ಪರಹಿತ ಚಿಂತನೆ ಎಂಬ ಮನಶ್ಶಾಸ್ತ್ರ

ಇಂದಿನ ದಿನಮಾನದಲ್ಲಿ ಜಾಗತಿಕವಾಗಿ ಲೆಕ್ಕವಿಲ್ಲದಷ್ಟು ಸಂಘರ್ಷಗಳು ದೊಡ್ಡ ಹಾಗೂ ಸಣ್ಣ ಪ್ರಮಾಣದಲ್ಲಿ ಆಗುತ್ತಿವೆ. ಅದೇ ರೀತಿ ಪರಹಿತ ಚಿಂತನೆ ಎಂಬ ವಿಷಯವೂ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪರಹಿತ ಚಿಂತನೆ ಸಮಾಜದಲ್ಲಿ ಹೆಚ್ಚು ಹೆಚ್ಚು ಸಾಮರಸ್ಯ ಬೆಳೆಸಲು ಹಾಗೂ ಮಾನವೀಯತೆಯ ಗುಣಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ವಿಷಯದ ಬಗ್ಗೆ ತಿಳಿಯಲು ಮನೋವಿಜ್ಞಾನಿಗಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಸುಮಾರು ೬೦ಕ್ಕೂ ಹೆಚ್ಚಿನ ವರ್ಷಗಳ ಹಿಂದೆ ಅಬ್ರಹಾಮ್ ಮಾಸ್ಲೋ ಎಂಬ ಮನಶ್ಶಾಸ್ತ್ರಜ್ಞ ಮಾನವನ ಸ್ವಭಾವದ ಬಗ್ಗೆ,  ಸಕಾರಾತ್ಮಕವಾಗಿ ವಿಮರ್ಶಿಸಿ ವ್ಯಾಖ್ಯಾನ ನೀಡಿದರು. ಮನಶ್ಶಾಸ್ತ್ರವು ಹೆಚ್ಚಾಗಿ ನಕಾರಾತ್ಮಕ ಅಂಶಗಳಿಗೆ ಆದ್ಯತೆಯನ್ನು ನೀಡುತ್ತದೆ. ಆದರೆ ನಿಸ್ವಾರ್ಥ ಮನೋಭಾವದ ಕುರಿತು ಸಂಶೋಧನೆಗಳು ಎಲ್ಲಿವೆ ಎಂದೂ ಅವರು ಪ್ರಶ್ನಿಸಿದ್ದಾರೆ.

ಮ್ಯಾಸ್ಲೋನ ಅಭಿಪ್ರಾಯಗಳು ಹಾಗೂ ಆತ ಎತ್ತಿರುವ ಪ್ರಶ್ನೆಗಳು ಪ್ರಸ್ತುತವಾಗಿದೆ. ಪರಹಿತ ಚಿಂತನೆ, ಪ್ರಸ್ತುತ ಬಹಳ ಸಣ್ಣ ಪ್ರಮಾಣದಲ್ಲಿದ್ದು, ಇದಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಈ ಕಾರಣದಿಂದಲೇ ನಾನು ಮ್ಯಾಸ್ಲೋನ ಪ್ರಬಲ ದೃಷ್ಟಿಕೋನವನ್ನು ಹೊಂದಿದ ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವನ್ನು ಮುನ್ನಡೆಸುತ್ತಿದ್ದೇನೆ. ನಮ್ಮ ಇತ್ತೀಚಿಗಿನ ಸಂಶೋಧನೆಗಳ ಕುರಿತು ಚರ್ಚೆ ನಡೆಸುವ ಮೊದಲು ನಾನು ಪರಹಿತ ಚಿಂತನೆ ಎಂಬ ಕ್ಷೇತ್ರ ಪ್ರಾರಂಭವಾದಾಗಿನಿಂದ ಹೇಗೆ ಪ್ರಗತಿ ಸಾಧಿಸಿದೆ ಎನ್ನುವುದರ ಕುರಿತು ಹೇಳಲು ಇಚ್ಛಿಸುತ್ತೇನೆ.

ಪರಹಿತ ಚಿಂತನೆ: ವೈಜ್ಞಾನಿಕ ಅಧ್ಯಯನದ ಸ್ಥೂಲ ಇತಿಹಾಸ

ಪರಹಿತ ಚಿಂತನೆಯನ್ನು ಆಲ್ಟ್ರೂಯಿಸಂ ಎಂದು ಕರೆಯಲಾಗುತ್ತದೆ. ಅಲ್ಟ್ರೂಯಿಸಂ ಎಂಬ ಶಬ್ದವು ಲ್ಯಾಟಿನ್‌ ಭಾಷೆಯ ಆಲ್ಟರ್‌ (ಇತರ - other) ಎಂಬ ಶಬ್ದದಿಂದ ಬಂದಿದೆ. ಇದನ್ನು ಯಥಾವತ್‌ ಅನುವಾದಿಸಿದರೆ other-ism ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ. ೧೯ನೇ ಶತಮಾನದಲ್ಲಿ ಪ್ರೆಂಚ್‌ ತತ್ವ ಹಾಗೂ ಸಮಾಜಶಾಸ್ತ್ರಜ್ಞ ಆಗಸ್ಟ್ ಕೋಮ್ಟೆ ಸ್ವಾರ್ಥತೆಗೆ ವಿರುದ್ಧಾರ್ಥ ಪದವಾಗಿ ಉಪಯೋಗಿಸಲು ಪ್ರಾರಂಭಿಸಿದರು. 

