ ಇಂತಹವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಶೀಘ್ರವಾಗಿ ಅಳವಡಿಸುವುದು  ಅಗತ್ಯ.

ಅಮ್ಮಂದಿರನ್ನು ಅಪಮಾನಗೊಳಿಸುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ?

ನಾನು ಇಲ್ಲಿ ACES (Adverse Childhood Experience Study) ವ್ಯತಿರಿಕ್ತ ಬಾಲ್ಯಾವಸ್ಥೆಯ ಅನುಭವದ ಅಧ್ಯಯನ- ಕುರಿತು ಮಾತನಾಡಲು ಬಯಸುತ್ತೇನೆ. ಇದು ಆಳವಾದ ಅಧ್ಯಯನವಾಗಿದ್ದು, ಈ ಅಧ್ಯಯನದಲ್ಲಿ ಕುಟುಂಬದಲ್ಲಿ ಔಷಧಿ ಪಡೆಯುತ್ತಿರುವ ರೋಗಿಗಳ ಬಳಿ ಅವರ ಬಾಲ್ಯಾವಸ್ಥೆಯ ಅನುಭವಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ತಮ್ಮ ಬಾಲ್ಯದ ದಿನಗಳಲ್ಲಿ ಮತ್ತು ಇವತ್ತಿನ ಪರಿಸ್ಥಿತಿಯಲ್ಲಿ ಅವರು ಎದುರಿಸುವ ಅಪಾಯಗಳ ಬಗ್ಗೆ ಕೇಳಲಾಗುತ್ತದೆ.

ಈ ರೋಗಿಗಳು ಏಕೆ ಆರೋಗ್ಯಕರವಾಗುತ್ತಿಲ್ಲ, ದೈಹಿಕ ಅನಾರೋಗ್ಯದಿಂದ ಏಕೆ ಬಳಲುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ವೈದ್ಯರು ಪ್ರಯತ್ನಿಸುತ್ತಿದ್ದರು. ಅವರು ಗ್ರಹಿಸಿದ ಸಂಗತಿ ಎಂದರೆ, ಇಲ್ಲಿ ಅಲ್ಲಿ ರೋಗಿಯ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದಕ್ಕಿಂತಲೂ 40 ಅಥವಾ 50 ವರ್ಷಗಳ ಹಿಂದೆ ಅವರಿಗೆ ಏನಾಗಿತ್ತು, ವಯಸ್ಕರಾದ ಮೇಲೆ ಅವರ ಮೇಲೆ ಗಂಭೀರ ಪರಿಣಾಮ ಬೀರುವಂಹ ಯಾವ ಘಟನೆಗಳು ನಡೆದಿದ್ದವು ಎನ್ನುವುದು ರೋಗಿಗಳ ಈಗಿನ ವರ್ತನೆಗೆ , ಸಮಸ್ಯೆಗೆ ಕಾರಣವಾಗಿರುತ್ತದೆ.

ನೀವು ಬೆಳೆಯುವ ಹಂತದಲ್ಲಿ ಒತ್ತಡಗಳನ್ನು ಎದುರಿಸಿದ್ದಿರೋ ಅಥವಾ ವ್ಯತಿರಿಕ್ತ ಸನ್ನಿವೇಶಗಳಲ್ಲಿ ಬೆಳೆದಿದ್ದೀರೋ ಎನ್ನುವುದು ಎಷ್ಟು ಮುಖ್ಯ ಎನ್ನುವ ಅಂಶ ನಮಗೆ ತಿಳಿದುಬಂದಿದ್ದು ಈ ಅಧ್ಯಯನದ ನಂತರದಲ್ಲೇ . ಮಕ್ಕಳು ಬೆಳೆಯುವ ಹಂತದಲ್ಲಿ ಬಹಳ ಮುಖ್ಯವಾದ ಹತ್ತು ಅಂಶಗಳನ್ನು ಗುರುತಿಸಲಾಗಿದ್ದು , ಇವು ಮೂಲಭೂತ ಅಂಶಗಳಾಗಿವೆ :

• ನಿಮಗೆ ಅಗತ್ಯವಿದ್ದಷ್ಟು ಆಹಾರ ಲಭ್ಯವಾಗಿದೆಯೇ ?

