ಸಂದರ್ಶನ: ಯೋಗ ಮತ್ತು ಮಾನಸಿಕ ಆರೋಗ್ಯ

ನಾನಾ ಮಾನಸಿಕ ರೋಗಗಳಿಗೆ ಔಷಧ ಮತ್ತು ಮನಃಶಾಸ್ತ್ರ ಚಿಕಿತ್ಸೆಯೊಂದಿಗೆ ಯೋಗವನ್ನು ಚಿಕಿತ್ಸೆಯಾಗಿಯೂ ಸೂಚಿಸಬಹುದು

ಹಿಂದಿನ ದಶಕಗಳ ಹಲವಾರು ಸಂಶೋಧನೆಗಳಿಂದ ಸಾಕಷ್ಟು ಬಗೆಯ ಮಾನಸಿಕ ಖಾಯಿಲೆಗಳಿಗೆ ಯೋಗ ಲಾಭದಾಯಕ, ಇದೊಂದು ಬಗೆಯ ಚಿಕಿತ್ಸೆ ಇದ್ದಂತೆ ಎಂಬುದು ಸಾಬೀತಾಗಿದೆ. ಈ ಕುರಿತು ವೈಟ್‌ಸ್ವ್ಯಾನ್‌ ಫೌಂಡೇಷನ್‌ನ ಪೆಟ್ರಿಷಿಯ ಪ್ರೀತಂ, ನಿಮ್ಹಾನ್ಸ್‌ನ ಸೈಕ್ಯಾಟ್ರಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಶಿವರಾಂ ವರಂಬಳ್ಳಿ ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ…

ಮಾನಸಿಕ ಖಾಯಿಲೆ ಚಿಕಿತ್ಸೆಯಲ್ಲಿ ಯೋಗ ಹೇಗೆ ಲಾಭದಾಯಕ?

ಕಳೆದ ಕೆಲ ವರ್ಷಗಳಿಂದ ನಾವು ಈ ಕ್ಷೇತ್ರದಲ್ಲಿ ತುಸು ಕೆಲಸ ಮಾಡುತ್ತಿದ್ದೇವೆ. ಗಂಭೀರವಾದ ಮಾನಸಿಕ ಖಾಯಿಲೆ ಹೊಂದಿರುವ ವ್ಯಕ್ತಿಗಳಿಗೆ ಯೋಗ ಲಾಭದಾಯಕವಾಗಿದ್ದು, ಅವರು ಈಗಾಗಲೇ ಸೇವಿಸುತ್ತಿರುವ ಔಷಧ ಜೊತೆಗೆ ಯೋಗ ಸಹಾಯಕಾರಿಯಾಗಿರುತ್ತದೆ. ಆದರೆ ಕೆಲವು ರೋಗ ಲಕ್ಷಣಗಳಿಗೆ ಯೋಗವೇ ಔಷಧವಾಗಿರುತ್ತದೆ. ನಾವು ಔಷಧ ತೆಗೆದುಕೊಳ್ಳಲು ನಿರಾಕರಿಸಿ ಪರ್ಯಾಯ ಚಿಕಿತ್ಸೆ ವಿಧಾನಕ್ಕೆ ಎದುರು ನೋಡುವ ವ್ಯಕ್ತಿಗಳನ್ನು ನೋಡಿದ್ದೇವೆ. ಅಂಥ ವ್ಯಕ್ತಿಗಳಲ್ಲಿ ಯೋಗವನ್ನು ಚಿಕಿತ್ಸೆ ವಿಧಾನವಾಗಿ ಬಳಸಿ ಯಶಸ್ವಿಯಾಗಿರುವ ಪ್ರಮಾಣ ಅಧಿಕ. ಆದಾಗ್ಯೂ ಹೀಗೆ ಚಿಕಿತ್ಸೆ ನಿರಾಕರಿಸುವ ವ್ಯಕ್ತಿಗಳ ಪ್ರಮಾಣ ಕಡಿಮೆ. ಹೆಚ್ಚಿನವರು ತಮ್ಮ ಔಷಧ, ಚಿಕಿತ್ಸೆಯೊಂದಿಗೆ ಹೆಚ್ಚುವರಿಯಾಗಿ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಖಿನ್ನತೆ, ಮನೋವ್ಯಾಧಿ, ಆತಂಕ, ಎಡಿಎಚ್‌ಡಿ ಮೊದಲಾದ ಖಾಯಿಲೆಗಳಿಗೆ ಯೋಗ ಅತ್ಯಂತ ಲಾಭದಾಯಕ.