೧೮೫೩ರಲ್ಲಿ ಆಕ್ಸ್‌ಫರ್ಡ್‌ ಇಂಗ್ಲೀಷ್‌ ನಿಘಂಟಿನಲ್ಲಿ ಪರಹಿತಚಿಂತನೆ ಎಂಬ ಪದವನ್ನು ದಾಖಲಿಸಲಾಯಿತು ಮತ್ತು ಬಳಕೆಗೆ ತರಲಾಯಿತು. ಆನಂತರ ಅಂತರಾಷ್ಟ್ರೀಯ ಸಮಾಜ ಹಾಗೂ ನಿಸರ್ಗ ವಿಜ್ಞಾನ ವಿಭಾಗಗಳಲ್ಲಿ ಈ ಪದದ ಬಳಕೆ ಹೆಚ್ಚಾಯಿತು.

ಕೋಮ್ಟೆಯ ಪ್ರಭಲವಾದ ದೃಷ್ಟಿಕೋನದ ಪ್ರಕಾರ, ಜನರು ಎರಡು ರೀತಿಯ ಮನೋಭಾವ ಹೊಂದಿರುತ್ತಾರೆ: ಸ್ವಾರ್ಥ ಮನೋಭಾವ ಹಾಗೂ ಇನ್ನೊಂದು ಪರಹಿತ ಚಿಂತನೆ. ಬಹುತೇಕ ಸಂದರ್ಭಗಳಲ್ಲಿ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಇತರರ ಸೇವೆ ಮಾಡುತ್ತಾರೆ. ಆದರೆ ಸ್ವಾರ್ಥವಿಲ್ಲದೆ ಸೇವೆ ಮಾಡುವುದೇ ಸ್ಪೂರ್ತಿದಾಯಕ ಎಂದು ಅವರು ಹೇಳುತ್ತಾರೆ.

ಇದೇ ರೀತಿಯ ಅಂಶಗಳನ್ನು ಹೆಸರಾಂತ ಸಮಾಜಶಾಸ್ತ್ರಜ್ಞರಾದ ಎಮಿಲೆ ಡುರ್ಕೀಮ್ ಅವರು ೧೮೯೩ರಲ್ಲಿ ತಮ್ಮ "the division of labour in society" ಎಂಬ ಪುಸ್ತಕದಲ್ಲಿಯೂ ಉಲ್ಲೇಖೀಸಿದ್ದಾರೆ. ಅದರಲ್ಲಿ ಪರಹಿತ ಚಿಂತನೆ ಹಾಗೂ ಅಹಂಕಾರ (ಅಹಂ, ego), ಈ ಎರಡೂ ಅಂಶಗಳು ಯಾವಾಗಲೂ ಅಸ್ತಿತ್ವದಲ್ಲಿದೆ ಎಂದು ವಾದಿಸಿದರು. ಏಕೆಂದರೆ ಸಮುದಾಯದಲ್ಲಿ ವ್ಯಕ್ತಿಗಳು ಪರಸ್ಪರ ಸಹಿಷ್ಣುತೆ ಹಾಗೂ ಸಹಕಾರದಿಂದ ಒಟ್ಟಾಗಿ ಬಾಳುವ ಅವಶ್ಯಕತೆ ಇದೆ.  

ರಷ್ಯಾದ ಸಮಾಜಶಾಸ್ತ್ರಜ್ಞ ಪಿಟಿರಿಮ್‌ ಸೊರೊಕಿನ್‌ ಎಂಬಾತ ಪರಹಿತ ಚಿಂತನೆಗೆ ಸಮಾಜದಲ್ಲಿ ವೈಜ್ಞಾನಿಕವಾಗಿ ತನ್ನ ಕಾರ್ಯಗಳ ಮೂಲಕ ಜನಪ್ರಿಯ ಗೊಳಿಸಿದ. ಸೊರೊಕಿನ್‌ ಅಮೆರಿಕಕ್ಕೆ ವಲಸೆ ಬಂದು, ಸಮಾಜಶಾಸ್ತ್ರ ಬೆಳವಣಿಗೆಗೆ ಪ್ರಯತ್ನ ನಡೆಸಿದ. ಎರಡನೇ ವಿಶ್ವಯುದ್ಧದಲ್ಲಿ ಆಲ್ಟ್ರುಯಿಸಮ್ ಮನೋಭಾವ ಜನರಲ್ಲಿ ಹೇಗೆ ಇತ್ತು ಮತ್ತು ಅವರ ನಿಸ್ವಾರ್ಥ ಸೇವೆಯ ಬಗ್ಗೆ  ಪರಿಶೀಲಿಸಿದ. 

ನಂತರ ಅಮೆರಿಕಾದಲ್ಲಿ ಪರಹಿತಚಿಂತನೆಯ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿದ ಕೀರ್ತಿ ಸೊರೋಕಿನ್‌ಗೆ ಸಲ್ಲುತ್ತದೆ. ಹಾರ್ವರ್ಡ್ ಸಂಶೋಧನಾ ಸಂಸ್ಥೆಯಲ್ಲಿ ಕ್ರಿಯಾಶೀಲ ಪರಹಿತ ಚಿಂತನೆ ಎಂಬ ವಿಭಾಗವೊಂದನ್ನು ತೆರೆದರು. ೧೯೫೦ರಲ್ಲಿ "ಅಲ್ಟ್ರೂಯಿಸ್ಟಿಕ್‌ ಲವ್" ಎನ್ನುವ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ಕ್ರೈಸ್ತ ಸನ್ಯಾಸಿಗಳು ಹಾಗೂ ಅಮೆರಿಕಾದ ಉತ್ತಮ ನೆರೆಹೊರೆಯವರಲ್ಲಿ ಪರಹಿತಚಿಂತನೆಯ ವಿಶಿಷ್ಟತೆಯ ಬಗ್ಗೆ ವಿವರಿಸಿದ್ದಾರೆ.

