ವೈವಿಧ್ಯಮಯ, ಪರಿಣಾಮಕಾರಿ ಮೂವ್ಮೆಂಟ್ ಥೆರಪಿ

ನಮ್ಮ ದೇಹ ಅನುಭವಗಳ ಸಂಗಮ. ಇವು ನೆನಪು, ಭಾವನೆಗಳನ್ನು ಹಿಡಿದಿಟ್ಟುಕೊಂಡು ಅಭಿವ್ಯಕ್ತಿಗೊಳಿಸುತ್ತವೆ. ನಮ್ಮ ದೇಹ ಹೇಳಿದಂತೆ ಕೇಳುವುದರಿಂದ ಸಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಸುಲಭ.

ನಮ್ಮ ಅತಿ ಭಾವುಕ ಅಥವಾ ಕೆಟ್ಟ ಸಮಯದಲ್ಲಿ ಒಂದು ಹಾಡು ಅಥವಾ ಒಂದು ನೃತ್ಯ ನಮ್ಮ ಭಾವನೆಗಳನ್ನು ತೀವ್ರಗೊಳಿಸಬಹುದು. ನಮ್ಮ ಭಾವನೆಗಳ ಮೂಲಕ ನಾವು ವಿಶ್ವದ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತೇವೆ. ಈ ಕಲೆಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸಿಕೊಳ್ಳುತ್ತೇವೆ. ಕಲಾ ಮೂಲದ ಚಿಕಿತ್ಸೆಗಳಿಂದ ಯಾವ ಅಡ್ಡ ಪರಿಣಾಮವೂ ಇಲ್ಲ. ಸಹ ಸೃಷ್ಟಿಯ ಪ್ರಕ್ರಿಯೆ ಮೂಲಕ ನಮ್ಮ ಅಸ್ವಸ್ಥತೆ, ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು.

ಮೂವ್‌ಮೆಂಟ್‌ ಥೆರಪಿ ಇಂಥ ಒಂದು ಅಪರೂಪದ ಚಿಕಿತ್ಸಾ ಕ್ರಮ. ಭೌತಿಕ ಅಥವಾ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಈ ನೃತ್ಯ ಚಲನೆಯನ್ನು ಚಿಕಿತ್ಸೆಯಾಗಿ ಬಳಸಬಹುದು. ಅಂಗವೈಲಕ್ಯದಿಂದ ಬಳಲುವ ಮಕ್ಕಳನ್ನು ಕೂಡಾ ಸಂಪೂರ್ಣ ಚಲನಶೀಲ ಹಾಗೂ ಸಕ್ರಿಯರಾಗಿರುವಂತೆ ಮಾಡಬಹುದು. ಈ ಚಲನೆ ಚಿಕಿತ್ಸೆಯ ಮುಖ್ಯ ಗುರಿ ಎಂದರೆ ವ್ಯಕ್ತಿಗಳ ಅರಿವು, ಭೌತಿಕ, ಮಾನಸಿಕ ಹಾಗೂ ಭಾವನಾತ್ಮಕ ಕಲ್ಯಾಣ.

ಮೂವ್‌ಮೆಂಟ್‌ ಥೆರಪಿಯಲ್ಲಿ ಹಲವು ವೈವಿಧ್ಯಮಯ ಚಟುವಟಿಕೆಗಳು ಒಳಗೊಳ್ಳುತ್ತವೆ. ತೀರಾ ಕಚ್ಚಾ ನೃತ್ಯದ ಮೂಲಕ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಸೂಚಿಸಲಾಗುತ್ತದೆ. ಜತೆಗೆ ಅವರ ಯೋಚನೆ ಹಾಗೂ ಕಲ್ಪನೆಗಳನ್ನು ಸುರಕ್ಷಿತ ವಾತಾವರಣದಲ್ಲಿ ಅಂಗಾಂಗ ಚಲನೆ ಮೂಲಕ ಅಭಿವ್ಯಕ್ತಪಡಿಸುವಂತೆ ಹೇಳಲಾಗುತ್ತದೆ.

