ಎಂಡೊಮೆಟ್ರಿಯೊಸಿಸ್: ದೈಹಿಕ ನೋವಿನಿಂದ ಮನಸ್ಸಿಗೆ ನೋವು

ಎಂಡೊಮೆಟ್ರಿಯೊಸಿಸ್: ದೈಹಿಕ ನೋವಿನಿಂದ ಮನಸ್ಸಿಗೆ ನೋವು

ಎಂಡೊಮೆಟ್ರಿಯೋಸಿಸ್‌ ಎಂದರೇನು?

ಗರ್ಭಾಶಯವು ಎಂಡೊಮೆಟ್ರಿಯಮ್ ಎಂಬ ಲೈನಿಂಗ್ ಅನ್ನು ಹೊಂದಿದೆ. ಎಂಡೊಮೆಟ್ರಿಯೊಸಿಸ್ ಈ ಅಂಗಾಂಶವು ಗರ್ಭಾಶಯದ ಹೊರಭಾಗದಲ್ಲಿ ಬೆಳೆಯುತ್ತದೆ, ಮತ್ತು ಕೆಲವೊಮ್ಮೆ ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ಗಳು ಮತ್ತು ಕೆಲವೊಮ್ಮೆ ಕರುಳನ್ನು ಒಳಗೊಂಡಂತೆ ದೇಹದ ಇತರ ಭಾಗಗಳಲ್ಲಿ ಬೆಳೆಯುತ್ತದೆ. ಗರ್ಭಾಶಯದ ಹೊರಗೆ ಈ ಪದರದ ಉಪಸ್ಥಿತಿಯು ಮುಟ್ಟಿನ ಅವಧಿಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು. ಕೆಲವೊಂದು ಮಹಿಳೆಯರಿಗೆ, ನೋವು ತೀರಾ ತೀವ್ರವಾಗಿರಬಹುದು, ಅವರ ಮುಟ್ಟಿನ ಅವಧಿಯನ್ನು ಸಂಪೂರ್ಣವಾಗಿ ಎದುರಿಸಲು ಅವರು ಅಸಮರ್ಥರಾಗಿರುತ್ತಾರೆ.

ಇದು ಕೇವಲ ದೈಹಿಕ ನೋವು ಅಲ್ಲ; ಎಂಡೊಮೆಟ್ರಿಯೊಸಿಸ್ಗೆ ಸಂಬಂಧಿಸಿದ ಈ ತೀವ್ರ ನೋವು ಭಾವನಾತ್ಮಕ ತೊಂದರೆಗಳಿಗೆ ಕೂಡ ಕಾರಣವಾಗಬಹುದು.

ಎಂಡೊಮೆಟ್ರಿಯೊಸಿಸ್ನ ಲಕ್ಷಣಗಳು ಯಾವುವು?

ಎಂಡೊಮೆಟ್ರಿಯೊಸಿಸ್‌ ಸಾಮಾನ್ಯವಾಗಿ ಸಂತಾನೋತ್ಪತ್ತಿಯ ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಸಂತಾನೋತ್ಪತ್ತಿ ವಯಸ್ಸಿನ ಆರಂಭದಲ್ಲಿ ಶುರುವಾಗುವ ಈ ಖಾಯಿಲೆ ನಂತರ ಕ್ರಮೇಣ ಉಲ್ಬಣವಾಗಬಹುದು.  ಹಲವು ಸಲ ಖಾಯಿಲೆ ಶುರುವಾಗಿ ತುಂಬಾ ಕಾಲದ ಬಳಿಕ ಇದನ್ನು ಗುರುತಿಸಲು ಸಾಧ್ಯವಾಗಬಹುದು: ಮುಟ್ಟಿನ ಬಗ್ಗೆ ಸಾವರ್ವಜನಿಕವಾಗಿ ಮಾತನಾಡುವುದಕ್ಕೆ ಹಿಂಜರಿಕೆ ಮತ್ತು ಇದೊಂದು ತೀರಾ ಸಾಮಾನ್ಯ ಸಂಗತಿ ಅನ್ನುವ ಭಾವನೆಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವ ಅಗತ್ಯವಿದೆ.   ಇದರ ಲಕ್ಷಣಗಳು:

 • ಮುಟ್ಟಿನ ಅವಧಿಯಲ್ಲಿ ತೀವ್ರ ನೋವಿನ ಸೆಳೆತ
 • ಲೈಂಗಿಕ ಕ್ರಿಯೆಯಲ್ಲಿ ನೋವು
 • ಮುಟ್ಟಿನ ಸಮಯದಲ್ಲಿ ಅಥವಾ ಸಮೀಪದ ದಿನಗಳಲ್ಲಿ ಕಿಬ್ಬೊಟ್ಟೆ ಅಥವಾ ಪೆಲ್ವಿಕ್ ಸ್ಥಳಗಳಲ್ಲಿ ನೋವು
 • ಮುಟ್ಟಿನ ಅವಧಿಯಲ್ಲಿ ಅತಿ ರಕ್ತಸ್ರಾವ
 •  ಗರ್ಭಧಾರಣೆಗೆ ತೊಡಕು

5ರಿಂದ 20 ಶೇಕಡಾದಷ್ಟು ಭಾರತೀಯ ಮಹಿಳೆಯರು ಎಂಡೋಮೆಟ್ರಿಯೋಸಿಸ್ ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.  ತುಂಬ ದಿನಗಳ ವರೆಗೆ  ಮುಟ್ಟಿನ ಸಮಯದಲ್ಲಿ ಸಹಿಸಲಸಾಧ್ಯವಾದ ನೋವು ಅನುಭವಿಸುತ್ತಿದ್ದರೆ ನಿಮ್ಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಎಂಡೊಮೆಟ್ರಿಯೋಸಿಸ್ ಹೌದೋ ಅಲ್ಲವೋ ಖಾತ್ರಿ ಪಡಿಸಿಕೊಳ್ಳಿ.

ಸಾಮಾನ್ಯ ಮುಟ್ಟಿನ ನೋವಿಗಿಂತ ಎಂಡೊಮೆಟ್ರಿಯೊಸಿಸ್ ಹೇಗೆ ಭಿನ್ನ?

ಹೆಚ್ಚಿನ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ತೀವ್ರ ನೋವಿನ ಸೆಳೆತ, ಹೊಟ್ಟೆನೋವು, ಬೆನ್ನಿನ ನೋವುಗಳನ್ನು ಅನುಭವಿಸುತ್ತಾರೆ.  ಇದರಲ್ಲಿ ಕೆಲವು ನೋವುಗಳು ಸಾಮಾನ್ಯವಾದರೂ ಕೆಲವು ಮಹಿಳೆಯರಿಗೆ ಹಾರ್ಮೋನ್‌ನ ಅಸಮತೋಲನದಿಂದ ಉಂಟಾಗುತ್ತದೆ.  ಹಾಗೆಯೇ, ಎಂಡೊಮೆಟ್ರಿಯೋಸಿಸ್ ಇದ್ದರೆ ತೀಕ್ಷ್ಣವಾದ ನೋವು ಕಾಡಿ ಮಹಿಳೆಯರಿಗೆ ದೈನಂದಿನ  ಕೆಲಸಕ್ಕೆ ತೊಂದರೆ ಮಾಡುತ್ತದೆ.  ಕೆಲವು ಮಹಿಳೆಯರಿಗೆ ಮುಟ್ಟಿಗಿಂತ ಮೊದಲು ಹಾಗೂ ನಂತರದ ದಿನಗಳಲ್ಲಿ ನೋವಿನ ಅನುಭವವಾಗುತ್ತದೆ.  

ಎಂಡೋಮೆಟ್ರೋಸಿಸ್ ದೀರ್ಘಕಾಲ ಇರುವಂಥ ಖಾಯಿಲೆಯಾಗಿದ್ದು, ಔಷಧಿಗಳ ಮೂಲಕ ಕಡಿಮೆ ಮಾಡಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಇತರ ಅಂಗಗಳಿಂದ ಎಂಡೊಮೆಟ್ರಿಯಮ್ ಅನ್ನು ತೆಗೆದುಹಾಕಲು ವೈದ್ಯರು  ಶಿಫಾರಸು ಮಾಡಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಇದು ಪುನರಾವರ್ತಿಸಬಹುದು.

ಸಾಮಾನ್ಯವಾಗಿ, ಎಂಡೊಮೆಟ್ರೋಸಿಸ್ ಅನ್ನು ಮುಟ್ಟಿನ ಅವಧಿಯ ನೋವಿಗೆ ಹೋಲಿಸಲಾಗುತ್ತದೆ. ಯಾಕೆಂದರೆ ಇದನ್ನು ಎದುರಿಸುವುದು ದೊಡ್ಡ ಸವಾಲು.

