ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಆರೋಗ್ಯವಾಗಿರಲು 10 ಸಲಹೆಗಳು

 • ನಿಮ್ಮ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಕ್ರೀಯವಾಗಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಪೋಷಕಾಂಶ ಭರಿತ ತಾಜಾ ಆಹಾರ ಹಾಗೂ ಸಾಕಷ್ಟು ನಿದ್ದೆ ನಿಮ್ಮನ್ನು ದೈನಂದಿನ ಒತ್ತಡದಿಂದ ದೂರವಿರಿಸುತ್ತದೆ.

  ನಿಮ್ಮ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಕ್ರೀಯವಾಗಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಪೋಷಕಾಂಶ ಭರಿತ ತಾಜಾ ಆಹಾರ ಹಾಗೂ ಸಾಕಷ್ಟು ನಿದ್ದೆ ನಿಮ್ಮನ್ನು ದೈನಂದಿನ ಒತ್ತಡದಿಂದ ದೂರವಿರಿಸುತ್ತದೆ.

 • ವ್ಯಾಯಾಮವನ್ನು ಮಾಡಿ ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ, ಖಿನ್ನತೆಯಿಂದ ದೂರವಿರಬಹುದು. ದೈಹಿಕ ಚಟುವಟಿಕೆ ನಿಮ್ಮ ಒತ್ತಡ ಹಾಗೂ ಮಾನಸಿಕ ಆಯಾಸವನ್ನು ಕಡಿಮೆ ಮಾಡಿ, ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

  ವ್ಯಾಯಾಮವನ್ನು ಮಾಡಿ ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ, ಖಿನ್ನತೆಯಿಂದ ದೂರವಿರಬಹುದು. ದೈಹಿಕ ಚಟುವಟಿಕೆ ನಿಮ್ಮ ಒತ್ತಡ ಹಾಗೂ ಮಾನಸಿಕ ಆಯಾಸವನ್ನು ಕಡಿಮೆ ಮಾಡಿ, ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

 • ಸ್ವ ಆರೈಕೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ವರಕ್ಷಣೆಗೆ ಆದ್ಯತೆ ನೀಡಿ, ನಿಮ್ಮ ವಿಶ್ರಾಂತಿಗಾಗಿ ಸಮಯವನ್ನು ಮೀಸಲಿಡಿ. ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಾದ, ಪುಸ್ತಕ ಓದುವುದು, ಸಂಗೀತವನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

  ಸ್ವ ಆರೈಕೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ವರಕ್ಷಣೆಗೆ ಆದ್ಯತೆ ನೀಡಿ, ನಿಮ್ಮ ವಿಶ್ರಾಂತಿಗಾಗಿ ಸಮಯವನ್ನು ಮೀಸಲಿಡಿ. ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಾದ, ಪುಸ್ತಕ ಓದುವುದು, ಸಂಗೀತವನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

 • ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ ಇತರರೊಂದಿಗಿನ ಉತ್ತಮ ಸಂಬಂಧವು ನಿಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಸಹೋದ್ಯೋಗಿಗಳೊಂದಿಗೆ ಊಟವನ್ನು ಮಾಡಿ ಅಥವಾ ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಕಾಫಿಯನ್ನು ಸವಿಯಿರಿ. ನಿಮ್ಮ ಸಮಯವನ್ನು ಮನೆಯ ಸದಸ್ಯರೊಂದಿಗೆ ಕಳೆಯಿರಿ.

  ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ ಇತರರೊಂದಿಗಿನ ಉತ್ತಮ ಸಂಬಂಧವು ನಿಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಸಹೋದ್ಯೋಗಿಗಳೊಂದಿಗೆ ಊಟವನ್ನು ಮಾಡಿ ಅಥವಾ ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಕಾಫಿಯನ್ನು ಸವಿಯಿರಿ. ನಿಮ್ಮ ಸಮಯವನ್ನು ಮನೆಯ ಸದಸ್ಯರೊಂದಿಗೆ ಕಳೆಯಿರಿ.