ಮೂವ್‌ಮೆಂಟ್‌ ಥೆರಪಿ ಜ್ಞಾನ:
ನಾವೆಲ್ಲರೂ ಹುಟ್ಟಿನಿಂದಲೇ ಚಲನೆಯ ಗ್ರಹಿಕೆಯನ್ನು ಅರಿತಿದ್ದೇವೆ. ನಮ್ಮ ದೇಹಕ್ಕೆ ಅದರದ್ದೇ ಆದ ವಿಶಿಷ್ಟ ಭಾಷೆ ಇದೆ. ಆದರೆ ಕೆಲವೊಮ್ಮೆ ನಾವು ಅದನ್ನು ಸಮರ್ಥವಾಗಿ ಬಳಸದೇ ಇರುವ ಕಾರಣದಿಂದ ನಾವು ಚಲನೆಯ ಗ್ರಹಿಕೆಯನ್ನು ಕಳೆದುಕೊಂಡಿರುತ್ತೇವೆ. ಅನಾರೋಗ್ಯ, ಅಂಗವೈಕಲ್ಯ ಅಥವಾ ಕೆಲ ತಡೆಗಳಿಂದಾಗಿ ಇದು ಸಾಧ್ಯವಾಗದು. ಇಲ್ಲಿ ಚಲನಾ ಚಿಕಿತ್ಸಕನ ಮುಖ್ಯ ಕಾರ್ಯ ಎಂದರೆ, ಹೀಗೆ ಕಳೆದುಕೊಂಡ ಗ್ರಹಿಕೆಯನ್ನು ಮರಳಿ ಪುನಶ್ಚೇತನಗೊಳಿಸುವುದು ಹಾಗೂ ಅವರೇ ಅಭಿವ್ಯಕ್ತಗೊಳಿಸಲು ಉದ್ದೀಪಿಸುವುದು. ಅದರಲ್ಲೂ ಮುಖ್ಯವಾಗಿ ಹತ್ತಿಕ್ಕಿಕೊಂಡ ಭಾವನೆಗಳು ಹಾಗೂ ಯೋಚನೆಗಳ ಮುಕ್ತ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುವುದು.

"ಇದನ್ನು ಮನೋಚಿಕಿತ್ಸೆಯ ಪರ್ಯಾಯ ವಿಧಾನ ಎನ್ನಬಹುದು. ಮನೋಚಿಕಿತ್ಸೆಯ ಸೆಷನ್‌ನಲ್ಲಿ ನೀವು ನಿಮ್ಮ ಮನಸ್ಸಿನ ಯೋಚನೆಗಳನ್ನು ಸ್ಪಷ್ಟವಾಗಿ ಶಬ್ದಗಳ ಮೂಲಕ ವ್ಯಕ್ತಗೊಳಿಸುತ್ತೀರಿ. ಅಂತೆಯೇ ಇಲ್ಲಿ ಚಲನಾ ಚಿಕಿತ್ಸೆಯಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆಂಗಿಕ ಚಲನೆಗಳನ್ನು ಸಾಧನವಾಗಿ ಬಳಸುತ್ತೀರಿ. ನಾವು ಏನು ಯೋಚನೆ ಮಾಡುತ್ತಿದ್ದೇವೆ. ಯಾವುದು ನಮಗೆ ತೊಂದರೆ ಕೊಡುವ ಅಂಶ, ನಮಗೆ ಏನು ಕೊರತೆಯಾಗಿದೆ, ನಮಗೆ ಏನು ಬೇಕು, ನಾವು ಏನನ್ನು ಹೇಳಬಯಸುತ್ತೇವೆ, ನಮ್ಮ ಗುರಿ ಏನು, ನಮ್ಮೊಳಗೆ ನಾವು ಏನನ್ನು ಹುಡುಕಿಕೊಳ್ಳುತ್ತಿದ್ದೇವೆ ಎಂಬ ಎಲ್ಲ ಅಂಶಗಳನ್ನೂ ಇದು ದೈಹಿಕ ಭಾಷೆ ಮೂಲಕ ತಿಳಿಸುತ್ತೇವೆ" ಎಂದು ಚಲನಾ ಚಿಕಿತ್ಸೆ ತಜ್ಞ ಮತ್ತು ಕ್ರಿಯೇಟಿವ್ ಮೂವ್‌ಮೆಂಟ್ ಥೆರಪಿ ಅಸೋಸಿಯೇಶನ್ ಆಫ್ ಇಂಡಿಯಾ ಸಹ ಸಂಸ್ಥಾಪಕ ತ್ರಿಪುರಾ ಕಶ್ಯಪ್ ಹೇಳುತ್ತಾರೆ.

