ಮಾನಸಿಕ ಆರೋಗ್ಯವನ್ನು ಒಳಗೊಳ್ಳುವ ಕಚೇರಿಗಳನ್ನು ರೂಪಿಸುವುದು ಹೇಗೆ?

ಮಾನಸಿಕ ಆರೋಗ್ಯವನ್ನು ಒಳಗೊಳ್ಳುವ ಕಚೇರಿಗಳನ್ನು ರೂಪಿಸುವುದು ಹೇಗೆ?

.

.ಕಚೇರಿಗಳು ಮಾನಸಿಕ ಆರೋಗ್ಯವನ್ನು ಒಳಗೊಳ್ಳುವ ಕಚೇರಿಗಳನ್ನು ರೂಪಿಸುವುದು ಹೇಗೆ

ಕಚೇರಿಗಳಲ್ಲಿ ಸಾಮಾನ್ಯವಾಗಿ ಮಾನಸಿಕ ಆರೋಗ್ಯವನ್ನು ಕುರಿತು ಚರ್ಚೆಯಾಗುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ನಿರ್ಲಕ್ಷ್ಯಕ್ಕೊಳಗಾಗುತ್ತದೆ ಅಥವಾ ರಹಸ್ಯವಾಗಿರಿಸಲಾಗುತ್ತದೆ. ಮಾನಸಿಕ ಆರೋಗ್ಯ ಎಂದರೆ ಕಳಂಕ ಎಂದು ಭಾವಿಸುವುದು ಸಾಮಾನ್ಯವಾಗಿದೆ. ಆದ್ದರಿಂದ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಎಲ್ಲರೂ ಭಯ ಪಡುತ್ತಾರೆ ಅಥವಾ ಹಿಂಜರಿಯುತ್ತಾರೆ. ಕಚೇರಿಗಳಲ್ಲಿ ಈ ಕಳಂಕವೇ, ಮಾನಸಿಕ ಸಮಸ್ಯೆ ಇರುವ ಸಿಬ್ಬಂದಿಯಲ್ಲಿ ಹಿಂಜರಿಕೆ ಹೆಚ್ಚು ಮಾಡಿ ಮಾಹಿತಿ ನೀಡದಿರುವಂತೆ ಮಾಡುತ್ತದೆ. ಇದರಿಂದ ಇಂತಹ ಸಿಬ್ಬಂದಿ ಇತರರ ಸಾಂತ್ವನವನ್ನೂ ಪಡೆಯುವುದಿಲ್ಲ ಅಥವಾ ಅವರಿಗೆ ಬೇಕಾದ ಬೆಂಬಲವನ್ನೂ ಪಡೆಯುವುದಿಲ್ಲ.

ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಯೋಜನೆಯಲ್ಲಿ ಮಾನಸಿಕ ಆರೋಗ್ಯದ ಅಳವಡಿಕೆ

ಕಚೇರಿಗಳಲ್ಲಿ ಕೈಗೊಳ್ಳಲಾಗುವ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ಮೂರು ಗುಂಪಿನ ಜನರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತದೆ. ಈ ಗುಂಪುಗಳೆಂದರೆ ಮಹಿಳೆಯರು, ತೃತೀಯಲಿಂಗಿಗಳು (ಎಲ್‍ಜಿಬಿಟಿಕ್ಯುಐಎಪಿ+) ಮತ್ತು ದೌರ್ಬಲ್ಯ ಹೊಂದಿರುವ ಜನರು. ಬಹುತೇಕ ಕಚೇರಿಗಳಲ್ಲಿ ಈ ಮೂರು ಗುಂಪುಗಳಿಗೆ ಸೇರಿದವರನ್ನು ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆದರೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವರ ಬಗ್ಗೆ ಯಾವುದೇ ಕಾಳಜಿ ತೋರುವುದಿಲ್ಲ.

ಈ ಆಲೊಚನೆ ನೇರಾನೇರ ಎಂದು ಕಂಡುಬಂದರೂ ಕಚೇರಿಗಳಲ್ಲಿ ಇದನ್ನು ಜಾರಿಗೊಳಿಸಲು ಹಲವು ಅಡ್ಡಿ ಆತಂಕಗಳು ಎದುರಾಗುತ್ತವೆ. ಬಹಳಷ್ಟು ಕಂಪನಿಗಳು ಈ ನಿಟ್ಟಿನಲ್ಲಿ ಹಲವಾರು ಪ್ರಶ್ನೆಗಳನ್ನು ಎದುರಿಸುತ್ತವೆ. ಅವು ಹೀಗಿವೆ :

•           ಅವರನ್ನು ನೇಮಿಸಬೇಕೇ ?

