ಮೈಂಡ್ ಫುಲ್ನೆಸ್ಸ್

ಮೈಂಡ್ ಫುಲ್ನೆಸ್ಸ್

‘ಈ ಜಗತ್ತು ಸ್ಪಷ್ಟವಾದ ಹಲವು ಸಂಗತಿಗಳಿಂದ ಕೂಡಿದೆ.  ಆದರೆ ಯಾರೂ ಯಾವುದೇ ರೀತಿಯಲ್ಲೂ ಅವುಗಳನ್ನು ಗಮನಿಸುವುದಿಲ್ಲ.’  ಹೀಗಂದವನು ಇಂಗ್ಲೆಂಡಿನ  ಶೆರ್ಲಾಕ್ ಹೋಮ್ಸ್ ಎಂಬ ಪ್ರಖ್ಯಾತ ಪತ್ತೆದಾರಿ ಪಾತ್ರದ ಮೂಲಕ ಕಾದಂಬರಿಕಾರ ಆರ್ತರ್ ಕಾನನ್ ಡೈಲ್‌. ಈತ ಹೇಳಿದ ಮಾತು, ಈ ಕಾಲಕ್ಕೆ ಕೂಡ ಅನ್ವಯಿಸುತ್ತದೆ. ವಾಸ್ತವವಾಗಿ ಮಾನಸಿಕ ಆರೋಗ್ಯ, ಸ್ನೇಹ ಸಂಬಂಧ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಮೈಂಡ್ ಫುಲ್ನೆಸ್ಸ್ ಅಗತ್ಯ.

1970  ಇಸವಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹೃದ್ರೋಗ ತಜ್ಞರಾದ ಹರ್ಬರ್ಟ್ ಬೆನ್‌ಸನ್ ಆರೋಗ್ಯವನ್ನು ಕಾಪಿಡಲು ಧ್ಯಾನ ಮಾರ್ಗ ಅನುಸರಿಸುವ ಕುರಿತು ಅಮೇರಿಕಾದ ಮಾನಸಿಕ ಆರೋಗ್ಯ ಪತ್ರಿಕೆಯಲ್ಲಿ ಮತ್ತು ಸೈಂಟಿಪಿಕ್ ಅಮೇರಿಕನ್ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಟ್ರ್ಯಾನ್‌ಸೆನ್‌ಡೆಂಟಲ್ ಮೆಡಿಟೇಶನ್ ಮಾಡಿದ ಕೆಲವು ವ್ಯಕ್ತಿಗಳನ್ನು (ಬೀಟಲ್ಸ್ ಎಂಬ ಮ್ಯೂಸಿಕ್ ಗ್ರೂಪ್) ಸಂದರ್ಶಿಸಿ ಅವರನ್ನು ಪರೀಕ್ಷಿಸಿದಾಗ ಅನೇಕ ಬದಲಾವಣೆಗಳು  ಆಗಿರುವುದನ್ನು ಗಮನಿಸಿದರು

ಧ್ಯಾನ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣ, ಕಡಿಮೆ ಹೃದಯ ಬಡಿತ ಮತ್ತು ಒತ್ತಡ ನಿವಾರಣೆಯಾಗುತ್ತದೆ ಎಂದು ತಿಳಿದರು. ಈ ಪರಿಣಾಮವನ್ನು "the relaxation response" ಎಂದು ಕರೆದು ಅದೇ ಹೆಸರಿನ ಪುಸ್ತಕ ಬರೆದಿದ್ದಾರೆ. ಆ ಪುಸ್ತಕವು 1975 ರ ಅತೀ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು.