ಮಾನಸಿಕ ರೋಗಕ್ಕೆ ಮೂವ್‌ಮೆಂಟ್‌ ಥೆರಪಿ ಹೇಗೆ ಸಹಕಾರಿ?
ಮೂವ್‌ಮೆಂಟ್‌ ಥೆರಪಿಸ್ಟ್‌ಗಳ ಪ್ರಕಾರ, ಚಲನಾ ಥೆರಪಿ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲಾರದು. ಆದರೆ ಅದು ಜನರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಬಲ್ಲದು. ಮಾನಸಿಕ ಚಿಕಿತ್ಸೆಗೆ ಔಷಧಿಗಳನ್ನು ಪಡೆಯುವವರು ಸಾಮಾನ್ಯವಾಗಿ ಆಲಸ್ಯ ಅಥವಾ ಜಡತ್ವದಿಂದ ಇರಬಹುದು. ಅಥವಾ ಪರಿಸ್ಥಿತಿಗಳಿಗೆ ಅವರು ಸ್ಪಂದಿಸುವ ರೀತಿ ಭಿನ್ನವಾಗಿರಬಹುದು. ಮೂವ್‌ಮೆಂಟ್‌ ಥೆರಪಿ ಇಂಥ ವೈದ್ಯಕೀಯ ಚಿಕಿತ್ಸೆಗೆ ಖಂಡಿತವಾಗಿಯೂ ಪೂರಕವಾಗಿ ಕೆಲಸ ಮಾಡಬಲ್ಲದು. ದೈಹಿಕ ಸಮಸ್ಯೆಗಳಿಗೆ ಪಿಜಿಯೊ ಥೆರಪಿ ಹೇಗೆ ಸಹಾಯಕವಾಗಬಲ್ಲದೋ ಹಾಗೆ ಮಾನಸಿಕ ಕಾಯಿಲೆಗಳಿಗೆ ಚಲನಾ ಚಿಕಿತ್ಸೆ ನೆರವಾಗುತ್ತದೆ. ಹೀಗೆ ಮತ್ತೊಂದು ಚಿಕಿತ್ಸೆಗೆ ಪೂರಕವಾಗಿ ಕೆಲಸ ಮಾಡುವ ಈ ವಿಧಾನದಲ್ಲಿ, ವ್ಯಕ್ತಿಗಳಿಗೆ ಅವರ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತೇಜಿಸಲಾಗುತ್ತದೆ. ಜತೆಗೆ ಅವರ ಸವಾಲುಗಳಿಗೆ ಉತ್ತರಿಸುವಂತೆ ಪ್ರೇರೇಪಿಸಲಾಗುತ್ತದೆ. ಅವರ ಜತೆಗೇ ಅವರು ಲವಲವಿಕೆಯಿಂದ ಇರುವಂತೆ ಮಾಡಲಾಗುತ್ತದೆ. ತಮ್ಮತನದ ಜತೆ ಸಂಪರ್ಕ ಸಾಧಿಸಲು ಹಾಗೂ ಅವರ ಅನಾರೋಗ್ಯದ ವಿರುದ್ಧ ಜಯ ಸಾಧಿಸಲು ಇದು ಸ್ಫೂರ್ತಿಯಾಗಬಹುದು.

ಅನಾರೋಗ್ಯದಿಂದ ಇರುವವರಿಗೆ ಮಾತ್ರ ಮೂವ್‌ಮೆಂಟ್‌ ಥೆರಪಿಯೇ?
ತಮ್ಮ ದೇಹದ ಜತೆಗೆ ಸಂಪರ್ಕ ಸಾಧಿಸುವ ಅಭಿಲಾಷೆ ಹೊಂದಿದ ಮತ್ತು ತಮ್ಮ ದೇಹವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಯಸುವ ಎಲ್ಲರೂ ಇದರ ಪ್ರಯೋಜನ ಪಡೆಯಬಹುದು. ಇಂದು ಈ ಚಿಕಿತ್ಸಾ ವಿಧಾನವನ್ನು ವಿಭಿನ್ನ ಜನರಿಗಾಗಿ ಬಳಸಲಾಗುತ್ತದೆ. ಜತೆಗೆ ಚಿಕಿತ್ಸಾ ವಿಧಾನವಾಗಿಯೂ ಬಳಕೆಯಲ್ಲಿದೆ. ಇಂಥ ಚಿಕಿತ್ಸೆ ಖಂಡಿತವಾಗಿಯೂ ಒಬ್ಬ ವ್ಯಕ್ತಿಯ ಅಲ್ಪ ಪ್ರಮಾಣದ ಅಥವಾ ದೊಡ್ಡ ಪ್ರಮಾಣದ ನಿಷ್ಕ್ರಿಯತೆಯನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಬಲ್ಲದು. ಇದರ ಜತೆಗೆ ಅವರ ಕಲ್ಯಾಣದ ಗ್ರಹಿಕೆಯನ್ನು ಹೆಚ್ಚಿಸಬಲ್ಲದು. ಕಕ್ಷಿದಾರ ತಮ್ಮ ಜೀವನವನ್ನು ಮರು ಸಂಘಟಿಸಿಕೊಳ್ಳುವ ಸಾಧನವಾಗಿಯೂ ಇದನ್ನು ಬಳಸಬಹುದು. ತಮ್ಮದೇ ಮಿತ ದೃಷ್ಟಿಕೋನ ಅಥವಾ ಗ್ರಹಿಕೆಯನ್ನು ವಿಸ್ತೃತಗೊಳಿಸಲು ಹಾಗೂ ತಾವು ಯಾರು, ತಮ್ಮ ಸಾಮರ್ಥ್ಯ ಏನು ಎಂಬ ಚಿಂತನೆಯನ್ನು ಬೆಳೆಸಲೂ ಸಹಕಾರ ನೀಡಬಲ್ಲದು.

