ಶೈಕ್ಷಣಿಕ ಹಕ್ಕು ಭಾರತೀಯ ಸಾಂವಿಧಾನಿಕ ಕಾಯ್ದೆ 21-ಎ ಅಡಿಯಲ್ಲಿ ನೀಡಿರುವ ಮೂಲಭೂತ ಹಕ್ಕು. ಈಗ ಇದನ್ನು ಶಿಕ್ಷಣ ಹಕ್ಕು ಕಾಯ್ದೆ 2009 ಕ್ಕೆ(ಆರ್‌ಟಿಇ) ವರ್ಗಾಯಿಸಲಾಗಿದೆ. 6 ರಿಂದ 14 ವರ್ಷವಯಸ್ಸಿನ ಪ್ರತಿ ಮಗುವಿಗೆ ಹತ್ತಿರದ ಶಾಲೆಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕು ಎಂದು ಈ ಕಾನೂನು ಒತ್ತಿಹೇಳುತ್ತದೆ.
ನಿಮ್ಮ ಮಗು ವಿಕಲತೆ ಕಾಯ್ದೆ(ಪಿಡಬ್ಲ್ಯುಡಿ ಕಾಯ್ದೆ) 1995ರ ಅಡಿಯಲ್ಲಿ ವಿಕಲತೆ ಪ್ರಮಾಣಪತ್ರ ಹೊಂದಿದ್ದರೆ, ಆಗ 18 ವರ್ಷಗಳ ವರೆಗೆ ಉಚಿತ ಶಿಕ್ಷಣಕ್ಕೆ ಅರ್ಹವಾಗಿರುತ್ತದೆ.
ಪಿಡಬ್ಲ್ಯುಡಿ ಕಾಯ್ದೆ 1995ರ ಸೆಕ್ಷನ್ 26(ಬಿ) ಪ್ರಕಾರ ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರಗಳು ಸಾಮಾನ್ಯ ಶಾಲೆಗಳಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಶಿಕ್ಷಣವನ್ನು ನೀಡುವುದನ್ನು ಉತ್ತೇಜಿಸಬೇಕು..
ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ವಿಶೇಷ ಶಾಲೆಯಲ್ಲಿ ಶಿಕ್ಷಣ ಲಭಿಸುವಂತೆ ಮಾಡುವುದು ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳ ಕರ್ತವ್ಯ. ಅದು ಸರ್ಕಾರಿ ಶಾಲೆ ಅಥವಾ ಖಾಸಗಿ ಶಾಲೆಯೇ ಆಗಿರಬಹುದು, ಅಲ್ಲಿ ವಿಶೇಷ ಅವಶ್ಯಕತೆಗಳನ್ನು ಪೂರೈಸಬೇಕು. ಇದು ಪಿಡಬ್ಲ್ಯುಡಿ ಕಾಯ್ದೆ 26(ಸಿ) ನಲ್ಲಿ ಉಲ್ಲೇಖಿಸಲ್ಪಟ್ಟಿದೆ
ಇದೇ ಕಾಯಿದೆಯ ಸೆಕ್ಷನ್ 26(ಡಿ) ಕೂಡ ಇಂಥ ಶಾಲೆಗಳು ವೃತ್ತಿಪರ ತರಬೇತಿ ಸೌಕರ್ಯ ಹೊಂದಿರಬೇಕಾಗಿದ್ದು ಅವು ಮಕ್ಕಳ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ಮಾರ್ಗಗಳನ್ನು ಕಲಿಯುವಂತಿರಬೇಕು ಎಂದು ಸೂಚಿಸುತ್ತದೆ.
ಹೌದು, ಕೆಲ ವಿಶೇಷ ಸಂದರ್ಭಗಳಲ್ಲಿ ನಿಮ್ಮ ಮಗುವಿನ ಶಿಕ್ಷಣಕ್ಕೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಖಾಯಿಲೆಯಿಂದಾಗಿ ನಿಮ್ಮ ಮಗು ಪೂರ್ತಿ ಸಮಯ ಶಾಲೆಗೆ ಹಾಜರಾಗಲು ಸಾಧ್ಯವಾಗದೇ ಹೋದರೆ, ಆಗ ನಿಮ್ಮ ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಲು ಸರ್ಕಾರ ಪಾರ್ಟ್ ಟೈಮ್ ಕ್ಲಾಸುಗಳನ್ನು ಆಯೋಜಿಸಬೇಕು. ಇದರಿಂದಾಗಿ ನಿಮ್ಮ ಮಗು ಶಿಕ್ಷಣವನ್ನು ಪಡೆಯುವಂತಾಗುತ್ತದೆ. ವಿಶೇಷ ಸಾಮರ್ಥ್ಯ ಹೊಂದಿರುವ ಮಕ್ಕಳು ಶಿಕ್ಷಣ ಪಡೆಯಲು ಸರ್ಕಾರ ಶಾಲೆಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕು. ಈ ಮಕ್ಕಳಿಗೆ ಉಚಿತವಾಗಿ ವಿಶೇಷ ಪುಸ್ತಕ ಮತ್ತು ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ಒದಗಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು. ಪಿಡಬ್ಲ್ಯುಡಿ ಕಾಯ್ದೆಯ ಸೆಕ್ಷನ್ 27 ಇದನ್ನು ಸರ್ಕಾರದ ಕರ್ತವ್ಯ ಎಂದು ಸಾರುತ್ತದೆ.
ಎಲ್ಲ ಶಿಕ್ಷಕರೂ ನಿಮ್ಮ ಮಗುವಿನೊಂದಿಗೆ ವ್ಯವಹರಿಸುವ ವಿಶೇಷ ಕೌಶಲ್ಯ ಹೊಂದಿರುವುದಿಲ್ಲ. ಆದಾಗ್ಯೂ, ಪಿಡಬ್ಲ್ಯುಡಿ ಕಾಯ್ದೆಯ 29ನೇ ಸೆಕ್ಷನ್ ಅನ್ವಯ, ನಿಮ್ಮ ಮಗುವಿನ ಅವಶ್ಯಕತೆಗಳನ್ನು ಅರಿತು ಪೂರೈಸುವುದಕ್ಕಾಗಿ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿ ಪಡಿಸುವುದು ಸರಕಾರದ ಕಾರ್ಯವಾಗಿದೆ. ಹೀಗೆ ಮಾಡುವುದರಿಂದ ವಿಶೇಷ ಶಾಲೆಗಳು ಮತ್ತು ಸಮಗ್ರ ಶಾಲೆಗಳಲ್ಲಿ ಮಾನಸಿಕ ಖಾಯಿಲೆ ಮತ್ತು ಭಿನ್ನಸಾಮರ್ಥ್ಯ ಹೊಂದಿರುವ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಸಮರ್ಪಕ ಮಾನವ ಶಕ್ತಿಯನ್ನು ಒಳಗೊಳ್ಳುವಂತೆ ಮಾಡುವುದು ಕೂಡ ಸರಕಾರದ ಜವಾಬ್ದಾರಿಯಾಗಿದೆ.
ಕಾನೂನು ಮಾಹಿತಿ: ಮಾನಸಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆ/ನರ್ಸಿಂಗ್ ಹೋಂಗೆ ದಾಖಲಾಗುವುದರಿಂದ ಹಿಡಿದು ಬಿಡುಗಡೆಯಾಗುವವರೆಗೆ