ಮತ್ತು ಅರಿವಿನ ಕೊರತೆಯಿಂದಾಗಿ, ಎಂಡೊಮೆಟ್ರಿಯೊಸಿಸ್ ಹೊಂದಿರುವ ಮಹಿಳೆ ಮೊದಲೇ ತನ್ನನ್ನು ಕಾಡುತ್ತಿರುವ  ರೋಗ ನಿರ್ಣಯ ಮಾಡಲಾಗದೇ ವರ್ಷಗಳವರೆಗೆ ನೋವನ್ನು ಅನುಭವಿಸುತ್ತಾರೆ. ನೋವು ಅಸಹನೀಯವಾಗಿದ್ದಾಗ ಮಾತ್ರ ಕೆಲವು ಮಹಿಳೆಯರು ಸಹಾಯ ಪಡೆಯುತ್ತಾರೆ.

ಭಾವನಾತ್ಮಕ ಪರಿಣಾಮ

ಎಂಡೋಮೆಟ್ರೋಸಿ‌ಸ್‌ನ ನೋವಿನೊಂದಿಗೆ ಏಗುವುದು ಸಾಮಾನ್ಯ ಮುಟ್ಟಿನ ನೋವಿಗಿಂತ ಹೆಚ್ಚುಕಷ್ಟದಾಯಕ.  ದೀರ್ಘಕಾಲ ಕಾಡುವ ನೋವು ಮಹಿಳೆಯರಿಗೆ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಎಂದಿನಂತೆ ತೊಡಗಿಕೊಳ್ಳಲು ಬಿಡುವುದಿಲ್ಲ.  ಇದೆಲ್ಲವೂ ಒತ್ತಡದಿಂದ ಕೂಡಿರಬಹುದು:

 •  ಮನೆ ಅಥವಾ ಕೆಲಸದ ಸ್ಥಳದಲ್ಲಿ ತಮ್ಮ ದೈನಂದಿನ ಜವಾಬ್ದಾರಿಗಳನ್ನು ನಿಭಾಯಿಸಲು ಅಸಮರ್ಥತೆ,
 • ಲೈಂಗಿಕ ಸಂಪರ್ಕದ ಸಮಯದಲ್ಲಿ ನೋವು, ಮತ್ತು ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಬಹುದು.
 • ಬಂಜೆತನ, ಅಥವಾ ನಿಜವಾದ ಬಂಜೆತನ ಬಗ್ಗೆ ಕಾಳಜಿ
 • ಪುನರಾವರ್ತಿತ ಅಥವಾ ಅವರ ಸ್ಥಿತಿ ಹದಗೆಟ್ಟ ಬಗ್ಗೆ ಚಿಂತೆ
 • ಚಿಕಿತ್ಸೆ ಬಗ್ಗೆ ಆತಂಕ ಮತ್ತು ಹತಾಶೆ ಅಥವಾ ನಿರಾಸೆ.

ಇತರ ಹಾರ್ಮೋನ್-ಸಂಬಂಧಿತ ಸ್ಥಿತಿಗತಿಗಳಂತೆ, ಇದು ಹಾರ್ಮೋನಿನ ವಿರಳತೆಯಿಂದ ತೊಂದರೆ ಉಂಟುಮಾಡುತ್ತದೆ. ದೈಹಿಕವಾದ ಸಂಗತಿಗಳು ಮಹಿಳೆಗೆ ಒತ್ತಡವನ್ನುಂಟುಮಾಡುತ್ತಿದ್ದರೆ, ಸಮಸ್ಯೆಯೊಂದಿಗೆ ಹೋರಾಡುವ ಅವಳ ಸಾಮರ್ಥ್ಯವನ್ನು ಕಮ್ಮಿ ಮಾಡುತ್ತದೆ. ಹಿನ್ನೆಲೆಯಲ್ಲಿ ಕಾಡುವ ಒತ್ತಡಗಳು ಕೂಡಾ, ಸಮಸ್ಯೆಯನ್ನು ನಿವಾರಿಸುವಲ್ಲಿ ತೊಡಕುಂಟುಮಾಡುತ್ತವೆ. ಹಿನ್ನೆಲೆಯ ಒತ್ತಡವನ್ನೂ ಒಳಗೊಂಡಿರಬಹುದು:

 • ಕೆಲಸದ ಸ್ಥಳದಲ್ಲಿ ಬೆಂಬಲವಿಲ್ಲದ ವಾತಾವರಣ
 • ತಿಳಿವಳಿಕೆಯಿಲ್ಲದ ಕುಟುಂಬ ಅಥವಾ ಕುಟುಂಬದಿಂದ ಬೆಂಬಲ
 • ಭಾವನಾತ್ಮಕ ಬೆಂಬಲ ಮತ್ತು ಅವಳ ಪರಿಸ್ಥಿಗೆ ಪರಾನುಭೂತಿಯ ಕೊರತೆ.
 • ಮದುವೆಯ ಬಳಿಕ ಬೇಗನೇ ಮಗುವನ್ನು  ಹೆರುವಂತೆ ಸಮಾಜದ ಒತ್ತಡ.
 • ಮುಟ್ಟಿನ ಬಗ್ಗೆ ಮಾತಾಡುವುದು ನಿಷಿದ್ಧ ಎಂಬ ಭಾವನೆ ಇರುವುದರಿಂದ ಅವಳ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗದಿರುವುದು.

ಈ ಹಿನ್ನಲೆ ಒತ್ತಡದಿಂದಾಗಿ ಮಹಿಳೆಯೊಬ್ಬಳು ಏಕಾಂಗಿತನವನ್ನು ಅನುಭವಿಸಬಹುದು, ಸ್ವಾಭಿಮಾನದ ಕೊರತೆ ಕಾಣಬಹುದು. ಮತ್ತು ಏನನ್ನೂ ಅರ್ಥ ಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಬರಬಹುದು. ಅನಾರೋಗ್ಯದ ತೀವ್ರತೆಯು ಹೆದರಿಸಬಹುದು ಮತ್ತು ಹತಾಶೆಗೆ ಕಾರಣವಾಗಬಹುದು. ಎಂಡೊಮೆಟ್ರೋಸಿಸ್‌ನ ಹೆಚ್ಚಿನ ಹಿನ್ನಲೆ ಒತ್ತಡ  ಹೊಂದಿರುವ ಮಹಿಳೆಯರು ಮುಖ್ಯವಾಗಿ ಚಿತ್ತ ತೊಂದರೆಗಳು, ಆತಂಕ, ಖಿನ್ನತೆ ಅಥವಾ ಗೀಳು ಪ್ರಚೋದನೆಗಳಿಂದ ಬಳಲುತ್ತಿದ್ದಾರೆ. ಹಾರ್ಮೋನುಗಳ ಚಿಕಿತ್ಸೆಯು ಲಹರಿಯ ಬದಲಾವಣೆ ಉಂಟುಮಾಡಬಹುದು.

ಎಂಡೊಮೆಟ್ರೋಸಿ‌ಸ್‌ ಅನ್ನು ನಿಭಾಯಿಸುವುದು

"ಎಂಡೊಮೆಟ್ರಿಯೊಸಿಸ್-ಸಂಗಿಲ್ಬಂಧಿತ ನೋವು ಬಂದಾಗ ಈ ಬಗ್ಗೆ ಗ್ರಹಿಸಬೇಕು.  ಮತ್ತು ಇದೊಂದು ಕಲ್ಪಿತ ನೋವು ಎಂದು ಭಾವಿಸಬೇಕಾಗಿಲ್ಲ. ಹಿನ್ನೆಲೆಯ ಒತ್ತಡದ ಆಧಾರದಲ್ಲಿ ನೋವನ್ನು ಗ್ರಹಿಸತಕ್ಕದ್ದು.  ಒತ್ತಡವು ಹೆಚ್ಚಾಗುತ್ತಿದ್ದಂತೆ, ನೋವಿನ ಮಿತಿ ಕಡಿಮೆಯಾಗುತ್ತದೆ ಮತ್ತು ನಿಭಾಯಿಸಲು ಕಷ್ಟವಾಗುತ್ತದೆ "ಎಂದು ಸ್ತ್ರೀರೋಗತಜ್ಞ ಡಾ. ಲತಾ ವೆಂಕಟರಾಮನ್ ಹೇಳುತ್ತಾರೆ. "ಮತ್ತು ಕೆಲವೊಮ್ಮೆ, ಅವಳ ಸುತ್ತಲಿರುವ ಜನರಿಗೆ ನೋವನ್ನು ಹೆಚ್ಚಿಸುವ ಸಾಧ್ಯತೆಯಿದೆ ಏಕೆಂದರೆ ಇದು ದೀರ್ಘಕಾಲೀನವಾಗಿರುತ್ತದೆ. ಅವರು ನೋವನ್ನು ನಿರ್ಲಕ್ಷಿಸಬಹುದು ಅಥವಾ ಬೆಂಬಲವಿಲ್ಲದ ಪ್ರತಿಕ್ರಿಯೆಯನ್ನು ನೀಡಬಹುದು. ಇದರಿಂದ ಒತ್ತಡ ಹೆಚ್ಚಾಗಬಹುದು ಮತ್ತು ನಿಭಾಯಿಸುವ ಸಾಮರ್ಥ್ಯ ಕಮ್ಮಿ ಮಾಡಬಹುದು. ಆದ್ದರಿಂದ ಇದು ವಿಷವರ್ತುಳವಾಗಿ ಮಾರ್ಪಡುತ್ತದೆ. "