ಸೊರೊಕಿನ್‌ ಮಾಸ್ಲೋ ಎಂಬ ಸಾಮಾಜಿಕ ಚಿಂತಕನ ಮೇಲೂ ಪ್ರಭಾವ ಬೀರಿದರು. ಈ ಮಾಸ್ಲೋ ಮುಂದೆ ೧೯೫೫ರಲ್ಲಿ ಕ್ರಿಯಾಶೀಲ ಪರಹಿತಚಿಂತನೆಯ ಸಂಶೋಧನಾ ಸಮಿತಿಯ ಸಹಯೋಗಿಯಾಗಿ ಕಾರ್ಯ ನಿರ್ವಹಿಸಿದರು. ಮಾಸ್ಲೋ ಅವರು ೧೯೩೦ರ ದಶಕದಲ್ಲಿ ಭೌತಶಾಸ್ತ್ರಜ್ಞ ಆಲ್ಫ್ರೆಡ್‌ ಅಡ್ಲೇರ್‌ ಅವರಿಂದ ಹಲವು ವಿಷಯಗಳನ್ನು ಅಧ್ಯಯನ ಮಾಡಿದರು. ತದನಂತರದಲ್ಲಿ ಮಾಸ್ಲೋ, ಅಡ್ಲೇರ್‌ನ ಮಿತೃತ್ವ, ಸಹಕಾರ, ಜೊತೆಗೂಡುವಿಕೆಗಳು ಮಾನವನ ಆರೋಗ್ಯಯುತ ವ್ಯಕ್ತಿತ್ವದ ಮೂಲತತ್ವಗಳು ಎನ್ನುವ ಅಂಶವನ್ನು ಎಲ್ಲೆಡೆ ಸಾರಿದರು. ಅಲ್ಲದೇ ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿ, ಈ ದೃಷ್ಟಿಕೋನದಲ್ಲಿ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದರು. ಆದರೆ ಇದೇ ಸಂದರ್ಭದಲ್ಲಿ ದುರದೃಷ್ಟವಶಾತ್‌ ಸೊರೀಕಿನ್‌ರ ಸಂಸ್ಥೆಯು ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವುದು ಹಾಗೂ ಮುಂದುವರಿಯಲ್ಲಿ ಕಷ್ಟಪಡುತ್ತಿದ್ದುದು ಮಾಸ್ಲೋನ ಕಣ್ಣಿಗೆ ಬಿದ್ದಿತು. ಹೀಗಾಗಿ ಮಾಸ್ಲೋ, ಸೊರೋಕಿನ್‌ನ ಸಂಸ್ಥೆಯ ಜೊತೆಗೆ ಕೈಜೋಡಿಸಬೇಕಾಗಿ ಬಂದಿತು. ೧೯೭೦ರಲ್ಲಿ ಸೊರೋಕಿನ್‌ ಹಾಗೂ ಮಾಸ್ಲೋ ಇಬ್ಬರೂ ಕೂಡ ಸಾವನ್ನಪ್ಪಿದರು. ಅವರು ನಿಧನರಾಗುವವರೆಗೂ ಅಂದರೆ ಅಜಮಾಸು ೨೦ ವರ್ಷಗಳ ಕಾಲ ಪರಹಿತಚಿಂತನೆಯ ಕುರಿತು ಅವರ ಸಂಸ್ಥೆ ವತಿಯಿಂದ ಸಂಶೋಧನೆಗಳು ನಡೆದವು.

೧೯೮೦ ಹಾಗೂ ೧೯೯೦ರ ದಶಕದ ಸಂದರ್ಭದಲ್ಲಿ ಪರಹಿತ ಚಿಂತನೆ ಎನ್ನುವುದು ಎರಡು ಪ್ರತ್ಯೇಕ ವಿಭಾಗಗಳ ಮೂಲಕ ಅಧ್ಯಯನಕ್ಕೆ ಒಳಗಾಯಿತು. ಮೊದಲ ಭಾಗದಲ್ಲಿ ಹೀರೋ (ನಾಯಕ) ಪ್ರಧಾನವಾದ ಪರಹಿತಚಿಂತನೆ ನಡೆಯಿತು. ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿಯ ನಾಜಿ ಪಡೆಗಳಿಂದ ಯೂರೋಪ್‌ನಲ್ಲಿ ಯೆಹೂದಿಗಳನ್ನು ರಕ್ಷಿಸಿದ ವ್ಯಕ್ತಿಯ ಧೈರ್ಯ, ಮಹಾತ್ಮಾ ಗಾಂಧೀಜಿ ಮತ್ತು ಮದರ್ ತೆರೇಸಾರಂತಹ ಪರಹಿತಚಿಂತನೆಯ ವ್ಯಕ್ತಿಗಳು ಇತ್ಯಾದಿಗಳು ಹೀರೋ ವಿಭಾಗದಲ್ಲಿಬಂದವು. ಸಂಶೋಧಕರೂ ಕೂಡ ಇಂತಹ ಅಂಶಗಳ ಬಗ್ಗೆಯೇ ಸೂಕ್ಷ್ಮವಾಗಿ ಅವಲೋಕಿಸಿ, ಸಂಶೋಧನೆಗಳನ್ನು ಕೈಗೊಂಡರು. ಸಾಮಾನ್ಯವಾಗಿ ಈ ವಿಭಾಗದಲ್ಲಿ ಪರಹಿತಚಿಂತನೆಯ ವ್ಯಕ್ತಿತ್ವಕ್ಕೆ ಆದ್ಯತೆ ಸಿಕ್ಕಿತು. ವಯಕ್ತಿಕವಾಗಿ ನಡೆಯುವಂತಹ ಜವಾಬ್ದಾರಿಯುತ ಜ್ಞಾನವೇ ಮಹತ್ವವನ್ನು ಪಡೆದುಕೊಂಡಿತು. ಇಂತಹ ವಿಷಯದ ಕುರಿತಾದ ಅಧ್ಯಯನಕ್ಕೆ ಮಹತ್ವದ ಅಡಿಗಲ್ಲು ಸಿಕ್ಕಂತಾಯಿತು.