ಒಬ್ಬ ತರಬೇತಿ ಪಡೆದ ಚಲನಾ ಚಿಕಿತ್ಸಕ ನಿರ್ದಿಷ್ಟ ವ್ಯಕ್ತಿ ಅಥವಾ ಗುಂಪಿನ ಅಗತ್ಯಕ್ಕೆ ನಿರ್ದಿಷ್ಟವಾದಂತೆ ಆ ಚಿಕಿತ್ಸಾ ಅವಧಿಯನ್ನು ಬಳಸಿಕೊಳ್ಳಬಲ್ಲ. ಇಲ್ಲಿ ಚಿಕಿತ್ಸಕ ಮೌಲ್ಯಮಾಪನಕ್ಕೆ ತೊಡಗುವುದಿಲ್ಲ. ಅಥವಾ ಅವರ ಸಮಸ್ಯೆಗಳನ್ನು ಗುರುತಿಸಲು, ಸವಾಲು ಅಥವಾ ಸಮಸ್ಯೆಗಳನ್ನು ಗುರುತಿಸಲು ಇಂಥ ಮೌಲ್ಯಮಾಪನ ಮಾಡುವುದಿಲ್ಲ. ಬದಲಾಗಿ ವ್ಯಕ್ತಿಗಳು ನಿರ್ದಿಷ್ಟ ಆಂಗಿಕ ಪರಿಭಾಷೆಯ ಮೂಲಕ ಇವುಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತಾರೆ. ಒಬ್ಬ ವ್ಯಕ್ತಿಗೆ ಮನಸ್ಸು ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ, ಚಿಕಿತ್ಸಕ ಇದನ್ನು ವಿಸ್ತೃತಗೊಳಿಸಲು ಅಗತ್ಯವಾದ ಕ್ರಮವನ್ನು ಅನುಸರಿಸುತ್ತಾರೆ. ಉದಾಹರಣೆಗೆ ಒಬ್ಬ ಸಾಮಾಜಿಕ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಬಯಸುವ ಒಬ್ಬ ಕಕ್ಷಿದಾರನ ಜತೆ ಕಾರ್ಯ ನಿರ್ವಹಿಸುವಾಗ, ಪರಸ್ಪರ ಸಂವಹನವನ್ನು ಒಳಗೊಂಡಿರುವ ವಿಧಾನ ಅನುಸರಿಸಬಹುದು. ಪಾಸಿಂಗ್ ದ ಬಾಲ್ ಆಟದ ಮೂಲಕ ಕಣ್ಣುಗಳು ಪರಸ್ಪರ ಬೆರೆಯುವಂತೆ ಮಾಡಬಹುದು. ಜತೆಗೆ ಒಬ್ಬರನ್ನೊಬ್ಬರು ಬಿಂಬಿಸುವಂತೆ, ನೆರಳುಗಳು ಹೀಗೆ ವಿಭಿನ್ನವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.