ಬೆನ್‌ಸನ್ ಮೈಂಡ್ ಫುಲ್ನೆಸ್ಸ್ ಬಗ್ಗೆ ಸಂಶೋಧನೆ ಮಾಡದಿದ್ದರೂ ಧ್ಯಾನದ ಬಗ್ಗೆ ಅಧ್ಯಯನ ಮಾಡಲು ಅಡಿಪಾಯ ಹಾಕಿದರು.  ಈ ವಿಷಯದ ಬಗ್ಗೆ ಆಸಕ್ತಿ ತೋರಿಸಿದವರಲ್ಲಿ ಮನಃಶ್ಶಾಸ್ತ್ರಜ್ಞರಾದ ಡಾ. ಜಾನ್ ಕಬತ್ ಜ಼ಿನ್ ಅವರು. ಇವರಿಗೆ ಈಶಾನ್ಯ ವೇದಾಂತ ಮತ್ತು ಆಚರಣೆ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ನಂತರ ಮಾಸಾಚುಸೆಟ್ಸ್ ಉಣಿವೆರ್ಸಿಟಿಯಲ್ಲಿ ಮಸಲ್ ಡೆವೆಲಪ್‌ಮೆಂಟ್ ಬಗ್ಗೆ ಸಂಶೋಧನೆ ಮಾಡುತ್ತಾ ಹಾಗೂ ಹ್ಯೂಮನ್ ಅನಾಟೊಮಿ ಬಗ್ಗೆ ಪಾಠ ಮಾಡುವುದರ ಜೊತೆಗೆ ಇವರು ದೀರ್ಘಕಾಲಿಕ ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಧ್ಯಾನ ತರಬೇತಿಯನ್ನು ಪ್ರಯೋಗಿಸಲು ನಿರ್ಧರಿಸಿದರು.

ಸಂದರ್ಶನವೊಂದರಲ್ಲಿ ತಮ್ಮ ಅನುಭವವನ್ನು ವಿವರಿಸುತ್ತಾ “ ಈ ಎಲ್ಲ ಚಿಂತನೆಯುತ ವಿಚಾರಗಗಳನ್ನು ಗಮನಿಸುತ್ತಾ ಹೋದರೆ ಹಠಯೋಗವನ್ನೂ ಸೇರಿಸಿ ಒಟ್ಟಾರೆ ಯೋಗವು ನಮ್ಮನ್ನು ಕಲಿಯಲು ಬೆಳೆಯಲು ನಕಾರಾತ್ಮಕ ಅಂಶಗಳನ್ನು ಕಡಿಮಗೊಳಿಸಿ ಬದಲಾವಣೆ ತರಲು ಸಹಾಯ ಮಾಡುತ್ತದೆ. ಎಂಟು ವಾರಗಳ ಕಾರ್ಯಕ್ರಮದ ಕೊನೆಯಲ್ಲಿ  'ನೀವು ಕಲಿತ ಮಹತ್ವದ ಅಂಶವೇನೆಂದು' ಪ್ರಶ್ನಿಸಿದಾಗ ನಮಗೆ ಎರಡು ಅಂಶಗಳು ಉತ್ತರವಾಗಿ ಬಂದವು. ಒಂದು - ಉಸಿರಾಟ ( ಉಸಿರಾಟದ ಅರಿವು ಮತ್ತು ಅರ್ಥ)  ಎರಡು - ನನ್ನ ಆಲೋಚನೆ ನಾನಲ್ಲ. ಇಂತಹ ಬದಲಾವಣೆಗಳು ಈ ಶಿಬಿರದ ಫಲಗಳಾಗಿವೆ."

Mindfulness based stress reduction (MBSR) ಎಂದು ಕರೆಯಲ್ಪಡುವ ಕಾರ್ಯಕ್ರಮವು 1979 ರಲ್ಲಿ ಪ್ರಾರಂಭವಾಯಿತು. ಈ ವಿಧಾನವು  ವಿಶ್ವಾದ್ಯಂತ 700 ಕ್ಕೂ ಹೆಚ್ಚಿನ ಆಸ್ಪತ್ರೆಗಳಲ್ಲಿ ಇಂದಿಗೂ ಬಳಸಲ್ಪಡುತ್ತದೆ.

1990 ರಲ್ಲಿ, ಕಬತ್ ಜ಼ಿನ್ ಮೈಂಡ್ಫುಲ್ನೆಸ್ ಮತ್ತು ಆರೋಗ್ಯದ ಬಗ್ಗೆ ಬರೆದ ಪುಸ್ತಕ ಜನಪ್ರಿಯವಾಯಿತು. ನಂತರ ದಿನನಿತ್ಯದ ನಂತರ ಯೋಗಕ್ಷೇಮ ಮತ್ತು ಫಲಪ್ರದ ಪೋಷಣೆ (ಇದು ಅವರ ಪತ್ನಿಯೊಂದಿಗೆ ಬರೆದ ಪುಸ್ತಕ) ಬಗ್ಗೆ ಪುಸ್ತಕಗಳನ್ನು ಬರೆದರು.