ಹಿನ್ನೆಲೆ ಒತ್ತಡವನ್ನು ಮೊದಲೇ ಗುರುತಿಸಿ ಮತ್ತು ಸೂಕ್ತವಾಗಿ ನಿರ್ವಹಿಸಿದರೆ ಎಂಡೋಮೆಟ್ರಿಯೋಸಿಸ್‌ಅನ್ನು ನಿಭಾಯಿಸುಉವುದು ಕಷ್ಟದ ಕೆಲಸವಲ್ಲ.

 1. ಅನಾರೋಗ್ಯವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಎಲ್ಲಾ ಪ್ರಶ್ನೆಗಳನ್ನು ವೈದ್ಯರ ಬಳಿ ಕೇಳಿ. ಇದರಿಂದ  ನಿಮಗೆ ಸೂಕ್ತ ಮಾಹಿತಿಗಳು ಸಿಗಬಹುದು.
 2. ನಿಮ್ಮ ಕುಟುಂಬದ ಬೆಂಬಲವಿದ್ದರೆ, ಅವರೊಂದಿಗೆ ಮಾತನಾಡಿ ಮತ್ತು ನಿಮಗೇನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿ.  ನಿಮ್ಮ ಕುಟುಂಬದ ಸದಸ್ಯರು ಅಥವಾ ನಿಮ್ಮ ಸಂಗಾತಿಯನ್ನೂ ನಿಮ್ಮೊಂದಿಗೆ ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ದರೆ, ಅವರು ಎಂಡೋಮೆಟ್ರಿಯೋಸಿಸ್‌ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.   ನಿಮಗೆ ಸಂಗಾತಿಯಿದ್ದರೆ, ಚಿಕಿತ್ಸೆಯ ಅವಧಿಯಲ್ಲಿ ಅವರೂ ಪಾಲ್ಗೊಳ್ಳಲಿ.
 3. ಮುಟ್ಟಿನ ಅವಧಿಯಲ್ಲಿ ನೀವು ಯಾವ ರೀತಿಯ ಒತ್ತಡಕ್ಕೊಳಗಾಗುತ್ತಿದ್ದೀರಿ ಎಂಬುದನ್ನು ಗುರುತಿಸಿ.  ಇದನ್ನು ಹಗುರವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿ.  ಅಗತ್ಯವಿದ್ದರೆ ಕೆಲವು ಕೆಲಸಗಳನ್ನು ಪೂರೈಸಲು ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಸಹಾಯವನ್ನು ಪಡೆಯಿರಿ..
 4. ಪ್ರಸಿದ್ಧ ನಂಬಿಕೆಯ ಪ್ರಕಾರ  ಎಂಡೋಮೆಟ್ರಿಯೋಸಿಸ್‌ ಎಲ್ಲಾ ಸಮಯದಲ್ಲಿಯೂ ಬಂಜೆತನಕ್ಕೆ ಕಾರಣವಾಗುವುದಿಲ್ಲ.  ಗರ್ಭಧಾರಣೆಯ ಬಗ್ಗೆ ನಿಮಗೆ ಚಿಂತೆಯಾಗುತ್ತಿದ್ದರೆ ಮೊದಲು ಚಿಕಿತ್ಸಾ ಸಾಧ್ಯತೆಗಳ ಬಗ್ಗೆ ಮತ್ತು ನೀವೇನು ಮಾಡಬೇಕು ಎಂಬುದರ ಬಗ್ಗೆ ವೈದ್ಯರನ್ನು ಕೇಳಿ.
 5. ನಿಮ್ಮ ಸಮಸ್ಯೆ ಪೂರ್ತಿ ಕಮ್ಮಿಯಾಗುವವರೆಗೂ ಈ ಕೆಳಗಿನ ವ್ಯಾಯಾಮಗಳನ್ನು ನಿತ್ಯವೂ ಮಾಡಿ.  ಯೋಗ - ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಉತ್ತಮ.
 6. ಅಂತರ್ಜಾಲದಲ್ಲಿ ಸಹಾಯಕ ಗುಂಪನ್ನು ಹುಡುಕಿಕೊಳ್ಳಿ.  ನಿಮ್ಮ ಸಮಸ್ಯೆಯೇನಾದರೂ ಮಿತಿಮೀರಿದಂತೆ ಅನ್ನಿಸಿದರೆ, ಆಪ್ತಸಮಾಲೋಚಕರ ಬಳಿ ತೆರಳಿ ಭಾವನಾತ್ಮಕ ಬೆಂಬಲ ಪಡೆಯಿರಿ.