ಎರಡನೇ ವಿಭಾಗದಲ್ಲಿ ಉಪ-ವಿಭಾಗದ ಮನಶ್ಶಾಸ್ತ್ರದ ಅಂಶಗಳು ಪ್ರಮುಖವಾದವು. ಇದರಲ್ಲಿ ಸಹಕಾರ ಹಾಗೂ ಜೊತೆಗೂಡುವಿಕೆಗೆ ಸಂಬಂಧಿಸಿದಂತೆ ಕೆಲವು ಅಂಶಗಳು ಚರ್ಚೆಗೆ ಒಳಗಾದವು. ಸಹಕಾರ ಮನೋಭಾವನೆಗೆ ಸಂಬಂಧಿಸಿದಂತೆ ಮಾನವನ ಗುಂಪುಗಳ ಉಳಿವಿಗಾಗಿ ನೈಸರ್ಗಿಕವಾಗಿ ಪರಸ್ಪರ ಸಹಕಾರ ಪ್ರಮುಖವಾದುದು ಎನ್ನುವ ಅಂಶಗಳು ಎರಡನೇ ವಿಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದವು. ಉದಾಹರಣೆಗೆ ಸಂಶೋದಕರ ಪ್ರಕಾರ ಜೈವಿಕ ಅಂಗಾಂಶಗಳನ್ನು ದಾನ ಪಡೆಯುವ ಮೂಲಕ ಮಗುವಿನ ಜೀವನಕ್ಕಾಗಿ ತಾಯಿ ತನ್ನ ಬದುಕನ್ನು ತ್ಯಾಗ ಮಾಡುವುದು. ಅಂದರೆ ತನ್ನ ಜೀನ್ಸ್‌ಗಳನ್ನು ಕಾಪಿ ಮಾಡಲು ಅವಕಾಶ ನೀಡುವ ಮೂಲಕ ದೀರ್ಘಕಾಲ ಬಾಳಿಕೆಗೆ ಅವಕಾಶವಾಗುವಂತಹ ಜೀನ್ಸ್‌ಗಳನ್ನು, ದೈಹಿಕ ಸದೃಢತೆಗೆ ಅಗತ್ಯವಾಗಿದ್ದ ಜೀನ್ಸ್‌ಗಳನ್ನು ದತ್ತು ನೀಡುವ ಮೂಲಕ ತನ್ನ ಬದುಕಿನಲ್ಲಿ ತ್ಯಾಗವನ್ನು ಮಾಡುವುದೂ ಕೂಡ ಪರಹಿತ ಚಿಂತನೆಯ ಪ್ರಮುಖ ಅಂಶ ಎನ್ನುವ ಎರಡನೇ ವಿಭಾಗ ಪ್ರಚಲಿತದಲ್ಲಿ ಬಂದಿತು.

ಈ ರೀತಿಯ ಅಂಶಗಳು ಏನೇ ಇದ್ದರೂ ಕೂಡ ಮನಶ್ಶಾಸ್ತ್ರದಲ್ಲಿ ಪರಹಿತಚಿಂತನೆ ಎನ್ನುವ ವಿಷಯಕ್ಕೆ ಮತ್ತೊಮ್ಮೆ ನಿಧಾನವಾಗಿ ಪ್ರಾಶಸ್ತ್ಯದೊರೆಯಲು ಆರಂಭವಾಗಿದೆ. ಹಲವಾರು ಸಂದರ್ಭಗಳಲ್ಲಿ ಪ್ರಯೋಗಾಲಯಗಳಲ್ಲಿ ನಡವಳಿಕೆಗಳ ಮೇಲೆ ನಡೆದ ಪ್ರಯೋಗಗಳು ಹಲವಾರು ಸೂಕ್ಷ್ಮ ತನಿಖೆಗಳನ್ನು ಹೊಂದಿದ್ದು, ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಒಂದೇ ಸಂದರ್ಭದಲ್ಲಿ ಹಾಗೂ ಸ್ಥೂಲವಾಗಿ ನಡೆದ ಇಂತಹ ನಡವಳಿಕೆಗಳು ಹಾಗೂ ವಿಶಿಷ್ಟ ಅಂಶಗಳ ಮೇಲೆ ನಡೆದ ಅಧ್ಯಯನಗಳು ಹಲವಾರು ವಿಷಯಗಳನ್ನು ಬೆಳಕಿಗೆ ತಂದಿವೆ. ಉಳಿದ ಸಂದರ್ಭಗಳಲ್ಲಿ ಮಂತ್ರಿಗಳು, ದಾದಿಯರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗಗಳಿಗೆ ಸೇರಿದವರನ್ನು ಸ್ವಯಂ-ಪ್ರೇರಿತವಾಗಿ ಸರ್ವೆಗೆ ಒಳಪಡಿಸಲಾಗಿದೆ. ಇದರಲ್ಲಿ ವಿವಿಧ ವಲಯಗಳಿಗೆ ಸೇರಿದ ವ್ಯಕ್ತಿಗಳೂ ಇದ್ದಾರೆ. ಇದರಿಂದ ಹೊರಬಂದ ಒಟ್ಟಾರೆ ಅಂಶಗಳು ವಿಶಿಷ್ಟವಾಗಿದೆ. ಈ ಸರ್ವೇಗಳು ಹಲವಾರು ಅಪರೂಪದ ವಿಷಯಗಳ ಮೇಲೆ ಬೆಳಕು ಚೆಲ್ಲಿವೆ. ವಾಆಸ್ತವದ ಬದುಕಿನಲ್ಲಿ ಪರಹಿತಚಿಂತನೆ ಎನ್ನುವ ವಿಷಯವು ಸೀಮಿತವಾಗಿದೆ ಎನ್ನುವ ಅಅಂಶವನ್ನೂ ಕೂಡ ಸರ್ವೇ ತಿಳಿಸುತ್ತದೆ.

