ಕ್ಯಾನ್ಸರ್ ನಿಂದ ಖಿನ್ನತೆಗೊಳಗಾದವರಿಗೆ ವ್ಯಾಯಾಮ ನೆರವಾಗಬಲ್ಲದು

ಕ್ಯಾನ್ಸರ್ ರೋಗಕ್ಕೆ ತುತ್ತಾದವರು ಸಾಧಾರಣ ವ್ಯಕ್ತಿಗಳಿಗಿಂತ ಎರಡು ಪಟ್ಟು ಹೆಚ್ಚು ಖಿನ್ನತೆಗೆ ಒಳಗಾಗಿರುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಇಂತಹ ಪ್ರಕರಣದಲ್ಲಿ ಕೆಲವು ಋಣಾತ್ಮಕ ಅಂಶಗಳು ಕ್ಯಾನ್ಸರ್ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮತ್ತು ಕೆಡುಕಿನಲ್ಲಿ ಪರ್ಯವಸಾನಗೊಳ್ಳುತ್ತವೆ. ಆದ್ದರಿಂದ, ಕ್ಯಾನ್ಸರ್ ಚಿಕಿತ್ಸೆಯ ಜೊತೆಜೊತೆಗೆ ಖಿನ್ನತೆಗೂ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ವರದಿ ನೀಡಿರುವ ಪರ್ತ್’ನ ಅಧ್ಯಯನಕಾರರು, ನಿರಂತರ ವ್ಯಾಯಾಮದಿಂದ ಖಿನ್ನತೆಯನ್ನು ಕಡಿಮೆಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಡಿತ್ ಕಾನ್ ವಾನ್ ಯೂನಿವರ್ಸಿಟಿಯ ವಿಜ್ಞಾನಿಗಳು ಖಿನ್ನತೆಗೊಳಗಾಗಿರುವ ಕೆಲವು ಕ್ಯಾನ್ಸರ್ ರೋಗಿಗಳನ್ನಿಟ್ಟುಕೊಂಡು ಅಧ್ಯಯನ ನಡೆಸಿದ್ದರು. ಈ ಅಧ್ಯಯನವು ಮೂರು ಹಂತಗಳಲ್ಲಿ ನಡೆದಿದ್ದು; ಮೊದಲನೆಯದಾಗಿ ಆಸ್ಟ್ರೇಲಿಯಾದ, ಖಿನ್ನತೆಯುಳ್ಳ ಕ್ಯಾನ್ಸರ್ ರೋಗಿಗಳ, ಹಾಗೂ ಖಿನ್ನತೆಗೊಳಗಾಗದವರ ಹವ್ಯಾಸಗಳು ಮತ್ತು ವ್ಯಾಯಾಮಕ್ಕೆ ಅವರು ನೀಡುವ ಮಹತ್ವದ ಬಗ್ಗೆ ಅಧ್ಯಯನ ನಡೆಸಲಾಯಿತು.

ಕ್ಯಾನ್ಸರ್ ನಿಂದ ಬಳಲುತ್ತಿರುವವರು ವಾರಕ್ಕೊಮ್ಮೆ ದೈಹಿಕ ಚಟುವಟಿಕೆ - ವ್ಯಾಯಾಮಗಳನ್ನು ಮಾಡುತ್ತಿದ್ದರು ಮತ್ತು ಅವರಿಗೆ ವ್ಯಾಯಾಮ ತರಬೇತಿ ನೀಡಲು ಒಬ್ಬ ಅನುಭವಿ ತರಬೇತುದಾರರ ಅಗತ್ಯವಿತ್ತು.

ಎರಡನೇ ಹಂತದಲ್ಲಿ - ಯಾವುದೇ ಬಗೆಯ ಬೆಂಬಲ ಹೊಂದಿರದ; ಮತ್ತು, ಕೌಟುಂಬಿಕ ಹಾಗೂ ಆರ್ಥಿಕ ಬೆಂಬಲವನ್ನು ಹೊಂದಿರುವವರ ನಡುವಿನ ವ್ಯತ್ಯಾಸವನ್ನು ಅಧ್ಯಯನ ಮಾಡಲಾಯಿತು.

ಈ ಅಧ್ಯಯನದಿಂದ ಕಂಡುಬಂದ ಅಂಶವೆಂದರೆ, ಇಬ್ಬರಿಗೂ ವ್ಯಾಯಾಮದಿಂದಾಗುವ ಲಾಭದ ಬಗ್ಗೆ ಅರಿವಿತ್ತು; ಆದರೆ ಅವರು ಅದನ್ನು ಮಾಡುತ್ತಿರಲಿಲ್ಲ.

ಅಂತಿಮ ಹಂತದ ಅಧ್ಯಯನವು ಚಿಕಿತ್ಸೆಯ ಫಲಶೃತಿಯನ್ನು ಪರೀಕ್ಷಿಸುವುದಾಗಿತ್ತು. ಅದರಲ್ಲಿ, ತಾವಾಗಿಯೇ ಮನೆಯಲ್ಲಿ ಮಾಡುವ ವ್ಯಾಯಾಮಗಳು ಮತ್ತು ಶಿಕ್ಷಕರಿಂದ ಕಲಿತು ಮಾಡುವ ವ್ಯಾಯಾಮಗಳಬಗ್ಗೆ ಪರೀಕ್ಷೆ ನಡೆಸಲಾಯಿತು. ಇದರಿಂದ; ಯಾವ ರೀತಿಯಿಂದ ನಡೆಸಿದರೂ, ಒಟ್ಟಾರೆಯಾಗಿ ದೈಹಿಕ ವ್ಯಾಯಾಮಗಳು ಖಿನ್ನತೆಯನ್ನು ಕಡಿಮೆ ಮಾಡುತ್ತವೆ ಎಂಬ ಅಂಶವು ಕಂಡು ಬಂತು.

ಹೆಚ್ಚಿನ ಓದಿಗೆ ಈ ಈ ಲಿಂಕ್  ಕ್ಲಿಕ್ ಮಾಡಿ: http://ro.ecu.edu.au/cgi/viewcontent.cgi?article=2415&context=theses

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org