"ಯಾವುದೇ ಚಿಕಿತ್ಸೆಯೂ ಕೇವಲ ಸಮಸ್ಯೆ ಇರುವ ವ್ಯಕ್ತಿಗಳಿಗಾಗಿ ಮಾತ್ರ ಅಲ್ಲ. ಅದು ತಮ್ಮನ್ನು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುವವರಿಗಾಗಿ ಕೂಡಾ. ಏಕೆಂದರೆ ಈ ದೃಷ್ಟಿಯಿಂದ ನೋಡಿದರೆ ಯಾರೂ ಪರಿಪೂರ್ಣರಲ್ಲ. ನಾವೆಲ್ಲರೂ ಒಂದಲ್ಲ ಒಂದು ಬಗೆಯ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿ ಬಾರಿ ನಾನು ಪ್ರಯೋಗಾತ್ಮಕ ಕಾರ್ಯಾಗಾರಗಳನ್ನು ಕೈಗೊಂಡಾಗಲೆಲ್ಲ, ನಮ್ಮ ಎದುರು ವಿಭಿನ್ನ ಸಮಸ್ಯೆಗಳನ್ನು ಹೊತ್ತು ತರುವ ಜನರನ್ನು ಕಂಡು ಅಚ್ಚರಿಪಡುತ್ತೇನೆ. ಉದಾಹರಣೆಗೆ ಸಂಬಂಧದ ಸಮಸ್ಯೆಗಳು, ವಿಶ್ವಾಸದ ಸಮಸ್ಯೆ, ಕೆಲ ಭಾವನೆಗಳನ್ನು ಅನುಭವಿಸಲಾಗದ ಸಮಸ್ಯೆ, ಕೋಪ, ಭೀತಿ, ಕಳವಳ ಹೀಗೆ ಹಲವು ಸಮಸ್ಯೆಗಳು ಮಾನಸಿಕವಾಗಿ ಅಸ್ವಸ್ಥರ ಸಮಸ್ಯೆಗಳು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಕಲೆ ಆಧರಿತ ಚಿಕಿತ್ಸೆಯು ಅದರಲ್ಲೂ ಮುಖ್ಯವಾಗಿ ಚಲನಾ ಚಿಕಿತ್ಸೆ ಬಹುಶಃ ಎಲ್ಲರಿಗೂ ಅಗತ್ಯ" ಎಂದು ಕಶ್ಯಪ್ ಹೇಳುತ್ತಾರೆ.

ಮೂವ್‌ಮೆಂಟ್‌ ಥೆರಪಿ ಹೇಗೆ ಕೆಲಸ ಮಾಡುತ್ತದೆ?
ನಮ್ಮಲ್ಲಿ ಬಹುತೇಕ ಮಂದಿಗೆ ದೇಹದಲ್ಲಿ ಒಂದಲ್ಲ ಒಂದು ಬಗೆಯ ತೊಂದರೆಗಳಿರುತ್ತವೆ. ನಮ್ಮಲ್ಲಿ ಕೆಲವರಿಗೆ ಸಾರ್ವಜನಿಕವಾಗಿ ನೃತ್ಯ ಮಾಡಲು ಇಚ್ಛೆ ಇಲ್ಲದಿರಬಹುದು; ಏಕೆಂದರೆ ನಮಗೆ ಎರಡೂ ಎಡ ಪಾದಗಳು. ಆದರೆ ಮೂವ್‌ಮೆಂಟ್‌ ಥೆರಪಿ ವಿಧಾನವನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ ಎಂದರೆ, ಕಕ್ಷಿದಾರರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಮುಖ್ಯವಾಗಿ ಇದು ನಾಲ್ಕು ಪ್ರಮುಖ ಹಂತಗಳನ್ನು ಹೊಂದಿರುತ್ತದೆ.