 • ಹೊಸ ಕೌಶಲ್ಯಗಳನ್ನು ಕಲಿಯಿರಿ ಉತ್ತಮ ಹವ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳನ್ನು ಕಲಿಯುವುದು ಹೊಸ ಆಲೋಚನೆಗೆ ಎಡೆ ಮಾಡಿಕೊಡುತ್ತದೆ, ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲು ಸಹಾಯ ಮಾಡುತ್ತದೆ

  ಹೊಸ ಕೌಶಲ್ಯಗಳನ್ನು ಕಲಿಯಿರಿ ಉತ್ತಮ ಹವ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳನ್ನು ಕಲಿಯುವುದು ಹೊಸ ಆಲೋಚನೆಗೆ ಎಡೆ ಮಾಡಿಕೊಡುತ್ತದೆ, ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲು ಸಹಾಯ ಮಾಡುತ್ತದೆ

 • ಒತ್ತಡವನ್ನು ನಿಭಾಯಿಸಿ ಯಾವಾಗಲೂ ಒತ್ತಡದಿಂದ ದೂರ ಉಳಿಯಲು ಸಾಧ್ಯವಿಲ್ಲ. ಯಾವ ಒತ್ತಡವನ್ನು ನಾವು ಸಹಿಸಬಹುದು ಹಾಗಯೇ ಯಾವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ನಮಗೆ ಉಂಟಾಗುವ ಒತ್ತಡವನ್ನು ತಡೆಯಬಹುದು. ಧ್ಯಾನ ಮಾಡುವುದು, ಗೆಳೆಯರೊಂದಿಗಿನ ಮಾತುಕತೆ, ಸಂಗೀತವನ್ನು ಕೇಳುವುದು ಕೂಡ ನಮ್ಮ ೊತ್ತಡವನ್ನು ದೂರವಿಡುತ್ತದೆ

  ಒತ್ತಡವನ್ನು ನಿಭಾಯಿಸಿ ಯಾವಾಗಲೂ ಒತ್ತಡದಿಂದ ದೂರ ಉಳಿಯಲು ಸಾಧ್ಯವಿಲ್ಲ. ಯಾವ ಒತ್ತಡವನ್ನು ನಾವು ಸಹಿಸಬಹುದು ಹಾಗಯೇ ಯಾವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ನಮಗೆ ಉಂಟಾಗುವ ಒತ್ತಡವನ್ನು ತಡೆಯಬಹುದು. ಧ್ಯಾನ ಮಾಡುವುದು, ಗೆಳೆಯರೊಂದಿಗಿನ ಮಾತುಕತೆ, ಸಂಗೀತವನ್ನು ಕೇಳುವುದು ಕೂಡ ನಮ್ಮ ೊತ್ತಡವನ್ನು ದೂರವಿಡುತ್ತದೆ

 • ಭಾವನಾತ್ಮಕವಾಗಿ ಆರೋಗ್ಯದಿಂದಿರಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ವ್ಯಾಯಾಮ, ಆಹಾರ ಪಥ್ಯ, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಹಾಗೂ ಇತರ ಬೇರೆ ಬೇರೆ ಕ್ರಮವನ್ನು ಕೈಗೊಳ್ಳುತ್ತೇವೆ. ಹಾಗೆಯೇ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ನೀವು ಹೇಗೆ ಆರೋಗ್ಯವಾಗಿರಬಹುದು ಎನ್ನುವುದನ್ನು ಮುಂದೆ ಓದಿ.

  ಭಾವನಾತ್ಮಕವಾಗಿ ಆರೋಗ್ಯದಿಂದಿರಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ವ್ಯಾಯಾಮ, ಆಹಾರ ಪಥ್ಯ, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಹಾಗೂ ಇತರ ಬೇರೆ ಬೇರೆ ಕ್ರಮವನ್ನು ಕೈಗೊಳ್ಳುತ್ತೇವೆ. ಹಾಗೆಯೇ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ನೀವು ಹೇಗೆ ಆರೋಗ್ಯವಾಗಿರಬಹುದು ಎನ್ನುವುದನ್ನು ಮುಂದೆ ಓದಿ.

