ರಿಸಿಲಿಯೆನ್ಸ್ ಬೆಳೆಸಿಕೊಳ್ಳಲು ಕೆಲವು ಮಾರ್ಗಗಳು

ರಿಸಿಲಿಯೆನ್ಸ್ ಬೆಳೆಸಿಕೊಳ್ಳಲು ಕೆಲವು ಮಾರ್ಗಗಳು

ಯಾವುದೇ ಸಮಸ್ಯೆ ಎದುರಾದರೂ ಧೈರ್ಯಗೆಡದೆ ಆ ಸಂದರ್ಭದಲ್ಲಿ ಸೂಕ್ತ ಪರಿಹಾರ ಕಂಡುಕೊಂಡು ಮುಂದೆ ಸಾಗುವುದೇ ರಿಸಿಲಿಯೆನ್ಸ್ ಎಂದು ಹೇಳುತ್ತೇವೆ.

ಕೆಲವರು ಸ್ವಾಭಾವಿಕವಾಗಿ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಜೀವನದ ಪಯಣದಲ್ಲಿ ಯಾವುದೇ ಘಟನೆ ಸಂಭವಿಸಿದರೂ, ಎಲ್ಲವನ್ನು ನಿರ್ಭಯವಾಗಿ ಎದುರಿಸುತ್ತಾರೆ. ಸಾಮರ್ಥ್ಯವಿರಬೇಕು. ಕಷ್ಟ ಸಂಕಟ ಬಂದಾಗ ಪ್ರತಿ ಸಲ ಚೇತರಿಸಿಕೊಂಡು ಜೀವನ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಿ ನಿರ್ಭಯವಾಗಿ ನಿಭಾಯಿಸುವ ಕೆಲವು ಮಾರ್ಗಗಳು ಇಲ್ಲಿವೆ:

ಸ್ವಯಂ ಪಾಲನೆ: ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ, ಸಾಕಷ್ಟು ನಿದ್ರೆ, ಮಾದಕ ವಸ್ತುಗಳನ್ನು ಸೇವಿಸದೆ ನಿಮ್ಮ ಯೋಗಕ್ಷೇಮಕ್ಕಾಗಿ ಆರೈಕೆಯ ಅಗತ್ಯವಿದೆ ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡರೆ, ನಿಮಗೆ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ.

ಬದಲಾವಣೆಯನ್ನು ಒಪ್ಪಿಕೊಳ್ಳಿ: ಎದುರಾಗುವ ಒತ್ತಡ ಹಾಗೂ ಸವಾಲುಗಳು ಜೀವನದಲ್ಲಿ ಕಲಿಯಲು ಹಾಗು ಬೆಳೆಯಲು ಉತ್ತಮ ಅವಕಾಶಗಳೆಂದು ಭಾವಿಸಿ.

ನಿಮ್ಮ ಸಾಮರ್ಥ್ಯದ ಬಗ್ಗೆ ಧನಾತ್ಮಕ ನಂಬಿಕೆಯನ್ನು ಬೆಳೆಸಿಕೊಳ್ಳಿ. ಸಮಸ್ಯೆಯನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಧನಾತ್ಮಕ ನೋಟ ಬೆಳೆಸಿಕೊಳ್ಳಿ. ನಿಮ್ಮ ಉತ್ತಮ ಗುಣ, ಬಲ ಹಾಗೂ ಸಾಧನೆಯ ಬಗ್ಗೆ ನಿಮಗೆ ನೀವೇ ಹೇಳಿಕೊಳ್ಳಿ.

ಸಂಬಂಧಗಳ ಅಭಿವೃದ್ಧಿ: ಜೀವನದ ಒತ್ತಡ ಅಥವಾ ಏನಾದರರೂ ಸಮಸ್ಯೆಗಳು ಎದುರಾದಾಗ ನಿಮಗೆ ಸಹಾಯ ಮಾಡುವ, ಬೆಂಬಲ ನೀಡುವ ಒಂದಿಷ್ಟು ಜನರು ನಿಮ್ಮೊಂದಿಗೆ ಇರುವಂತೆ ನೋಡಿಕೊಳ್ಳಿ.

ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಬೆಳೆಸಿಕೊಳ್ಳಿ: ಸಮಸ್ಯೆಯನ್ನು ನಿವಾರಿಸುವ ಸಂಭಾವ್ಯ ಮಾರ್ಗಗಳ ಪಟ್ಟಿ ಮಾಡಿಕೊಂಡರೆ ನಿಮ್ಮ ಕೆಲಸದಲ್ಲಿ ಕಷ್ಟಪಡಬೇಕಾಗಿಲ್ಲ. ಸಮಸ್ಯೆಗಳಿಂದ ಆದಷ್ಟು ಬೇಗ ಚೇತರಿಸಿಕೊಳ್ಳಬಹುದು.

ತೊಂದರೆಯಲ್ಲಿದ್ದರೆ ಸಹಾಯ ಕೇಳಿ: ಏನಾದರೂ ಸಮಸ್ಯೆ ಅಥವಾ ಪ್ರತಿಕೂಲ ಸ್ಥಿತಿಯಲ್ಲಿದ್ದರೆ ನೀವು ನಂಬುವ ವ್ಯಕ್ತಿಗಳ ಬಳಿ ಸಹಾಯ ಕೇಳಿ. ಕೌನ್ಸೆಲಿಂಗ್‌ ಅಥವಾ ಚಿಕಿತ್ಸೆ ಕೂಡಾ ಚೇತರಿಕೆಯ ಮಾರ್ಗವಾಗಿದೆ.

ಸ್ವಯಂ ಜಾಗರೂಕತೆ: ಸುತ್ತಮುತ್ತಲಿನವರೊಂದಿಗೆ ವ್ಯವಹರಿಸುವಾಗ ನಿಮ್ಮ ಭಾವನೆಗಳು ಹಾಗೂ ವಿಚಾರಗಳ ಬಗ್ಗೆ ಹೆಚ್ಚಿನ ಗಮನನೀಡಿ. ವೈಯಕ್ತಿಕ ಡೈರಿ ಅಥವಾ ಜರ್ನಲ್‌ ಬರೆಯುವುದರಿಂದ ಸಹಾಯವಾಗಬಹುದು.

ಪರಿಸ್ಥಿತಿಯನ್ನು ವಾಸ್ತವಿಕವಾಗಿ ನೋಡಿ: ವಾಸ್ತವಿಕವಾಗಿ ಪರಿಸ್ಥಿತಿಯನ್ನು ನೋಡಿ ಸಮಸ್ಯೆಯನ್ನು ಎದುರಿಸಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ.

ಜೀವನದಲ್ಲಿ ಉದ್ದೇಶದ ಅರ್ಥ ಹುಡುಕಿ: ಜೀವನದ ಉದ್ದೇಶದ ಅರ್ಥ ತಿಳಿಕೊಳ್ಳುವುದರಿಂದ ಬಿಕ್ಕಟ್ಟು ಅಥವಾ ದುರಂತ/ ಪ್ರತಿಕೂಲ ಪರಿಸ್ಥಿತಿ ಹಾಗೂ ಪೆಟ್ಟಿನಿಂದ ಬೇಗ ಚೇತರಿಸಿಕೊಳ್ಳಬಹುದು. ಸಮುದಾಯದೊಂದಿಗೆ ಬೆರೆಯುವುದು, ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವುದು, ಚಟುವಟಿಕೆಗಳಲ್ಲಿ ತೊಡಗುವುದು ಅಥವಾ ಯಾವುದಾದರೂ ನಿಮ್ಮ ಜೀವನಕ್ಕೆ ಅರ್ಥ ತುಂಬುವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡಿ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org