  • ಸಜ್ಜುಗೊಳಿಸುವುದು: ಇದರಲ್ಲಿ ವಿವಿಧ ಆಟಗಳು ಹಾಗೂ ಚಟುವಟಿಕೆಗಳ ಮೂಲಕ ಚಲನೆಗಳನ್ನು ಚುರುಕುಗೊಳಿಸಲಾಗುತ್ತದೆ. ಇದು ಚಿಕಿತ್ಸಾ ಪದ್ಧತಿಯ ಜತೆ ಹೊಂದಿಕೊಳ್ಳಲು ಹಾಗೂ ಮುಕ್ತವಾಗಿ ಚಲನೆಗೆ ಅವರನ್ನು ಸಿದ್ಧಪಡಿಸುತ್ತದೆ. ಮುಂದಿನ ಚಿಕಿತ್ಸೆ ವೇಳೆ ಅವರು ತಮ್ಮ ಅಭಿವ್ಯಕ್ತಿಗಳನ್ನು ಮುಕ್ತವಾಗಿ ಪ್ರದರ್ಶಿಸಲು ಇದು ಅನುಕೂಲ ಮಾಡಿಕೊಡುತ್ತದೆ.
  • ಪರಿಕಲ್ಪನೆ ಅಭಿವೃದ್ಧಿಯಲ್ಲಿ ನಿಗದಿತ ಕಕ್ಷಿದಾರ ಅಥವಾ ಗುಂಪಿನ ನಿರ್ದಿಷ್ಟ ಅಗತ್ಯತೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಉದಾಹರಣೆಗೆ, ಅಂಗವೈಕಲ್ಯ ಹೊಂದಿದ ವ್ಯಕ್ತಿಗೆ, ಅಗತ್ಯವಾದ ಪರಿಕಲ್ಪನೆಯೆಂದರೆ, ದೇಹದಲ್ಲಿ ಸಮನ್ವಯತೆಯನ್ನು ಸಾಧಿಸುವುದು ಹಾಗೂ ಚಲನೆಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡುವುದು. ಬಳಿಕ ಚಿಕಿತ್ಸಕ ಅವರ ಚಲನೆ ಸಾಧ್ಯತೆಯನ್ನು ಹೆಚ್ಚಿಸಲು ಅಗತ್ಯವಾದ ಚಟುವಟಿಕೆಗಳನ್ನು ನಡೆಸುತ್ತಾರೆ.
  • ಇಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯ ಚಲನೆಯನ್ನು ಹಾಗೂ ಉಸಿರಿನ ವೇಗವನ್ನು ಕಡಿಮೆ ಮಾಡಲು ಅಗತ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
  • ಇಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ ತನ್ನ ಅನುಭವಗಳನ್ನು ಚಿಕಿತ್ಸಕನ ಬಳಿ ಹಂಚಿಕೊಳ್ಳಬೇಕಾಗುತ್ತದೆ. ಚಿಕಿತ್ಸಕ ಹಾಗೂ ಚಿಕಿತ್ಸೆ ಪಡೆದ ವ್ಯಕ್ತಿಗಳು ಇದನ್ನು ಸಮಗ್ರಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಾರೆ. ಕಾರ್ಯಾಗಾರದ ವೇಳೆ ಅನುಭವಿಸಿದ ಅಂಶಗಳನ್ನು ಹೇಗೆ ಪಡೆದುಕೊಳ್ಳಲು ಸಾಧ್ಯ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತದೆ.

ನನಗೆರಡೂ ಎಡಪಾದ; ನೃತ್ಯ ನನಗಲ್ಲ!
ಚಲನಾ ಚಿಕಿತ್ಸೆ ವಿಧಾನ ಕೇವಲ ನೃತ್ಯ ಮಾಡುವವರಿಗಷ್ಟೇ ಸೀಮಿತವಲ್ಲ. ನೃತ್ಯ ತರಗತಿ ಸಾಮಾನ್ಯವಾಗಿ ಶೈಲಿ, ವಿಧಾನ ಹಾಗೂ ತಂತ್ರಗಳ ಬಗ್ಗೆ ಗಮನ ಹರಿಸುತ್ತದೆ. ಇದಕ್ಕೆ ಬದಲಾಗಿ ಚಲನಾ ಚಿಕಿತ್ಸೆ, ಇಂಥ ಶೈಲಿ, ವಿಧಾನ, ತಂತ್ರಗಳ ಬಗ್ಗೆ ಗಮನ ಹರಿಸುವುದಿಲ್ಲ. ಅವರು ಹೇಗೆ ಹೆಜ್ಜೆ ಹಾಕುತ್ತಾರೆ ಎನ್ನುವುದನ್ನು ಮೌಲ್ಯಮಾಪನ ಮಾಡುವುದು ಇದರ ಉದ್ದೇಶವಲ್ಲ. ಅಥವಾ ಅವರು ನೃತ್ಯ ಮಾಡುವಾಗ ಹೇಗೆ ಕಾಣುತ್ತಾರೆ ಎನ್ನುವುದು ಇಲ್ಲ ಮುಖ್ಯವಲ್ಲ. ಪೂರ್ವ ನಿರ್ಧರಿತ ಫಲಿತಾಂಶವನ್ನು ಸಾಧಿಸುವ ಗುರಿ ಇಲ್ಲಿ ಇರುವುದಿಲ್ಲ. ಚಲನಾ ಚಿಕಿತ್ಸೆ ಅವಧಿಯಲ್ಲಿ, ತಮ್ಮೊಳಗೆ ಏನು ಆಗುತ್ತಿದೆ ಎನ್ನುವುದನ್ನು ಅಭಿವ್ಯಕ್ತಪಡಿಸಲು ಪ್ರೇರೇಪಿಸಲಾಗುತ್ತದೆ.