 • ನಿಮ್ಮ ಮಿತಿಯನ್ನು ತಿಳಿಯಿರಿ ನೈಜ ಗುರಿಯನ್ನು ಹೊಂದಿ ನಿಮ್ಮ ಮಿತಿಯನ್ನು ಅರಿಯಿರಿ. ನಿಮಗೆ ಸಾಧ್ಯವಾಗದ ಕೆಲಸವನ್ನು “ ಇಲ್ಲ “ ಅಥವಾ “ಆಗುವುದಿಲ್ಲ” ಎನ್ನುವುದನ್ನು ರೂಢಿ ಮಾಡಿಕೊಳ್ಳಿ.

  ನಿಮ್ಮ ಮಿತಿಯನ್ನು ತಿಳಿಯಿರಿ ನೈಜ ಗುರಿಯನ್ನು ಹೊಂದಿ ನಿಮ್ಮ ಮಿತಿಯನ್ನು ಅರಿಯಿರಿ. ನಿಮಗೆ ಸಾಧ್ಯವಾಗದ ಕೆಲಸವನ್ನು “ ಇಲ್ಲ “ ಅಥವಾ “ಆಗುವುದಿಲ್ಲ” ಎನ್ನುವುದನ್ನು ರೂಢಿ ಮಾಡಿಕೊಳ್ಳಿ.

 • ಹೊಸ ಕೌಶಲ್ಯಗಳನ್ನು ಕಲಿಯಿರಿ ಉತ್ತಮ ಹವ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳನ್ನು ಕಲಿಯುವುದು ಹೊಸ ಆಲೋಚನೆಗೆ ಎಡೆ ಮಾಡಿಕೊಡುತ್ತದೆ, ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಹೊಸ ಸವಾಲನ್ನು ಎದುರಿಸಲು ನಿಮ್ಮನ್ನು ತಯಾರಿ ಮಾಡಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲು ಸಹಾಯ ಮಾಡುತ್ತದೆ.

  ಹೊಸ ಕೌಶಲ್ಯಗಳನ್ನು ಕಲಿಯಿರಿ ಉತ್ತಮ ಹವ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಹೊಸ ವಿಷಯಗಳನ್ನು ಕಲಿಯುವುದು ಹೊಸ ಆಲೋಚನೆಗೆ ಎಡೆ ಮಾಡಿಕೊಡುತ್ತದೆ, ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಹೊಸ ಸವಾಲನ್ನು ಎದುರಿಸಲು ನಿಮ್ಮನ್ನು ತಯಾರಿ ಮಾಡಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲು ಸಹಾಯ ಮಾಡುತ್ತದೆ.

 • ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ನಮ್ಮ ಎಲ್ಲಾ ಭಾವನೆಗಳು ಯೋಗ್ಯ ಮತ್ತು ಅಗತ್ಯವಾಗಿದೆ. ಕೆಲವು ಭಾವನೆಗಳನ್ನು (ನಕರಾತ್ಮಕ ಯೋಚನೆ ) ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ಹಾನಿಯನ್ನುಂಟು ಮಾಡಬಹುದು. ಅದನ್ನು ವ್ಯಕ್ತಪಡಿಸುವುದರಿಂದ ಒತ್ತಡದಿಂದ ನಿವಾರಣೆ ಹೊಂದಬಹುದು. ಸಾಧ್ಯವಾದಷ್ಟು ಅದನ್ನು ಹೊರಹಾಕಲು ಪ್ರಯತ್ನಿಸಿ.

  ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ನಮ್ಮ ಎಲ್ಲಾ ಭಾವನೆಗಳು ಯೋಗ್ಯ ಮತ್ತು ಅಗತ್ಯವಾಗಿದೆ. ಕೆಲವು ಭಾವನೆಗಳನ್ನು (ನಕರಾತ್ಮಕ ಯೋಚನೆ ) ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ಹಾನಿಯನ್ನುಂಟು ಮಾಡಬಹುದು. ಅದನ್ನು ವ್ಯಕ್ತಪಡಿಸುವುದರಿಂದ ಒತ್ತಡದಿಂದ ನಿವಾರಣೆ ಹೊಂದಬಹುದು. ಸಾಧ್ಯವಾದಷ್ಟು ಅದನ್ನು ಹೊರಹಾಕಲು ಪ್ರಯತ್ನಿಸಿ.