ಪರಹಿತಚಿಂತನೆಯ ಲಾಭಗಳು

ಕಳೆದ ಎರಡು ವರ್ಷಗಳಿಂದೀಚೆಗೆ ನನ್ನ ಮುಂದಾಳತ್ವದ ತಂಡದಿಂದ ಪರಹತಚಿಂತನೆಯಿಂದ ಉಂಟಾಗಬಹುದಾದ ಮನಶ್ಶಾಸ್ತ್ರೀಯ ಲಾಭಗಳ ಕುರಿತು ಅಧ್ಯಯನವನ್ನು ನಡೆಸಿದ್ದೇವೆ. ಈ ಅಧ್ಯಯನದ ಸಂದರ್ಭದಲ್ಲಿ ಪರಹಿತಚಿಂತನೆಯ ಲಾಭಗಳ ಕುರಿತಂತೆ ಹಲವಾರು ಅನೂಹ್ಯವಾದ ಅಂಶಗಳು ನಮ್ಮ ಗಮನಕ್ಕೆ ಬಂದಿವೆ. ಸಂಶೋಧನೆ ಸಂದರ್ಭದಲ್ಲಿ ಸಹಾಯಕರ ಮಟ್ಟದ ಬಗ್ಗೆಯೂ ಗಮನಕ್ಕೆ ಬಂದಿದೆ. ಅಲ್ಲದೇ ಭಾವನಾತ್ಮಕವಾಗಿ ಪರಹಿತಚಿಂತಕರು ಉನ್ನತ ಮಟ್ಟವನ್ನು ತಲುಪಿರುತ್ತಾರೆ ಎನ್ನುವ ಅಂಶಗಳೂ ಗಮನಕ್ಕೆ ಬಂದಿದೆ. ಆದರೂ ಕೂಡ ಪರಹಿತಚಿಂತನೆಯಿಂದ ನಡವಳಿಕೆಗಳ ಮೇಲೆ ಯಾವ ರೀತಿಯ ಗಾಢ ಪರಿಣಾಮಗಳು ಉಂಟಾದವು ಎನ್ನುವುದನ್ನು ಪಟ್ಟಿ ಮಾಡುವುದು ಅಸಾಧ್ಯ.

ನಾನು ಹಾಗೂ ನನ್ನ ಸಹೋದ್ಯೋಗಿಗಳ ತಂಡವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹತ್ಯೆಗಳು ಹಾಗೂ ಅಪರಾಆಧಗಳು ನಡೆಯುವ ಹಾಗೂ ಆರ್ಥಿಕ ಮಟ್ಟದಲ್ಲಿ ತೀರಾ ಕೆಟ್ಟ ಪರಿಸ್ಥಿತಿಯನ್ನು ಹೊಂದಿರುವ, ನಾಗರಿಕ ಸಮಾಜದ ಜೀವನ ಮಟ್ಟ ತೀರಾ ಕಳಪೆಯಾಗಿರುವ ವೆನಿಜ್ಯುವೆಲಾ ದೇಶದಲ್ಲಿ ಅಧ್ಯಯನ ಕೈಗೊಂಡ ಸಂದರ್ಭದಲ್ಲಿ ಹಲವಾರು ಅಂಶಗಳನ್ನು ಗಮನಿಸಿದ್ದೇವೆ.

ನಾವು ಸರಿಸುಮಾರು ೧೫೦ ಜನರನ್ನು ಸಂದರ್ಶಿಸಿದೆವು. ಅವರಲ್ಲಿ ೮ ಜನರು ವೆನಿಜ್ಯುವೆಲಾ ದೇಶದ ಜೊತೆಗೆ ಸಂಬಂಧವನ್ನು ಇರಿಸಕೊಂಡಿರುವವರು. ಇವರ ಬಳಿ ಪರಹಿತಚಿಂತನೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದ ಸಂದರ್ಭದಲ್ಲಿ ನಾವು ಅನೇಕ ರೀತಿಯ ಅನೂಹ್ಯವಾದ ಅಂಶಗಳನ್ನು ಎದುರಿಸಬೇಕಾಯಿತು.