• ನಿಮ್ಮ ಬಗ್ಗೆ ಕಾಳಜಿ ವಹಿಸಲಾಗಿದೆಯೇ ? ಅಥವಾ ನಿಮ್ಮನ್ನು ದೈಹಿಕವಾಗಿ, ಭಾವನಾತ್ಮಕವಾಗಿ ನಿರ್ಲಕ್ಷಿಸಲಾಗಿದೆಯೇ ?

• ನಿಮಗೆ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವ ತಂದೆ ತಾಯಿ ಅಥವಾ ಪೋಷಕರು, ಅಜ್ಜ ಅಜ್ಜಿ ಮತ್ತು ಕುಟುಂಬದವರು ಇದ್ದರೇ ?

• ನಿಮ್ಮನ್ನು– ದೈಹಿಕವಾಗಿ, ಲೈಂಗಿಕವಾಗಿ, ಭಾವನಾತ್ಮಕವಾಗಿ ನಿಂದಿಸಿ ಅವಹೇಳನ ಮಾಡಲಾಗಿತ್ತೇ ?

• ನಿಮ್ಮ ಪೋಷಕರು ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರೇ ? ಮನೆಯಲ್ಲಿ ಸದಾ ಕ್ರೌರ್ಯ ಹಿಂಸೆ ಇರುತ್ತಿತ್ತೇ ?

ಈ ಎಲ್ಲ ಅಂಶಗಳೂ ಮುಖ್ಯವಾದುವೇ. ಈ ಅಧ್ಯಯನದ ಅನುಸಾರ ಅಮೆರಿಕದಲ್ಲಿ ಅಧ್ಯಯನದಲ್ಲಿ ಸಂಪರ್ಕಿಸಿದ ಗುಂಪಿನಲ್ಲಿ ಶೇ 20 ರಿಂದ 25ರಷ್ಟು ಜನರು ಲೈಂಗಿಕ ದೌರ್ಜನ್ಯ ಎದುರಿಸಿದ್ದವರು. ಸರಾಸರಿಯಾಗಿ, ಐವರಲ್ಲಿ ಒಬ್ಬರು, ನಾಲ್ವರು  ಮಹಿಳೆಯರಲ್ಲಿ ಒಬ್ಬರು, ಪುರುಷರಲ್ಲೂ ಹೌದು ಆದರ ಮಹಿಳೆಯರಲ್ಲಿ ಹೆಚ್ಚು, ತಾವು ಬೆಳೆಯುವ ಹಂತದಲ್ಲಿ ಅವಹೇಳನ, ಅಪಮಾನ, ನಿರ್ಲಕ್ಷ್ಯಕ್ಕೊಳಗಾದವರು. ಇದು ಅವರ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತತೆಯ ಮೇಲೆ ಪ್ರಭಾವ ಬೀರುತ್ತದೆ. ನನ್ನ ಸಂಶೋಧನೆಯನ್ನೂ ಸೇರಿದಂತೆ, ಹಲವು ಅಧ್ಯಯನಗಳಲ್ಲಿ ತಿಳಿದುಬಂದಿರುವಂತೆ, ಪೋಷಕರಾದ ನಂತರ ನೀವು ಹೇಗೆ ನಿರ್ವಹಿಸುತ್ತೀರಿ ಎಂದು ನಿರ್ಧರಿಸುವುದು ಮಕ್ಕಳ ಮೇಲಿನ ದೌರ್ಜನ್ಯ ಅಲ್ಲ. ಆದರೆ ಇದರಿಂದ ನಿಮ್ಮಲ್ಲಿ ಖಿನ್ನತೆ, ಆಘಾತದ ನಂತರ ಉಂಟಾಗುವ ಒತ್ತಡ ಮತ್ತು ಆತಂಕ ಮತ್ತಿತರ ಲಕ್ಷಣಗಳು ತಲೆದೋರುತ್ತವೆ. ನಿಮ್ಮ ಮಕ್ಕಳನ್ನು ನೀವು ಹೇಗೆ ಪಾಲನೆ ಮಾಡುತ್ತೀರಿ ಎನ್ನುವುದನ್ನು ಇದು ನಿರ್ಧರಿಸುತ್ತದೆ. 