ನೃತ್ಯ ತರಗತಿಗಿಂತ ಭಿನ್ನವಾಗಿ, ಚಲನಾ ಚಿಕಿತ್ಸೆ ಸೆಷನ್‌ನಲ್ಲಿ ಪಾಲ್ಗೊಳ್ಳುವವರು ಸಂಗೀತ ಆರಂಭವಾದ ತಕ್ಷಣ ನೃತ್ಯವನ್ನೂ ಆರಂಭಿಸಬೇಕಾಗುತ್ತದೆ. ಇಲ್ಲಿ ಚಿಕಿತ್ಸಕ ಹಲವು ಬಗೆಯ ಚಲನಾ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಆ ವ್ಯಕ್ತಿ ತನ್ನ ನೈಜ ಅನುಭವಗಳನ್ನು ಅಭಿವ್ಯಕ್ತಪಡಿಸುವವರೆಗೂ ವಿಭಿನ್ನ ಬಗೆಯ ಚಲನಾ ಕೌಶಲಗಳನ್ನು ಹೇಳಿಕೊಡುತ್ತಾರೆ. ಮುಂದೆ ಚಿಕಿತ್ಸಕ ಕೇವಲ ಚಲನೆಯ ಕಲ್ಪನೆಗಳನ್ನು ಮಾತ್ರ ನೀಡುತ್ತಾರೆ. ಅದಕ್ಕೆ ಯಾವ ಬಗೆಯ ಚಲನೆ ಬೇಕು ಎನ್ನುವುದನ್ನು ಚಿಕಿತ್ಸೆ ಪಡೆಯುವ ವ್ಯಕ್ತಿಯೇ ನಿರ್ಧರಿಸುತ್ತಾರೆ. ಹಂತಹಂತವಾಗಿ ಇಲ್ಲಿ ಅಗತ್ಯ ವಾತಾವರಣ ನಿರ್ಮಾಣವಾಗುತ್ತದೆ. ಯಾವ ವೇಗದಲ್ಲಿ ಗಮಗೆ ಹೆಚ್ಚು ಆರಾಮದಾಯಕ ಎನಿಸುತ್ತದೆ ಎನ್ನುವುದನ್ನು ಪಾಲ್ಗೊಳ್ಳುವವರೇ ನಿರ್ಧರಿಸಿಕೊಳ್ಳಬೇಕಾಗುತ್ತದೆ. ತಮ್ಮನ್ನು ತಾವು ಎಷ್ಟರ ಮಟ್ಟಿಗೆ ಚಲನಶೀಲರನ್ನಾಗಿ ಮಾಡಿಕೊಳ್ಳಬಹುದು ಎನ್ನುವುದೂ ಅವರಿಗೇ ಬಿಟ್ಟದ್ದು. ಇಲ್ಲಿ ಚಿಕಿತ್ಸಕ ನಿಮ್ಮ ಪ್ರದರ್ಶನಕ್ಕೆ ಅಂಕವನ್ನೂ ನೀಡುವುದಿಲ್ಲ ಅಥವಾ ಮೌಲ್ಯ ಮಾಪನವನ್ನೂ ಮಾಡುವುದಿಲ್ಲ. ಅವರ ದೃಷ್ಟಿ ವಿಧಾನದ ಬಗೆಗೆಯೇ ವಿನಃ ಫಲಿತಾಂಶದ ಬಗೆಗೆ ಅಲ್ಲ ಎಂದು ಚಿಕಿತ್ಸಾ ತಜ್ಞೆ ಗೀತಾಂಜಲಿ ಸಾರಂಗನ್ ವಿವರಿಸುತ್ತಾರೆ.

ಒಂದು ಸೆಷನ್ನಲ್ಲೇ ನಾನು ಮೂವ್‌ಮೆಂಟ್‌ಗೆ ಪ್ರಯತ್ನಿಸಬಹುದೇ?
ಖಂಡಿತವಾಗಿಯೂ. ಏಕೈಕ ಸೆಷನ್‌ನಲ್ಲೇ ನಾನು ಚಲನಾ ಚಿಕಿತ್ಸೆ ಪ್ರಯತ್ನಿಸಬಹುದು. ಹಲವು ಮಂದಿ ನೃತ್ಯ ಚಿಕಿತ್ಸಕರು ಎರಡು ದಿನಗಳ ಅವಧಿಯ ಪ್ರಯೋಗಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ಅಂತೆಯೇ ಧೀರ್ಘಾವಧಿಯಲ್ಲಿ ನೀವು ಪರ್ಯಾಯವಾಗಿ, ಯಾವ ಚಿಕಿತ್ಸಕರ ಜತೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನು ನೀವೇ ನಿರ್ಧರಿಸಬಹುದು.