•           ಅವರಿಗೆ ಒಪ್ಪಿಸಲಾದ ಕೆಲಸವನ್ನು ನಿಭಾಯಿಸುತ್ತಾರೆಯೇ ?

•           ಅವರ ಸಮಸ್ಯೆ ಉತ್ಪಾದಕೀಯತೆಯ ಮೇಲೆ ಪ್ರಭಾವ ಬೀರುವುದೇ ?

•           ಇದರಿಂದ ಕಂಪನಿಗೆ ನಷ್ಟ ಉಂಟಾಗುವುದೇ ?

•           ಅವರು ಸಂಸ್ಥೆಯಲ್ಲಿರುವ ವಾತಾವರಣವನ್ನು ಕೆಡಿಸುತ್ತಾರೆಯೇ ?

•           ಇಂತಹ ವ್ಯಕ್ತಿಗಳಿಗಾಗಿ ಕಂಪನಿ ಹೆಚ್ಚು ಹಣ ಖರ್ಚು ಮಾಡಬೇಕಾಗುವುದೇ ?

ಮಾನಸಿಕ ಆರೋಗ್ಯವನ್ನು ಒಳಗೊಳ್ಳುವ ಮೊದಲ ಹೆಜ್ಜೆ ಎಂದರೆ ಕಂಪನಿಯ ಎಲ್ಲ ಹಂತದ ನಾಯಕರಲ್ಲಿ ಮತ್ತು ಇತರ ಸಿಬ್ಬಂದಿಯಲ್ಲಿ ಸಂವೇದನೆ ಮೂಡಿಸುವುದು, ಅರಿವು ಮೂಡಿಸುವುದು ಮತ್ತು ಉತ್ತೇಜನ ನೀಡುವುದು. ಇದರಿಂದ ಮಾನಸಿಕ ಸಮಸ್ಯೆ ಇರುವವರಿಗೆ ಒಂದು ಪ್ರೋತ್ಸಾಹಭರಿತ, ಮುಕ್ತ ವಾತಾವರಣವನ್ನು ರೂಪಿಸುವುದು ಸಾಧ್ಯವಾಗುತ್ತದೆ.

ಕಚೇರಿಯಲ್ಲಿ ಮಾನಸಿಕ ಆರೋಗ್ಯವನ್ನು ಒಳಗೊಳ್ಳಲು ಅನುಸರಿಸಬಹುದಾದ ಅತ್ಯುತ್ತಮ ಮಾರ್ಗಗಳು :

ನಾವು ಹಲವು ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಭೇಟಿಯಾಗಿ, ಅವರ ಕಂಪನಿಯಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಪ್ರಯತ್ನದಲ್ಲಿ ಮಾನಸಿಕ ಆರೋಗ್ಯವನ್ನು ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಲು ಯಾವ ರೀತಿಯ ಮಾರ್ಗಗಳನ್ನು ಅನುಸರಿಸಬಹುದು ಎಂದು ಕೇಳಿದೆವು. ಅವರ ಪ್ರತಿಕ್ರಿಯೆಗಳು ಹೀಗಿವೆ :

ತಿಳುವಳಿಕೆ :

•           ಮಾನಸಿಕ ಆರೋಗ್ಯ ಮತ್ತು ಮಾನಸಿಕ ದೌರ್ಬಲ್ಯವನ್ನು ಕುರಿತು ಸಿಬ್ಬಂದಿಯಲ್ಲಿ ಜಾಗೃತಿ, ಸಂವೇದನೆ ಮೂಡಿಸುವುದು.

•           ಪ್ರಬಂಧಕರು ಮತ್ತು ಸಿಬ್ಬಂದಿ ವರ್ಗ ಮಾನಸಿಕ ಸಮಸ್ಯೆಯನ್ನು ಗುರುತಿಸಲು ನೆರವಾಗುವಂತೆ ತರಬೇತಿ ನೀಡುವುದು.

•           ಸಂಸ್ಥೆಯಲ್ಲಿ ದ್ವಾರಪಾಲಕರನ್ನು ನೇಮಿಸುವುದು.

ನಾಯಕತ್ವ :

•           ಉತ್ತಮ ಸಹಯೋಗ ಮತ್ತು ಸಹಭಗಿತ್ವಕ್ಕಾಗಿ ಅವಕಾಶಗಳನ್ನು ಒದಗಿಸುವುದು.

•           ಗುಂಪಿನ ಸದಸ್ಯರು ಮತ್ತು ನಾಯಕರ ನಡುವೆ ಮುಕ್ತ ಸಂವಾದ ನಡೆಸಲು ಉತ್ತೇಜನ ನೀಡುವುದು.

