ಮಾನಸಿಕ ಸಮಸ್ಯೆ ಇರುವ ತಾಯಂದಿರಿಗೆ ಪತಿ ಹಾಗೂ ಕುಟುಂಬದವರಿಂದ ದೈಹಿಕ ಹಾಗೂ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.
ಮಗುವಿನ ಜನನದ ಸಂದರ್ಭದಲ್ಲಿ ತಾಯಿಗೆ ಮಾನಸಿಕ ಸಮಸ್ಯೆ ಉಂಟಾದಾಗ, ಅಥವಾ ಮೋದಲೇ ಖಾಯಿಲೆಯಿದ್ದರೆ, ಆಕೆಗೆ ದೈಹಿಕ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಬೆಂಬಲದ ಅಗತ್ಯವಿರುತ್ತದೆ. ಕುಟುಂಬದವರು ಮಗುವಿನ ಕಾಳಜಿ ತೆಗೆದುಕೊಳ್ಳಲು ಸಹಾಯ ಮಾಡಿ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.
ನಿಮ್ಮ ಭಾವನಾತ್ಮಕ ಸಂಗತಿಗಳ ಕಡೆಗೂ ಗಮನಕೊಡಿ. ಮಾನಸಿಕ ಅನಾರೋಗ್ಯವಿರುವ ವ್ಯಕ್ತಿಯ ಜೊತೆಗೆ ನವಜಾತ ಶಿಶುವನ್ನೂ ನೋಡಿಕೊಳ್ಳುವುದು ಅತ್ಯಂತ ಶ್ರಮದಾಯಕ. ನಿಮ್ಮ ಮನೋವೈದ್ಯರು ನಿಮಗೆ ಸಪೋರ್ಟ್ ಗ್ರೂಪನ್ನು ಪರಿಚಯಿಸಬಹುದು. ನಿಮ್ಮ ಆಲೋಚನೆಗಳನ್ನು ನಿಯಂತ್ರಣಕ್ಕೆ ತರಲು ಆಪ್ತಸಮಾಲೋಚಕರ ಸಹಾಯವನ್ನೂ ಪಡೆಯಬಹುದು.