ಬದುಕಿನ ಕುರಿತಂತೆ ಈ ದೇಶದ ಜನರಲ್ಲಿ ಇರುವ ಅನೇಕ ವಿಭಿನ್ನ ಅಂಶಗಳಿಗೆ ಸಂಬಂಧಿಸಿದಂತೆಯೂ ಮಾಹಿತಿಗಳು ಲಭ್ಯವಾದವು. ಅಲ್ಲದೇ ಈ ನಿವಾಸಿಗಳ ಬಳಿ ಮಾನವಿಕ ಶಾಸ್ತ್ರದ ಮೇಲೆ ಪರಿಣಾಮವನ್ನು ಬೀರಬಲ್ಲಂತಹ ೧೦ ಅಂಶಗಳ ಕುರಿತಂತೆಯೂ ಕೂಡ ಪ್ರಶ್ನಿಸಲಾಯಿತು. ಮನುಷ್ಯನ ಸ್ವಭಾವಗಳ ಕುರಿತು ಆಶಾವಾದ, ಸಾಮಾಜಿಕ ಸಹಕಾರಗಳ ಮೇಲಿನ ನಂಬಿಕೆ, ಬದುಕಿನ ಬಗ್ಗೆ ಶ್ಲಾಘನೀಯ ಅಂಶಗಳು, ಸ್ವಾವಲಂಬಿ ಜೀವನ, ಬದುಕಿನ ಬಗ್ಗೆ ಇರುವ ವಿಶೇಷ ಅಂಶಗಳು, ಇತರರ ದೃಷ್ಟಿಯಲ್ಲಿ ಗೌರವಯುತವಾಗಿ ಜೀವನ ನಡೆಸಿರುವುದರ ಕುರಿತಂತೆ ಅಂಶಗಳು, ಇತರರ ಬಗೆಗೆ ಇರುವ ಭಾವನೆಗಳು, ಇತರರಿಗೆ ಸಹಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಂದಿರುವ ಭಾವನೆಗಳು ಸಾಮಾನ್ಯವಾಗಿ ಹೊಂದಿರುವ ಶಕ್ತಿ ಹಾಗೂ ಧಾರ್ಮಿಕ ನಂಬಿಕೆಗಳ ಕುರಿತೂ ವೆನಿಜ್ಯುವೆಲಾದ ನಿವಾಸಿಗಳನ್ನು ಪ್ರಶ್ನಿಸಲಾಯಿತು.

ಹೀಗೆ ಪ್ರಶ್ನಿಸಲಾದವರಿಂದ ಬಂದ ಉತ್ತರ ವಿಭಿನ್ನವಾಗಿತ್ತು. ಈ ಪೈಕಿ ೨/೩ ರಷ್ಟು ಜನರು ಪರಹಿತಚಿಂತನೆಯಲ್ಲಿ ತಾವು ತೊಡಗಿದ್ದೇವೆ ಎಂದರೆ ಅದರಲ್ಲಿ ಕೆಲವು ಜನರು ಪರಹಿತಚಿಂತನೆಯಿಂದ ಆದಂತಹ ಬಹುದೊಡ್ಡ ಲಾಭದ ಬಗ್ಗೆ ಹೇಳಿದ್ದರು. ಶೆ.೩೦ರಷ್ಟು ಜನರು ತಮ್ಮ ಬದುಕಿನ ದೃಷ್ಟಿಕೋನದಲ್ಲಿ ತಾವು ಹೇಗೆ ಪ್ರಬಲವಾದ ಪರಿಣಾಮಗಳನ್ನು ಅನುಭವಿಸಿದ್ದೇವೆ ಎನ್ನುವುದನ್ನು ತಿಳಿಸಿದ್ದರು. ಹಲವರು ತಮ್ಮೊಳಗಿನ ಭಾವನಾತ್ಮಕ ಅಂಶಗಳನ್ನು ಪ್ರಭಲವಾಗಿ ಪ್ರತಿಪಾದಿಸಿದ್ದರು. ಉದಾಹರಣೆಗೆ ಒಬ್ಬ ಮಹಿಳೆ ಹೇಳಿದ ಪ್ರಕಾರ ಕೆಲವು ವರ್ಷಗಳ ಹಿಮದೆ ನನಗೆ ತೀವ್ರ ಪ್ರಮಾಣದಲ್ಲಿ ಅನಾರೋಗ್ಯ ಉಂಟಾಯಿತು. ಈ ಸಂದರ್ಭದಲ್ಲಿ ನನ್ನ ಸಹೋದರಿ ನನ್ನ ಮಕ್ಕಳ ಹಾಗೂ ನನ್ನನ್ನು ನೋಡಿಕೊಂಡಳು. ಕೆಲವು ತಿಂಗಳುಗಳ ಕಾಲ ಅವಳು ನಮ್ಮ ಜೊತೆಗೆ ಉಳಿದಿದ್ಳು. ನಮ್ಮ ಎಲ್ಲ ಕೆಲಸಗಳನ್ನೂ ಅವಳು ನಿಭಾಯಿಸುತ್ತಿದ್ದಳು.

