ಮೂರೇ ಮೂರು ಪದಗಳಲ್ಲಿ ಮಾನವನ ಅಸ್ತಿತ್ವದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿದರೆ ಏನಂತೀರಿ ? ಬಹುಷಃ ಜೀವನ ಒಂದು ಸಂಗ್ರಾಮ, ಪ್ರಯಾಣ, ಶಾಲೆ, ಅಥವಾ ಜೀವನ ಒಂದು ಚದುರಂಗದ ಆಟದಂತೆ ಎಂದು ನಿಮ್ಮ ಉತ್ತರವಾಗಬಹುದು. ಹಾಗೆಯೆ ಅಥವಾ ಜೀವನ ಒಂದು ಶಾಲೆ, ಕಡಲತೀರದಲ್ಲಿ ಕಳೆವ ಸುಂದರ ಸಂಜೆ , ಗೆಳೆಯರ ಜೊತೆಗಿನ ಮೋಜಿನ ನೃತ್ಯ, ಅಥವಾ ಒಂದು ಪಾರ್ಟೀ ಎಂದು ನೀವು ಹೇಳಬಹುದು. ಇವೆಲ್ಲವು ಜನರು ಜೀವನವನ್ನು ವಿವರಿಸುವ ಬಗೆಯಾಗಿರುತ್ತದೆ. ಮಾನವನ ಸ್ವಭಾವ ಅಥವಾ ವ್ಯಕ್ತಿತ್ವ ಒಂದು ಹೂವಿನ ಗಿಡ, ಸಣ್ಣ ಬೀಜದಿಂದ ಬೆಳೆಯುವ ದೊಡ್ಡ ಮರ, ಅಥವಾ ಒಂದು ಯಂತ್ರ ಎಂದು ಹೇಳಬಹುದು.