ಪತ್ರಕರ್ತರೊಡನೆ ಈ ಪುಸ್ತಕದ ಕುರಿತು ಮಾತನಾಡುತ್ತಾ “ಎಲ್ಲ ಆಧ್ಯಾತ್ಮಕ ಪದ್ದತಿ, ಮತ್ತು ಎಂಥ ಕಷ್ಟಕರವಾದ ಆಚರಣೆಯಿದ್ದಾರೂ, ಮಕ್ಕಳೊಂದಿಗೆ ಬಾಳುವುದೇ ಅತ್ಯಂತ ಪರಿಣಾಮಕಾರಿಯಾದ ಆಧ್ಯಾತ್ಮಿಕ ಆಚರಣೆ" ಎಂದು ಹೇಳಿದರು.

ಕಬತ್ ಜ಼ಿನ್ರ ದೃಷ್ಟಿಯಲ್ಲಿ  ನಮ್ಮ ಆಲೋಚನೆ, ಶಾರೀರಿಕ ಬದಲಾವಣೆ, ಸುತ್ತ ಮುತ್ತಲಿನ ಬಗ್ಗೆ ಸಂಪೂರ್ಣ ಅರಿವು ಇರುವುದೇ ಮೈಂಡ್ ಫುಲ್ನೆಸ್ ಎಂದು ಹೇಳುತ್ತಾರೆ. ಊಟ, ಡ್ರೈವಿಂಗ್, ಆತ, ಅಥವಾ ಯಾವುದೇ ಚಟುವಟಿಕೆ ಮಾಡುವಾಗ ಪೂರ್ಣ ಪ್ರಜ್ಞೆಇಟ್ಟುಕೊಂಡು ಕೆಲಸ ಮಾಡುವುದೇ ಮೈಂಡ್ಫುಲ್ನೆಸ್.  ಈ ಪರಿಕಲ್ಪನೆ ಹಲವಾರು ಅದ್ಧ್ಯಾತ್ಮಿಕ ಆಚರಣೆಗಳಲ್ಲಿ ಪ್ರಮುಖವಾದ ಅಂಶವಾಗಿರುತ್ತದೆ

ಕಬತ್ ಜ಼ಿನ್ ಅವರ ವಿಚಾರ ಧಾರ್ಮಿಕ ನಂಬಿಕೆ ಮತ್ತು ಕ್ರಮಗಳಿಂದ ದೂರವಾಗಿರುತ್ತದೆ

ಈಟಿಂಗ್ ಬಿಹೇವಿಯರ್ಸ್, ನೇಚರ್ ಆ್ಯಂಡ್ ಸೈನ್ಸ್ ಆಪ್ ಸ್ಲೀಪ್, ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸೈಕೋ ಫೈಸಿಯಲಾಜೀ ಮತ್ತು ಕ್ವಾಲಿಟೇಟಿವ್ ಹೆಲ್ತ್ ರಿಸರ್ಚ್ಗಳಂತಹ  ವೈಜ್ಞಾನಿಕ ಪತ್ರಿಕೆಗಳಲ್ಲಿ ಮೈಂಡ್ಫುಲ್ನೆಸ್ ಆಚರಣೆ ಆತಂಕ, ದೀರ್ಘಕಾಲದ ನೋವು, ಅಜೀರ್ಣ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಮತ್ತು ವ್ಯಸನದಂತಹ ಸಮಸ್ಯೆಗಳಿಗೆ ಹೇಗೆ ಉಪಯುಕ್ತವಾಗಿದೆ ಎಂದು ಬರೆದಿದ್ದಾರೆ.

ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಆಲೋಚಿಸುವುದನ್ನು ಕಡಿಮೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಇಂತಹ ಆಲೋಚನೆಯನ್ನು ಕಡಿಮೆ ಮಾಡಲು ಉಸಿರಾಟದ ಮೇಲೆ ಗಮನವಿಡಿದುವು ಒಂದು ವಿಧಾನ. ಕಾಬತ್-ಜಿನ್, "ಮಾನಸಿಕವಾಗಿ ಅಲ್ಲಿಗೆ ಹೋಗಲು ಯಾವುದೇ ಸ್ಥಳವಿಲ್ಲ . ಅಲ್ಲಿ ಮಾಡಲು ಏನೂ ಇಲ್ಲ. ಮನಸ್ಸು ತನಗೆ ಇಷ್ಟ ಬಂದ ಕಡೆ ಹೋಗುತ್ತದೆ, ಅದಕ್ಕೆ ಕಡಿವಾಣವಿಲ್ಲ. ಒಂದು ಕಡೆ ಕುಳಿತು ನಾವು ಕುಳಿತ್ತಿದ್ದೇವೆ ಎಂಬ ಅರಿವು ಇರುವುದು ಬಹಳ ಕಷ್ಟ.” ಎಂದಿದ್ದಾರೆ.

ಇನ್ನೊಬ್ಬ ಪ್ರಮುಖ ಮನಶ್ಶಾಸ್ತ್ರಜ್ಞ ಹಾರ್ವರ್ಡ್ ವಿಶ್ವವಿದ್ಯಾಲಯದ ಡಾ. ಎಲ್ಲೆನ್ ಲ್ಯಾಂಗರ್.  ಜನರು ಅರಿವಿಲ್ಲದೆ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತಾರೆ ಎಂದು ಹೇಳುತ್ತಾರೆ. ಇವರು 1970 ರ ದಶಕದ ಆರಂಭದಲ್ಲಿ, ಅಧ್ಯಯನ ಮಾಡುವಾಗಲೇ ಮೈಂಡ್ಫುಲ್ನೆಸ್ ಬಗ್ಗೆ ಆಸಕ್ತರಾಗಿದ್ದರು.

“ಲ್ಯಾಂಗರ್ ಹೇಳುವ ಪ್ರಕಾರ: "ಹೆಚ್ಚಿನ ಸಮಯ ನಾವು ಆಲೋಚನೆ ಮಾಡದೇ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಇದನ್ನು ಆಟೋ-ಪೈಲಟ್ ಮೋಡ್ ಎಂದು ಹೇಳುತ್ತೇವೆ. ನಾವು ತೆಗೆದುಕೂಳುವ ನಿರ್ಹ್ದ್ದಾರ ಅಥವಾ ನಮ್ಮ ನಡವಳಿಕೆ ಹಳೆಯ ಅನುಭವಗಳ ಮೇಲೆ ಆಧಾರಿತವಾಗಿರುತ್ತದೆ. ಹೀಗೆ ಮಾಡುವುದರಿಂದ ನಮ್ಮ ದೃಷ್ಟಿಕೋನ ತುಂಬಾ ಸಂಕುಚಿತವಾಗಿರುತ್ತದೆ ಮತ್ತು ಒಂದೇ ತರ ವಿರುತ್ತದೆ."

ಲ್ಯಾಂಗರ್ ಹೇಳುತ್ತಾರೆ: "ಮೈಂಡ್ಫುಲ್ನೆಸ್ ಒಂದು ಉಸಿರಾಟದ ವಿಧಾನ ಅಥವಾ ಅಭ್ಯಾಸವಲ್ಲ ಬದಲಾಗಿ ನಮ್ಮ ಜೀವನಶೈಲಿಯ ಒಂದು ಪ್ರಮುಖವಾದ ಅಂಶ್ವಾಗಿರಬೇಕು." ಈ ಕ್ಷಣದಲ್ಲಿ ಆಗುತ್ತಿರುವ ವಿಷಯದ ಬಗ್ಗೆ ಗಮನವಿರಬೇಕೇ ಹೊರತು ಹಿಂದೆ ನಡೆದ ಪ್ರಸಂಗ ಅಥವಾ ಹಿಂದೆ ನಮ್ಮ ಗೆಳೆಯರು, ಕುಟುಂಬ ಅಥವಾ ಇತರರೊಂದಿಗೆ ನಾವು ಹೇಗೆ ವರ್ತಿಸಿದೆವು ಎಂಬುದರ ಬಗ್ಗೆ ಅಲ್ಲ.