ನಾವು ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಸಹಾಯ ಒದಗಿಸಲು ನಾವೇನು ಮಾಡಬೇಕು ? ಇಲ್ಲಿ ಎರಡು ವಿಚಾರಗಳಿವೆ. ಮೊದಲನೆಯದು ವ್ಯಕ್ತಿಯಲ್ಲಿನ ಖಿನ್ನತೆ ಮತ್ತು ಆತಂಕ ನಿವಾರಿಸಲು ಚಿಕಿತ್ಸೆ ನೀಡಿ ಪೋಷಕರನ್ನು ಸಹಜ ದಾರಿಗೆ ತರುವುದು. ಎರಡನೆಯದು ಎಷ್ಟೇ ಮಾನಸಿಕ ಆರೋಗ್ಯ ಸಮಸ್ಯೆ ಇದ್ದರೂ, ಎಷ್ಟೇ ದೌರ್ಜನ್ಯ ಇದ್ದರೂ, ಅವರು ಹೆಚ್ಚಿನ ಒಳನೋಟವನ್ನು ಹೊಂದಿರುವಂತೆ ಮಾಡಿ, ಸ್ಪಂದಿಸುವ ಸಾಮಥ್ರ್ಯವನ್ನು ಹೆಚ್ಚಿಸುವುದು. ಅಂದರೆ ನೀವು ಮಗುವಿನ ದೃಷ್ಟಿಕೋನವನ್ನು ಅರಿತುಕೊಂಡು, ಮಗುವಿನ ಸ್ಥಾನದಲ್ಲೇ ನಿಂತು, ಜಗತ್ತನ್ನು ನೋಡುವ ಮೂಲಕ ಮತ್ತು ಮಕ್ಕಳ ದೃಷ್ಟಿಯಿಂದಲೇ ನಿಮ್ಮ ವರ್ತನೆಯನ್ನು ನೋಡುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸುವುದು.

ಇದನ್ನು ಮಾಡಲು ನೀವು ಸಫಲರಾದರೆ , ಎಷ್ಟೇ ಖಿನ್ನತೆ ಮತ್ತು ಆಘಾತ ಇದ್ದರೂ ಸಹ, ನಿಮ್ಮ ಮಗು ಕೂಡಲೇ ತನ್ನ ಎಲ್ಲ ಒತ್ತಡಗಳಿಂದ ಮುಕ್ತವಾಗುತ್ತದೆ. ಈ ರೀತಿಯ ಚಿಕಿತ್ಸಕ ಮಾದರಿಗಳನ್ನು ಅನುಸರಿಸುವ ಮೂಲಕ ನಾವು ಪೋಷಕರಲ್ಲಿ ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವಂತಹ ಒಳನೋಟವನ್ನು ಹೆಚ್ಚಿಸಬಹುದು.

ಇದು ಜೀವನದ ಇತರ ಒತ್ತಡಗಳಿಗೂ ಅನ್ವಯಿಸುವುದೇ ? ಉದಾಹರಣೆಗೆ ವಯಸ್ಕ ಬದುಕಿನಲ್ಲಿ ಎದುರಿಸುವ ಕೌಟುಂಬಿಕ ದೌರ್ಜನ್ಯದ ಸಂದರ್ಭದಲ್ಲಿ !