ಮಾನಸಿಕ ಅನಾರೋಗ್ಯ ನಿವಾರಣೆಗೆ ಯೋಗ ಒಂದು ಪರ್ಯಾಯ ಚಿಕಿತ್ಸೆ ಎಂಬುದಕ್ಕೆ ಯಾವುದಾದರು ವೈಜ್ಞಾನಿಕ ವರದಿ ಅಥವಾ ದಾಖಲೆಗಳು ಸಿಗುತ್ತವೆಯಾ?

ಕೆಲವು ಪ್ರಕಟಿತ ದಾಖಲೆಗಳು ಮತ್ತು ವಿಶ್ಲೇಷಣೆಗಳಲ್ಲಿ ಕೆಲ ಸಾಕ್ಷಿಗಳು ಸಿಗುತ್ತವೆ. ಇದು ಒಂದು ಉತ್ತಮ ಉಪಾಯ ನಿದರ್ಶನ ಏಕೆಂದರೆ ಅವರು ಸಾಕಷ್ಟು ದಾಖಲೆಗಳನ್ನು ತೆಗೆದುಕೊಂಡಿದ್ದು ಅದನ್ನು ಒಂದು ಅರ್ಥಪೂರ್ಣ ಮಾದರಿಯಲ್ಲಿ ವಿವರಿಸಿದ್ದಾರೆ. ಪ್ರತ್ಯೇಕವಾದ ಅಧ್ಯಯನ ಕ್ಲಿಷ್ಟಕರ ಏಕೆಂದರೆ  ಇದು  ಸೂಕ್ತವಾದ ಸಾಕ್ಷ್ಯ ನೀಡುವುದಿಲ್ಲ, ಚಿಕಿತ್ಸೆ ಚೆನ್ನಾಗಿ ಕೆಲಸ ಮಾಡುತ್ತದೆಯಾ? ಹೇಗೆ ಕೆಲಸ ಮಾಡುತ್ತದೆ? ಎಂಬ ಪ್ರಶ್ನೆಗಳಿಗೆ ಅರ್ಥಪೂರ್ಣವಾದ ಉತ್ತರ ಸಿಗುವುದಿಲ್ಲ.