 • ಸಹಾಯ ಕೇಳಿ ಅತಿಯಾದ ನೋವು ಉಂಟಾದಾಗ, ಭಾವನೆಗಳ ಮೇಲೆ ಒತ್ತಡ ಬಿದ್ದಾಗ ನಿಮ್ಮ ನಂಬಿಕಸ್ಥರ ಜೊತೆ ಮಾತನಾಡಿ. ಒಂದು ವೇಳೆ ನಿಮಗೆ ಇನ್ನಿತರ ಬೆಂಬಲ ಬೇಕಾದಲ್ಲಿ ಕೌನ್ಸಿಲರ್ ಅಥವಾ ವೈದ್ಯರನ್ನುಸಂಪರ್ಕಿಸಿ. ಸಹಾಯವನ್ನು ಕೇಳುವುದರಿಂದಾಗಲಿ ಅಥವಾ ನಮ್ಮ ಮಿತಿಯನ್ನು ತಿಳಿಯುವುದರಿಂದಾಗಲಿ ಯಾವುದೇ ಅವಮಾನ ಉಂಟಾಗುವುದಿಲ್ಲ.

  ಸಹಾಯ ಕೇಳಿ ಅತಿಯಾದ ನೋವು ಉಂಟಾದಾಗ, ಭಾವನೆಗಳ ಮೇಲೆ ಒತ್ತಡ ಬಿದ್ದಾಗ ನಿಮ್ಮ ನಂಬಿಕಸ್ಥರ ಜೊತೆ ಮಾತನಾಡಿ. ಒಂದು ವೇಳೆ ನಿಮಗೆ ಇನ್ನಿತರ ಬೆಂಬಲ ಬೇಕಾದಲ್ಲಿ ಕೌನ್ಸಿಲರ್ ಅಥವಾ ವೈದ್ಯರನ್ನುಸಂಪರ್ಕಿಸಿ. ಸಹಾಯವನ್ನು ಕೇಳುವುದರಿಂದಾಗಲಿ ಅಥವಾ ನಮ್ಮ ಮಿತಿಯನ್ನು ತಿಳಿಯುವುದರಿಂದಾಗಲಿ ಯಾವುದೇ ಅವಮಾನ ಉಂಟಾಗುವುದಿಲ್ಲ.

 • ದಿನಚರಿಯನ್ನು ಬರೆಯಿರಿ ಕೃತಜ್ಞತಾ ಮನೋಭಾವವು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ದಿನವೂ ಮಲಗುವ ಮುನ್ನ ನೀವು ಯಾವುದಕ್ಕೆ ಧನ್ಯವಾದ ಹೇಳಲು ಬಯಸುವಿರಿ ಎನ್ನುವುದನ್ನು ಬರೆದಿಟ್ಟುಕೊಳ್ಳಿ. ದಿನದಲ್ಲಿ ನಾವು ಯಾವುದರ ಮೇಲೆ ಗಮನಹರಿಸಿದ್ದೇವೆ ಅಥವಾ ಯಾವ ಕೆಲಸವನ್ನು ಮಾಡುವುದರಲ್ಲಿ ವಿಫಲರಾಗಿದ್ದೇವೆ ಎನ್ನುವುದರತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.

  ದಿನಚರಿಯನ್ನು ಬರೆಯಿರಿ ಕೃತಜ್ಞತಾ ಮನೋಭಾವವು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ದಿನವೂ ಮಲಗುವ ಮುನ್ನ ನೀವು ಯಾವುದಕ್ಕೆ ಧನ್ಯವಾದ ಹೇಳಲು ಬಯಸುವಿರಿ ಎನ್ನುವುದನ್ನು ಬರೆದಿಟ್ಟುಕೊಳ್ಳಿ. ದಿನದಲ್ಲಿ ನಾವು ಯಾವುದರ ಮೇಲೆ ಗಮನಹರಿಸಿದ್ದೇವೆ ಅಥವಾ ಯಾವ ಕೆಲಸವನ್ನು ಮಾಡುವುದರಲ್ಲಿ ವಿಫಲರಾಗಿದ್ದೇವೆ ಎನ್ನುವುದರತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org