ಲ್ಯಾಂಗರ್ ಅವರ ದೃಷ್ಟಿಯಲ್ಲಿ, ನಮ್ಮ ಬಹುತೇಕ ಸಮಸ್ಯೆಗಳು ಮೈಂಡ್‌ಲೆಸ್ ಆಗಿ ಯೋಚಿಸುವುದರಿಂದಲೇ ಎಂದು ಅವರು ತಮ್ಮ ಹೆಚ್ಚಿನ ಸಾರ್ವಜನಿಕ ಉಪನ್ಯಾಸಗಳಲ್ಲಿ ವಿವರಿಸಿದ್ದಾರೆ.

ಲ್ಯಾಂಗರ್ ಅವರ ಸಂಶೋಧನೆಯ ಪ್ರಕಾರ ಮೈಂಡ್ಫುಲ್ನೆಸ್ ಪ್ರಕ್ರಿಯೆಯು ನಾಲ್ಕು ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ: ಹೊಸತಂದ ಆಕಾಂಕ್ಷೆ, ಹೊಸ ವಿಷಯ ಅಥವಾ ಕಾರ್ಯ ಮಾಡುವ ಇಚ್ಛೆ, , ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವ, ಮತ್ತು ಯಾವುದೇ ಕಾರ್ಯದಲ್ಲಿ ಸಂಪೂರ್ಣ ಗಮನ.

ಅಲ್ಲದೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಡಾ ಲೆಸ್ಲೀ ಬರ್ಪೆಯವರ ನೇತೃತ್ವದ ಅಧ್ಯಯನವು ಹೇಳುವಂತೆ ವೈವಾಹಿಕ ಜೀವನದ ಸಂತೋಷ ಮೈಂಡ್ ಫುಲ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ. ಪ್ರೀತಿ ಎಂಬ ವಿಷದಲ್ಲಿ ನಾವು ಯಾವತ್ತೂ ಪ್ರಜ್ಞಾಪೂರಕವಾಗಿ ನಡೆದುಕೊಳ್ಳಬೇಕು

ಮಾರ್ಗದರ್ಶಕ ಚಟುವಟಿಕೆಗಳು:

ಒಂದು ದಿನದಲ್ಲಿ ಮೈಂಡ್ ಫುಲ್ನೆಸ್ ಅನ್ನು ಕಲಿಯಲು ಸಾಧ್ಯವಿಲ್ಲ. ಗೆಸ್ಟಾಲ್ಟ್ ಥೆರಪಿಯ ಎರಡು ವಿಧಾನಗಳು ಸುಲಭವಾಗಿ ಕಲಿಯಬಹುದು.

  1. ದಿನದಲ್ಲಿ  10 ನಿಮಿಷ ಸಮಯವನ್ನು ನಿಗದಿಪಡಿಸಿಕೊಂಡು ಒಂದು ಕಡೆ ಕುಳಿತು ನಿಮ್ಮ ಕಣ್ಣುಗಳನ್ನು ಮುಚ್ಚಿ. ಮೌನವಾಗಿರಿ, ಯಾವುದೇ ಆಲೋಚನೆ ಮಾಡಬೇಡಿ.ಯಾವ ಸದ್ದನ್ನೂ ಮಾಡಬೇಡಿ. 
  2. ಅದೇ ಕಾರ್ಯವಿಧಾನವನ್ನು ಅನುಸರಿಸಿರಿ. ಆದರೆ ಪರಿಸರದಲ್ಲಿ ಕೇಳಿಸುವ ಶಬ್ದದ ಮೇಲೆ ಗಮನವಿಡಿ. ಸುಮ್ಮನೆ ಕೇಳಿಸಿಕೊಳ್ಳಿ.

ಎರಡೂ ಚಟುವಟಿಕೆಗಳ ಸಮಯವನ್ನು ಕ್ರಮೇಣವಾಗಿ ಹೆಚ್ಚಿಸುತ್ತಾ ಹೋಗಿ. ಕೆಲವು ವಾರಗಳಲ್ಲಿ, ನಿಮ್ಮ ಆರೋಗ್ಯ  ಉತ್ತಮವಾಗಿದೆಯೆಂದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org