ಹೀಗಾಗಿ ಕಳೆದ ೧೦ ವರ್ಷಗಳಲ್ಲಿ ಭಾರತ ಹಾಗೂ ಇತರ ದೇಶಗಳಲ್ಲಿ ಕೆಲವಷ್ಟು ಸಾಕ್ಷ್ಯಗಳು ಯೋಗವನ್ನು ಚಿಕಿತ್ಸೆಯೊಂದಿಗೆ ಹೆಚ್ಚುವರಿ ಮನೋವ್ಯಾಧಿ ಮತ್ತು ಖಿನ್ನತೆಯ  ಚಿಕಿತ್ಸೆಯಲ್ಲಿ ಬಳಸಿರುವುದಕ್ಕೆ ಸಿಗುತ್ತದೆ. ಹೆಚ್ಚಿನ ಸಂಶೋಧನೆಗಳು ನಮ್ಮ ಸಂಸ್ಥೆ ನಿಮ್ಹಾನ್ಸ್‌ನಿಂದ ಸಂಯೋಜಿತಗೊಂಡಿದ್ದು ನಾವು ಯೋಗವನ್ನು ಮಾನಸಿಕ ಖಾಯಿಲೆ ಚಿಕಿತ್ಸೆಯಲ್ಲಿ ಹೆಚ್ಚುವರಿಯಾಗಿ ಬಳಸಿ ಲಾಭ ಪಡೆಯುವುದನ್ನು ಸಾಬೀತುಗೊಳಿಸಲು ೨೫ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದೇವೆ. ಹೆಚ್ಚಿನವು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಇತ್ತೀಚಿನ Indian Journal of Psychiatry: July-September 2013 edition ನಲ್ಲಿ ಪ್ರಕಟಿತ ಲೇಖನದಲ್ಲಿ ಬಹು ಮಾನಸಿಕ ಖಾಯಿಲೆಗಳ ಚಿಕಿತ್ಸೆಯಲ್ಲಿ ಯೋಗ ಹೇಗೆ ಹೆಚ್ಚುವರಿ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಲಾಗಿದೆ.

ಯೋಗ ಭಾರತೀಯ ಮೂಲದ ಪದ್ಧತಿಯಾಗಿದ್ದರೂ, ದೀರ್ಘ ಕಾಲದಿಂದ ಅದನ್ನೇಕೆ ಒಂದು ಚಿಕಿತ್ಸೆಯಾಗಿ ಅಭಿವೃದ್ಧಿಗೊಳಿಸಿಲ್ಲ?

ಇದೊಂದು ಅತ್ಯಂತ ಆಸಕ್ತಿದಾಯಕ ಪ್ರಶ್ನೆ. ಈ ಪ್ರಶ್ನೆಯನ್ನು ಹಲವು ವೇದಿಕೆಗಳಲ್ಲಿ ಕೇಳಿದ್ದಾರೆ. ಇಲ್ಲಿ ಎರಡು ವಿಷಯಗಳನ್ನು ಗಮನಿಸಬೇಕು.

ಮೊದಲನೆಯದು: ಯೋಗ ‍ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಹೆಚ್ಚಿನ ಯೋಗ ಗುರುಗಳು ಅಥವಾ ಕಲಿಕಾರ್ಥಿಗಳನ್ನು ಕೇಳಿದರೆ, ಅವರು ಯೋಗವನ್ನು ಚಿಕಿತ್ಸೆ ಎಂಬರ್ಥದಲ್ಲಿ ಪರಿಗಣಿಸುವುದಿಲ್ಲ ಬದಲಾಗಿ ಅವರು ಯೋಗವನ್ನು ಜೀವನಶೈಲಿ ಎಂಬಂತೆ ಪರಿಗಣಿಸುತ್ತಾರೆ. ಅದು ಬದುಕಲು ಹೊರತು ಯಾವುದೇ ನಿರ್ದಿಷ್ಟ ಲಾಭಕ್ಕಾಗಿ ಅಥವಾ ಖಾಯಿಲೆಗಾಗಿ ಅಲ್ಲ ಎಂಬುದು ಅವರ ಪರಿಕಲ್ಪನೆ. ಇದಕ್ಕಿಂತ ಮಿಗಿಲಾಗಿ ಅವರು ಯೋಗ ತಮ್ಮ ಗುರಿಯನ್ನು ತಲುಪಲು ವ್ಯಕ್ತಿಗಳಿಗೆ ಎಲ್ಲ ಬಗೆಯಲ್ಲಿ ಸಹಾಯ ಮಾಡುತ್ತದೆ ಎಂದುಕೊಂಡಿದ್ದಾರೆ. ಇತ್ತೀಚಿನ ಪರಿಕಲ್ಪನೆಯಲ್ಲಿ ಯೋಗ ಒಂದು ಚಿಕಿತ್ಸೆಯಾಗಿ ಬೆಳೆದಿದೆ. ಅದು ಕಳೆದ ೨ ಅಥವಾ ೩ ದಶಕಗಳಿಂದ ಇರಬಹುದು. ಅದಕ್ಕಿಂತ ಮೊದಲು ಯೋಗವನ್ನು ಜೀವನದ ಚಟುವಟಿಕೆಯಾಗಿ ನೋಡಲಾಗುತ್ತಿತ್ತು. 

