ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರನ್ನು ಅದರಿಂದ ಹೊರತರುವ ಬಗೆ ಹೇಗೆ?

ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರನ್ನು ಅದರಿಂದ ಹೊರತರುವ ಬಗೆ ಹೇಗೆ?

ನಿಮ್ಮ ಪರಿಚಿತ ವ್ಯಕ್ತಿಗಳಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ, ಅದಕ್ಕೆ ಪ್ರಯತ್ನಿಸುತ್ತಿರುವ ಸೂಚನೆಗಳು ಕಂಡುಬಂದರೆ, ಅವರ ಮನಃಪರಿವರ್ತನೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.

ನಿಮ್ಮ ಪರಿಚಿತ ವ್ಯಕ್ತಿಗಳಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ, ಅದಕ್ಕೆ ಪ್ರಯತ್ನಿಸುತ್ತಿರುವ ಸೂಚನೆಗಳು ಕಂಡುಬಂದರೆ, ಅವರ ಮನಃಪರಿವರ್ತನೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.

ಯಾವುದೇ ವ್ಯಕ್ತಿಯಲ್ಲಿ ಆತ್ಮಹತ್ಯೆ ಕುರಿತ ಯಾವುದಾದರೂ ಸೂಕ್ಷ್ಮ ಲಕ್ಷಣಗಳು ಕಂಡುಬಂದಲ್ಲಿ, ನಿಮ್ಮ ಮಧ್ಯಸ್ಥಿಕೆಯಿಂದ ಅವರ ಮನಃಪರಿವರ್ತನೆಯಾಗಬಹುದು. ನಾನು ಏಕಾಂಗಿಯಲ್ಲ, ನನ್ನ ಬಗ್ಗೆಯೂ ಕಾಳಜಿ ವಹಿಸುವವರಿದ್ದಾರೆ ಎನ್ನುವ ವಿಷಯ ಮನದಟ್ಟಾಗಿ ಅವರು ನಿಮ್ಮ ಸಹಾಯ - ಸಲಹೆಗಳನ್ನು ಸ್ವೀಕರಿಸಬಹುದು.

ನೀವೇನು ಮಾಡಬಹುದು? :

 • ಅವರೊಡನೆ ಖಾಸಗಿಯಾಗಿ ಸಮಾಲೋಚನೆ ನಡೆಸಿ ಮತ್ತು ಆತ್ಮಹತ್ಯೆ ಕುರಿತು ಸೂಕ್ಷ್ಮವಾಗಿ ಪ್ರಸ್ತಾಪಿಸಿ. ಅವರ ಮನದಾಳದಲ್ಲಿ ಹೊಕ್ಕಿರುವ ಆತ್ಮಹತ್ಯೆ ಆಲೋಚನೆಯ ಬಗ್ಗೆ ಕೇಳಿ.
 • ಅವರಿಗೆ ಇರಬಹುದಾದ ಮಾನಸಿಕ ಖಿನ್ನತೆಯ ಬಗ್ಗೆ ತಿಳಿದುಕೊಳ್ಳಿ ಮತ್ತು ಅವರ ಅನಿಸಿಕೆಗಳನ್ನು ಸ್ವೀಕರಿಸಿ; ಅವರ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ತಿಳಿಸಿ.
 • ನೀವು ಅವರೊಂದಿಗಿದ್ದೀರಿ ಎಂಬ ಭಾವನೆ ಅವರಲ್ಲಿ ಮೂಡಲಿ ಮತ್ತು ನೀವು ಸ್ಪಷ್ಟ ಮಾತುಗಳಲ್ಲಿ ನಿಮ್ಮ ಬೆಂಬಲವನ್ನು ಸೂಚಿಸಿ.
 • ನೀವು ಅವರಿಗೆ ಯಾವ ರೀತಿಯಾಗಿ ಸಹಾಯ ಮಾಡಬಹುದು ಎಂಬುದನ್ನು ಅವರಲ್ಲಿಯೇ ಕೇಳಿ ತಿಳಿದುಕೊಳ್ಳಿ. ಮತ್ತು, ಅವರಿಗಾಗಿ ಯಾವ ರೀತಿಯ ವಿಶೇಷ ಪ್ರಯತ್ನಗಳನ್ನು ಮಾಡಬಹುದು ಎಂಬುದರ ಬಗ್ಗೆ ಆಲೋಚಿಸಿ.
 • ಅವರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಿ; ಮುಂದೆ ಎಂದಾದರೂ ಮತ್ತೆ ಇಂತಹ ಆಲೋಚನೆಗಳು ಬಂದರೆ ನಿಮ್ಮೊಂದಿಗೆ ಸಮಾಲೋಚನೆ ನಡೆಸುವಂತೆ ಅವರಿಗೆ ತಿಳಿಸಿ. ಇದಕ್ಕೆ ಅವರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿ, ಖಾತ್ರಿಪಡಿಸಿಕೊಳ್ಳಿ.
 • ಮಾನಸಿಕ ತಜ್ಞರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಪ್ರೇರೇಪಿಸಿ. ಮತ್ತು ಈ ಪ್ರಕ್ರಿಯೆಯಲ್ಲಿ ನೀವೂ ಅವರಿಗೆ ಬೆಂಬಲವಾಗಿರಿ.

ನೀವು ಮಾಡಬಾರದ್ದು :

 • “ನನಗೆ ಗೊತ್ತು ನೀನು ಪ್ರಯತ್ನಿಸಿದರೆ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದೇ ತರುತ್ತೀಯ” ಎಂದೋ; “ಇದು ನೀನಂದು ಕೊಂಡಷ್ಟು ಸುಲಭವಲ್ಲ” ಎಂದೋ ಹೇಳಿಕೆಗಳನ್ನು ನೀಡಬೇಡಿ. ಹೀಗೆ ಮಾಡುವುದರಿಂದ ಅವರಿಗೆ ಪ್ರಚೋದನೆ ನೀಡಿದಂತಾಗುತ್ತದೆ ಹೊರತು ಮನಃಪರಿವರ್ತನೆ ಆಗುವುದಿಲ್ಲ. 
 • ಅವರ ಪರಿಸ್ಥಿತಿಯನ್ನು ತಿಳಿಯದೇ ಯಾವುದೇ ಆಶ್ವಾಸನೆಗಳನ್ನು ನೀಡಬೇಡಿ.
 • ಅವರ ಪ್ರೀತಿಪಾತ್ರರಿಗೆ ಇದರಿಂದ ನೋವುಂಟಾಗಲಿದೆಯೆಂಬ ಅಂಶವನ್ನು ಮನಮುಟ್ಟುವಂತೆ ತಿಳಿ ಹೇಳಿ.
 • ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಥಿತಿಯವರು ಅಥವಾ ಇದು ಹೇಡಿಗಳ ಲಕ್ಷಣ ಎಂಬ ಹೇಳಿಕೆಗಳನ್ನು ನೀಡದಿರಿ. ಇದರಿಂದ ಅವರು ಕೀಳರಿಮೆಗೆ ಒಳಗಾಗಬಹುದು ಇಲ್ಲವೇ ಕೆರಳಬಹುದು.
 • ಇಂತಹ ಮನೋಭಾವನೆ ಅವರಲ್ಲಿ ಮೂಡಿರುವುದಕ್ಕೆ ಅವರನ್ನು ಹೀಯಾಳಿಸಬೇಡಿ.
 • ಆತ್ಮಹತ್ಯೆ ಒಳ್ಳೆಯ ಆಲೋಚನೆಯೆ ಅಲ್ಲವೆಂದು ಮನದಟ್ಟು ಮಾಡಿ

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org