ನಮಗೆ ಅಡುಗೆ ಮಾಡುತ್ತಿದ್ದಳು, ನಮ್ಮನ್ನು ಸ್ನಾನ ಮಾಡಿಸಿ, ಬಟ್ಟೆ ತೊಳೆಯುವುದರ ಜೊತೆಗೆ ಮನೆಯನ್ನೂ ಚೊಕ್ಕಟಗೊಳಿಸುತ್ತಿದ್ದಳು. ಅವಳ ಈ ಸಹಾಯಕ್ಕೆ ನಾನು ಯಾವತ್ತಿಗೂ ಕೂಡ ಆಭಾರಿಯಾಗಿದ್ದೇನೆ ಎಂದಳು. ಅದೇ ರೀತಿ ೨೦ ವರ್ಷದ ವ್ಯಕ್ತಿಯೋರ್ವ ತನ್ನ ಅಭಿಪ್ರಾಯವನ್ನು ಹೇಳಿದ್ದು, ಕಳೆದ ವರ್ಷ ನಾನು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಕಳ್ಳರು ಗುಂಡು ಹಾರಿಸಿದರು. ನನ್ನ ಪಕ್ಕದ ಮನೆಯ ನಿವಾಸಿಯೊಬ್ಬರ ಮಗ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದು, ಆತ ತನ್ನ ಮನೆಯಲ್ಲಿನ ಅಡುಗೆಕೋಣೆಯಲ್ಲಿದ್ದ ಚಾಕುವಿನ ಸಹಾಯದಿಂದ ಹಾಗೂ ಇತರ ವಸ್ತುಗಳ ಸಹಾಯದಿಂದ ನನ್ನ ದೇಹದೊಳಕ್ಕೆ ಹೊಕ್ಕಿದ್ದ ಗುಂಡನ್ನು ತೆಗೆಯುವಲ್ಲಿ ಸಫಲನಾದ. ಅಲ್ಲದೇ ಆದ ಗಾಯಕ್ಕೆ ಹೊಲಿಗೆಯನ್ನು ಹಾಕುವ ಮೂಲಕ ನನ್ನನ್ನು ರಕ್ಷಿಸಿದ. ಮರುದಿನ ಆತ ನನ್ನನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳೀಯ ವಿವಿಯ ಆಸ್ಪತ್ರೆಗೆ ಕರೆದೊಯ್ದ. ಅಲ್ಲಿ ನನಗೆ ಇನ್ನೂ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಯಿತು. ನಾನು ಇಂದು ಬದುಕಿದ್ದರೆ ಅದಕ್ಕೆ ಆತನೇ ಕಾರಣ. ಆ ಸಂದರ್ಭದಲ್ಲಿ ಆತ ಮಾಡಿದ ಸಹಾಯಕ್ಕೆ ನಾನು ಎಂದಿಗೂ ಋಣಿಯಾಗಿದ್ದೇನೆ ಎಂದು ತನ್ನ ಬದುಕಿನ ಕಥೆಯನ್ನು ಹೇಳಿದ. ೫೦ ವರ್ಷ ದಾಟಿದ ಮಹಿಳೆಯೋರ್ವಳು ತನ್ನ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾಳೆ.

ಆರು ವರ್ಷಗಳ ಹಿಂದೆ ನನ್ನ ಮಗಳು ಜನಭರಿತ ಸ್ಥಳದಲ್ಲಿ ಓಡುತ್ತಿದ್ದವಳು ಹಾಗೆಯೇ ಬಿದ್ದಳು. ಬಿದ್ದವಳ ತಲೆಗೆ ಗಾಯವಾಯಿತು. ರಕ್ತ ಸುರಿಯಲು ಆರಂಭಿಸಿತ್ತು. ಆ ಸ್ಥಳಕ್ಕೆ ಮೊದಲು ಬಂದವಳು ನನ್ನದೇ ವಯಸ್ಸಿನ ಓರ್ವ ಮಹಿಳೆ. ಅವಳು ನನ್ನನ್ನು ಹಿಡಿದುಕೊಂಡಳು, ಅಲ್ಲದೇ ಹೆದರಿದ್ದ ನನ್ನನ್ನು ಸಂತೈಸಿದಳು. ನನಗಾಗಿ ಟ್ಯಾಕ್ಸಿಯೊಂದನ್ನು ಕೂಗಿ ಕರೆದಳು. ಅಷ್ಟೇ ಅಲ್ಲದೇ ಟ್ಯಾಕ್ಸಿ ಡ್ರೈವರ್‌ಗೆ ತಾನೇ ಹಣವನ್ನೂ ನೀಡಿದಳು. ನಾನು ಹೆದರಿದ್ದ ಸಂದರ್ಭದಲ್ಲಿ ಆಕೆಯೇ ಎಲ್ಲವನ್ನೂ ನಿಭಾಯಿಸಿದಳು. ನಾನು ಆಕೆಗೆ ಪ್ರತಿಫಲದ ರೂಪದಲ್ಲಿ ನೀಡಲು ಹೋದೆ. ಆದರೆ ಆಕೆ ಅದನ್ನು ಸ್ವೀಕರಿಸಲಿಲ್ಲ. ಆಕೆಗೆ ನಾನು ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ಎಂದಳು.