ಸತ್ಯವಾಗಿಯೂ ಹೌದು. ಇದು ಎಲ್ಲ ರೀತಿಯ ಆಘಾತಗಳ ಸಂದರ್ಭದಲ್ಲೂ ಅನ್ವಯಿಸುತ್ತದೆ. ಅಂತರ್ ಸಂಬಂಧದ ಆಘಾತಗಳಲ್ಲಿ ವಿಶೇಷವಾಗಿ ಅನ್ವಯಿಸುತ್ತದೆ. ಕೌಟುಂಬಿಕ ದೌರ್ಜನ್ಯ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನೀವು ವಯಸ್ಸಿನಲ್ಲಿ ಚಿಕ್ಕವರಾಗಿದ್ದಷ್ಟೂ ನಿಮ್ಮ ಮಿದುಳು ಶೀಘ್ರವಾಗಿ ಆಘಾತವನ್ನು  ಗ್ರಹಿಸುತ್ತದೆ ಎಂದು ನಾವು ಅಧ್ಯಯನಗಳ ಮೂಲಕ ಅರಿತಿದ್ದೇವೆ. ಇದು ನಿಮ್ಮ ದೈಹಿಕ ಮತ್ತು ಭಾವನಾತ್ಮಕ  ಆರೋಗ್ಯದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ.

ನಮಗೆ ಗೊತ್ತಿರುವಂತೆಯೇ, ಮಗುವಿನ ಜೀವನದ ಮೊದಲ 1000 ದಿನಗಳಲ್ಲಿ ಮಗುವಿನ ಮಿದುಳಿನ ಅಭಿವೃದ್ಧಿ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಆ ಸಮಯದಲ್ಲೇ ಅತಿ ಹೆಚ್ಚಿನ ಸ್ಮರಣೆಗಳು ರೂಪುಗೊಂಡು ಅನುಭವಗಳು ನೆಲೆಗೊಳ್ಳುತ್ತವೆ.  ಜೀವನದ ಮೊದಲ ಮೂರು ವರ್ಷಗಳಲ್ಲೇ ಅತಿ ಹೆಚ್ಚು ಕಲಿಯುತ್ತೀರಿ. ಹಾಗಾಗಿ ಈ ಅವಧಿಯಲ್ಲಿ ನಡೆಯುವ ಘಟನೆಗಳು ನಿಮ್ಮ ಭವಿಷ್ಯದ ಜೀವನದ ಎಲ್ಲ ಘಟ್ಟಗಳಲ್ಲೂ ಗಾಢವಾದ ಪರಿಣಾಮ ಬೀರುತ್ತದೆ. ಹಾಗೆಂದ ಮಾತ್ರಕ್ಕೆ ನೀವು ಬದಲಾಗಬಹುದು ಎಂದು ಅರ್ಥವಲ್ಲ. ಆದರೆ ಒಂದು ಚಿಕ್ಕ ಮಗುವಿಗೆ ಯಾವ ಸಂದರ್ಭದಲ್ಲಿ ಆಘಾತವಾಗುತ್ತದೆ, ದೌರ್ಜನ್ಯದ ಭಾವನೆ ಉಂಟಾಗುತ್ತದೆ ಎನ್ನುವ ಬಗ್ಗೆ ನಿಮಗೆ ಅರಿವು ಇರಬೇಕು ಎಂದರ್ಥ.

ಮಗುವಿಗೆ ಮಿದುಳು ಇನ್ನೂ ವೃದ್ಧಿಯಾಗದೆ ಇರುವುದರಿಂದ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಕೊಂಚ ಕಾಲದ ನಂತರ ಆಘಾತ ಉಂಟಾದರೆ ನೀವು ಅದನ್ನು ಎದುರಿಸುವಷ್ಟು ಸಮರ್ಥರಾಗಿರುತ್ತೀರಿ. ಇದರ ಅನುಭವ ಸದಾ ನಕಾರಾತ್ಮಕವಾಗಿಯೇ ಇರುತ್ತದೆ. ನಾವು ಆಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಸದಾ ಸನ್ನದ್ಧರಾಗಿರಬೇಕು. ನೀವು ಚಿಕ್ಕವರಾದಷ್ಟೂ ಇದರ ಪ್ರಭಾವ ತೀವ್ರವಾಗಿರುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org