ಎರಡನೆಯದಾಗಿ ಯೋಗವನ್ನು ಚಿಕಿತ್ಸೆಯಾಗಿ ನೋಡುವಾಗ ಒಂದಷ್ಟು ಸಂಕೀರ್ಣತೆಗಳಿವೆ. ಔಷಧವನ್ನು ಸಾರ್ವಜನಿಕ ಬಳಕೆಗೆ ಮೊದಲು ಒಳಪಡಿಸುವ ಪರೀಕ್ಷೆಯಂತೆ ಯೋಗವನ್ನು ಪರಿಶೀಲಿಸಿ ನಂತರ ಚಿಕಿತ್ಸೆಯಾಗಿ ಅಳವಡಿಸುತ್ತಾರೆ ಎಂದು ಭಾವಿಸುತ್ತಾರೆ. ಈ ಪರೀಕ್ಷೆಯಲ್ಲಿ ಓರ್ವ ವ್ಯಕ್ತಿಗೆ ನಿರ್ದಿಷ್ಟ ಔಷಧ ನೀಡಲಾಗುತ್ತದೆ, ಮತ್ತು ಇನ್ನೊಂದು ವ್ಯಕ್ತಿಗೆ ಸಕ್ರಿಯವಾದ ಅಂಶಗಳನ್ನು ಹೊಂದಿರದ ಅದೇ ರೀತಿಯಾದ ಮಾತ್ರೆಗಳನ್ನು ನೀಡಲಾಗುತ್ತದೆ.

ಈಗ ಯೋಗವನ್ನು ಹಾಗೆ ಪರೀಕ್ಷೆ ಮಾಡಲಿಕ್ಕಾಗುವುದಿಲ್ಲ. ಯೋಗ ಮಾಡುತ್ತಿರುವ ವ್ಯಕ್ತಿಯಲ್ಲಿ ಸಕ್ರಿಯ ಅಂಶ ಹೊಂದಿರದ ಮಾತ್ರೆಯಂತೆ ತಿಳಿಯದೆ ಯೋಗ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಆತ ಯೋಗವನ್ನು ಔಷಧವಾಗಿ ಬಳಸುತ್ತಿದ್ದಾನೆ ಎನ್ನಲು ಸಾಧ್ಯವಿಲ್ಲ. ಇದು ವೈಜ್ಞಾನಿಕ ವಲಯದಲ್ಲಿ ಯೋಗವನ್ನು ಒಂದು ಪರಿಣಾಮಕಾರಿ ಚಿಕಿತ್ಸೆ ಎಂದು ಮನವರಿಕೆ ಮಾಡುವಲ್ಲಿ ಇರುವ ದೊಡ್ಡ ಸಮಸ್ಯೆ. ಈ ಕಾರಣದಿಂದಾಗಿ ಯೋಗವನ್ನು ಒಂದು ಚಿಕಿತ್ಸೆಯಾಗಿ ನೋಡದೆ ಒಂದು ಮಾರ್ಗವನ್ನಾಗಿ ಆಯ್ದುಕೊಂಡಿರಬಹುದು.