ಕೇಳಲಾದ ಎಲ್ಲ ೧೦ ಅಂಶಗಳಿಗೆ ಸಂಬಂಧಿಸಿದಂತೆಯೂ ಜನಸಾಮಾನ್ಯರಿಗೆ ವಿಶೇಷ ಅನುಭವಗಳಾಗಿದೆ. ಆದರೆ ಧನ್ಯವಾದ ಬಯಸುವಿಕೆಗೆ ಮಾತ್ರ ವಿಶೇಷ ಅನುಭವಗಳು ಕಡಿಮೆ. ಧನ್ಯವಾದ ತಿಳಿಸುವಿಕೆ ಅಥವಾ ಧನ್ಯವಾದ ಬಯಸುವಿಕೆ ವಿಷಯ ಮಾತ್ರ ಸಂಖ್ಯೆಗಳ ಆಧಾರದಲ್ಲಿ ಇದ್ದುದು ವಿಶೇಷ. ಶಬ್ಧಶಃ ಹೇಳಬೇಕೆಂದರೆ ಅನೂಹ್ಯವಾದ ರೀತಿಯಲ್ಲಿ ಪರಹಿತಚಿಂತನೆಯನ್ನು ಅನುಭವಿಸಿವುದರಿಂದ ವಿಶೇಷವಾದ ಭಾವನಾತ್ಮಕ ಲಾಭಗಳು ಸಿಕ್ಕಿವೆ. ಅಲ್ಲದೇ ವ್ಯಕ್ತಿತ್ವದ ಸಂಬಂಧಿ ನಂಬಿಕೆಗಳು ಹಾಗೂ ಮನೋಭಾವಗಳಲ್ಲಿಯೂ ಕೂಡ ಔನ್ನತ್ಯ ಸಿಕ್ಕಿದೆ. ಅಲ್ಲದೇ ಈ ಕುರಿತು ಅಧ್ಯಯನವನ್ನು ಮಾಡಿದ ಸಂಶೋಧಕರಿಗೆ ಪರಹಿತ ಚಂತನೆಯಿಂದ ಮಾನವೀಯತೆಯ ಹೆಚ್ಚಳ ಹಾಗೂ ಮಾನವೀಯ ಮೌಲ್ಯಗಳಲ್ಲಿ ಉತ್ತಮ ಬೆಳವಣಿಗೆ ಆಗಿರುವ ಕುರಿತು ಗಮನಕ್ಕೆ ಬಂದಿದೆ.  ಆದರೆ ಕೆಲವೊಂದು ಸಂದದರ್ಭಗಳಲ್ಲಿ ಮಾತ್ರ ಭಾವನಾತ್ಮಕವಾಗಿ ಧನ್ಯವಾದವನ್ನು ಸಲ್ಲಿಸುವ ಬದಲು ಆರ್ಥಿಕ ಕೊಡುಕೊಳ್ಳುವಿಕೆ, ದೈಹಿಕ ಹಾಗೂ ಮನೋಭಾವದ ಮೂಲಕ ಕೊಡುಕೊಳ್ಳುವಿಕೆ ಅನುಭವಗಳಾಗಿರುವುದು ನನ್ನ ಗಮನಕ್ಕೆ ಬಂದಿದೆ.

ಎಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಹಿಂದೆ ಮಾಸ್ಲೋ ಪರಹಿತಚಿಂತನೆ ಕುರಿತಂತೆ ಆತನ ಅಥವಾ ಅವಳ ನಡವಳಿಕೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ದೃಷ್ಟಿಹರಿಸುವ ಅಗತ್ಯವನ್ನು ಮನಗಂಡಿದ್ದರು. ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ವ್ಯಕ್ತಿಯಲ್ಲಿನ ಪರಹಿತಚಿಂತನೆ ಎನ್ನುವ ಅಂಶದ ಕುರಿತು ಜಾಗತಿಕವಾಗಿ ತ್ವರಿತಗತಿಯಲ್ಲಿ ಉಂಟಾದ ಬದಲಾವಣೆಯನ್ನೂ ಅವರು ಗಮನಿಸಿದ್ದರು. ಅಲ್ಲದೇ ಪರಹಿತಚಿಂತನೆ ಎನ್ನುವುದು ಮೃದುತ್ವವೂ ಹಾಗೂ ಆತನ ದೌರ್ಬಲ್ಯವೂ ಆಗಿರುವುದನ್ನೂ ಗಮನಿಸಿದ್ದರು. ಪ್ರಜಾಸತ್ತಾತ್ಮಕ ದೃಷ್ಟಿಕೋನದಲ್ಲಿ ಇದು ಕೆಲವರ ಪಾಲಿಗೆ ಶಕ್ತಿಯೂ ಆಗಿ ಬದಲಾಗಿದ್ದನ್ನು ಮಾರ್ಲೋ ಚಿಂತಿಸಿದ್ದರು. ಸಾಮಾಜಿಕ ಸಮಸ್ಯೆಗಳು, ನೈಜ ಜಗತ್ತು ಹಾಗೂ ವ್ಯಕ್ತಿಗಳ ನಡುವಿನ ಸಂವಹನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಪರಹಿತ ಚಿಂತನೆ ಎನ್ನುವುದು ಹೇಗೆ ಮಹತ್ವವನ್ನು ಪಡೆದುಕೊಳ್ಳುತ್ತದೆ ಎನ್ನವುದರ ಕುರಿತೂ ಚಿಂತನೆ ನಡೆಸಿದ್ದರು. ಜಾಗತಿಕ ಮಟ್ಟದಲ್ಲಿ ಗಂಡಸರು ಹಾಗೂ ಹೆಂಗಸರು ವಿಭಿನ್ನ ಜೀವನಮಟ್ಟದಲ್ಲಿ ಬದುಕುತ್ತಿದ್ದಾರೆ. ಇಂತಹ ಜೀವನ ವ್ಯವಸ್ಥೆಯಲ್ಲಿ ಇನ್ನೊಬ್ಬರಿಗೆ ಸಸಹಾಯವನ್ನು ಮಾಡುವ ಪ್ರಮುಖ ಉದ್ದೇಶದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಹಿತ ಚಿಂತನೆಯ ಕುರಿತಾದ ವೈಜ್ಞಾನಿಕ ಅಧ್ಯಯನವು ಇತರರಿಗೆ ಸಹಾಯವನ್ನು ಮಾಡಬೇಕು ಎಂಬ ಉದ್ದೇಶದ ಗುರಿ ತಲುಪುವ ನಿಟ್ಟಿನಲ್ಲಿ ಸಹಾಯಕವಾಗಲಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org