•           ಆದರ್ಶ ನಾಯಕತ್ವವನ್ನು ಒದಗಿಸುವುದು. ಎಲ್ಲರೂ ಒಳಗೊಳ್ಳುವಂತೆ ಕಚೇರಿಯನ್ನು ರೂಪಿಸುವುದು.

ಆರೋಗ್ಯಪರ ವಾತಾವರಣ :

•           ಮತ್ತೊಬ್ಬರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಂತೆ ಸಂವೇದನೆಯನ್ನು ಮೂಡಿಸಿ ಮುಕ್ತವಾಗಿ ಯೋಚಿಸುವ ಧೋರಣೆಯನ್ನು ಉತ್ತೇಜಿಸುವುದು.

•           ಸಿಬ್ಬಂದಿಗೆ ಕೆಲಸದ ನಡುವೆ ವಿಶ್ರಮಿಸಲು ನಿರ್ದಿಷ್ಟ ಜಾಗಗಳನ್ನು ಸೃಷ್ಟಿಸುವುದು.

•           ಕೆಲಸದ ಅವಧಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ನಿಯತ ಕ್ರಮವನ್ನು ಅನುಸರಿಸುವುದು.

•           ನಿಯಮಬದ್ಧವಾಗಿ ಕಾರ್ಯಾಗಾರ, ವ್ಯಾಯಾಮ ಮತ್ತು ಧ್ಯಾನ ನಡೆಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು.

•           ಸಿಬ್ಬಂದಿಯಲ್ಲಿ ಸ್ಥೈರ್ಯ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಕಾರ್ಯಾಗಾರಗಳನ್ನು ನಡೆಸುವುದು.

ನೀತಿಗಳು :

•           ಮಾನಸಿಕ ಆರೋಗ್ಯವನ್ನು ಸ್ನೇಹಮಯಿ ದೃಷ್ಟಿಯಿಂದ ನೋಡುವಂತಹ ನೀತಿಗಳನ್ನು ರೂಪಿಸಿ.

•           ಎಲ್ಲ ರೀತಿಯ ಜನರನ್ನೂ ನೇಮಿಸಿಕೊಳ್ಳಿ.

•           ನೌಕರರಿಗೆ ಸಹಾಯಕವಾಗುವ ಕಾರ್ಯಕ್ರಮವನ್ನು ರೂಪಿಸಿ, ಆಪ್ತ ಸಲಹೆಗಾರರು, ಚಿಕಿತ್ಸರಕು ಮತ್ತು ಸಹಾಯ ವಾಣಿಗಳನ್ನು ಒದಗಿಸಿ.

•           ಮಾನಸಿಕ ಆರೋಗ್ಯವನ್ನು ಒಳಗೊಳ್ಳುವ ವಿಮಾ ಸೌಲಭ್ಯ ಒದಗಿಸಿ.

ಈ ರೀತಿಯ ಉತ್ತಮ ಮಾರ್ಗಗಳನ್ನು ಅಳವಡಿಸುವ ಮೂಲಕ ಕಚೇರಿಗಳು ಮಾನಸಿಕ ದೌರ್ಬಲ್ಯ ಇರುವ ನೌಕರರನ್ನು ಒಳಗೊಂಡು ಕಾರ್ಯ ನಿರ್ವಹಿಸುವಂತೆ ಮಾಡಬಹುದು.

ಈ ಲೇಖನವನ್ನು ಸಿದ್ಧಪಡಿಸಲು ವರ್ಕ್‍ಪ್ಲೇಸ್ ಆಪ್ಷನ್ಸ್ ಸಂಸ್ಥೆಯ ನಿರ್ದೇಶಕರಾದ ಮೌಲಿಕ ಶರ್ಮ, ಸಿಜಿಪಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾದ ಲೈನೆಟ್ ನಝರೆತ್ ಮತ್ತು ಬ್ಯಾಂಡ್ ಟ್ರಾವೆಲ್ ಸಂಸ್ಥೆಯ ಪ್ರಬಂಧಕ ಭರತ್ ಮೋರೋ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇತರ ಒಳನೋಟಗಳನ್ನು ಪ್ರಬಂಧಕರು, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಹಾಗೂ ಮಾನವ ಸಂಪನ್ಮೂಲ ನಿರ್ವಾಹಕರು ಹಂಚಿಕೊಂಡಿದ್ದಾರೆ. ಅವರ ಹೆಸರುಗಳನ್ನು ಕೋರಿಕೆಯ ಮೇರೆಗೆ ಪ್ರಕಟಿಸಲಾಗಿಲ್ಲ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org