ಎಂಡೋಮೆಟ್ರಿಯೋಸಿಸ್‌ನಿಂದ ಬಳಲುತ್ತಿರುವವರಿಗೆ ನೀವೇನು ಮಾಡಬಹುದು ಅಂದರೆ:

 1. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅವಳಿಗೆ ಸಹಾಯ ಮಾಡಿ.  ಮನೆಗೆಲಸದಲ್ಲಿ ಅವಳಿಗೆ ನೆರವಾಗಬಹುದು. ಅಥವಾ ಮಕ್ಕಳನ್ನು ನೋಡಿಕೊಳ್ಳಬಹುದು.
 2. ಅವಳ ನೋವು ಇನ್ನೂ ಹಾಗೇ ಇದೆ ಅನ್ನಿಸಿದಲ್ಲಿ, ನಿಮಗೆ  ಗೊತ್ತಿರುವ ಮನೆ ಔಷಧದ ಬಗ್ಗೆ ಹೇಳಿ.  ಇದರಿಂದ ನೀವು ಅವಳ ನೋವಿನ ಬಗ್ಗೆ ಪರಾನುಭೂತಿ ಹೊಂದಿದ್ದಿರಿ ಮತ್ತು ಸಹಾಯ ಮಾಡುವ ಮನೋಭಾವನೆಯನ್ನು ಹೊಂದಿದ್ದೀರಿ ಎಂಬದು ಅರ್ಥವಾಗುತ್ತದೆ.
 3. ನೋವು ಹೆಚ್ಚಾಗಿದ್ದಾಗ ಅವಳಿಗೆ ನಿಮ್ಮಿಂದ ಯಾವ ರೀತಿಯ ಸಹಾಯದ ಅಗತ್ಯವಿದೆ ಎಂದು ಕೇಳಿ.  ಅವಳು ಬಿಸಿನೀರಿನ ಸ್ನಾನ ಅಥವಾ ಮಸಾಜ್‌ ಅನ್ನು ಇಷ್ಟಪಡುತ್ತಾಳಾ?  ಒಂದು ಲೋಟ ಚಹಾ?  ಅಥವಾ ಅವಳು ಒಂದು ಸಣ್ಣ ಸ್ಪೇಸ್‌ ಅನ್ನು ಬಯಸುತ್ತಿದ್ದಾಳಾ?
 4. ಅವಳ ಆಸಕ್ತಿ, ಹವ್ಯಾಸಗಳಿಗೆ ಹೆಚ್ಚಿನ ಸಮಯ ಕೊಡುವಂತೆ  ಅಥವಾ ಹೆಚ್ಚು ಅರ್ಥಪೂರ್ಣವೆನ್ನಿಸುವ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಿ.  ಇದೆಲ್ಲವೂ ಮುಖ್ಯವಾಗಿ ಯೌವನಾವಸ್ಥೆಯಲ್ಲಿರುವ ಹುಡುಗಿಯರ ಮೇಲೆ ಪರಿಣಾಮ ಬೀರುತ್ತವೆ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org