ಕೋವಿಡ್ 19 ವಿಶ್ವವ್ಯಾಪಿ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರ ಭಾವನಾತ್ಮಕ ಯೋಗಕ್ಷೇಮ

ಕೋವಿಡ್ 19 ವಿಶ್ವವ್ಯಾಪಿ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರ ಭಾವನಾತ್ಮಕ ಯೋಗಕ್ಷೇಮ

ಕೋವಿದ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೋರೋನಾ ಹರಡುವಿಕೆಯನ್ನು ತಡೆಗಟ್ಟಲು ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುವ ನಿಮ್ಮ ಮೇಲೆ ತೀವ್ರವಾದ ಮಾನಸಿಕ ಒತ್ತಡ ಇರುತ್ತದೆ. ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡ ನಿಮ್ಮ ಮೇಲಿರುತ್ತದೆ. ಅತಿಯಾದ ಒತ್ತಡ, ಹೆಚ್ಚಿನ ಕೆಲಸದ ಅವಧಿ, ಸೋಂಕು ತಗಲುವ ಭೀತಿ ಮತ್ತು ಅಪಾಯ, ಹೆಚ್ಚಿನ ಕೆಲಸದ ಹೊರೆ ಮತ್ತು ನಿಮ್ಮ ನಿತ್ಯ ಚಟುವಟಿಕೆ ಮತ್ತು ಕಾರ್ಯವೈಖರಿಯನ್ನು ಬಿಕ್ಕಟ್ಟಿನ ಸಮಯಕ್ಕೆ ತಕ್ಕಂತೆ, ಶೀಘ್ರವಾಗಿ ಕೆಲವೇ ಗಂಟೆಗಳೊಳಗಾಗಿ. ಹೊಂದಿಸಿಕೊಳ್ಳಬೇಕಾದ ಅನಿವಾರ್ಯತೆ ಇವೆಲ್ಲವೂ ನಿಮ್ಮ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ.

ಪ್ರಸ್ತುತ ಬಿಕ್ಕಟ್ಟಿನ ಸನ್ನಿವೇಶದಿಂದ ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಎನ್ನುವುದನ್ನು ಮನಗಂಡು, ನಾವು ವೈಟ್ ಸ್ವಾನ್ ಫೌಂಡೇಷನ್ ವತಿಯಿಂದ ಒಂದು ಅಂತರ್ಜಾಲ ಸಮಾಲೋಚನೆ, ವೆಬಿನಾರ್ ಆಯೋಜಿಸಿದ್ದೇವೆ. ಕರ್ನಾಟಕದ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಘಟನೆಗಳ ಒಕ್ಕೂಟ (FEVOURD-K) ದ ಸಹಯೋಗದಲ್ಲಿ ಈ ವೆಬಿನಾರ್ ಆಯೋಜಿಸಲಾಗಿದೆ.

ಈ ವೆಬಿನಾರ್ ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥರೂ , ಪ್ರೊಫೆಸರ್ ಸಹ ಆಗಿರುವ ಡಾ ಸಿ ನವೀನ್ ಕುಮಾರ್ ಮಾತನಾಡಲಿದ್ದಾರೆ. ಈ ವೆಬಿನಾರ್ ಮೂಲಕ ಕೋವಿದ್ 19 ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರರಿಗೆ ಸುಲಭವಾಗಿ ಮನದಟ್ಟಾಗುವಂತೆ ಮಾನಸಿಕ ಆರೋಗ್ಯ ನಿರ್ವಹಣೆಯನ್ನು ಕುರಿತು ಮಾತನಾಡಲಿದ್ದು , ಒತ್ತಡವನ್ನು ಸುಲಭವಾಗಿ ಎದುರಿಸಲು ಅನುಸರಿಸಬೇಕಾದ ಮಾರ್ಗಗಳನ್ನು ತಿಳಿಸಿಕೊಡಲಿದ್ದಾರೆ.

Related Stories

No stories found.