 ಮಾನಸಿಕ ಖಾಯಿಲೆಯ ಆರಂಭಿಕ ಹಂತದಲ್ಲಿ ಯೋಗಭ್ಯಾಸವನ್ನು ಮಾಡಿದರೆ ರೋಗ ಲಕ್ಷಣಗಳನ್ನು ತಡೆಗಟ್ಟಬಹುದಾ? (ಉದಾಹರಣೆಗೆ ಖಿನ್ನತೆಯ ಆರಂಭಿಕ ಹಂತ, ಆತಂಕದ ಖಾಯಿಲೆ, ಒಸಿಡಿ, ಇತ್ಯಾದಿ)

ನಾನು ಮೊದಲೆ ತಿಳಿಸಿದಂತೆ ಯೋಗ ಒಂದು ಚಿಕಿತ್ಸೆ. ಆದಾಗ್ಯೂ ಅದಕ್ಕೆ ಪ್ರಾಥಮಿಕ ಮಾದರಿ ಸಾಕ್ಷಿಗಳನ್ನು ಎದುರು ನೋಡುತ್ತಿದ್ದೇವೆ. ಯೋಗ ಮೊದಲು ಕೆಲಸ ಮಾಡುತ್ತದೆಯಾ ಅಥವಾ ನಂತರವೊ ಎಂಬುದನ್ನು ನಾವು ಮಾನಸಿಕ ಖಾಯಿಲೆಯನ್ನು ನೋಡಿದ ನಂತರವೇ ಹೇಳಬೇಕು. ಸಾಕಷ್ಟು ಮಾನಸಿಕ ಖಾಯಿಲೆಗಳಿಗೆ ಬೇಗ ಚಿಕಿತ್ಸೆ ಆರಂಭಿಸಿದರೆ ಬರುವ ಫಲ ಪರಿಣಾಮಕಾರಿಯಾಗಿರುತ್ತದೆ ಎಂಬುದು ನಮಗೆ ಗೊತ್ತಿದೆ.

ಮನೋವ್ಯಾಧಿ, ಖಿನ್ನತೆ ಮತ್ತು ಒಸಿಡಿಗಳಲ್ಲಿ ಇದು ಸಾಬೀತಾಗಿದೆ. ಸಿದ್ದಾಂತದ ಪ್ರಕಾರ ಆರಂಭಿಕ ಹಂತದಲ್ಲೆ ಯೋಗ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಇದು ಸಾಬೀತಾಗಿಲ್ಲ. ಆದಾಗ್ಯೂ ವಿವೇಚಿಸಿದರೆ ಇದು ಸತ್ಯ.

ಯೋಗ ಹೇಗೆ ಕೆಲಸ ಮಾಡುತ್ತದೆ ಎಂದು ಇನ್ನೊಂದು ವಿಧದಲ್ಲಿ ನೋಡಿದರೆ, ಜಗತ್ತಿನಾದ್ಯಂತ ವಿಜ್ಞಾನಿಗಳು ಉತ್ತರ ಹುಡಕಲು ಪ್ರಯತ್ನಿಸುತ್ತಿರುವ ಆಸಕ್ತಿದಾಯಕ ಪ್ರಶ್ನೆಯಿದು. ನಾವು ಇದು ಮನುಷ್ಯನ ಮಿದುಳಿನ ರಿಪೇರಿಗೆ ಸಹಾಯ ಮಾಡಿ ನಮ್ಮ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ನಂಬಿದ್ದೇವೆ. ಇನ್ನೊಂದು ವಿಧದಿಂದ ಇದು ನಮ್ಮ ದೇಹವನ್ನು ಸರಿಪಡಿಸುತ್ತದೆ. ನಾನಿಲ್ಲಿ ನಿರ್ದಿಷ್ಟವಾಗಿ ಮಿದುಳಿನ ಬಗ್ಗೆ ಮಾತನಾಡುತ್ತಿದ್ದೇನೆ. ಈ ವಿವೇಚನೆಯಲ್ಲೂ ನಾವು ಖಾಯಿಲೆಯ ಆರಂಭಿಕ ಹಂತದಲ್ಲಿ ಯೋಗಭ್ಯಾಸ ಮಾಡುವುದು ಲಾಭದಾಯಕ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org