ಚಿಕಿತ್ಸಕರ ಆಯ್ಕೆ ಹೇಗೆ?
ನಿಮ್ಮ ಸಮಸ್ಯೆಗಳನ್ನು ಮೂವ್‌ಮೆಂಟ್‌ ಥೆರಪಿ ಮೂಲಕ ನೀವು ಪರಿಹರಿಸಿಕೊಳ್ಳಲು ಬಯಸಿದರೆ, ನಿಮ್ಮ ಚಿಕಿತ್ಸಕರನ್ನು ಆಯ್ಕೆ ಮಾಡುವ ಮುನ್ನ ಕೆಲ ಮೂಲಭೂತ ಕೆಲಸವನ್ನು ಮಾಡುವುದು ಸೂಕ್ತ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಎಲ್ಲ ತರಬೇತಿ ಪಡೆದ ನೃತ್ಯಗಾರರು ಅಥವಾ ವೃತ್ತಿಪರರು ನೃತ್ಯ ಚಿಕಿತ್ಸಕರಾಗಲಾರರು. ನೃತ್ಯ ಚಿಕಿತ್ಸಕರಿಗೆ ನೃತ್ಯ ಚಿಕಿತ್ಸೆಯಲ್ಲಿ ನಿರ್ದಿಷ್ಟ ತರಬೇತಿ ಇರುತ್ತದೆ. ಇವರು ಜನರ ಸಮಸ್ಯೆಗಳ ಜತೆ ಹೇಗೆ ಕಾರ್ಯನಿರ್ವಹಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇಂಥ ತರಬೇತಿ ಪಡೆದಿರುತ್ತಾರೆ.

ಇದರ ಜತೆ ನೀವು ಗಮನದಲ್ಲಿಡಬೇಕಾದ ಮತ್ತೆ ಕೆಲವು ಅಂಶಗಳು ಇವು:

  • ಅವರ ಅರ್ಹತೆಗಳೇನು? ಅವರು ನೃತ್ಯ ಚಿಕಿತ್ಸೆಯಲ್ಲಿ ತರಬೇತಿ ಪಡೆದಿದ್ದಾರೆಯೇ?
  • ಅವರಿಗೆ ಮನಃಶಾಸ್ತ್ರದ ಹಿನ್ನೆಲೆ ಇದೆಯೇ?
  • ಇಂಥ ಚಿಕಿತ್ಸಕರಾಗಿ ಎಷ್ಟು ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ?
  • ಎಷ್ಟು ಮಂದಿಯ ಜತೆ ಅವರು ಕೆಲಸ ಮಾಡಿದ್ದಾರೆ? ಅವರ ಅನುಭವ ನಿಮ್ಮ ಪ್ರಯೋಜನಕ್ಕೆ ಬರುತ್ತದೆಯೇ?
  • ಧೀರ್ಘಾವಧಿಯಲ್ಲಿ ಕಕ್ಷಿದಾರರ ಜತೆ ಅವರು ಕಾರ್ಯ ನಿರ್ವಹಿಸಿದ್ದಾರೆಯೇ? ಧೀರ್ಘಾವಧಿಯಲ್ಲಿ ಕಕ್ಷಿದಾರರ ಜತೆ ಅಥವಾ ಗುಂಪುಗಳ ಜತೆ ಅವರು ಕಾರ್ಯ ನಿರ್ವಹಿಸಿದ್ದಲ್ಲಿ, ಅವರು ಚಿಕಿತ್ಸೆ ಪರಿಣಾಮದ ಬಗ್ಗೆ ಹೆಚ್ಚಿನ ಅನುಭವ ಹೊಂದಿರುತ್ತದೆ.
  • ಅವರ ಬಳಿ ಚಿಕಿತ್ಸೆ ನಡೆಯುವುದು ಸರಾಗ ಎಂದು ನಿಮಗೆ ಅನಿಸುತ್ತದೆಯೇ?
  • ಪ್ರಯೋಗಾತ್ಮಕ ಸೆಷನ್‌ಗೆ ಮನವಿ ಮಾಡಿ. ಅವರ ಶೈಲಿ ನಿಮಗೆ ಸಮಂಜಸ ಎನಿಸುತ್ತದೆಯೇ?

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org